ಕನ್ನಡ ಸಿನಿಮಾ ಅಕಾಡೆಮಿಗೆ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ ಅಧಿಕಾರಿ ಅರ್ಪಣಾ ಸುಬ್ರಮಣಿಯನ್ ಅವರು ಸಲಹೆಯನ್ನು ನೀಡಿದ್ದಾರೆ. ಕನ್ನಡದ ಹಳೆಯ ಸಿನಿಮಾಗಳ ಸಂರಕ್ಷಣೆ ಮತ್ತು ನಿರ್ಮಾಣದ ಕಡೆಗೆ ಕರ್ನಾಟಕ ಚಿತ್ರರಂಗ ಅಕಾಡೆಮಿ ಗಮನಹರಿಸಬೇಕು ಎಂದು ಅವರು ಮನವಿ ಮಾಡುತ್ತಾರೆ. ಚಿತ್ರೋತ್ಸವದಲ್ಲಿ ಪ್ರದರ್ಶನವಾದ ಹಳೆಯ ಕ್ಲಾಸಿಕ್ ಸಿನಿಮಾಗಳನ್ನು ನೋಡಿದ ಬಳಿಕ ಅವುಗಳ ಸಮರ್ಪಕವಾಗಿ ಇಲ್ಲದಿರುವುದು ತಿಳಿದುಬಂದಿತು ಎಂದು ಅವರು ತಿಳಿಸಿದರು. ಈ ನಿಟ್ಟಿನಲ್ಲಿ ಈಗಿನ ಸಿನಿಮಾಗಳತ್ತ ಒಲವು ತೋರಿಸುತ್ತಿರುವುದರಿಂದ ಹಳೆಯ ಸಿನಿಮಾಗಳನ್ನು ಸಂಗ್ರಹಿಸಿ ಉಳಿಸುವುದು ಕಡಿಮೆಯಾಗುತ್ತಿದೆ. ಆದ್ದರಿಂದ ಅವುಗಳನ್ನು ಉಳಿಸುವುದು ಅತ್ಯಗತ್ಯವಾಗಿದೆ.
ನಿರ್ಮಾಪಕರಿಗೆ ಲಾಭ ಸಿಗುವ ಕಡೆಗೆ ಅವರ ಗಮನವು ಇರುತ್ತದೆ. ಅವರು ಆ ಸಿನಿಮಾದ ಸಂರಕ್ಷಣೆ ಕಡೆಗೆ ಗಮನ ಇರುವುದಿಲ್ಲ. ಹಾಗಾಗಿ ಸಿನಿಮಾ ರಂಗದಲ್ಲಿ ಅದೆಷ್ಟೋ ಸಿನಿಮಾಗಳ ನೆಗೆಟಿವ್ ಪ್ರಿಂಟ್ ಗಳು ಹಾಳಾಗಿ ಹೋಗಿವೆ. ಅವುಗಳ ಸಂರಕ್ಷಣೆ ಮಾಡುವುದು ಯಾರ ಗಮನಕ್ಕೂ ಬರುತ್ತಿಲ್ಲ.
ಕನ್ನಡ ಹಳೆಯ ಕ್ಲಾಸಿಕ್ ಸಿನಿಮಾಗಳನ್ನು ಸಂರಕ್ಷಣೆ ಮಾಡಿ ಇಡಬೇಕು ಎಂದು ಅವರು ತಿಳಿಸಿದರು. ಸಿನಿಮಾಗಳು ನೆಗೆಟಿವ್ ಪ್ರಿಂಟ್ ಸಂರಕ್ಷಣೆ ಹಾಳಾಗದಿರಲು ಸಿನಿಮಾ ಸಂರಕ್ಷಣೆ ದೊಡ್ಡ ಮಟ್ಟದಲ್ಲಿ ಆಗಬೇಕು ಎಂದು ಅವರು ತಿಳಿಸಿದರು. 17ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆಯಲ್ಲಿ ಅರ್ಪಣಾ ಸುಬ್ರಮಣಿಯನ್ ಸಿನಿಮಾಗಳ ಸಂರಕ್ಷಣೆ ಮತ್ತು ಪುನಶ್ಚೇತನದ ಸಿನಿಮಾಗಳ ಸಂಗ್ರಹಣೆ ಬಗ್ಗೆ ಅವರು ಮಾತನಾಡಿ, ಕ್ಲಾಸಿಕ್ ಸಿನಿಮಾಗಳ ಸಂರಕ್ಷಣೆ,
ಸಂಗ್ರಹಣೆ ಮತ್ತು ಅವುಗಳನ್ನು ಪುನಶ್ಚೇತನಗೊಳಿಸುವ ಬಗ್ಗೆ ಮಹತ್ವದ ಮಾತುಗಳನ್ನು ಹೇಳಿದರು. ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ ಇದುವರೆಗೆ 5000 ಸಿನಿಮಾಗಳ ಸಂರಕ್ಷಣೆ ಮಾಡಿದೆ. ಎಂ.ಆರ್.ರಾಧಾ ಅಭಿನಯದ ತುಳುವಿನ ರಕ್ತ ಕಣ್ಣೀರು ಸಿನಿಮಾವನ್ನು ಅರ್ಪಣಾ ಸುಬ್ರಮಣಿಯನ್ ಅವರು ತಾವೇ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾಗೆ ನೀಡಿರುವುದಾಗಿ ಅವರು ತಿಳಿಸಿದರು.
ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ ಸಂರಕ್ಷಣಾ ಕಾರ್ಯದ ಕುರಿತು ಚಲನಚಿತ್ರ ಅಕಾಡೆಮಿಗೆ ಧನ್ಯವಾದವನ್ನು ಹೇಳಿದರು.”ಸಿನಿಮಾ ಚಲನಚಿತ್ರೋತ್ಸವ ಸಿನಿಮಾ ಪ್ರದರ್ಶನಗಳ ಕಡೆಗೆ ಹೆಚ್ಚು ಎಲ್ಲರ ಗಮನ ಇರುತ್ತದೆ. ಆದರೆ ಇಲ್ಲಿ ಸಿನಿಮಾ ಸಂರಕ್ಷಣೆ ಕುರಿತು ಮಾತನಾಡಲು ನನಗೆ ಅವಕಾಶ ನೀಡಿದಕ್ಕೆ ನಾನು ಆಭಾರಿಯಾಗಿರುತ್ತೇನೆ” ಎಂದು ಅರ್ಪಣಾ ಸುಬ್ರಮಣಿಯನ್ ಅವರು ತಿಳಿಸಿದರು. ಸಿನಿಮಾ ಸಂರಕ್ಷಣೆಯ ಸವಾಲುಗಳೇನು? ಅದರ ಬಗ್ಗೆ ಮಾತನಾಡಿದ ಅವರು ಒಂದು ಸಿನಿಮಾ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಅಂದಾಜು 2 ಲಕ್ಷ ರೂಪಾಯಿ ಬೇಕಾಗುತ್ತದೆ. ಆದ್ದರಿಂದ ಈ ಕೆಲಸವನ್ನು ಮಾಡಲು ತುಂಬಾ ದುಡ್ಡು ಬೇಕಾಗುತ್ತದೆ ಆದ್ದರಿಂದ ಈ ಕೆಲಸವನ್ನು ಸರಕಾರಿ ಸಂಸ್ಥೆಗಳೇ ನಡೆಸಿಕೊಡಬೇಕು ಎಂದು ತಿಳಿಸಿದರು.
ಹೊರದೇಶಗಳಲ್ಲಿ ಈ ಕೆಲಸಕ್ಕಾಗಿ 350 ಮಿಲಿಯನ್ ಡಾಲರ್ ಗಳಷ್ಟು ಅನುದಾನ ದೊರೆಯುತ್ತಿದೆ, ಆದರೂ ಅಷ್ಟು ಅನುದಾನ ಸಾಕಾಗುತ್ತಿಲ್ಲ. ಇದರಿಂದ ಅವರಿಗೆ ತುಂಬಾ ಬೇಸರವಾಗಿದೆ. ಮತ್ತು ಅರ್ಪಣಾ ಸುಬ್ರಮಣಿಯನ್ ಅವರಿಗೆ ನೀಡುವ ಒಂದು ಕೋಟಿ ಅನುದಾನ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ . ಸಿನಿಮಾ ಸಂರಕ್ಷಣೆ ವಿಷಯದ ಬಗ್ಗೆ ಕರ್ನಾಟಕ ಸಿನಿಮಾ ಚಲನಚಿತ್ರ ಅಕಾಡೆಮಿಯು ತುಂಬಾ ಗಮನವನ್ನು ಕೊಡಬೇಕು ಮತ್ತು ಹಳೆಯ ಸಿನಿಮಾಗಳ ಸಂರಕ್ಷಣೆ ಮತ್ತು ಪುನಶ್ಚೇತನ ಆಗಬೇಕು ಎಂದು ಅವರು ಮನವಿಯನ್ನು ಮಾಡಿಕೊಂಡರು.
ಇನ್ನಷ್ಟು ಓದಿರಿ:
ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಶಿಕ್ಷಣ!