<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಪ್ಯಾಕಿಂಗ್ ಕೆಲಸ ಕೊಡ್ತೀವಿ ಅಂತ ಹೇಳಿ ನಂಬಿಸಿ ₹10 ಕೋಟಿ ಮೋಸ : ಹಾವೇರಿಯಲ್ಲಿ ಬಯಲಾಯಿತು ಮಹಾ ವಂಚನೆ

ಪ್ಯಾಕಿಂಗ್ ಕೆಲಸ ಕೊಡ್ತೀವಿ ಅಂತ ಹೇಳಿ ನಂಬಿಸಿ ₹10 ಕೋಟಿ ಮೋಸ : ಹಾವೇರಿಯಲ್ಲಿ ಬಯಲಾಯಿತು ಮಹಾ ವಂಚನೆ
Summary: The owner of Haveri's "SIL Mahila Mart" has been accused of defrauding people of around ₹10 crore by promising them packing work at home. Hundreds of people who fell prey to the lure of high income have lost money, and the case has led to widespread discussion.

BELAGAVI NEWS:

"ಮನೆಯಲ್ಲಿ ಕುಳಿತು ಕೈತುಂಬ ಸಂಪಾದಿಸಿ" ಎಂಬ ಆಕರ್ಷಕ ಜಾಹೀರಾತುಗಳನ್ನು ನಂಬಿದ ನೂರಾರು ಮಹಿಳೆಯರು ಬಾರಿ ವಂಚನೆಗೆ ಒಳಗಾಗಿರುವ ಘಟನೆ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ. ಹಾವೇರಿಯ ಅಶ್ವಿನಿ ನಗರದಲ್ಲಿರುವ "SLV ಮಹಿಳಾ ಮಾರ್ಟ್ " ಎಂಬ ಸಂಸ್ಥೆ , ಗೃಹ ಕೈಗಾರಿಕೆ ಹೆಸರಿನಲ್ಲಿ ಅಗರಬತ್ತಿ ಹಾಗೂ ಕಸಬರಗಿ ಪ್ಯಾಕಿಂಗ್ ಕೆಲಸ ನೀಡುವುದಾಗಿ ಹೇಳಿ ರಾಜ್ಯದ ವಿವಿಧ ಜಿಲ್ಲೆಗಳ ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು, ಕೋಟ್ಯಾಂತರ ರೂಪಾಯಿ ವಂಚಿಸಿ ಪರಾರಿ ಆಗಿದೆ ಎನ್ನಲಾಗಿದೆ.

ಮನೆಯಲ್ಲೇ ಕೆಲಸ ಮಾಡಿ ಆದಾಯ ಗಳಿಸುವ ಅವಕಾಶ ನೀಡುವುದಾಗಿ ಬರವಸೆ ನೀಡಿದ್ದ ಕಂಪನಿ, ಆರಂಭದಲ್ಲಿ ಹಲವು ಮಹಿಳೆಯರಿಂದ ನೋಂದಣಿ ಶುಲ್ಕ ಹಾಗೂ ಊರಿಗೆ ರೂಪದಲ್ಲಿ ಹಣ ಸಂಗ್ರಹಿಸಿತ್ತು. ಬಳಿಕ ಹೆಚ್ಚಿನ ಆದಾಯ ಆಮಿಷವೊಡ್ಡಿ ಮತ್ತಷ್ಟು ಹಣ ಹೂಡಿಕೆ ಮಾಡಿಸಿಕೊಂಡಿದೆ. ಆದರೆ ಕಳೆದ ಕೆಲವು ದಿನಗಳಿಂದ ಕಂಪನಿಯ ಕಚೇರಿ ಬಾಗಿಲು ಮುಚ್ಚಿದ್ದು, ಸಂಸ್ಥೆಯ ಮಾಲೀಕರು ಹಾಗೂ ಪ್ರಮುಖ ಸಿಬ್ಬಂದಿ ಸಂಪರ್ಕಕ್ಕೆ ಸಿಗದೇ ರಾತ್ರೋರಾತ್ರಿ ಪರಾರಿ ಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಂಚನೆಯಲ್ಲಿ ಸುಮಾರು ಐದರಿಂದ 10 ಕೋಟಿ ರೂಪಾಯಿ ಹಣ ವಸೂಲಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ನೂರಾರು ಮಹಿಳೆಯರು ತಮ್ಮ ಜೀವನದ ಉಳಿತಾಯ ಕೆಳೆದುಕೊಂಡಿದ್ದಾರೆ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಹಿಳೆಯರು ಉದ್ಯೋಗದ ನಿರೀಕ್ಷೆಯಲ್ಲಿ ಹಣ ಹೂಡಿಕೆ ಮಾಡಿದ್ದು, ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

Sponsored

ಹಣ ಕಳೆದುಕೊಂಡ ಮಹಿಳೆಯರು ಹಾವೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಿ ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಆಗ್ರಹಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸಂಸ್ಥೆಯ ಮಾಲೀಕರು ಮತ್ತು ಸಂಬಂಧಪಟ್ಟವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಈ ಘಟನೆ ಮತ್ತೊಮ್ಮೆ ಆನ್ಲೈನ್ ಹಾಗೂ ಗೃಹ ಕೈಗಾರಿಕೆ ಉದ್ಯೋಗದ ಹೆಸರಿನಲ್ಲಿ ನಡೆಯುವ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡಿದ್ದು, ಯಾವುದೇ ಸಂಸ್ಥೆಯಲ್ಲಿ ಹೂಡಿಕೆ ಮಾಡುವ ಮೊದಲು ಅದರ ವಿಶ್ವಾಸಾರ್ಹತೆ ಪರಿಶೀಲಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.

