<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಅಮೆರಿಕ: ಓಹಿಯೋ ಫೆಸ್ಟಿವಲ್ ನಲ್ಲಿ ಗುಂಡಿನ ದಾಳಿ: 12ಕ್ಕೂ ಹೆಚ್ಚು ಜನರಿಗೆ ಗಾಯ

ಅಮೆರಿಕ: ಓಹಿಯೋ ಫೆಸ್ಟಿವಲ್ ನಲ್ಲಿ ಗುಂಡಿನ ದಾಳಿ: 12ಕ್ಕೂ ಹೆಚ್ಚು ಜನರಿಗೆ ಗಾಯ
Summary: A serious shooting occurred during a festival in the US state of Ohio, in which at least 12 people were injured. The sound of gunfire was heard during the program, creating an atmosphere of fear and confusion in the area. The injured were immediately rushed to nearby hospitals, and some of them are reported to be in critical condition.

beagavi news :

ಓಹಿಯೋ ಉತ್ಸವದಲ್ಲಿ ಗುಂಡಿನ ದಾಳಿ: ಕನಿಷ್ಠ 12 ಮಂದಿ ಗಾಯ, ಆರೋಪಿಗಳಿಗಾಗಿ ತೀವ್ರ ಹುಡುಕಾಟ

ಅಮೆರಿಕದ ಓಹಿಯೋ ರಾಜ್ಯದ ಟೊಲೆಡೊದಲ್ಲಿ ನಡೆದ ಸಮುದಾಯ ಉತ್ಸವವೊಂದರ ಬಳಿಕ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 12 ಜನರು ಗಾಯಗೊಂಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭೀತಿ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಇಬ್ಬರು ಶಸ್ತ್ರಾಸ್ತ್ರಗಳನ್ನು ಹಿಡಿದು ಪರಸ್ಪರ ಗುಂಡು ಹಾರಿಸುತ್ತಿರುವಂತೆ ಕಂಡುಬಂದಿದೆ ಎಂದು ಟೊಲೆಡೊ ಉಪ ಪೋಲೀಸ್ ಮುಖ್ಯಸ್ಥ ಜೋ ಹೆಫರ್ನಾನ್ ಹೇಳಿದ್ದಾರೆ. ಲೈವ್ ಮ್ಯೂಸಿಕ್ ಮತ್ತು ವಾರ್ಷಿಕ ಕಾರ್ಯಕ್ರಮ ನಡೆಯುತ್ತಿದ್ದ ಓಲ್ಡ್ ವೆಸ್ಟ್ ಎಂಡ್ ಉತ್ಸವದ ಬಳಿ ಈ ಘಟನೆ ಸಂಭವಿಸಿದ್ದು, ಉತ್ಸವದ ಸಂಭ್ರಮ ಕ್ಷಣಾರ್ಧದಲ್ಲಿ ಗೊಂದಲಕ್ಕೆ ತಿರುಗಿದೆ.

Sponsored

ಘಟನೆಯ ಕುರಿತು ಪ್ರತಿಕ್ರಿಯಿಸಿದ ಓಹಿಯೋ ಗವರ್ನರ್ ಮೈಕ್ ಡಿವೈನ್, " ಟೊಲೆಡೊದಲ್ಲಿ ನಡೆದ ಘಟನೆ ನನಗೆ ತೀವ್ರ ಕಳವಳ ತಂದಿದೆ. ಬೇಸಿಗೆ ಉತ್ಸವಗಳು ಕುಟುಂಬಗಳು ಭಯವಿಲ್ಲದೆ ಸೇರಿ ಸಮಯ ಕಳೆಯುವ ಸುರಕ್ಷಿತ ಸ್ಥಳಗಳಾಗಿರಬೇಕು" ಎಂದು ಹೇಳಿದ್ದಾರೆ.

ಪೊಲೀಸರು ಘಟನೆಯ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.

