belagavi news :
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಬಣ ರಾಜಕೀಯ ಜೋರಾಗಿದ್ದು, ಶಿವಸೇನೆಗೆ ಬಾರಿ ಹಿನ್ನಡೆಯಾಗಿದೆ. ಪಕ್ಷದ ಆರು ಬಿನ್ನಮತಿಯ ನಾಯಕರ ಪೈಕಿ ಒಬ್ಬರಾಗಿದ್ದ ಸಂಸದ ಓಂ ಪ್ರಕಾಶ್ ರಾಜೇ ನಿಂಬಾಳ್ಕರ್ ಅವರು ಭಾನುವಾರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಸೇರುವುದಾಗಿ ಘೋಷಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉದ್ಧವ್ ಠಾಕ್ರೆ ಬಣದಲ್ಲಿ ಅಸಮಾಧಾನ ಮತ್ತು ಬಂಡಾಯದ ಧ್ವನಿ ಹೆಚ್ಚುತ್ತಿರುವ ನಡುವೆಯೇ, ನಿಂಬಾಳ್ಕರ್ ಪಕ್ಷ ತೊರೆದು ಹಿಂದೆ ಬಣ ಸೇರುವ ಮೊದಲ ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದಾರೆ. ಈ ಬೆಳವಣಿಗೆ ಶಿವಸೇನೆಗೆ ರಾಜಕೀಯವಾಗಿ ದೊಡ್ಡ ಆಘಾತವೆಂದು ವಿಶ್ಲೇಷಿಸಲಾಗುತ್ತಿದೆ.
ಪಕ್ಷಾಂತರದ ನಿರ್ಧಾರ ಕುರಿತು ಮಾತನಾಡಿದ ನಿಂಬಾಳ್ಕರ್, "ನಾವು ಅಧಿಕಾರದಲ್ಲಿ ಇಲ್ಲದ ಕಾರಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ಕಳೆದ ಎರಡು ವರ್ಷಗಳಿಂದ ಸರ್ಕಾರದ ಭಾಗವಾಗಿರದ ಕಾರಣ ನನ್ನ ಪಕ್ಷದ ಜನರಿಗಾಗಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಾನು ಏಕನಾಥ ಸಿಂಧೆ ನೇತೃತ್ವದ ಶಿವಸೇನೆಗೆ ಸೇರಲು ನಿರ್ಧರಿಸಿದ್ದೇನೆ," ಎಂದು ತಿಳಿಸಿದ್ದಾರೆ.
"ಏಕನಾಥ್ ಶಿಂದೆ ನಮ್ಮೊಂದಿಗೆ ಸದಾ ನಿಂತಿದ್ದಾರೆ. ಈ ಬಗ್ಗೆ ನಾನು ಶಿಂಧೆ ಹಾಗೂ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ," ಎಂದು ಹೇಳಿರುವ ಅವರು, ತಮ್ಮ ರಾಜಕೀಯ ಭವಿಷ್ಯ ಮತ್ತು ಕ್ಷೇತ್ರದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡೇ ಈ ತೀರ್ಮಾನ ಕೈಗೊಂಡಿರುವ ಸ್ಪಷ್ಟಪಡಿಸಿದ್ದಾರೆ.
ನಿಂಬಾಳ್ಕರ್ ಅವರ ಈ ನಿರ್ಧಾರ ಮಹಾರಾಷ್ಟ್ರದ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಉದ್ದವ್ ಠಾಕ್ರೆ ಬಣದಲ್ಲಿ ಇನ್ನಷ್ಟು ನಾಯಕರು ಪಕ್ಷ ತೊರೆಯುವ ಸಾಧ್ಯತೆಗಳ ಕುರಿತು ಉಹಾಪೋಹಗಳಿಗೆ ಬಲ ನೀಡಿದೆ.
