<?= $pageTitle ?>
Logo
ಮುಖಪುಟ ಓದುವುದು ಕೇಳು
Education

ವಯಸ್ಸು ಕೇವಲ ಸಂಖ್ಯೆ ! 65 ರಲ್ಲೂ ಕ್ರೀಡೆಯಲ್ಲಿ ಮಿಂಚುತ್ತಿರುವ ನಿವೃತ್ತ ಪಿಟಿ ಶಿಕ್ಷಕ

ವಯಸ್ಸು ಕೇವಲ ಸಂಖ್ಯೆ ! 65 ರಲ್ಲೂ ಕ್ರೀಡೆಯಲ್ಲಿ ಮಿಂಚುತ್ತಿರುವ ನಿವೃತ್ತ ಪಿಟಿ ಶಿಕ್ಷಕ
Summary: The achievements of a retired physical education teacher who is maintaining fitness and winning medals in sports competitions at the age of 65 are an inspiration to everyone. Learn the secret to his success and his inspiring journey here.

Belagavi News :

"ವಯಸ್ಸು ಕೇವಲ ಒಂದು ಸಂಖ್ಯೆ " ಎಂಬ ಮಾತನ್ನು ತೆಲಂಗಾಣದ ಮೇಡಂ ಜಿಲ್ಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಡಾ. ಕೊಕ್ಕೊಂಡ ಪ್ರಭು ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ. 65ನೇ ವಯಸ್ಸಿನಲ್ಲೂ ಫಿಟ್ನೆಸ್ ಕಾಪಾಡಿಕೊಂಡು ರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವ ಮೂಲಕ ಯುವಕರಿಗೂ ಸ್ಪೂರ್ತಿ ಆಗಿದ್ದಾರೆ.

ಡಾ. ಪ್ರಭು ಅವರು ಸೇವಾ ಅವಧಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಕ್ರೀಡಾಸ್ಪೂರ್ತಿ ತುಂಬಿದ್ದರು. ನಿವೃತ್ತಿಯ ನಂತರವೂ ಕ್ರೀಡೆಯ ಮೇಲಿನ ಆಸಕ್ತಿ ಕಡಿಮೆಯಾಗದೆ, ಪ್ರತಿದಿನ ವ್ಯಾಯಾಮ ಮತ್ತು ನಿರಂತರ ಅಭ್ಯಾಸದ ಮೂಲಕ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಇತ್ತೀಚೆಗೆ ರಾಜಸ್ಥಾನದ ಜೈಪುರ್ದಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ತೆಲಂಗಾಣವನ್ನು ಪ್ರತಿನಿಧಿಸಿದ ಡಾ. ಪ್ರಭು ಅವರ ಲಾಂಗ್ ಜಂಪ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಅವರ ಈ ಸಾಧನೆ ಕೇವಲ ವೈಯಕ್ತಿಕ ಗೆಲುವಾಗಿರದೇ, ಫಿಟ್ನೆಸ್ ಗೆ ವಯಸ್ಸಿನ ಮಿತಿ ಇಲ್ಲ ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ. ನಿಯಮಿತ ವ್ಯಾಯಾಮ, ಶಿಸ್ತು ಮತ್ತು ಆತ್ಮವಿಶ್ವಾಸ ಇದ್ದರೆ ಯಾವುದೇ ವಯಸ್ಸಿನಲ್ಲೂ ಸಾಧನೆ ಎಂಬ ಸಂದೇಶವನ್ನು ಡಾ. ಪ್ರಭು ಅವರ ಪಯಣ ಸಾರುತ್ತಿದೆ.

ಅವರ ಸಾಧನೆಗೆ ಕ್ರೀಡಾಭಿಮಾನಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಸ್ಪೂರ್ತಿದಾಯಕ ಕಥೆ ವೈರಲ್ ಆಗುತ್ತಿದೆ.

65 ರಲ್ಲೂ ಫಿಟ್ನೆಸ್ ಸೀಕ್ರೆಟ್ ಬಹಿರಂಗಪಡಿಸಿದ ನಿವೃತ್ತ ಶಿಕ್ಷಕ - 50 ವರ್ಷಗಳಿಂದ ನಿತ್ಯ ವ್ಯಾಯಾಮ, ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಮಾದರಿ :

65ನೇ ವಯಸ್ಸಿನಲ್ಲೂ ಫಿಟ್ ಆಗಿ ರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧಿಗಳಲ್ಲಿ ಪದಕ ಗೆಲ್ಲುತ್ತಿರುವ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಡಾ. ಕೊಕ್ಕಂಡ ಪ್ರಭು ಅವರ ಜೀವನ ಶೈಲಿ ಅನೇಕರಿಗೆ ಸ್ಪೂರ್ತಿಯಾಗಿದೆ. ಕಳೆದ ಐದು ದಶಕಗಳಿಂದ ಶಿಸ್ತುಬದ್ಧ ಜೀವನ ಮತ್ತು ನಿಯಮಿತ ವ್ಯಾಯಾಮವನ್ನು ರೂಡಿಸಿಕೊಂಡಿರುವ ಅವರು, ಆರೋಗ್ಯಕರ ಬದುಕಿನ ಮಹತ್ವವನ್ನು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟಿದ್ದಾರೆ.

ಡಾ. ಪ್ರಭು ಅವರ ಮಾತಿನಂತೆ, ಕಳೆದ 50 ವರ್ಷಗಳಿಂದ ನಡಿಗೆ ಮತ್ತು ವ್ಯಾಯಾಮ ಅವರ ದಿನಚರಿಯ ಅವಿಭಾಜ್ಯ ಅಂಗವಾಗಿದೆ. ಇದೇ ಕಾರಣದಿಂದ ಇಂದಿನವರೆಗೂ ರಕ್ತದೊತ್ತಡ ಅಥವಾ ಮಧುಮೇಹ ಸೇರಿದಂತೆ ಜೀವನ ಶೈಲಿಗೆ ಸಂಬಂಧಿಸಿದ ಯಾವುದೇ ಪ್ರಮುಖ ರೋಗ ಸಮಸ್ಯೆ ಅವರನ್ನು ಕಾಡಿಲ್ಲ.

" ಕಳೆದ 50 ವರ್ಷಗಳಿಂದ ನಡಿಗೆ ಮತ್ತು ವ್ಯಾಯಾಮ ನನ್ನ ಜೀವನದ ಭಾಗವಾಗಿದೆ ನಿಯಮಿತ ದೈಹಿಕ ಚಟುವಟಿಕೆಗಳು ನನ್ನನ್ನು ಆರೋಗ್ಯಯುಕ್ತವಾಗಿರುಸಿವೆ. ನಾನು ಎಂದಿಗೂ ಬಿಪಿ ಅಥವಾ ಮಧುಮೇಹದಂತಹ ಸಮಸ್ಯೆಗಳನ್ನು ಅನುಭವಿಸಿಲ್ಲ" ಎಂದು ಡಾ. ಪ್ರಭು ಹೇಳಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿಯೂ ಅವರ ಸಾಧನೆ ಗಮನಾರ್ಹವಾಗಿದೆ. ಕಳೆದ ವರ್ಷ ಮೇಡಕ್ ನಲ್ಲಿ ನಡೆದ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ' 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಹಲವು ಸ್ಪರ್ಧಿಗಳಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು. ಇತ್ತೀಚೆಗೆ ರಾಜಸ್ಥಾನದ ಜೈಪುರ್ದಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ಕೇವಲ ವೈಯಕ್ತಿಕ ಸಾಧನೆಗೆ ಸೀಮಿತವಾಗದೆ, ಡಾ. ಪ್ರಭು ಅವರು ಯುವಜನರಿಗೆ ಕ್ರೀಡಾತರ ಭೇಟಿಯನ್ನು ನೀಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಐವತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ದೈಹಿಕ ಶಿಕ್ಷಣ ಶಿಕ್ಷಕರಾಗಿ ಅರ್ಹತೆ ಪಡೆದಿದ್ದು, ಅವರಲ್ಲಿ 12 ಮಂದಿ ಮಹಿಳೆಯರು ಇದ್ದಾರೆ. ಅವರ ಈ ಸೇವೆ ಕ್ರೀಡಾಕ್ಷೇತ್ರಕ್ಕೆ ಹೊಸ ಪ್ರತಿಭೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

65 ರಲ್ಲೂ ಫಿಟ್ನೆಸ್ ಗೆ ಮಾದರಿ ಡಾ. ಕೊಕ್ಕಂಡ ಪ್ರಭು - ಪದಕಗಳ ಜೊತೆಗೆ ಯುವಕರಿಗೆ ಉದ್ಯೋಗದ ದಾರಿ ತೋರಿಸಿದ ನಿವೃತ್ತ ಶಿಕ್ಷಕ :

ರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಪದಕ ಗೆದ್ದು ಎಲ್ಲರ ಗಮನ ಸೆಳೆದಿರುವ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಡಾ. ಕೊಕ್ಕೊಂಡ ಪ್ರಭು ಅವರು ಕ್ರೀಡಾ ಸಾಧನೆಯ ಜೊತೆಗೆ ಯುವಕರಿಗೆ ಉದ್ಯೋಗದ ದಾರಿಯನ್ನು ತೋರಿಸಿದ್ದಾರೆ. ನಿವೃತ್ತಿಯ ಬಳಿಕವೂ ಕ್ರೀಡೆಯಿಂದ ದೂರವಾಗದೆ, ಹೊಸ ತಲೆ ಮಾರ ಅನ್ನೋ ರೂಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.

