<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಬಿಜೆಪಿಗೆ ಗುಡ್ ಬೈ ಹೇಳುತ್ತಾರೆ ಅಣ್ಣಾಮಲೈ? ಹೊಸ ಪಕ್ಷದ ಸುದ್ದಿಗೆ ಉತ್ತರ

ಬಿಜೆಪಿಗೆ ಗುಡ್ ಬೈ ಹೇಳುತ್ತಾರೆ ಅಣ್ಣಾಮಲೈ? ಹೊಸ ಪಕ್ಷದ ಸುದ್ದಿಗೆ ಉತ್ತರ
Summary: Amidst the rumors of the formation of a new party in Tamil Nadu politics, BJP leader K Annamalai has given a major clarification. Annamalai has tried to shed light on these speculations that have been the subject of discussion on social media and in the political circles.

belagavi news :

ತಮಿಳುನಾಡು ರಾಜಕೀಯದಲ್ಲಿ ಬಿಜೆಪಿ ನಾಯಕ ಅಣ್ಣಾಮಲೈ ಅವರ ಮುಂದಿನ ನಡೆ ಕುರಿತು ಬಾರಿ ಕುತೂಹಲ ಮೂಡಿದೆ. ಅಣ್ಣಾಮಲೈ ಅವರು ಬಿಜೆಪಿಗೆ ರಾಜೀನಾಮೆ ನೀಡಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ವದಂತಿಗಳು ಜೋರಾಗಿ ಹರಡಾಡುತ್ತಿವೆ. ಆದರೆ ಈ ಕುರಿತು ನೇರ ಉತ್ತರ ನೀಡದ ಅಣ್ಣಾಮಲೈ,"ಸ್ವಲ್ಪ ಸಮಯ ಕಾಯಿರಿ, ಎಲ್ಲವೂ ಸ್ಪಷ್ಟವಾಗುತ್ತದೆ"ಎಂದು ಹೇಳುವ ಮೂಲಕ ಸಸ್ಪೆನ್ಸ್ ಇನ್ನಷ್ಟು ಹೆಚ್ಚಿಸಿದ್ದಾರೆ.

ದೆಹಲಿ ಪ್ರವಾಸಕ್ಕೂ ಮುನ್ನ ನೀಡಿದ ಈ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಪಕ್ಷದ ಹೈಕಮಾಂಡ್ ನಾಯಕರೊಂದಿಗೆ ನಡೆಯಲಿರುವ ಸಭೆ,ಅವರ ಹುಟ್ಟುಹಬ್ಬದ ದಿನ ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆ ಕುರಿತ ಊಹಾ ಪೋಹಗಳು, ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ "ಅಣ್ಣಾಮಲೈ 2.0" ಪೋಸ್ಟರ್ಗಳು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.

ಇದರ ಜೊತೆಗೆ ಥ್ರೀ ಬಾಷಾ ನೀತಿ ಕುರಿತ ವಿವಾದ, ಎಐಎಡಿಎಂಕೆ ಜೊತೆಗಿನ ಭಿನ್ನಾಭಿಪ್ರಾಯಗಳು ಹಾಗೂ ತಮಿಳುನಾಡು ರಾಜಕೀಯದಲ್ಲಿ ಹೊಸ ಸಮೀಕರಣಗಳ ಚರ್ಚೆಗಳು ಅಣ್ಣಾಮಲೈ ಅವರ ಮುಂದಿನ ಹೆಜ್ಜೆ ಎನ್ನಬಹುದು ಎಂಬ ಪ್ರಶ್ನೆ ಹುಟ್ಟು ಹಾಕಿವೆ. ಮುಂದಿನ 48 ಗಂಟೆಗಳಲ್ಲಿ ಅವರ ರಾಜಕೀಯ ಭವಿಷ್ಯಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರ ಅವರ ಬೀಳುವ ಸಾಧ್ಯತೆ ಇದ್ದು, ತಮಿಳುನಾಡು ರಾಜಕೀಯದ ಮೇಲೆ ಎಲ್ಲರ ಗಮನ ಇದೆ.

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಬಿಜೆಪಿ ನಾಯಕ ಅಣ್ಣಾಮಲೈ ಅವರ ಮುಂದಿನ ನಡೆ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ. ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಅಣ್ಣಾಮಲೈ ಅವರು ಬಿಜೆಪಿಗೆ ರಾಜೀನಾಮೆ ನೀಡಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿವೆ.

