belagavi news :
ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿರುವ ಭಾರತೀಯ ವಾಯುಪಡೆಯ ಏರ್ ಮೆನ್ ತರಬೇತಿ ಶಾಲೆಯಲ್ಲಿ 7ನೇ ತಂಡದ ಅಗ್ನಿವೀರಗಳ ನಿರ್ಗಮನ ಪಥಸಂಚಲನ ಶನಿವಾರ ಅದ್ದೂರಿಯಾಗಿ ಜರುಗಿತು. ಸತತ 22 ವಾರಗಳ ಕಾಲ ಕಠಿಣ ಹಾಗೂ ಪರಿಣಾಮಕಾರಿ ತರಬೇತಿ ಪಡೆದ 1,250 ಪ್ರಶಿಕ್ಷಣಾರ್ಥಿಗಳ ಶಿಸ್ತಿನ ಹೆಜ್ಜೆಗಳಿಂದ ಪಥಸಂಚಲನ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸಾರಂಗ ಫೈಲಟ್ ತಂಡದ ಹೆಲಿಕಾಪ್ಟರ್ ಗಳ ವೈಮಾಲಿಕ ಪ್ರದರ್ಶನ ನಡೆಯಿತು. ಆಕಾಶದಲ್ಲಿ ಸಾಹಸಮಯ ಕಸರತ್ತುಗಳನ್ನು ಪ್ರದೇಶಿಸಿದ ತಂಡವು ನೆರೆದಿದ್ದ ಸಾವಿರಾರು ಮಂದಿಯನ್ನು ರೋಮಾಂಚನಗೊಳಿಸಿತು. ದೇಶಭಕ್ತಿ ಮತ್ತು ಯುವಶಕ್ತಿಯ ಸಂಗಮಕ್ಕೆ ಸಾಕ್ಷಿಯಾದ ಈ ಕಾರ್ಯಕ್ರಮದಲ್ಲಿ ಅಗ್ನಿವೀರ್ ಗಳ ಸಾಧನೆಗೆ ಬಾರಿ ಮೆಚ್ಚುಗೆ ವ್ಯಕ್ತವಾಯಿತು.
ಏರ್ ಮೆನ್ ತರಬೇತಿ ಶಾಲಿಯ ಕಮಾಂಡಿಂಗ್ ಏರ್ ಆಫೀಸರ್ ಸೂರಜ್ ಶಂಕರ್ ಅವರು ಪಥಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು. ಏರ್ ವೈಸ್ ಮಾರ್ಷಲ್ ಮುಖೇಶ್ ಕುಮಾರ್ ಯಾದವ್, ಕಮಾಂಡಿಂಗ್ ಅಧಿಕಾರಿ ಕ್ಯಾಪ್ಟನ್ ಅಭಿಜೀತ್ ಕುಮಾರ್; ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಗ್ನಿವೀರರ ಪೋಷಕರು ಹಾಗೂ ಕುಟುಂಬಸ್ಥರು ಸಹ ಹಾಜರಿದ್ದು, ತಮ್ಮ ಮಕ್ಕಳ ಸಾಧನೆಯನ್ನು ಹೆಮ್ಮೆಯಿಂದ ಕಣ್ತುಂಬಿಕೊಂಡರು.
22 ವಾರಗಳ ಕಠಿಣ ತರಬೇತಿ ಪೂರ್ಣಗೊಳಿಸಿದ 1,250 ಅಗ್ನಿ ವೀರಗಳ ಭವ್ಯ ಪಥಸಂಚಲನ, ಸಾರಂಗ ತಂಡದ ರೋಚಕ ಹೆಲಿಕಾಪ್ಟರ್ ಪ್ರದರ್ಶನ ಮತ್ತು ದೇಶಭಕ್ತಿಯ ವಾತವರಣದಿಂದ ಬೆಳಗಾವಿ ಸಂಭ್ರಮದ ಕೇಂದ್ರ ಬಿಂದುವಾಯಿತು.
ತರಬೇತಿ ಸಂದರ್ಭದಲ್ಲಿ ತ್ತಮ ಪ್ರದರ್ಶನ ನೀಡಿದ ರ್ಯಾಂಕ್ ಗಳಿಸಿದ ಐವರೂ ಪ್ರಶಿಕ್ಷಣಾರ್ಥಿಗಳಿಗೆ ದೇಶ ಸೂರಜ್ ಶಂಕರ್ ಅವರು ಪ್ರಶಸ್ತಿ ಫಲಕ ನೀಡಿ ಗೌರವಿಸಿದರು. ಪ್ರಶಿಕ್ಷಣಾರ್ಥಿಗಳ ಡ್ರಿಲ್ ಹಾಗೂ ಕೌಶಲ್ಯತೆಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಆಕಾಶದಲ್ಲಿ ಹೆಲಿಕಾಪ್ಟರ್ ಗಳ ಚಿತ್ತಾರ: ಅಗ್ನಿ ವೀರಗಳ ನಿರ್ಗಮನ ಪಥಸಂಚಲನಕ್ಕೆ ರೋಮಾಂಚಕಾರಿ ಮೆರುಗು.
