belagavi news :
ತಮಿಳುನಾಡು ವಿಧಾನಸಭಾ ಚುನಾವಣೆ ಸಮಿಪಿಸುತ್ತಿರುವ ಹಿನ್ನೆಲೆ ಬಿಜೆಪಿ ರಾಜ್ಯ ನಾಯಕ ಕೆ.ಅಣ್ಣಾಮಲೈ ಅವರು ಪಕ್ಷ ನೀಡಿದ ಚುನಾವಣೆ ಉಸ್ತುವಾರಿ ಜವಾಬ್ದಾರಿಯಿಂದ ದಿಡೀರ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಈ ಪ್ರಕ್ರಿಯೆಯ ವಿಭಾಗವಾಗಿ ಬಿಜೆಪಿ ನಾಯಕ ಅಣ್ಣಾಮಲೈ ಅವರಿಗೆ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಉಸ್ತುವಾರಿಯನ್ನು ಪಕ್ಷ ನೀಡಿತ್ತು. ರಾಜ್ಯ ವಿಧಾನಸಭೆ ಚುನಾವಣೆ ಇನ್ನೇನು ಕೆಲ ತಿಂಗಳುಗಳು ಮಾತ್ರ ಬಾಕಿ ಇರುವಾಗ ಎಇಎಎಂಕೆ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಸಜ್ಜಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪಕ್ಷವು ತಳಮಟ್ಟದಿಂದಲೂ ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ತೊಡಗಿದೆ. ಇಂಥ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಅಣ್ಣಾಮಲೈಯವರು ದಿಡೀರ ರಾಜೀನಾಮೆ ನೀಡಿರುವ ಹಿನ್ನೆಲೆ, ಬಿಜೆಪಿಯ ಆಂತರಿಕ ರಾಜಕಾರಣದಲ್ಲಿ ಹಾಗೂ ಮುಂದಿನ ಚುನಾವಣೆ ತಂತ್ರಗಳ ಕುರಿತು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
"ಒಂಟಿ ಪೆಂಗ್ವಿನ್ ಆಗಿರುವುದರಲ್ಲಿ ಯಾವುದೇ ತಪ್ಪಿಲ್ಲ" ಎಂದು ಬಿಜೆಪಿ ನಾಯಕ ಕೆ.ಅಣ್ಣಮಲೈಯವರು ತಮ್ಮ ರಾಜಕೀಯ ನಿಲುವು ಕುರಿತು ಸ್ಪಷ್ಟ ಸಂದೇಶ ನೀಡಿದ್ದಾರೆ. ಕೊಯಮತ್ತೂರಿನಲ್ಲಿ ಮಾತನಾಡಿದ ಅವರು, ಹಾಲಿ ಶಾಸಕಿ ವನತಿ ಶ್ರೀನಿವಾಸನ್ ಗೆಲುವು ಸಾಧಿಸಬೇಕು ಎಂಬುದು ಪಕ್ಷದ ಆಶಯವಾಗಿದ್ದು, ಅದೇ ರೀತಿ ಎಐಎಡಿಎಂಕೆ ಮತ್ತು ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಬಹುಮತದೊಂದಿಗೆ ವಿಧಾನ ಸಭೆಗೆ ಪ್ರವೇಶಿಸಬೇಕು ಎಂದು ಹೇಳಿದರು. "ನಾವು ಎಲ್ಲರೂ ಸೇರಿ ಅದಕ್ಕಾಗಿ ಕೆಲಸ ಮಾಡುತ್ತೇವೆ. ನಾನು ಐಪಿಎಸ್ ಅಧಿಕಾರಿಯಾಗಿಯೇ ಮುಂದುವರಿಯ ಬೇಕಿತ್ತು ಎಂದು ನಾನು ಎಂದಿಗೂ ಹೇಳಿಲ್ಲ.