ಇದೇ ವೇಳೆ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಹಳೆಯ ಪ್ರಕರಣ ಒಂದನ್ನು ಉಲ್ಲೇಖಿಸಿರುವ ಸಂಸದ ಓಂ ಪ್ರಕಾಶ್ ರಾಜೇ ನಿಂಬಾಳ್ಕರ್, ತಮ್ಮ ತಂದೆ ಪವನ್ ರಾಜೆ ನಿಂಬಾಳ್ಕರ್ ಕೊಲೆ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದ ನ್ಯಾಯಾಲಯದ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.
ಮಾಜಿ ಗೃಹ ಸಚಿವ ಪದ್ಮಸಿಂಹ ಪಾಟೀಲ್ ಅವರನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಿರುವ ವಿಚಾರವನ್ನು ಉಲ್ಲೇಖಿಸಿದವರು, "ಏಕನಾಥ್ ಶಿಂಧೆ ಹಾಗೂ ದೇವೇಂದ್ರ ಪಡ್ನವಿಸ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಮಾತನಾಡುವಂತೆ ನನಗೆ ಒತ್ತಾಯಿಸಿದರು. ಆದರೆ ನಾನು ಕೇವಲ ನ್ಯಾಯ ದೊರಕಬೇಕು ಎಂದು ವಿನಂತಿಸಿದ್ದೇನೆ," ಎಂದು ತಿಳಿಸಿದ್ದಾರೆ.
"ನಂತರ ಶಿಂಧೆ ಅವರು ಈ ಪ್ರಕರಣದಲ್ಲಿ ಸಿಬಿಐ ಮೇಲ್ಮನವಿ ಸಲ್ಲಿಸಲಿದೆ ಎಂದು ಹೇಳಿದರು. ಆದರೆ ನಮಗೆ ಯಾವುದೇ ವಿಶೇಷ ಕಾನೂನು ಬೇಕಿಲ್ಲ. ಕಾನೂನಿನ ಪ್ರಕಾರ, ಅರ್ಹತೆಯ ಆಧಾರದ ಮೇಲೆ ನ್ಯಾಯಾಲಯದಿಂದ ತೀರ್ಪು ಬರಬೇಕು ಎಂಬುದೇ ನನ್ನ ಒತ್ತಾಯವಾಗಿದೆ," ಎಂದು ನಿಂಬಾಳ್ಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಹೇಳಿಕೆಗಳು ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯ ನಡುವೆ ನಿಂಬಾಳ್ಕರ್ ಅವರ ಪಕ್ಷಾಂತರ ನಿರ್ಧಾರಕ್ಕೆ ಮತ್ತೊಂದು ಆಯಾಮವನ್ನು ಸೇರಿಸಿದ್ದು, ಪ್ರಕರಣದ ಹಳೆಯ ಹಿನ್ನೆಲೆಯು ಮತ್ತೆ ಚರ್ಚೆಗೆ ಬಂದಿದೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಬಣ ರಾಜಕೀಯ ಮತ್ತೊಮ್ಮೆ ತೀವ್ರಗೊಂಡಿದ್ದು, ಶಿವಸೇನೆಗೆ ಬಾರಿ ಹಿನ್ನಡೆಯಾಗಿದೆ. ಇತ್ತೀಚಿಗೆ ಡಿಸಿಎಂ ಏಕನಾಥ್ ಶಿಂದೆ ಅವರ 'ಆಪರೇಷನ್ ಟೈಗರ್' ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಮಧ್ಯೆಯೇ, ಸಂಸದ ಓಂ ಪ್ರಕಾಶ್ ರಾಜೇ ನಿಂಬಾಳ್ಕರ್ ಭಾನುವಾರ ಶಿಂಧೆ ನೇತೃತ್ವದ ಶಿವ ಸೇನೆ ಬಣ ಸೇರುವುದಾಗಿ ಘೋಷಿಸಿದ್ದಾರೆ.