ಈ ಊಹಾ ಪೋಹಗಳ ನಡುವೆ ಸೋಮವಾರ ನವದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ತಮ್ಮ ಮುಂದಿನ ನಿರ್ಧಾರದ ಬಗ್ಗೆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ."ದಯವಿಟ್ಟು ಸ್ವಲ್ಪ ದಿನ ಕಾಯಿರಿ. ಒಂದೆರಡು ದಿನಗಳಲ್ಲಿ ನಾವೆಲ್ಲರೂ ಒಟ್ಟಿಗೆ ಕುರಿತು ಮಾತನಾಡೋಣ. ಆಗ ಎಲ್ಲವು ಸ್ಪಷ್ಟವಾಗುತ್ತದೆ"ಎಂದು ಹೇಳುವ ಮೂಲಕ ಅವರು ಯಾವುದೇ ಸ್ಪಷ್ಟನೆ ನೀಡದೆ ಸಸ್ಪೆನ್ಸ್ ಮುಂದುವರಿಸಿದ್ದಾರೆ.

ಅಣ್ಣಾಮಲೈ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅವರು ಬಿಜೆಪಿಯಲ್ಲಿ ಮುಂದುವರೆಯಲಿದ್ದಾರೆಯೇ ಅಥವಾ ಹೊಸ ರಾಜಕೀಯ ಅಧ್ಯಾಯ ಆರಂಭಿಸಲಿದ್ದಾರೆಯೇ ಎಂಬುದರ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಅವರಿಂದ ಹೊರ ಬೀಳುವ ಘೋಷಣೆ ತಮಿಳುನಾಡು ರಾಜಕೀಯದಲ್ಲಿ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ.

ಅಣ್ಣಾಮಲೈ ಅವರ ದೆಹಲಿ ಪ್ರವಾಸ ರಾಜಕೀಯ ವಲಯದಲ್ಲಿ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ, ಅವರು ಬಿಜೆಪಿ ರಾಷ್ಟ್ರೀಯ ನಾಯಕ ನಿತಿನ್ ನಬಿನ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದು, ಪಕ್ಷದಲ್ಲಿನ ತಮ್ಮ ಮುಂದಿನ ಪಾತ್ರ ಹಾಗೂ ರಾಜಕೀಯ ತಂತ್ರಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಬಿಜೆಪಿ ಗ್ರಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂಬ ವರದಿಗಳು ಚರ್ಚೆಗೆ ಗ್ರಾಸವಾಗಿದೆ.

ಇದೇ ವೇಳೆ, ಅಣ್ಣಾಮಲೈ ಅವರ ಮುಂದಿನ ರಾಜಕೀಯ ಹೆಜ್ಜೆ ಬಗ್ಗೆ ಊಹಾ ಪೋಹಗಳು ಮತ್ತಷ್ಟು ಬಲ ಪಡೆದುಕೊಂಡಿದೆ. ಜೂನ್ 4 ರಂದು ತಮ್ಮ ಹುಟ್ಟು ಹಬ್ಬದಂದು ಅವರು ಹೊಸ ರಾಜಕೀಯ ಪಕ್ಷವನ್ನು ಘೋಷಿಸಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಈ ಸುದ್ದಿಗೆ ಮತ್ತಷ್ಟು ಇಂಧನ ಸುರಿದಿರುವುದು ಐದು ವರ್ಷದ ಅವಧಿ 2020 ಮಧುರೈ ಮತ್ತು ಕೊಯಮತ್ತೂರು ಸೇರಿದಂತೆ ಹಲವು ನಗರಗಳಲ್ಲಿ ಕಾಣಿಸಿಕೊಂಡಿರುವ 'ಅಣ್ಣಾಮಲೈ 2.0' ಪೋಸ್ಟರ್ಗಳು.

ಈ ಪೋಸ್ಟರ್ಗಳಲ್ಲಿ ಅಣ್ಣಾಮಲೈ ಅವರನ್ನು ಹೊಸ ಅವತಾರದಲ್ಲಿ ಬಿಂಬಿಸಲಾಗಿದ್ದು, ಅವರ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮತ್ತು ಸಂಚಲನ ಮೂಡಿಸಿದೆ. ದೆಹಲಿಯಲ್ಲಿ ನಡೆಯಲಿರುವ ಹೈ ಕಮಾಂಡ್ ಬೇಟಿಗಳು ಹಾಗೂ ಮುಂದಿನ 48 ಗಂಟೆಗಳಲ್ಲಿ ಹೊರ ಬೀಳಬಹುದಾದ ನಿರ್ಧಾರಗಳು ತಮಿಳುನಾಡು ರಾಜಕೀಯದ ದಿಕ್ಕನ್ನೇ ಬದಲಿಸಬಹುದೇ ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಮನೆ ಮಾಡಿದೆ.