ಅಮೆರಿಕದ ಓಹಿಯೋ ರಾಜ್ಯದ ಟೊಲೆಡೊದಲ್ಲಿ ನಡೆದ ಉತ್ಸವದ ವೇಳೆ ನಡೆದ ಗುಂಡಿನ ದಾಳಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹಲವು ವಿಡಿಯೋಗಳು ಆತಂಕಕಾರಿ ದೃಶ್ಯಗಳನ್ನು ತೋರಿಸುತ್ತಿವೆ. ಗುಂಡೇಟಿನ ಶಬ್ದ ಕೇಳುತ್ತಿದ್ದಂತೆಯೇ ಜನರು ದಿಕ್ಕು ತಪ್ಪಿ ಓಡುತ್ತಿರುವುದು ಹಾಗೂ ತುರ್ತು ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಲು ತಕ್ಷಣ ಕಾರ್ಯಚರಣೆ ನಡೆಸುತ್ತಿರುವುದು ಕಂಡುಬಂದಿದೆ.

ಘಟನೆಯನ್ನು ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ಕೆವಿನ್ ಬೆರ್ರಿ, ಅವರು ತಮ್ಮ ಸ್ನೇಹಿತರೊಂದಿಗೆ ಪಕ್ಕದ ಅರ್ಬೊರೇಟಂನಲ್ಲಿ ಲೈವ್ ಸಂಗೀತವನ್ನು ಆನಂದಿಸುತ್ತಿದ್ದಾಗ ಹಲವು ಸುತ್ತಿನ ಗುಂಡಿನ ಶಬ್ದ ಕೇಳಿಸಿತು ಎಂದು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಸಮೀಪದಲ್ಲೇ ಬಂದೂಕನ್ನು ನೆಲಕ್ಕೆ ಎಸೆಯುತ್ತಿರುವುದು ಕೂಡ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. ಉತ್ಸವದ ಭದ್ರತೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ ಅಧಿಕಾರಿಗಳು ಕೂಡಲೇ ಪ್ರತಿಕ್ರಿಯಿಸಿದ್ದು, ತಾವು ಕೂಡ ಗಾಯಾಳುಗಳಿಗೆ ಸಹಾಯ ಮಾಡಿದುದಾಗಿ ಬೆರ್ರಿ ತಿಳಿಸಿದ್ದಾರೆ.

Sponsored

ತಾವು ಇದಕ್ಕಿಂತ ಹೆಚ್ಚು ಜನರನ್ನು ಗುಂಡೇಟಿನ ಗಾಯಗಳಿಂದ ಬಳಲುತ್ತಿರುವ ಸ್ಥಿತಿಯಲ್ಲಿ ಕಂಡಿದ್ದಾಗಿ ಅವರು ಹೇಳಿದ್ದಾರೆ. ದಾಳಿಯ ಸಂದರ್ಭದಲ್ಲಿ ಗಾಯಳುಗಳು ಅರ್ಬೊರೇಟಂ ಸುತ್ತಮುತ್ತಲೆ ಇದ್ದರೂ ಎಂದು ತಿಳಿಸಿದ್ದಾರೆ.

ಟೊಲೆಡೊದ ಐತಿಹಾಸಿಕ ಜಿಲ್ಲೆಯಲ್ಲಿ ನಡೆದ ಓಲ್ಡ್ ವೇಸ್ಟ್ ಉತ್ಸವ ಎರಡು ದಿನಗಳ ಆಚರಣೆಯಾಗಿದ್ದು, ಲೈವ್ ಸಂಗೀತ, ಆಹಾರ ಮಾರಾಟ, ಹೋಂ ಟೂರ್ಸ್ ಮತ್ತು ಶಾಪಿಂಗ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡಿತ್ತು. ಇದನ್ನು ಟೊಲೆಡೊದ ಬೇಸಿಗೆ ಉತ್ಸವಗಳ ಆರಂಭವೆಂದು ಸ್ಥಳೀಯರು ಪರಿಗಣಿಸುತ್ತಾರೆ ಎಂದು ಕೆವಿನ್ ಬೆರ್ರಿ ತಿಳಿಸಿದ್ದಾರೆ.

Also Read:

ಪಾಕಿಸ್ತಾನ್ ರೈಲ್ವೆ ಇಲಾಖೆ ಸಂಕಷ್ಟದಲ್ಲಿ: ಬೋರ್ಡ್ ಬರವಣಿಗೆಗೂ ಸೀಮೆ ಸುಣ್ಣ ಬಳಕೆ!

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online