Belagavi news:
ನಾವು ದಿನನಿತ್ಯ ಮಾಡುವ ಸಾಮಾನ್ಯ ಕ್ರಿಯೆ ಆದ ಆಕಳಿಕೆ ಏಕೆ ಸಂಭವಿಸುತ್ತದೆ ಎಂಬುದು ವಿಜ್ಞಾನಿಗಳಿಗೆ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಮೆದುಳನ್ನು ತಂಪಾಗಿಸಲು, ದೇಹದ ಆಯಾಸ, ನಿದ್ರೆ ಅಥವಾ ಬೇಸರದ ಪ್ರತಿಕ್ರಿಯೆಯಾಗಿ ಆಕಳಿಗೆ ಉಂಟಾಗಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಆದರೆ ಆಕಳಿಕೆಯ ಅತ್ಯಂತ ಕುತೂಹಲಕಾರಿ ಅಂಶವೆಂದರೆ ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸ್ವಭಾವ. ಎದುರಿಗೆ ಕುಳಿತ ವ್ಯಕ್ತಿ ಆಕಳಿಸಿದರೆ ನಮಗೂ ಆಕಳಿಕೆ ಬರುವುದು ಸಾಮಾನ್ಯ. ಇದೇ ಪರಿಣಾಮವೂ ಇಂದಿನ ಡಿಜಿಟಲ್ ಯುಗದಲ್ಲಿ ಇನ್ನೂ ಹೆಚ್ಚಾಗಿ ಕಾಣಿಸುತ್ತಿದೆ ಎಂದು ಹೇಳಲಾಗುತ್ತದೆ. ಉದಾಹರಣೆಗೆ, ವಿಡಿಯೋ ಕರೆ ಅಥವಾ ಆನ್ಲೈನ್ ಸಂಭಾಷಣೆಯಲ್ಲಿಯೂ ಸಹ ಒಬ್ಬರ ಆಕಳಿಕೆ ಇನ್ನೊಬ್ಬರಿಗೆ ಹರಡುವುದು ಗಮನಿಸಬಹುದು.
ಇದೇ ವೇಳೆ, ಇತ್ತೀಚಿನ ಅಧ್ಯಯನವು ಮತ್ತೊಂದು ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದೆ. ಅದರ ಪ್ರಕಾರ, ಗರ್ಭಿಣಿ ಮಹಿಳೆಯರೊಬ್ಬರು ಆಕಳಿಸಿದಾಗ ಅವರ ಹೊಟ್ಟೆಯೊಳಗಿನ ಭ್ರೂಣವು ಕೂಡ ಆಕಳಿಸುವ ಪ್ರತಿಕ್ರಿಯೆ ನೀಡಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಇದು ಗರ್ಭದಲ್ಲಿಯೇ ಮಗು ಮತ್ತು ತಾಯಿಯ ನಡುವಿನ ದೈಹಿಕ ಹಾಗೂ ನ್ಯೂರೋಲಾಜಿಕಲ್ ಸಂಪರ್ಕದ ಒಂದು ಪ್ರಮುಖ ಸೂಚನೆ ಎಂದು ಪರಿಗಣಿಸಲಾಗುತ್ತಿದೆ.
ವಿಜ್ಞಾನಿಗಳ ಪ್ರಕಾರ, ಈ ಕಂಡು ಹಿಡಿದವರು ಮಾನವ ಮೆದುಳಿನ ಬೆಳವಣಿಗೆ ಮತ್ತು ಭ್ರೂಣದ ಪ್ರತಿಕ್ರಿಯ ಸಾಮರ್ಥ್ಯವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಬಹುದು. ಆದರೆ ಇದನ್ನು ಇನ್ನಷ್ಟು ಆಳವಾದ ಅಧ್ಯಯನಗಳ ಮೂಲಕ ದುಡಪಡಿಸಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ. ಆಕಳಿಕೆ ಒಂದು ಸಾಮಾನ್ಯ ಕ್ರಿಯೆ ಆದರೂ, ಅದರ ಹಿಂದಿರುವ ರಹಸ್ಯಗಳು ಇನ್ನೂ ವಿಜ್ಞಾನ ಲೋಕದಲ್ಲಿ ಕುತೂಹಲಕ್ಕೆ ಕಾರಣವಾಗಿವೆ.