ರಾಜಕೀಯದಲ್ಲಿ ತನ್ನದೇ ದಾರಿ ಹಿಡಿಯುವುದರಲ್ಲಿ ತಪ್ಪಿಲ್ಲ"ಎಂದು ಅಣ್ಣಾಮಲೈ ತಿಳಿಸಿದರು. ಈ ಹೇಳಿಕೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಡುವೆ ವಿಶೇಷ ಗಮನ ಸೆಳೆದಿದೆ. ಕೇಂದ್ರ ಬಜೆಟ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ, "ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತ ಕೆಲವು ರಾಜ್ಯಗಳಿಗೆ ನೀಡಲಾಗುತ್ತಿದ್ದ ಅನುದಾನ ಕಡಿಮೆಯಾಗಿದೆ. ಆದರೆ ಹೊಸ ವ್ಯವಸ್ಥೆಯ ಪ್ರಕಾರ, ತಮಿಳುನಾಡಿನ ಸಣ್ಣ ಮತ್ತು ಮಧ್ಯಮಗಾತ್ರದ ಉದ್ಯಮಗಳಿಗೆ 10,000 ಕೋಟಿ ರೂ.
ಅನುದಾನ ಲಭಿಸಿದೆ"ವಿವರಿಸಿದರು. ಇದಲ್ಲದೆ, ಈ ಬಜೆಟ್ ಎಲ್ಲಾ ಮಾರ್ಗದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೆ ರೂಪಿಸಲಾಗಿದೆ" ಸಮರ್ಥಿಸಿಕೊಂಡರು. "ಸೂಕ್ಷ್ಮ ಕೈಗಾರಿಕೆಗಳಿಗೆ 2000 ಕೋಟಿ ರೂ. ವಿಶೇಷ ಅನುದಾನ ಲಭ್ಯವಿದೆ. ಈ ಹಣವನ್ನು ಸಮರ್ಪಕವಾಗಿ ಬಳಸಿಕೊಂಡರೆ ಯುವ ಜನರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸಬಹುದು"ಎಂದು ಹೇಳಿದರು.
ತಮಿಳುನಾಡು ವಿಧಾನಸಭಾ ಚುನಾವಣೆ ಇನ್ನೇನು ಕೆಲ ತಿಂಗಳುಗಳು ಬಾಕಿ ಇರುವ ನಡುವೆಯೇ, ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರು ತಮ್ಮ ಚುನಾವಣಾ ಉಸ್ತುವಾರಿ ಜವಾಬ್ದಾರಿಯಿಂದ ರಾಜೀನಾಮೆ ಘೋಷಿಸಿ ಪಕ್ಷಕ್ಕೆ ಅಚ್ಚರಿ ನೀಡಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ಪದೇ ಪದೇ ಪ್ರವಾಸ ಮಾಡುವುದು ಅಸಾಧ್ಯವಾಗಿದ್ದು,
ಈ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನೈನರ್ ನಾಗೇಂದ್ರ ನ ಫಸ್ಟ್ ಹಾಗೂ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಲಾಗಿದೆ ಎಂದು ಅಣ್ಣಾಮಲೈ ತಿಳಿಸಿದರು. "ಚುನಾವಣಾ ಪ್ರವಾಸದ ಉಸ್ತುವಾರಿ ಹುದ್ದೆಯಿಂದ ಹಿಂದೆ ಸರಿಯುವ ಬಗ್ಗೆ ಅವರಿಗೆ ಮನವರಿಕೆ ಮಾಡಿದ್ದೇವೆ" ಎಂದು ಅವರು ಹೇಳಿದರು. ಅದೇ ವೇಳೆ ಪಕ್ಷದ ಪರವಾಗಿ ನಾನು ಪ್ರಚಾರ ಮಾಡುತ್ತೇನೆ. ನನಗೆ ವಹಿಸಿದ್ದ ಆರು ವಿಧಾನಸಭಾ ಕ್ಷೇತ್ರಗಳಿಗೆ "ಪಕ್ಷದ ಮತ್ತೊಬ್ಬ ನಾಯಕರನ್ನು ನೇಮಿಸಲಿದೆ ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದರು.
ನೀರ್ ಮಿಸ್ಟರ್ ಈ ಕುರಿತು ಕೊಯಂಬತ್ತೂರಿನ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಣ್ಣಾಮಲೈ ತಮ್ಮ ತಂದೆಯ ಅನಾರೋಗ್ಯವೇ ರಾಜೀನಾಮೆಗೆ ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದರು."ನನ್ನ ತಂದೆಯ ಆರೋಗ್ಯದ ಬಗ್ಗೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಈ ಹಿನ್ನಲೆ ಪಕ್ಷ ನೀಡಿರುವ ಈ ಸಾಮಾನ್ಯ ಚುನಾವಣಾ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ"ಎಂದು ಹೇಳಿದರು.
