Belagavi News:
ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ಚಂಗಲ್ಪಟ್ಟು ಮಹಿಳಾ ನ್ಯಾಯಾಲಯವು ಆಗಸ್ಟ್ ಏಳಕ್ಕೆ ಮುಂದೂಡಿದೆ. ಜೂನ್ 15ರಂದು ನಡೆದ ವಿಚಾರಣೆಯಲ್ಲಿ ದಂಪತಿ ಇಬ್ಬರೂ ಖುದ್ದಾಗಿ ಹಾಜರಾಗಿದ್ದರು.
ಸಂಗೀತಾ ಅವರು ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ವಿಜಯ್ ಅವರ ವರ್ತನೆಯಿಂದ ಮನೆಯಲ್ಲಿನ ವಾತಾವರಣ ಪ್ರತಿಕೂಲವಾಗಿದ್ದು, ಇದೇ ಕಾರಣದಿಂದ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದೇನೆ ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ ವಿಜಯ್ ಅವರು ತಮ್ಮ ಮೇಲೆ ಹಣಕಾಸು ನಿರ್ಬಂಧಗಳನ್ನು ಹೇರಿದ್ದು, ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಿದ್ದಾರೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ.
ಸೋಮವಾರ ಬೆಳಗ್ಗೆ 10.30 ರ ಸುಮಾರಿಗೆ ಆರಂಭವಾದ ವಿಚಾರಣೆಯಲ್ಲಿ ವಿಜಯ್ ಮತ್ತು ಸಂಗೀತಾ ಇಬ್ಬರೂ ನ್ಯಾಯಾಲಯದಲ್ಲಿ ಹಾಜರಾಗಿದ್ದರೂ, ಯಾವುದೇ ಪ್ರಮುಖ ತೀರ್ಮಾನ ಅಥವಾ ಅಂದಾನ ಸೂತ್ರಗಳು ಮೂಡಿ ಬರಲಿಲ್ಲ. ಇದರ ಪರಿಣಾಮವಾಗಿ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ ಏಳಕ್ಕೆ ಮುಂದೂಡಲಾಗಿದೆ.
ತಮ್ಮ 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ತೆರೆ ಎಳೆಯುವ ಉದ್ದೇಶದಿಂದ ಸಂಗೀತಾ ಅವರು ವಿಚ್ಛೇದನ ಅರ್ಜಿ ಸಲ್ಲಿಸಿರುವುದು ಈಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ತಮಿಳುನಾಡು ಸಿಎಂ ವಿಜಯ್ - ಸಂಗೀತಾ ವಿಚ್ಛೇದನ ಪ್ರಕರಣಕ್ಕೆ ಹೊಸ ತಿರುವು:
ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣದಲ್ಲಿ ಹೊಸ ವಿವರಗಳು ಬೆಳಕಿಗೆ ಬಂದಿವೆ. 1998ರಲ್ಲಿ ಯುಕೆ ನಲ್ಲಿ ಕಾನೂನು ಬದ್ಧವಾಗಿ ವಿವಾಹ ನಂದಣಿ ಮಾಡಿಕೊಂಡಿದ್ದ ಈ ದಂಪತಿ, ನಂತರ 1999ರಲ್ಲಿ ಚೆನ್ನೈನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದರು.
ಈಗ 1954ರ ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಸಂಗೀತಾ ಅವರು ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ವಿಜಯ್ ವಿರುದ್ಧ ವಿವಾಹೇತರ ಸಂಬಂಧ ಹಾಗೂ ಮಾನಸಿಕ ಕ್ರೌರ್ಯದ ಗಂಭೀರ ಆರೋಪಗಳನ್ನು ಮಾಡಲಾಗಿದೆ. 2021ರ ಏಪ್ರಿಲ್ ನಲ್ಲಿ ವಿಜಯ್ ಅವರು ಸಹ ನಟಿಯೊಬ್ಬರೊಂದಿಗೆ ಸಂಬಂಧ ಹೊಂದಿರುವುದು ತಿಳಿದು ಬಂದಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಅರ್ಜಿಯಲ್ಲಿ ನಟಿಯ ಹೆಸರನ್ನು ಬಹಿರಂಗಪಡಿಸದಿದ್ದರೂ, ಚಿತ್ರರಂಗ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಹೆಸರು ನಟಿ ತ್ರಿಶಾ ಕೃಷ್ಣನ್ ಜೊತೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಆ ಸಂಬಂಧವನ್ನು ಕೊನೆಗೊಳಿಸುವುದಾಗಿ ವಿಜಯ್ ಭರವಸೆ ನೀಡಿದ್ದರೂ, ನಂತರ ಮುಂದುವರಿಸಿದ್ದರೆಂದು ಸಂಗೀತಾ ಆರೋಪಿಸಿದ್ದಾರೆ.
ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರ ಜೊತೆಯಾಗಿ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾಗ ವಿಜಯ್ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂಬುದನ್ನೂ ಅವರು ತಿಳಿಸಿದ್ದಾರೆ. ಇದರಿಂದ ತಮ್ಮ ಹಾಗೂ ಮಕ್ಕಳಿಗೆ ತೀವ್ರ ಮಾನಸಿಕ ಹಿಂಸೆ ಮತ್ತು ಮುಜುಗರ ಉಂಟಾಗಿದೆ ಎಂದು ಸಂಗೀತಾ ತಮ್ಮ ಅಜ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ನ್ಯಾಯಾಲಯದಲ್ಲಿ ಮುಂದೂಡಿದ್ದು, ಈ ವಿವಾದ ಈಗ ತಮಿಳುನಾಡು ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ವಿಜಯ್ - ಸಂಗೀತಾ ವಿಚ್ಛೇದನ ಪ್ರಕರಣ : ಸಂಬಂಧ ಪರಿಪಡಿಸಲು ನಡೆದ ಪ್ರಯತ್ನಗಳು ವಿಫಲ:
ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣದಲ್ಲಿ ದಂಪತಿ ಸಂಬಂಧ ಸಂಪೂರ್ಣ ಹದಕ್ಕೆ ಇರುವ ಹೊಸ ಮಾಹಿತಿ ಹೊರ ಬಂದಿದೆ. 2024ರ ಆಗಸ್ಟ್ ನಿಂದ 2025ರ ಫೆಬ್ರವರಿ ನಡುವೆ ಲೀಗಲ್ ನೋಟಿಸ್ ಗಳು ಹಾಗೂ ವೈಯಕ್ತಿಕ ಮಾತುಕತೆಗಳ ಮೂಲಕ ಸಂಬಂಧವನ್ನು ಸರಿಪಡಿಸಲು ಸಂಗೀತ ಪ್ರಯತ್ನಿಸಿದ್ದರೂ ಅದು ಯಶಸ್ವಿಯಾಗಿಲ್ಲ ಎಂದು ಕೋರ್ಟ್ ಗೆ ತಿಳಿಸಲಾಗಿದೆ.
ಸಂಗೀತಾ ಅವರ ಪ್ರಕಾರ , 2025 ನವೆಂಬರ್ 9ರಂದು ನಡೆದ ಕೊನೆಯ ಮುಖಾಮುಖಿ ಭೇಟಿಯು ವಿಫಲವಾಗಿದ್ದು, ನಂತರ ಇಬ್ಬರ ನಡುವಿನ ದಾಂಪತ್ಯ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ. ಈಗ ಈ ಸಂಬಂಧ ಕೇವಲ ಕಾಗದದ ಮೇಲಷ್ಟೇ ಉಳಿದಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಎಪ್ರಿಲ್ 20ರಂದು ನಡೆದ ಮೊದಲ ವಿಚಾರಣೆಗೆ ವಿಜಯ್ ಮತ್ತು ಸಂಗೀತಾ ಇಬ್ಬರೂ ಹಾಜರಾಗಿರಲಿಲ್ಲ. ಕೇವಲ ಅವರ ಪರ ವಕೀಲರು ಮಾತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸೆಲೆಬ್ರಿಟಿಗಳ ಭದ್ರತೆ ಕಾರಣಗಳನ್ನು ಉಲ್ಲೇಖಿಸಿ ಆನ್ಲೈನ್ ಹಾಜರಾತಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಲಾಗಿದ್ದರೂ, ನ್ಯಾಯಾಲಯವು ಅದನ್ನು ತಿರಸ್ಕರಿಸಿ ಖುದ್ದಾಗಿ ಹಾಜರಾಗಲು ಖಡಕ್ ಸೂಚನೆ ನೀಡಿತ್ತು.
ಅದರಂತೆ ಜೂನ್ 15ರಂದು ನಡೆದ ವಿಚಾರಣೆಗೆ ಇಬ್ಬರು ಹಾಜರಾಗಿದ್ದರು. ಆದರೆ ಯಾವುದೇ ಸಂದಾನ ಅಥವಾ ಅಂತಿಮ ನಿರ್ಧಾರ ಹೊರ ಬಂದಿಲ್ಲ. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ ಏಳಕ್ಕೆ ನ್ಯಾಯಾಲಯ ಮುಂದುಡಿದೆ.
Also Read:
ಗೃಹಜ್ಯೋತಿ ಯೋಜನೆ ಮರುಪರಿಶೀಲನೆ : ಅನರ್ಹರಿಗೆ ಸಬ್ಸಿಡಿ ಕಡಿತದ ಎಚ್ಚರಿಕೆ