ಗರ್ಭದಲ್ಲಿರುವ ಶಿಶುವಿಗೆ ತಾಯಿಯ ಭಾವನೆಗಳು ಮತ್ತು ದೈಹಿಕ ಪ್ರತಿಕ್ರಿಯೆಗಳು ನೇರವಾಗಿ ಪರಿಣಾಮ ಬೀರುತ್ತದೆ ಎಂಬುದು ಹಲವು ಅಧ್ಯಯನಗಳಲ್ಲಿ ಕಂಡು ಬರುತ್ತಿದೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ಗರ್ಭಿಣಿ ಮಹಿಳೆ ಪ್ರತಿಬಾರಿ ಆಕಳಿಸಿದಾಗಲೂ ಹೊಟ್ಟೆಯೊಳಗಿನ ಶಿಶುವು ಆಕಳಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ತದ್ಯರ ಅಭಿಪ್ರಾಯದಂತೆ, ಹೊಕ್ಕಳುಬಳ್ಳಿ ಮೂಲಕ ಹಾರ್ಮೋನುಗಳು ಮತ್ತು ರಾಸಾಯನಿಕ ಸಂದೇಶಗಳು ಮಗುವಿಗೆ ಹರಡುತ್ತವೆ. ಈ ಹಾರ್ಮೋನು ಬದಲಾವಣೆಗಳು ಭ್ರೂಣದ ಪ್ರತಿಕ್ರಿಯೆಗಳನ್ನು ಪ್ರೇರೇಪಿಸಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ ತಾಯಿ ಆಕಳಿಸುವಾಗ ಹೃದಯ ಬಡಿತ, ರಕ್ತದೊತ್ತಡ ಮತ್ತು ದೇಹದ ಚಲನೆಗಳಲ್ಲಿ ಉಂಟಾಗುವ ಬದಲಾವಣೆಗಳೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದಾಗಿ ತಜ್ಞರು ವಿವರಿಸುತ್ತಾರೆ.
ಆಕಳಿಸುವ ಸಂದರ್ಭದಲ್ಲಿ ತಾಯಿಯ ಹೊಟ್ಟೆಯಲ್ಲಿ ಉಂಟಾಗುವ ಸಣ್ಣ ಚಲನೆಗಳು ಮತ್ತು ಕಂಪನಗಳನ್ನು ಗರ್ಭದಲ್ಲಿರುವ ಶಿಶುಗಳು ಗ್ರಹಿಸಬಹುದು. ವಿಶೇಷವಾಗಿ ಅವಳಿ ಗರ್ಭಧಾರಣೆಯ ಸಂದರ್ಭಗಳಲ್ಲಿ ಈ ಪ್ರತಿಕ್ರಿಯೆಗಳು ಇನ್ನಷ್ಟು ಸ್ಪಷ್ಟವಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಕರೆಂಟ್ ಬಯೋಲಜಿ ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗರ್ಭದಲ್ಲಿರುವ ಶಿಶುಗಳು ತಾಯಿಯ ಆಕಳಿಕೆಯನ್ನು ಗ್ರಹಿಸುವ ಸಾಧ್ಯತೆ ಇದೆ ಎಂಬುದಕ್ಕೆ ಸಾಕ್ಷಗಳು ಕಂಡುಬಂದಿವೆ. ಇಟಲಿಯ ಫಾರ್ಮ್ ವಿಶ್ವವಿದ್ಯಾಲಯ ಸಂಶೋಧಕರ ಈ ವಿಚಾರವನ್ನು ಪರೀಕ್ಷಿಸಲು ಎಂಟು ತಿಂಗಳು ತುಂಬಿದ ಗರ್ಭಿಣಿ ಮಹಿಳೆಯರಿಗೆ ಆಕಳಿಸುವ ವಿಡಿಯೋಗಳನ್ನು ತೋರಿಸಿದರು. ಈ ವೇಳೆ ಮಹಿಳೆಯರ ಪ್ರತಿಕ್ರಿಯೆಗಳನ್ನು ಕ್ಯಾಮೆರಾದಲ್ಲಿ ದಾಖಲಿಸಲಾಗಿದ್ದು, ಭ್ರೂಣದ ಚಲನೆಗಳನ್ನು ಅಲ್ಟ್ರಾ ಸೌಂಡ್ ಮೂಲಕ ಗಮನಿಸಲಾಯಿತು.
ಈ ಅಧ್ಯಯನವು ತಾಯಿ ಮತ್ತು ಮಗು ಇಬ್ಬರ ನಡುವಿನ ಗರ್ಭಾವಸ್ಥೆಯ ಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಈ ವಿಷಯವನ್ನು ಇನ್ನಷ್ಟು ದೊಡ್ಡ ಮಟ್ಟದ ಸಂಶೋಧನೆಗಳ ಮೂಲಕ ದೃಢಪಡಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಗರ್ಭದಲ್ಲಿಯೇ ಶಿಶುಗಳು ತಾಯಿಯ ದೈಹಿಕ ಮತ್ತು ಭಾವನಾತ್ಮಕ ಸ್ಥಿತಿಗಳಿಗೆ ಪ್ರತಿಕರಿಸುತ್ತವೆ ಎಂಬ ಕಲ್ಪನೆ ಇದೀಗ ವಿಜ್ಞಾನ ಲೋಕದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಗರ್ಭದಲ್ಲಿರುವ ಶಿಶುಗಳು ತಾಯಿಯ ದೈಹಿಕ ಚಟುವಟಿಕೆಗಳಿಗೆ ಪ್ರತಿಕ್ರಿಸುತ್ತವೆ ಎಂಬುದು ಹಲವು ಅಧ್ಯಯನಗಳಲ್ಲಿ ಕಂಡುಬಂದಿರುವ ಅಚ್ಚರಿಯ ಸಂಗತಿ. ಇತ್ತೀಚಿನ ಸಂಶೋಧನೆಯ ಪ್ರಕಾರ, ಗರ್ಭಿಣಿ ಮಹಿಳೆ ಆಕಳಿಸಿದಾಗ ಅವರ ಹೊಟ್ಟೆಯೊಳಗಿನ ಭ್ರೂಣವು ಆಕಳಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಆಕಳಿಸುವ ವಿಡಿಯೋಗಳನ್ನು ವೀಕ್ಷಿಸಿದ ಗರ್ಭಿಣಿ ಮಹಿಳೆಯರಲ್ಲಿ ಸುಮಾರು ಶೇ. 64 ರಷ್ಟು ಮಹಿಳೆಯರು ಕನಿಷ್ಠ ಒಮ್ಮೆ ಆಕಳಿಸಿದರೆ, ಆ ಪ್ರಕರಣಗಳಲ್ಲಿನ ಅರ್ಧಕ್ಕಿಂತ ಹೆಚ್ಚಾದ ಭೂರಣಗಳು ಸುಮಾರು 90 ಸೆಕೆಂಡುಗಳೊಳಗೆ ಆಕಳಿಸಿದ ಪ್ರತಿಕ್ರಿಯೆ ನೀಡಿದವು ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಇದು ತಾಯಿ ಮತ್ತು ಮಗುವಿನ ನಡುವಿನ ಗರ್ಭಾವಸ್ಥೆಯ ಸಂಪರ್ಕದ ಮತ್ತೊಂದು ಕುತೂಹಲಕಾರಿ ಸೂಚನೆ ಎಂದು ಸಂಶೋಧಕರು ಹೇಳುತ್ತಾರೆ.
ವಿಜ್ಞಾನಿಗಳ ಪ್ರಕಾರ, ಭ್ರೂಣಗಳು ಗರ್ಭದಲ್ಲಿಯೇ ಸ್ವಾಭಾವಿಕವಾಗಿ ಆಕಳಿಸುವ ಪ್ರಕ್ರಿಯೆಯನ್ನು ಹೊಂದಿರುತ್ತವೆ. ಈ ಆಕಳಿಕೆಗಳು ಉಸಿರಾಟಕ್ಕೆ ಸಂಬಂಧಿಸಿದ ಸ್ನಾಯುಗಳು, ಮುಖದ ಚಲನೆ ಮತ್ತು ನರಸಂಪರ್ಕಗಳ ಬೆಳವಣಿಗೆಗೆ ಸಹಾಯವಾಗುತ್ತವೆ ಎಂದು ತಜ್ಞರು ವಿವರಿಸಿದ್ದಾರೆ.
ಆದರೆ ಇತ್ತೀಚಿನ ಅಧ್ಯಯನದಲ್ಲಿ ಕಂಡು ಬಂದಿರುವುದು ಹೊಸ ಅಂಶ. ತಾಯಿ ಆಕಳಿಸಿದಾಗ ಅದರ ಪರಿಣಾಮವನ್ನು ಗುರು ನಾವು ಗ್ರಹಿಸಿ ಪ್ರತಿಕ್ರಿಯಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದು ತಾಯಿ ಮತ್ತು ಮಗುವಿನ ನಡುವಿನ ದೈಹಿಕ ಹಾಗೂ ನ್ಯೂರೋಜಿಗಿಕಲ್ ಸಂಪರ್ಕವನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ.
ಸಂಶೋಧಕರ ಪ್ರಕಾರ, ಈ ಕಂಡುಹಿಡಿತವನ್ನು ಇನ್ನಷ್ಟು ಆಳವಾದ ಅಧ್ಯಯನಗಳ ಮೂಲಕ ದೃಢಪಡಿಸಬೇಕಿದೆ. ಅದಾಗಿಯೂ ಗರ್ಭವಸ್ಥೆಯಲ್ಲಿ ತಾಯಿ ಮಾಡುವ ಸಣ್ಣ ದೈಹಿಕ ಚಟುವಟಿಕೆಗಳು ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಂಬುದು ಈ ಅಧ್ಯಯನದಿಂದ ತಿಳಿದು ಬಂದ ಪ್ರಮುಖ ವಿಚಾರವಾಗಿದೆ.
ಒಟ್ಟಿನಲ್ಲಿ, ನೀವು ಗರ್ಭಿಣಿಯಾಗಿದ್ದರೆ, ನೀವು ಆ ಕಳಿಸಿದ ಆಗಲೆಲ್ಲ ನಿಮ್ಮ ಹೊಟ್ಟೆಯೊಳಗಿನ ಮಗು ಕೂಡ ನಿಮ್ಮೊಂದಿಗೆ ಪ್ರತಿಕ್ರಿಸಬಹುದು ಎಂಬುದು ಈ ಹೊಸ ಸಂಶೋಧನೆಯಿಂದ ಹೊರಬಂದ ಅಚ್ಚರಿಯ ಸಂದೇಶವಾಗಿದೆ.
Also Read:
ಕೃಷಿಕರಿಗೆ ನಿರೀಕ್ಷೆಯ ಮಳೆ: ಜೂನ್ ಮೊದಲ ವಾರದಲ್ಲೇ ರಾಜ್ಯಕ್ಕೆ ಮುಂಗಾರು ಪ್ರವೇಶ