ಪಕ್ಷಾಂತರದ ನಿರ್ಧಾರಕ್ಕೆ ಕಾರಣಗಳನ್ನು ವಿವರಿಸಿದ ನಿಂಬಾಳ್ಕರ್, "ನನಗೆ ಮಹಾರಾಷ್ಟ್ರದಾದ್ಯಂತ ಉತ್ತಮ ಇಮೇಜ್ ಇದೆ. ಆದರೆ ಆ ಇಮೇಜ್ ಉಳಿಸಿಕೊಳ್ಳಲು ಮಾತ್ರ ನಾನು ಸಂಸದನಾಗಿಲ್ಲ. ನನ್ನ ವಿರೋಧಿಗಳಿಗೆ ಪಾಠ ಕಲಿಸಲು ಮತ್ತು ಜನರಿಗಾಗಿ ಕೆಲಸ ಮಾಡಲು ನಾನು ಎಲ್ಲಿದ್ದೇನೆ," ಎಂದು ಹೇಳಿದ್ದಾರೆ.
ಅವರು ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಹಳೆಯ ಪ್ರಕರಣವನ್ನು ಉಲ್ಲಂಘಿಸಿದ್ದು, "ಪವನ್ ರಾಜೆ ನಿಂಬಾಳ್ಕರ್ ಕೊಲೆ ಪ್ರಕರಣದಲ್ಲಿ 20 ವರ್ಷಗಳ ನಂತರವೂ ಒಬ್ಬರಿಗೂ ಶಿಕ್ಷೆಯಾಗಿಲ್ಲ. ಎಲ್ಲರೂ ಖುಲಾಸೆಗೊಂಡಿದ್ದಾರೆ. ನಾನು ಸಂಸದನಾಗಿದ್ದರು ನನ್ನ ಸ್ವಂತ ಕುಟುಂಬಕ್ಕೆ ನ್ಯಾಯ ಕೊಡಿಸಲು ಸಾಧ್ಯವಾಗದಿದ್ದರೆ ಸಾಮಾನ್ಯ ಜನರಿಗೆ ಯಾವ ಭರವಸೆ?" ಎಂದು ಪ್ರಶ್ನಿಸಿದ್ದಾರೆ
ಈ ಬೆಳವಣಿಗೆಯ ನಡುವೆ, ಉದ್ದವ್ ಠಾಕ್ರೆ ಬಣದ 6 ಸಂಸದರು ಪಕ್ಷ ತೊರೆಯಲಿದ್ದಾರೆ ಎಂಬ ಚರ್ಚೆ ಹಾಗೂ 'ಆಪರೇಷನ್ ಟೈಗರ್' ಕುರಿತ ಊಹಾ ಪೋಹಗಳಿಗೆ ನಿಂಬಾಳ್ಕರ್ ಅವರ ಗಡಿ ಭಾಗದಲ್ಲಿ ನಿರ್ಧಾರ ಮತ್ತಷ್ಟು ಬಲ ನೀಡಿದಂತಾಗಿದೆ. ಆದರೆ ಇದುವರೆಗೆ ಈ ಕುರಿತು ಯಾವುದೇ ಅಧಿಕೃತ ರಾಜಕೀಯ ಘೋಷಣೆಗಳು ನಡೆದಿಲ್ಲ.
ಹಿಂದೆ ಬಣದ ಕಡೆ ನಡೆಯುತ್ತಿರುವ ಈ ಪಕ್ಷಾಂತರವು ಮಹಾರಾಷ್ಟ್ರದ ರಾಜಕೀಯ ಸಮೀಕರ್ಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಶಿವಸೇನೆ ಶಿಬಿರಕ್ಕೆ ಮತ್ತೊಂದು ಆಘಾತವೆಂದು ವಿಶ್ಲೇಷಿಸಲಾಗುತ್ತಿದೆ.
Also Read:
ಇರಾನ್ ಗೆ ಅಮೆರಿಕದ 300 ಡಾಲರ್ ನೆರವು: ಇಸ್ರೇಲ್ ದಾಳಿಗೆ ಇರಾನ್ ತೀವ್ರ ಪ್ರತಿಕ್ರಿಯೆ