ನಟ ಹಾಗೂ ರಾಜಕೀಯ ಪ್ರವಾಸಕ್ಕೆ ಸಜ್ಜಾಗಿರುವ ವಿನಯ್ ವಿರುದ್ಧ ಬಿಜೆಪಿ ನಾಯಕ ಕೆ ಅಣ್ಣಮಲೈ ತೀಕ್ಷ್ಣ ಪ್ರಶ್ನೆಗಳನ್ನು ಎಸೆದಿದ್ದಾರೆ. ವಿಜಯ್ ಅವರ ಇಂಜಿನ್ ನಲ್ಲಿ ಇಂಧನವಿದೆಯೇ? ಅದನ್ನು ಪ್ರಾರಂಭಿಸಲು ಜನರಿದ್ದಾರೆಯೇ ? ಎಂದು ವ್ಯಂಗ್ಯವಾಡಿದರು ಇದೇ ವೇಳೆ ಕಾಂಗ್ರೆಸ್ ಮತ್ತು ಡಿ ಎಂ ಕೆ ಮೈತ್ರಿಯನ್ನು ಗುರಿಯಾಗಿಸಿಕೊಂಡ ಅಣ್ಣಾಮಲೈ, "ಕಾಂಗ್ರೆಸ್ ಒಂದು ಅಧಿಕ ಪಕ್ಷವಾಗಿದೆ. ವಿಜಯ್ ಜೊತೆ ಮಾತನಾಡಿದ್ದೇನೆ ಎಂದು ಹೇಳಿಕೊಂಡ ವ್ಯಕ್ತಿಯನ್ನು ಅಮಾನತುಗೊಳಿಸಲು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷರಿಗೆ ಸಾಧ್ಯವಾಗುತ್ತಿಲ್ಲ ಅದಕ್ಕಾಗಿ ಅವರು ದೆಹಲಿಗೆ ಪತ್ರ ಬರೆಯಬೇಕು"ಎಂದು ಟೀಕಿಸಿದರು.
ಎಐಎಡಿಎಂಕೆ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದೆ ಎಂದು ತಿಳಿಸಿದ ಅಣ್ಣಾಮಲೈ, "ವಿಜಯ್ ಅವರ ಭಾಷಣ ಜನರಿಗೆ ಚಿಂತನಶೀಲವಾಗಿಲ್ಲ. ಅವರು ಜನ ಸಮೂಹದಿಂದ ಚಪ್ಪಾಳೆ ಮತ್ತು ಶಿಳ್ಳೆ ಬರಿಸುವ ರೀತಿಯಲ್ಲಿ ಮಾತ್ರ ಮಾತಾಡುತ್ತಾರೆ"ಎಂದು ಟೀಕಿಸಿದರು. ಸಂಸತ್ತಿನಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅನ್ನಮಲೈ, ರಾಹುಲ್ ಗಾಂಧಿ ಹೇಳಿದ್ದು ಹಸಿ ಸುಳ್ಳು,
ಡಿಎಂಕೆ ಮೈತ್ರಿಯಲ್ಲೇ ಗೊಂದಲ ಇದೆ" ಎಂದು ಹೇಳಿದರು."ನಾವು ಡಬಲ್ ಇಂಜಿನ್ ಸರ್ಕಾರ ಹೊಂದಿದ್ದೇವೆ. ಆದರೆ ಟಿಟಿವಿ ದಿನಕರನ್ ಅವರ ಪಕ್ಷದ ನಾಯಕ ವಿಜಯನ್ ಬಳಿ ಇಂಜಿನ್ ಇರುವಂತೆ ಕಾಣುತ್ತಿಲ್ಲ" ವ್ಯಂಗ್ಯ ಮಿಶ್ರಿತ ಟೀಕೆ ನಡೆಸಿದರು.
ಇನ್ನಷ್ಟು ಓದಿರಿ:
ಉರ್ದು ಶಾಲೆಗಳ ಸಮಯದಲ್ಲಿ ಬದಲಾವಣೆ : ಕರ್ನಾಟಕ ಸರ್ಕಾರ ನಿರ್ಧಾರ