ಡಾ. ಪ್ರಭು ಅವರು ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಹಲವಾರು ಯುವಕರು ದೈಹಿಕ ಶಿಕ್ಷಣ ಶಿಕ್ಷಕರಾಗಿ ಉದ್ಯೋಗ ಪಡೆದಿದ್ದಾರೆ. ಈ ಸಾಧನೆ ಕುರಿತು ಮಾತನಾಡಿರುವ ಅವರು, "ವೃತ್ತಿ ಆಕಾಂಕ್ಷಿಗಳಿಗೆ ತರಬೇತಿ ನೀಡುವುದು ನನಗೆ ಅಪಾರ ಸಂತಸ ನೀಡುತ್ತದೆ. ಪರ್ದೆಗಳಲ್ಲಿ ಪದಕ ಗೆಲ್ಲುವುದು ಹೆಮ್ಮೆಯಾದರೆ, ನನ್ನ ವಿದ್ಯಾರ್ಥಿಗಳು ಉದ್ಯೋಗ ಪಡೆಯುತ್ತಿರುವುದು ಇನ್ನೂ ಹೆಚ್ಚಿನ ತೃಪ್ತಿ ನೀಡುತ್ತದೆ. ಅದೇ ನನ್ನ ಜೀವನದ ದೊಡ್ಡ ಸಾಧನೆ" ಎಂದು ಹೇಳಿದ್ದಾರೆ.

ನಿವೃತ್ತಿಯ ನಂತರವೂ ಅವರು ಸಿದ್ಧಿಪೇಟೆ ಮತ್ತು ಮೇಡೆಕ್ ಜಿಲ್ಲೆಗಳಲ್ಲಿ ಯುವಜನರನ್ನು ಕ್ರೀಡೆಗಳತ್ತ ಸೆಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಸ್ತುತ ಜಂಟಿ ಜಿಲ್ಲಾ ಟೇಬಲ ಟೆನ್ನಿಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಫಿಟ್ನೆಸ್ ಕುರಿತು ತಮ್ಮ ಅನುಭವ ಹಂಚಿಕೊಂಡಿರುವ ಡಾ. ಪ್ರಭು ಜೀವನ ಪರ್ಯಂತ ಸದೃಢವಾಗಿರಲು ನಿಯಮಿತ ವ್ಯಾಯಾಮ ಅತ್ಯಗತ್ಯ. ವಯಸ್ಸು ಎಂದಿಗೂ ಅಡ್ಡಿಯಾಗಬಾರದು. ಪ್ರತಿದಿನ ವ್ಯಾಯಾಮ, ಶಿಸ್ತು ಮತ್ತು ಸಕಾರಾತ್ಮಕ ಮನೋಭಾವವನ್ನು ಅಳವಡಿಸಿಕೊಂಡರೆ ಯಾವುದೇ ವಯಸ್ಸಿನಲ್ಲೂ ಆರೋಗ್ಯಯುಕ್ತವಾಗಿ ಮತ್ತು ಸಕ್ರಿಯವಾಗಿ ಬದುಕಬಹುದು " ಎಂದು ಸಲಹೆ ನೀಡಿದ್ದಾರೆ.

65ನೇ ವಯಸ್ಸಿನಲ್ಲೂ ಕ್ರೀಡಾ ಸಾಧನೆ, ಸಮಾಜ ಸೇವೆ ಮತ್ತು ಯುವಕರಿಗೆ ಮಾರ್ಗದರ್ಶನ ನೀಡುತ್ತಿರುವ ಡಾ. ಕೊಕ್ಕೊಂಡ ಪ್ರಭು ಅವರ ಜೀವನಗಾಥೆ 'ವಯಸ್ಸು ಕೇವಲ ಒಂದು ಸಂಖ್ಯೆ' ಎಂಬ ಮಾತಿಗೆ ಜೀವಂತ ಉದಾಹರಣೆಯಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online