ಬೆಳಗಾವಿಯ ಸಾಂಬ್ರಾದಲ್ಲಿರುವ ಭಾರತೀಯ ವಾಯುಪಡೆಯ ಏರ್ ಮೆನ್ ತರಬೇತಿ ಶಾಲೆಯಲ್ಲಿ ನಡೆದ ಅಗ್ನಿವೀರ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಾರಕ್ಕೆ ಈ ಬಾರಿ ವಿಶ್ವವಿಖ್ಯಾತ ಸಾರಂಗ ಫೈಲಟ್ ತಂಡದ ಹೆಲಿಕಾಪ್ಟರ್ ಪ್ರದರ್ಶನ ವಿಶೇಷ ಆಕರ್ಷಣೆಯಾಯಿತು. ಸುಮಾರು 15 ನಿಮಿಷಗಳ ಕಾಲ 5 ಹೆಲಿಕಾಪ್ಟರ್ ಗಳು ಆಕಾಶದಲ್ಲಿ ನಡೆಸಿದ ಸಾಹ ಸಮಯ ಕಸರತ್ತುಗಳು ನೆರೆದಿದ್ದವರನ್ನು ರೋಮಾಂಚನಗೊಳಿಸಿದವು.
ವಿಶ್ವದಲ್ಲೇ ಏಕೈಕ 5 ಹೆಲಿಕಾಪ್ಟರ್ ಡಿಸ್ ಪ್ಲೇ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾದ ' ಸಾರಂಗ ' ತಂಡವು ಸ್ವದೇಶಿ ನಿರ್ಮಿತ ಎಎಲ್ ಎಚ್ ಧ್ರುವ (ALH Dhruv) ಹೆಲಿಕಾಪ್ಟರ್ ಗಳ ಮೂಲಕ ಆಕಾಶದಲ್ಲಿ ನಾನಾ ರೀತಿಯ ವೈಮಾನಿಕ ಪ್ರದರ್ಶನ ನೀಡಿ ವೀಕ್ಷಕರಿಂದ ಭರ್ಜರಿ ಚಪ್ಪಾಳೆ ಗಿಟ್ಟಿಸಿತು. ಹೆಲಿಕಾಪ್ಟರ್ ಗಳು ಮೂಡಿಸಿದ ವಿಭಿನ್ನ ಆಕೃತಿಗಳು ಹಾಗು ನಿಖರ ಹಾರಾಟದ ಕೌಶಲ್ಯ ಎಲ್ಲರ ಗಮನ ಸೆಳೆಯಿತು.
ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಏರ್ ಕಮಾಂಡರ್ ಸೂರಜ್ ಶಂಕರ್, ಅಲ್ಪಾವಧಿಯಲ್ಲೇ ಅತ್ಯುತ್ತಮ ತರಬೇತಿ ಪಡೆದು ಸಾಮರ್ಥ್ಯ ಪ್ರದರ್ಶಿಸಿರುವ ಅಗ್ನಿವೀರಗಳನ್ನು ಅಭಿನಂದಿಸಿರುವ. ವಾಯುಪಡೆಯಲ್ಲಿ ಮಹಿಳೆಯರಿಗೂ ಸಾಮಾನ್ಯ ಅವಕಾಶ ಹಾಗೂ ಪ್ರಧಾನ ಆದ್ಯತೆ ನೀಡಲಾಗುತ್ತಿದ್ದು, ಪುರುಷರೊಂದಿಗೆ ಹೆಗಲಿಗೆ ಹೆಗಲು ಸೇರಿಸಿ ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಿರುವುದು ಅವರ ಆತ್ಮವಿಶ್ವಾಸ ಮತ್ತು ಸಾಮರ್ಥ್ಯದ ಪ್ರತೀಕ ಎಂದು ಹೇಳಿದರು.
ದೇಶದ ಭದ್ರತೆ ಮತ್ತು ಯುದ್ಧ ಸಂದರ್ಭದಲ್ಲಿ ಭಾರತೀಯ ವಾಯುಪಡೆ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತ ಬಂದಿದೆ. ಈಗ ತರಬೇತಿ ಪೂರ್ಣಗೊಳಿಸಿರುವ ಅಗ್ನಿವೀರಗಳು ದೇಶದ ಸಾರ್ವಭೌಮತೆ ಮತ್ತು ಸುರಕ್ಷತೆಗಾಗಿ ಅತ್ಯಂತ ಶ್ರದ್ಧೆ ಹಾಗೂ ಸಮರ್ಪಣೆಯಿಂದ ಸೇವೆ ಸಲ್ಲಿಸುವವರೆಂಬ ವಿಶ್ವಾಸವಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಆಕಾಶದಲ್ಲಿ ಸಾರಂಗ ತಂಡದ ಸಾಹಸಮಯ ವೈಮಾನಿಕ ಕಸರತ್ತುಗಳು ನೆಲದ ಮೇಲೆ ಅಗ್ನಿವೀರಗಳ ಶಿಸ್ತಿನ ಪಥ ಸಂಚಲನ ಇವೆರಡರ ಸಂಯೋಜನೆಯಿಂದ ಬೆಳಗಾವಿಯಲ್ಲಿ ದೇಶಭಕ್ತಿಯ ಅದ್ಭುತ ಕ್ಷಣಗಳು ಮೂಡಿ ಬಂದವು.
Also Read: