<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

Air quality Update : ಬೆಂಗಳೂರು ಮತ್ತು ಕರಾವಳಿ ಪ್ರದೇಶದಲ್ಲಿ ಶುದ್ಧ ಗಾಳಿ, ಧಾರವಾಡದಲ್ಲಿ ಮಾಲಿನ್ಯ ಹೆಚ್ಚಳ

Air quality Update : ಬೆಂಗಳೂರು ಮತ್ತು ಕರಾವಳಿ ಪ್ರದೇಶದಲ್ಲಿ ಶುದ್ಧ ಗಾಳಿ, ಧಾರವಾಡದಲ್ಲಿ ಮಾಲಿನ್ಯ ಹೆಚ್ಚಳ
Summary: Bengaluru and coastal areas have recorded good air quality with clean air. However, air pollution levels have increased slightly in Dharwad, according to a recent report.

Belagavi News:

ಮುಂಗಾರು ಮಳೆಯಿಂದ ಉಂಟಾದ ವಾತಾವರಣ ಬದಲಾವಣೆಯ ಪರಿಣಾಮವಾಗಿ ಕರ್ನಾಟಕದಾದ್ಯಂತ ವಾಯುಗುಣ ಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಾಳಿಯ ಸ್ಥಿತಿ ಉತ್ತಮವಾಗಿದ್ದು, ಆರೋಗ್ಯಕರ ವಾತಾವರಣ ನಿರ್ಮಾಣವಾಗಿದೆ ಎಂದು ಅಧಿಕೃತ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ IQ Air ಅಂಕಿ ಅಂಶಗಳು ತಿಳಿಸಿವೆ.

ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಪ್ರದೇಶಗಳಲ್ಲಿ ಶುದ್ಧ ಗಾಳಿ ದಾಖಲಾಗಿದ್ದು, ಜನರ ಆರೋಗ್ಯಕ್ಕೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಮಂಗಳೂರು ಅತ್ಯುತ್ತಮ AQI (Air Quality Index) ದಾಖಲಿಸಿ ರಾಜ್ಯದಲ್ಲೇ ಉತ್ತಮ ವಾಯುಗು ಗುಣಮಟ್ಟ ಹೊಂದಿರುವ ನಗರಗಳಲ್ಲಿ ಒಂದಾಗಿದೆ.

ರಾಜ್ಯದಲ್ಲಿ ಗದಗ್ ಜಿಲ್ಲೆ ಅತ್ಯಂತ ಶುದ್ಧ ಗಾಳಿಯುಳ್ಳ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇಲ್ಲಿ ವಾಯುಗುಣ ಮಟ್ಟ ಅತ್ಯುತ್ತಮ ಮಟ್ಟದಲ್ಲಿದ್ದು, ಪರಿಸರದ ದೃಷ್ಟಿಯಿಂದ ಅನುಕೂಲಕರ ಪರಿಸ್ಥಿತಿ ಇದೆ.

Sponsored

ಆದರೆ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ವಿಶೇಷವಾಗಿ ಧಾರವಾಡದಲ್ಲಿ ಧೂಳಿನ ಪ್ರಮಾಣ ಸ್ವಲ್ಪ ಹೆಚ್ಚಾಗಿದ್ದು, ವಾಯು ಮಾಲಿನ್ಯದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಇದರಿಂದ ಸ್ಥಳೀಯವಾಗಿ ಮುನ್ನೆಚ್ಚರಿಕೆ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಮುಂಗಾರು ಮಳೆಯ ಪರಿಣಾಮದಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ವಾಯುಗುಣ ಮಟ್ಟ ಸುಧಾರಣೆಯ ಹಾದಿಯಲ್ಲಿ ಸಾಗುತ್ತಿದೆ.

ಬೆಂಗಳೂರಿನಲ್ಲಿ ವಾಯುಗುಣ ಮಟ್ಟ ಸುಧಾರಣೆ - AQI 71, 'ಸಾಧಾರಣ' ಮಟ್ಟದಲ್ಲಿ ಆರೋಗ್ಯಕರ ಗಾಳಿ :

ಬೆಂಗಳೂರು ನಗರದಲ್ಲಿ ವಾಯುಗುಣ ಮಟ್ಟ ಸೂಚ್ಯಂಕ ಇಂದು 71 ದಾಖಲಾಗಿದ್ದು, ಇದು ಸಾಧಾರಣ ಹಾಗೂ ಆರೋಗ್ಯಕರ ಸ್ಥಿತಿಯನ್ನು ಸೂಚಿಸುತ್ತದೆ. ಮಳೆಯ ವಾತಾವರಣದ ಪರಿಣಾಮವಾಗಿ ನಗರದಲ್ಲಿ ಗಾಳಿ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ.

Sponsored

ಮಳೆಯ ಕಾರಣದಿಂದ ವಾತಾವರಣದಲ್ಲಿರುವ PM2.5 ಮತ್ತು PM 10 ಮಾಲಿನ್ಯ ಕಾರಕ ಕಣಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಗಾಳಿಯ ಸ್ವಚ್ಛತೆ ಹೆಚ್ಚಾಗಿದೆ ಎಂದು ಪರಿಸರ ತಜ್ಞರು ತಿಳಿಸಿದ್ದಾರೆ.

ನಗರದ ಪ್ರಮುಖ ಪ್ರದೇಶಗಳಾದ ಸಿಲ್ಕ್ ಬೋರ್ಡ್ ಮತ್ತು ಬಿಟಿಎಂ ಲೇಔಟ್ ನಲ್ಲಿ ಗಾಳಿಯ ಗುಣಮಟ್ಟ ಇನ್ನಷ್ಟು ಉತ್ತಮವಾಗಿದ್ದು,ಇಲ್ಲಿ ಶುದ್ಧ ಮತ್ತು ಆರೋಗ್ಯಕರ ವಾತಾವರಣ ದಾಖಲಾಗಿದೆ. ವಾಹನ ಸಂಚಾರ ಹೆಚ್ಚಿರುವ ಈ ಭಾಗಗಳಲ್ಲಿಯೂ ಮಳೆಯ ಪರಿಣಾಮದಿಂದ ಮಾಲಿನ್ಯ ಮಟ್ಟ ನಿಯಂತ್ರಣದಲ್ಲಿದೆ.

ಒಟ್ಟಾರೆಯಾಗಿ, ಮಳೆಯ ಸಹಾಯದಿಂದ ಬೆಂಗಳೂರಿನ ವಾಯುಗುಣ ಮಟ್ಟ ಉತ್ತಮ ಸ್ಥಿತಿಗೆ ತಲುಪಿದ್ದು, ಮುಂದಿನ ದಿನಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ಮತ್ತು ಮೈಸೂರಿನಲ್ಲಿ ಶುದ್ಧ ಗಾಳಿ - AQI 36 ದಾಖಲಿಸಿ ಕರಾವಳಿ ನಗರಿ ಟಾಪ್ ನಲ್ಲಿ :

Sponsored

ಕರಾವಳಿ ನಗರಿ ಮಂಗಳೂರಿನಲ್ಲಿ ವಾಯುಗುಣ ಮಟ್ಟ ಅತ್ಯಂತ ಸುಧಾರಿತವಾಗಿದ್ದು, ಇಂದಿನ AQI ಕೇವಲ 36 ದಾಖಲಾಗಿದೆ. ಇದು ಉತ್ತಮ ಶ್ರೇಣಿಗೆ ಸೇರಿದ್ದು, ಅತ್ಯಂತ ಶುದ್ಧ ಗಾಳಿಯ ವಾತಾವರಣವನ್ನು ಸೂಚಿಸುತ್ತದೆ. ಮಳೆಯ ಪರಿಣಾಮದಿಂದ ಕರಾವಳಿ ಪ್ರದೇಶದಲ್ಲಿ ಮಾಲಿನ್ಯಕಾರಕ ಕಣಗಳು ಕಡಿಮೆಯಾಗಿದ್ದು, ಆರೋಗ್ಯಕರ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಗಳೂರು ನಗರದ ಮೀನುಗಾರಿಕಾ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಕರಾವಳಿ ಭಾಗಗಳಲ್ಲಿ ಯಾವುದೇ ಆರೋಗ್ಯ ಭೀತಿಯ ಪರಿಸ್ಥಿತಿ ಇಲ್ಲ ಎಂದು ಪರಿಸರ ತಜ್ಞರು ತಿಳಿಸಿದ್ದಾರೆ. ಗಾಳಿಯ ಗುಣಮಟ್ಟ ಉತ್ತಮವಾಗಿರುವುದರಿಂದ ಜನಜೀವನ ಸಹಜವಾಗಿ ಮುಂದುವರಿಯುತ್ತಿದೆ.

ಇದೇ ವೇಳೆ ಸಾಂಸ್ಕೃತಿಕ ನಗರಿ ಮೈಸೂರು ದಲ್ಲಿಯೂ ವಾಯುಗುಣ ಮಟ್ಟ ಸ್ಥಿರವಾಗಿದ್ದು, ಭಾಗಗಳಲ್ಲಿ ಯಾವುದೇ ಆರೋಗ್ಯಭೀತಿಯ ಪರಿಸ್ಥಿತಿ ಇಲ್ಲ ಎಂದು ಪರಿಸರ ತಜ್ಞರು ತಿಳಿಸಿದ್ದಾರೆ. ಗಾಳಿಯ ಗುಣಮಟ್ಟ ಉತ್ತಮವಾಗಿರುವುದರಿಂದ ಜನಜೀವನ ಸಹಜವಾಗಿ ಮುಂದುವರೆಯುತ್ತಿದೆ.

ಇದೇ ವೇಳೆ ಸಾಂಸ್ಕೃತಿಕ ನಗರಿ ಮೈಸೂರು ದಲ್ಲಿಯೂ ವಾಯುಗುಣ ಮಟ್ಟ ಸ್ಥಿರವಾಗಿದ್ದು, ಉತ್ತಮ ಶ್ರೇಣಿಯಲ್ಲಿ ಮುಂದುವರೆದಿದೆ. ನಗರದಲ್ಲಿ ಗಾಳಿಯ ಗುಣಮಟ್ಟ ಆರೋಗ್ಯಕರ ಮಟ್ಟದಲ್ಲಿದ್ದು, ನಿವಾಸಿಗಳಿಗೆ ಅನುಕೂಲಕರ ವಾತಾವರಣ ದೊರೆಯುತ್ತಿದೆ.

Sponsored

ರಾಜ್ಯದಲ್ಲಿ ಮುಂಗಾರುಮಳೆಯ ಪರಿಣಾಮದಿಂದ ಬಹುತೇಕ ನಗರಗಳಲ್ಲಿ ವಾಯುಗುಣಮಟ್ಟ ಸುಧಾರಿಸುತ್ತಿದ್ದು, ಶುದ್ಧ ಗಾಳಿಯ ವಾತಾವರಣ ಮುಂದುವರಿಯುತ್ತಿದೆ ಎಂದು ವರದಿಗಳು ಸೂಚಿಸುತ್ತಿವೆ.

ರಾಜ್ಯದಲ್ಲಿ ವಾಯುಗುಣ ಮಟ್ಟ ವರದಿ - ಗದಗ್ ಟಾಪ್ ನಲ್ಲಿ ಶುದ್ಧ ಗಾಳಿ, ಧಾರವಾಡದಲ್ಲಿ ಕಳಪೆ ಮಟ್ಟ :

ಕರ್ನಾಟಕದಲ್ಲಿ ಇಂದಿನ ವಾಯುಗು ಗುಣಮಟ್ಟ ವರದಿ ಪ್ರಕಾರ ಬಹುತೇಕ ಜಿಲ್ಲೆಗಳಲ್ಲಿ ಪರಿಸ್ಥಿತಿ ಸ್ಥಿರವಾಗಿದ್ದು, ಕೆಲವೆಡೆ ಮಾತ್ರ ಮಾಲಿನ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಉತ್ತರ ಕರ್ನಾಟಕದ ಧಾರವಾಡದಲ್ಲಿ ವಾಯುಮಾಲಿನ್ಯ ಸೂಚ್ಯಂಕ (AQI) ಸುಮಾರು 125ರ ಆಸುಪಾಸಿನಲ್ಲಿ ದಾಖಲಾಗಿದ್ದು, ಕಳಪೆ ಮಟ್ಟಕ್ಕೆ ತಲುಪಿದೆ.

ಧೂಳು ಮತ್ತು ಸ್ಥಳೀಯ ಕಾಮಗಾರಿಗಳ ಕಾರಣದಿಂದ ಇಲ್ಲಿ ವಾತಾವರಣ ಗುಣಮಟ್ಟ ಕುಸಿತಗೊಂಡಿದ್ದು, ಉಸಿರಾಟದ ಸಮಸ್ಯೆ ಇರುವವರು ಹಾಗೂ ಹಿರಿಯ ನಾಗರಿಕರು ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

Sponsored

ಇದೇ ವೇಳೆ ಶಿವಮೊಗ್ಗದಲ್ಲಿ AQI 99 ರಷ್ಟಿದ್ದು, ಸಾಧಾರಣ ಗಡಿಯಲ್ಲಿದೆ. ನಗರದಲ್ಲಿ ವಾಯುಗುಣ ಮಟ್ಟ ಸ್ಥಿರವಾಗಿದ್ದು, ಆರೋಗ್ಯಕರ ಪರಿಸ್ಥಿತಿಗೆ ಸಮೀಪದಲ್ಲಿದೆ.

ಇನ್ನು ಇಂದಿನ ವರದಿಯ ಪ್ರಕಾರ ಗದಗ ಜಿಲ್ಲೆ, ರಾಜ್ಯದಲ್ಲಿ ಅತ್ಯಂತ ಶುದ್ಧ ಗಾಳಿಯುಳ್ಳ ಪ್ರದೇಶವಾಗಿ ಹೊರಹೊಮ್ಮಿದೆ. ಇಲ್ಲಿ ವಾಯುಗುಣ ಮಟ್ಟ ಉತ್ತಮ ಮಟ್ಟದಲ್ಲಿದ್ದು, ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣ ಕಂಡುಬಂದಿದೆ.

ಬೆಂಗಳೂರು, ಮಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ವಾಯುಗುಣ ಮಟ್ಟ ಉತ್ತಮವಾಗಿದ್ದು, ಹೊರಾಂಗಣ ಚಟುವಟಿಕೆಗಳು ಹಾಗೂ ದೈಹಿಕ ವ್ಯಾಯಾಮಗಳಿಗೆ ಇಂದಿನ ಹವಾಮಾನ ಅತ್ಯಂತ ಅನುಕೂಲಕರವಾಗಿದೆ ಎಂದು ವರದಿಗಳು ತಿಳಿಸುತ್ತಿವೆ.

Also Read:

Sponsored

ಮೇಕೆದಾಟು ವಿವಾದ ಮತ್ತೆ ತೀವ್ರ - ತಮಿಳುನಾಡು ವಿರೋಧಕ್ಕೆ ವಿಜಯ್ ಹೊಸ ಹೆಜ್ಜೆ, ಡಿಕೆಶಿ ಸ್ಪಷ್ಟ ನಿಲುವು

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online