ಮಾಜಿ ಐಪಿಎಸ್ ಅಧಿಕಾರಿಯದ ಅಣ್ಣಾಮಲೈ ಅವರು ಇತ್ತೀಚಿಗೆ 9ನೇ ತರಗತಿಯ ಸಿ.ಬಿ.ಎಸ್.ಇ ವಿದ್ಯಾರ್ಥಿಗಳಿಗೆ ಕೇಂದ್ರ ತಂದಿದ್ದ ತ್ರೀಭಾಷಾ ನೀತಿಯನ್ನು ಹಿಂಪಡೆಯುವಂತೆ ಬಹಿರಂಗವಾಗಿ ಒತ್ತಾಯಿಸಿದರು. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಅವರ ಈ ದಿಟ್ಟ ನಿಲುವು ಅವರು ಬಿಜೆಪಿಯಿಂದ ದೂರವಾಗುತ್ತಿದ್ದಾರೆ ಎಂಬ ಚರ್ಚೆಗೆ ನಾಂದಿ ಹಾಡಿತು.

2024ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪರ ಸ್ಟಾರ್ ಪ್ರಚಾರಕರಾಗಿ ಗಮನ ಸೆಳೆದಿದ್ದ ಕೆ ಅಣ್ಣಾಮಲೈ ಅವರ ಆಕ್ರಮಣ ಕಾರ್ಯಕರ್ತರ ಶೈಲಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅವರ ರಾಜಕೀಯ ನಿಲುವುಗಳ ಪರಿಣಾಮವಾಗಿ ಮಿಶ್ರ ಪಕ್ಷ ಎಐಎಡಿಎಂಕೆ ಮೈತ್ರಿಯಿಂದ ಹಿಂದೆ ಸರಿದಿತ್ತು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದವು.

ಆದರೆ 2026ರ ವಿಧಾನಸಭಾ ಚುನಾವಣೆಯ ಸಿದ್ಧತೆಗಳು ಆರಂಭವಾಗುತ್ತಿದ್ದಂತೆ ಎನ್ಡಿಎ ಮೈತ್ರಿಕೂಟವನ್ನು ಮರುಚಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಎಐಎಡಿಎಂಕೆ ಮತ್ತೆ ಎನ್ಡಿಎ ಸೇರಲು ಮುಂದಾದಾಗ, ರಾಜ್ಯ ನಾಯಕತ್ವ ಬದಲಾವಣೆಯ ಶರತ್ತು ವಿಧಿಸಲಾಗಿತ್ತು ಎಂಬ ಮಾಹಿತಿ ಹೊರಹೊಮ್ಮಿತ್ತು. ಈ ಬೆಳವಣಿಗೆಗಳ ಮಧ್ಯೆ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಲಾಗಿದೆ ಎಂಬ ಚರ್ಚೆಯು ರಾಜಕೀಯ ವಲಯದಲ್ಲಿ ಕೇಳಿ ಬರುತ್ತದೆ

ಈ ಎಲ್ಲಾ ಘಟನೆಗಳ ನಂತರ, ಅಣ್ಣಾಮಲೈ ತಮ್ಮದೇ ಹೊಸ ರಾಜಕೀಯ ಹಾದಿ ಹಿಡಿಯಲಿದ್ದಾರೆಯೇ ಅಥವಾ ಬಿಜೆಪಿ ಹೈಕಮಾಂಡ್ ಅವರನ್ನು ಮನವರಿಸಿ ಪಕ್ಷದಲ್ಲೇ ಉಳಿಸಿಕೊಳ್ಳಲಿದೆಯೇ ಎಂಬ ಪ್ರಶ್ನೆ ಗಂಭೀರವಾಗಿದೆ.ಮುಂದಿನ 48 ಗಂಟೆಗಳು ಅವರ ರಾಜಕೀಯ ಭವಿಷ್ಯದ ದಿಕ್ಕನ್ನು ನಿರ್ಧರಿಸಬಹುದು ಎಂಬ ಕುತೂಹಲ ಇದೀಗ ತಮಿಳುನಾಡು ರಾಜಕೀಯದಲ್ಲಿ ತೀವ್ರ ವಾಗಿದೆ.

Also Read:

ಮಂಗಳೂರು ಪಾಲಿಕೆಗೆ ಚುನಾವಣೆ ಯಾವಾಗ? ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online