<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

'ಲೇಡೀಸ್, ಸಿದ್ದರಾಗಿ': ಟಾಕ್ಸಿಕ್ ಚಿತ್ರದ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಯಶ್

'ಲೇಡೀಸ್, ಸಿದ್ದರಾಗಿ': ಟಾಕ್ಸಿಕ್ ಚಿತ್ರದ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಯಶ್
Summary: Actor Yash has piqued the curiosity of his fans through his official Instagram story. He has given a new update about the much-awaited movie 'Toxic',

belagavi news :

ಚಿತ್ರದ ಮುಂದಿನ ಬೆಳವಣಿಗೆಗಳ ಬಗ್ಗೆ ನಿರೀಕ್ಷೆ ಮೂಡಿಸಿದ್ದಾರೆ. 'ಟಾಕ್ಸಿಕ್' ಅಪ್ಡೇಟ್ ಗೆ ಕೌಂಟ್ ಡೌನ್ : ಯಶ್ ಪೋಸ್ಟ್ ನಿಂದ ಹೆಚ್ಚಿದ ಕುತೂಹಲ

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' : ಎ ಫೇರಿ ಟೇಲ್ ಫಾರ್ ಗ್ರೋನ್ - ಅಪ್ಸ್' ಬಿಡುಗಡೆ ದಿನಾಂಕ ಘೋಷಣೆಯಾದ ಬಳಿಕ ಅಭಿಮಾನಿಗಳಲ್ಲಿ ಚಿತ್ರದ ಕುರಿತ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ತಿಂಗಳುಗಳ ಕಾಲ ಸಿನಿಮಾ ಬಗ್ಗೆ ಹಲವು ವದಂತಿಗಳು ಕೇಳಿ ಬಂದ ಬಳಿಕ, ಚಿತ್ರತಂಡವು 2026ರ ಆಗಸ್ಟ್ 26ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ತಿಳಿಸಿತು.ಇದೀಗ ಚಿತ್ರದ ಪ್ರಮೋಷನಲ್ ಕಂಟೆಂಟ್ ಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ನಡುವೆ ನಟ, ನಿರ್ಮಾಪಕ ಹಾಗೂ ಚಿತ್ರದ ಕಥೆಯಲ್ಲಿ ತೊಡಗಿಸಿಕೊಂಡಿರುವ ಯಶ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಹೊಸ ಕುತೂಹಲ ಮೂಡಿಸಿದ್ದಾರೆ, "ಕಾಮ್ ಡೌನ್! ಲೇಡೀಸ್ ಟೇಕ್ ಟೈಮ್ ಟು ಕಮ್! ನಾಳೆ,01-07-2026, ಬೆಳಗ್ಗೆ 11:33 ಕ್ಕೆ" ಎಂದು ಯಶ್ ಪೋಸ್ಟ್ ಹಂಚಿಕೊಂಡಿದ್ದಾರೆ.

WHERE ARE THE LADIES, @thenameisyash?' ಎಂಬ ಪೋಸ್ಟ್ ಗೆ ಪ್ರತಿಕ್ರಿಯೆಯಾಗಿ ಪೋಸ್ಟ್ ಹಾಕಿದ್ದು, 'ಟಾಕ್ಸಿಕ್' ಸಿನಿಮಾದ ನಾಯಕಿಯರ ಕುರಿತಾದ ಹೊಸ ಅಪ್ಡೇಟ್ ಅಥವಾ ವಿಶೇಷ ಘೋಷಣೆ ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾಳೆ ಬಿಡುಗಡೆಯಾಗಲಿರುವ ಗ್ಲಿಂಪ್ಸ್, ಪೋಸ್ಟರ್ ಅಥವಾ ಪಾತ್ರ ಪರಿಚಯದ ಬಗ್ಗೆ ಅಭಿಮಾನಿಗಳಲ್ಲಿ ಬಾರಿ ಕುತೂಹಲ ಮೂಡಿದೆ.

ಟ್ಯಾಕ್ಸಿಕ್ ಬಿಡುಗಡೆ ದಿನಾಂಕ ಘೋಷಣೆ : ಯಶ್ ಅವತಾರಗಳ ಪೋಸ್ಟರ್ ಗೆ ಬಾರಿ ಮೆಚ್ಚುಗೆ

ಕಳೆದ ಜೂನ್ 21ರಂದು ಟಾಕ್ಸಿಕ್ ಚಿತ್ರ ತಂಡವು ಯಶ್ ಅವರ ಎರಡು ವಿಭಿನ್ನ ಅವತಾರಗಳಾದ 'ರಾಯ' ಮತ್ತು ಟಿಕೆಟ್ ಪಾತ್ರಗಳ ಪೋಸ್ಟರ್ ಗಳನ್ನು ಹಂಚಿಕೊಳ್ಳುವ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿತು. ಈ ಪೋಸ್ಟರ್ಗಳು ಚಿತ್ರದ ಗಾಢ ಹಾಗೂ ಬಹು ಹಂತದ ಕಥಾ ಪ್ರಪಂಚದ ಸುಳಿವು ನೀಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿವೆ.