ಹಾವೇರಿಯಲ್ಲಿ 'SLV ಮಹಿಳಾ ಮಾರ್ಟ್ ' ಮಹಾ ವಂಚನೆ - 5-10 ಕೋಟಿ ರೂ. ದೋಚಿ ಮಾಲೀಕರು ಪರಾರಿ, ನೂರಾರು ಮಹಿಳೆಯರ ಕಣ್ಣೀರು :

ಮನೆಯಲ್ಲಿ ಕುಳಿತು ಅಗರಬತ್ತಿ, ಕಸಬರಗಿ ಹಾಗೂ ಮೇಣದಬತ್ತಿ ಪ್ಯಾಕಿಂಗ್ ಮಾಡಿ ತಿಂಗಳಿಗೆ ಸಾವಿರಾರು ರೂಪಾಯಿ ಸಂಪಾದಿಸಿ" ಎಂಬ ಆಕರ್ಷಕ ಆಮಿಷವಡ್ಡಿ ನೂರಾರು ಮಹಿಳೆಯರಿಗೆ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿರುವ ಘಟನೆ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ.

Sponsored

ಹಾವೇರಿಯ ಅಶ್ವಿನಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ SLV ಮಹಿಳಾ ಮಾರ್ಟ್ ಸಂಸ್ಥೆಯ ಮಾಲೀಕರಾದ ವಿನಾಯಕ್ ಅನ್ವೇರಿ ಹಾಗೂ ರಮ್ಯಾ ಎಂಬುವವರು ಗೃಹ ಕೈಗಾರಿಕಾ ಕೆಲಸ ನೀಡುವುದಾಗಿ ಹೇಳಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿಸಿಕೊಂಡಿದ್ದರು. ಅಗರಬತ್ತಿ, ರೊಟ್ಟಿ ಕಸಬರಗಿ ಹಾಗೂ ಮೇಣದಬತ್ತಿ ಪ್ಯಾಕಿಂಗ್ ಕೆಲಸಕ್ಕಾಗಿ ಮೊದಲು ಹಣ ಹೂಡಿಕೆ ಮಾಡಬೇಕು ಎಂದು ಮಹಿಳೆಯರನ್ನು ನಂಬಿಸಲಾಗಿತ್ತು.

ಆರಂಭದಲ್ಲಿ ಹೂಡಿಕೆ ಮಾಡಿದ ಕೆಲವರಿಗೆ ಸಮಯಕ್ಕೆ ಸರಿಯಾಗಿ ಹಣ ಹಾಗೂ ಕಮಿಷನ್ ಪಾವತಿಸಿ ಸಂಪಿಯ ಮೇಲೆ ವಿಶ್ವಾಸ ಮೂಡಿಸಲಾಗಿತ್ತು. ಈ ಮೂಲಕ ಜನರಲ್ಲಿ ನಂಬಿಕೆ ಗಳಿಸಿದ ಸಂಸ್ಥೆ, ನಂತರ ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಮಹಿಳೆಯರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿದೆ.

ಕಂಪನಿಯ ಮೇಲೆ ನಂಬಿಕೆ ಹೆಚ್ಚಾಗುತ್ತಿದ್ದಂತೆ ಮಹಿಳೆಯರು ತಮ್ಮ ಉಳಿತಾಯ ಹಣ, ಚಿನ್ನ ಅಡವಿಟ್ಟು ಪಡೆದ ಸಾಲದ ಹಣ ಹಾಗೂ ಕುಟುಂಬದ ಸಂಗ್ರಹವನ್ನು ಹೂಡಿಕೆ ಮಾಡಿದ್ದಾರೆ. ಹೀಗೆ ಒಟ್ಟಾರೆ ಅಂದಾಜು 5 ರಿಂದ 10 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾದ ಬಳಿಕ ಸಂಸ್ಥೆಯ ಮಾಲೀಕರಾದ ವಿನಾಯಕ್ ಮತ್ತು ರಮ್ಯಾ ಕಂಪನಿಗೆ ಬೀಗ ಜಡಿದು ರಾತ್ರೋರಾತ್ರಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಇದರಿಂದ ಹೂಡಿಕೆ ಮಾಡಿದ ಅಸಲು ಹಣವು ಸಿಗದೇ, ಹಲೋ ತಿಂಗಳು ಮಾಡಿದ ಕೆಲಸದ ಕೂಲಿಯು ದೊರೆಯದೆ ನೂರಾರು ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಜೀವನದ ಉಳಿತಾಯ ಕಳೆದುಕೊಂಡ ಮಹಿಳೆಯರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದು , ಆರೋಪಿಗಳನ್ನು ಶೀಘ್ರ ಬಂಧಿಸಿ ಹಣ ವಾಪಸ್ ಕೊಡಿಸುವಂತೆ ಒತ್ತಾಯಿಸಿದ್ದಾರೆ.

