ಅಮೆರಿಕ ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ವಿಯೆಟ್ನಾಂ ಜೊತೆ ಅಮೆರಿಕ ವ್ಯಾಪಾರ ಒಪ್ಪಂದ ಮಾಡಿಕೊಂಡು ರಷ್ಯಾದಿಂದ ಭಾರತ ತೈಲ ಖರೀದಿ ವಿಚಾರದಲ್ಲಿ ನಾನು ಸಂತೋಷವಾಗಿಲ್ಲ ಎಂದು ಪ್ರಧಾನಿ ಮೋದಿಗೆ ತಿಳಿದಿದೆ. ವಾಷಿಂಗ್ಟನ್ ಶೀಘ್ರದಲ್ಲೇ ಭಾರತದ ವಿರುದ್ಧ ಸುಂಕ ದರ ಹೆಚ್ಚಿಸಲಿದೆ ಎಂಬ ಟ್ರಂಪ್ ಹೇಳಿಕೆ ಬೆನ್ನಲ್ಲೇ ಲುಟ್ನಿಕ್ ಈ ಹೇಳಿಕೆ ಗಮನ ಸೆಳೆದಿದೆ.
ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಲುಟ್ನಿಕ್, ಒಪ್ಪಂದವನ್ನು ಮುಕ್ತಾಯಗೊಳಿಸಲು ಟ್ರಂಪ್ ಅವರಿಗೆ ಕರೆ ಮಾಡುವಂತೆ ಮೋದಿಗೆ ತಿಳಿಸಲಾಗಿತ್ತು. ಆದರೆ, ಭಾರತವು ಈ ರೀತಿ ಮಾಡುವುದು ನನಗೆ ಸರಿ ಹೊಂದುವುದಿಲ್ಲ ಎಂದು ಹೇಳಿತು. ಇದರಿಂದ ಮೋದಿ ಕರೆ ಮಾಡಲಿಲ್ಲ ಎಂದಿದ್ದಾರೆ.
ನಾವು ಇಂಡೋನೇಷ್ಯಾ, ಫಿಲಿಪೈನ್ಸ್, ವಿಯೆಟ್ನಾಂಗಳೊಂದಿಗೆ ಹಲವಾರು ಒಪ್ಪಂದಗಳನ್ನು ಘೋಷಿಸಿದ್ದೇವೆ. ನಾವು ಈ ಎಲ್ಲಾ ಒಪ್ಪಂದಗಳನ್ನು ಮಾಡಿ, ಅವುಗಳ ಬಗ್ಗೆ ಮಾತುಕತೆ ನಡೆಸಿದ್ದೇವೆ. ಆದರೆ, ಇದಕ್ಕಿಂತ ಮೊದಲೇ ಪೂರ್ಣಗೊಳ್ಳುತ್ತದೆ ಎಂದು ಭಾವಿಸಿದ್ದ ಭಾರತದ ವ್ಯಾಪಾರ ಒಪ್ಪಂದ ಕುರಿತು ಹೆಚ್ಚಿನ ದರದಲ್ಲಿ ಮಾತುಕತೆ ನಡೆಸಿದ್ದೇನೆ.
ಮಾತುಕತೆಯಲ್ಲಿ ಒಪ್ಪಂದಗಳು ಹೆಚ್ಚಿನ ದರದಲ್ಲಿ ಹೊರಬಂದವು. ಬಳಿಕ ಭಾರತ ಕರೆ ಮಾಡಿ ನಾವು ಇದೀಗ ಸಿದ್ಧ ಇದ್ದೇವೆ ಎಂದಿದ್ದರು. ಆದರೆ, ಯಾವುದಕ್ಕೆ ಸಿದ್ಧ ಎಂದು ಕೇಳಿದ್ದೆ ಎಂದು ಲುಟ್ನಿಕ್ ತಿಳಿಸಿದರು.
ಈ ವ್ಯಾಪಾರ ಮಾತುಕತೆ ಕುರಿತು ಭಾರತ ಮತ್ತು ಅಮೆರಿಕ ಸಮಾನಾಂತರ ಮಾತುಕತೆ ನಡೆಸಿದವು. ಸುಂಕ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಚೌಕಟ್ಟು ರೂಪಿಸಿ ವ್ಯಾಪಾರ ಒಪ್ಪಂದವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿತ್ತು. 2025ರ ಫೆಬ್ರವರಿಯಲ್ಲಿ ಎರಡು ದೇಶದ ನಾಯಕರು ಈ ಕುರಿತು ಮಾತುಕತೆಯಲ್ಲಿ ತೊಡಗಿದ್ದರು.
2025ರ ಚಳಿಗಾಲದಲ್ಲಿ ಮೊದಲ ಹಂತವನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ, ಈ ಒಪ್ಪಂದ ಇನ್ನೂ ಪೂರ್ಣಗೊಳ್ಳದೆ ನಿಂತಿದ್ದು, ರಷ್ಯಾ ವಿಚಾರದಲ್ಲಿ ಅಮೆರಿಕ ಭಾರತದ ವಿರುದ್ಧ ಬಿಗಿ ನಿಲುವು ತಳೆಯುವಂತೆ ಮಾಡಿತು. ಈ ಒಪ್ಪಂದವು 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ಪ್ರಸ್ತುತ ಈಗಿರುವ 191ಬಿಲಿಯನ್ ಡಾಲರ್ನಿಂದ 500 ಬಿಲಿಯನ್ ಡಾಲರ್ಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಕರೆ ಮಾಡದ ಕಾರಣ ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ತಿಳಿಸಿದ್ದಾರೆ.
ಇನ್ನಷ್ಟು ಓದಿರಿ:
ಟ್ರಂಪ್ ಗೆ ನೊಬೆಲ್ ಪ್ರಶಸ್ತಿ: ಬರಾಕ್ ಒಬಮಾ ಗೆ ಟೀಕೆ