ಪೋಸ್ಟರ್ ಹಂಚಿ ಕೊಂಡಿದ್ದ ಚಿತ್ರತಂಡ, "ತಂದೆಯನ್ನು ಗೌರವಿಸು.... #ಟಾಕ್ಸಿಕ್ 26-06-2026 ರಂದು ಬಿಡುಗಡೆ" ಎಂಬ ಬರಹದೊಂದಿಗೆ ಚಿತ್ರದ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿತು. ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರವನ್ನು ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸುತ್ತಿದ್ದು, ಯಶ್ ಅವರೊಂದಿಗೆ ಅವರ ಮೊದಲ ಸಹಯೋಗವಾಗಿದೆ. ಚಿತ್ರದಲ್ಲಿ ನಯನತಾರಾ, ಕಿಯಾರ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿನಿ ವಸಂತ ಹಾಗೂ ತಾರಾ ಸುತಾರಿಯ ಸೇರಿದಂತೆ ದೊಡ್ಡ ತಾರಾಗನವಿದೆ.

ಕೆ.ವಿ.ಎನ್ ಪ್ರೊಡಕ್ಷನ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ನಿರ್ಮಿಸಿರುವ ಈ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ಇಂಗ್ಲಿಷ್, ತೆಲುಗು ತಮಿಳು ಹಾಗೂ ಮಲಿಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಕುತೂಹಲಕಾರಿಯಾಗಿ, ಆಗಸ್ಟ್ 26ರಂದು ಬಿಡುಗಡೆಯಾಗುತ್ತಿರೋದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ವರಮಹಾಲಕ್ಷ್ಮಿ, ಓಣಂ ಮತ್ತು ರಕ್ಷಾಬಂಧನದಂತಹ ವಿಸ್ತೃತ ರಜಾ ದಿನಗಳ ಸಂದರ್ಭ ತೆರೆ ಕಾಣುತ್ತಿರುವ ಹಿನ್ನೆಲೆ, ಮಾರುಕಟ್ಟೆಗಳಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಲು ಚಿತ್ರಕ್ಕೆ ಗಮನಾರ್ಹ ಅವಕಾಶ ಸಿಗಲಿದೆ.

ಬಾಕ್ಸ್ ಆಫೀಸ್ ನಲ್ಲಿ 'ಟಾಕ್ಸಿಕ್' ಗೆ ಎದುರಾಗಲಿದೆ ಬಾರಿ ಪೈಪೋಟಿ:

ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' ಬಿಡುಗಡೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ, ಬಾಕ್ಸ್ ಆಫೀಸ್ ನಲ್ಲಿ ಚಿತ್ರದ ಎದುರಾಳಿಗಳ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಸಿನಿಮಾ ನೇರವಾಗಿ ಯಾವುದೇ ದೊಡ್ಡ ಚಿತ್ರದೊಂದಿಗೆ ಒಂದೇ ದಿನ ಬಿಡುಗಡೆಯಾಗದಿದ್ದರೂ, ಅದರ ಸುತ್ತಮುತ್ತಲಿನ ದಿನಗಳಲ್ಲಿ ಹಲವು ಬಹು ನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲಿವೆ.

ಸೌತ್ ಸೂಪರ್ ಸ್ಟಾರ್ ನಾನಿ ಅಭಿನಯದ ಫ್ಯಾನ್ ಇಂಡಿಯಾ ಸಿನಿಮಾ 'ದಿ ಫ್ಯಾರಡೈಸ್' ಆಗಸ್ಟ್ 21ರಂದು ಚಿತ್ರಮಂದಿರಗಳಿಗೆ ಬರಲಿದೆ. ಶ್ರೀಕಾಂತ್ ಒಡೆಲಾ ನಿರ್ದೇಶನದ ಈ ಸಿನಿಮಾ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ ರವಿ ಚಂದರ್ ಅವರ ಸಂಗೀತದಿಂದ ಈಗಾಗಲೇ ಗಮನ ಸೆಳೆದಿದೆ. ಬಿಡುಗಡೆಯಾದ ಮೊದಲ ವಾರದಿಂದಲೇ ಉತ್ತಮ ಆರಂಭ ಪಡೆಯುವ ನಿರೀಕ್ಷೆ ಮೂಡಿಸಿದೆ.

ಇನ್ನು 'ಟಾಕ್ಸಿಕ್' ಬಿಡುಗಡೆಯಾದ ಎರಡು ದಿನಗಳ ಬಳಿಕ, ಆಗಸ್ಟ್ 28ರಂದು ಸಿದ್ದಾರ್ಥ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ನಟನೆಯ 'Vvan' ಸಿನಿಮಾ ತೆರೆಗೆ ಬರಲಿದೆ. ಇದೇ ದಿನ ಶ್ರದ್ಧಾ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಈಥ' ಚಿತ್ರವು ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಹೀಗಾಗಿ 'ಟಾಕ್ಸಿಕ್' ನೇರ ಬಾಕ್ಸ್ ಆಫೀಸ್ ತಪ್ಪಿಸಿಕೊಂಡರು, ಬಿಡುಗಡೆಯ ವಾರಂತ್ಯದಲ್ಲಿ ಹಲವು ದೊಡ್ಡ ಸಿನಿಮಾಗಳಿಂದ ಸ್ಪರ್ಧೆ ಎದುರಿಸಬೇಕಾಗಲಿದೆ. ರಜಾ ದಿನಗಳ ಲಾಭವನ್ನು ಯಶ್ ಅಭಿನಯದ ಸಿನಿಮಾ ಎಷ್ಟರಮಟ್ಟಿಗೆ ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online