Sponsored

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದು, ವಂಚನೆಗೆ ಒಳಗಾದವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಘಟನೆ ರಾಜ್ಯದಲ್ಲಿ "ವರ್ಕ್ ಫ್ರಮ್ ಹೋಂ" ಹಾಗೂ ಗೃಹ ಕೈಗಾರಿಕೆ ಉದ್ಯೋಗದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ಗಂಟೆ ಮೊಳಗಿಸಿದೆ.

ಹಣ ಕಳೆದುಕೊಂಡ ಮಹಿಳೆಯರ ಆಕ್ರೋಶ - "ನಮ್ಮ ಉಳಿತಾಯ ದೋಚಿದ್ದಾರೆ, ನ್ಯಾಯ ಕೊಡಿಸಿ" :

SLV ಮಹಿಳಾ ಮಾರ್ಟ್ ಕಂಪನಿಯ ವಂಚನೆಗೆ ಬೆಳಗಾದ ನೂರಾರು ಮಹಿಳೆಯರು ಕಣ್ಣೀರಿನಲ್ಲೇ ಹಾವೇರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ತಮ್ಮ ಜೀವನದ ಉಳಿತಾಯದ ಹಣ ಕಳೆದುಕೊಂಡ ನೋವನ್ನು ವ್ಯಕ್ತಪಡಿಸಿದ ಮಹಿಳೆಯರು, ಕಂಪನಿ ಹಾಗೂ ಅದರ ಮಾಲೀಕರ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ.

ವಂಚನೆಗೆ ಒಳಗಾದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಾ,"ಮನೆಯಲ್ಲಿ ಕೆಲಸ ನೀಡಿ ಉತ್ತಮ ಆದಾಯ ಗಳಿಸುವ ಅವಕಾಶ ನೀಡುತ್ತಿವೆ ಎಂದು ನಂಬಿಸಿ ನಮ್ಮಿಂದ ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ. ನಮ್ಮ ಜೀವಮಾನದ ಉಳಿತಾಯ, ಸಾಲ ಮಾಡಿ ತಂದ ಹಣ ಹಾಗೂ ಕುಟುಂಬದ ಭವಿಷ್ಯಕ್ಕಾಗಿ ಉಳಿಸಿಕೊಂಡಿದ್ದ ಹಣವನ್ನು ಮೋಸದಿಂದ ದೋಚಿದ್ದಾರೆ. ಈಗ ಕಂಪನಿಯ ಮಾಲೀಕರು ಪರಾರಿಯಾಗಿದ್ದು, ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ" ಎಂದು ಕಣ್ಣೀರಿಟ್ಟಿದ್ದಾರೆ.

Sponsored

ಇನ್ನು ಹಲವರು, "ನಾವು ಕಷ್ಟಪಟ್ಟು ದುಡಿದು ಸಂಗ್ರಹಿಸಿದ್ದ ಹಣವನ್ನು ಕಳೆದುಕೊಂಡಿದ್ದೇವೆ. ಪೊಲೀಸರು ತಕ್ಷಣವೇ ಆರೋಪಿಗಳನ್ನು ಬಂಧಿಸಿ, ನಮ್ಮ ಹಣವನ್ನು ವಾಪಸ್ ಕೊಡಿಸುವ ಮೂಲಕ ನ್ಯಾಯ ಒದಗಿಸಬೇಕು" ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚನೆ ನಡೆಸಿದ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಇದೇ ರೀತಿಯ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣದ ವ್ಯಾಪ್ತಿ ಮತ್ತಷ್ಟು ದೊಡ್ಡದಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಗೃಹ ಕೈಗಾರಿಕೆ ಹಾಗೂ ವರ್ಕ್ ಫ್ರಮ್ ಹೋಮ್ ಉದ್ಯೋಗದ ಹೆಸರಿನಲ್ಲಿ ನಡೆಸಿರುವ ಈ ಬಹುಕೋಟಿ ವಂಚನೆ ಪ್ರಕರಣ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಸಂತ್ರಸ್ತ ಮಹಿಳೆಯರು ಆಗ್ರಹಿಸುತ್ತಿದ್ದಾರೆ.

Also Read:

Sponsored

ಕಾಂಗ್ರೆಸ್ ವಿರುದ್ಧ ಬಿಜೆಪಿ ಲೇವಡಿ: ಅಭ್ಯರ್ಥಿಯ ನಾಮಪತ್ರವೇ ರದ್ದಾಗಲೆಂದೇ ಫಾರ್ಮ್ ಸಲ್ಲಿಕೆ?

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online