<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ವಿಧಾನಸಭೆ ಕಲಾಪ ಪ್ರತಿಪಕ್ಷಗಳ ಸಭಾತ್ಯಾಗದ ಮಧ್ಯೆ ವಿವಿಜಿ ರಾಮ್ ಜಿ ವಿರೋಧಿ ನಿರ್ಣಯ ಅಂಗೀಕಾರ

ವಿಧಾನಸಭೆ ಕಲಾಪ ಪ್ರತಿಪಕ್ಷಗಳ ಸಭಾತ್ಯಾಗದ ಮಧ್ಯೆ ವಿವಿಜಿ ರಾಮ್ ಜಿ ವಿರೋಧಿ ನಿರ್ಣಯ ಅಂಗೀಕಾರ
Summary: ವಿಧಿ ರಾಮ್ ಜಿ ವಿಧೇಯಕವನ್ನು ಖಂಡಿಸುವ ನಿರ್ಣಯದ ಕುರಿತು ವಿಧಾನಸಭೆಯ ಸದನದಲ್ಲಿ ತೀವ್ರ ರಾಜಕೀಯ ಗದ್ದಲ ಉಂಟಾಯಿತು. ಪ್ರತಿಪಕ್ಷಗಳ ಶಾಸಕರು ಧರಣಿ,ಘೋಷಣೆ, ಗಲಾಟೆ ನಡೆಸಿದ ನಡುವೆ ದಿನವಿಡೀ ಚರ್ಚೆ ನಡೆಯಿತು.
belagavi news :
ಬುದುವಾರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಕೇಂದ್ರ ಸರ್ಕಾರವು ಮನೇರೇಗಾ ಯೋಜನೆ ಹೆಸರು ಬದಲಾವಣೆ ಮಾಡಿ ಕೆಲವು ತಿದ್ದುಪಡಿಗಳನ್ನು ಜಾರಿಗೆ ತಂದಿರುವ ವಿಬಿಜಿ ರಾಮ್ ಜಿ ವಿಧೇಯವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು. ಆದ್ದರಿಂದ ಕರ್ನಾಟಕದ ವಿಧಾನ ಸಭೆಯಲ್ಲಿ ಬಾರಿ ಗದ್ದಲ, ಗಲಾಟೆಗಳು ನಡೆದವು.

ದಿನವಿಡೀ ಅದರ ಬಗ್ಗೆ ಚರ್ಚೆ ನಡೆಯಿತು. ಮಂಗಳವಾರದಂದು ವಿಬಿ ರಾಮ್ ಜಿ ವಿಧೇಯವನ್ನು ಕರ್ನಾಟಕ ವಿಧಾನಸಭೆಯ ವಿರೋಧಿಸುತ್ತದೆ ಎಂದು ಸಿದ್ದರಾಮಯ್ಯನವರು ಮಂಡಿಸಿದ ನಿರ್ಣಯದ ಬಗ್ಗೆ ಬುಧವಾರದಂದು ಪ್ರತಿಪಕ್ಷಗಳು ಧರಣಿಯನ್ನು, ಗಲಾಟೆಯನ್ನು ಮಾಡಿದರು.

ಕಾಂಗ್ರೆಸ್ ನಾಯಕರು ಅದರ ಬಗ್ಗೆ ಎಲ್ಲರೂ ಮಾತನಾಡಿದರು. ಕೇಂದ್ರ ಸರ್ಕಾರದ ವಿರೋಧಿಸಿ ಆಡಳಿತ ಪಕ್ಷ ಕಾಂಗ್ರೆಸ್ ಬಸವರಾಜ್ ರಾಯರೆಡ್ಡಿ, ಶಿವಲಿಂಗೇಗೌಡ ಶರತ್ ಬಚ್ಚೇಗೌಡ ,ಬಿ.ಆರ್. ಪಾಟೀಲ್ ,ನಾರಾಯಣಸ್ವಾಮಿ, ರೂಪಕಲಾ ಶಶಿಧರ್, ಮತ್ತು ಸಚಿವರಾದ ಎಚ್.ಕೆ. ಪಾಟೀಲ್, ಡಿ.ಕೆ. ಶಿವಕುಮಾರ್ ಮತ್ತು ಪ್ರಿಯಾಂಕ ಖರ್ಗೆ ಸೇರಿದಂತೆ ಹಲವರು ಈ ಚರ್ಚೆಯ ಬಗ್ಗೆ ಮಾತನಾಡಿದರು. ಸಭಾಧ್ಯಕ್ಷರಲ್ಲಿ ಚರ್ಚೆಯ ಬಳಿಕ ಮುಖ್ಯಮಂತ್ರಿ ಅವರು ಮಂಗಳವಾರ ಸದನದಲ್ಲಿ ವಿರೋಧಿ ವಿಧಿಯನ್ನು ಅಂಗೀಕಾರ ಮಾಡುವಂತೆ ಮನವಿ ಮಾಡಿದರು. ಆದ ಕಾರಣ ವಿಪಕ್ಷಗಳು ಸದಸ್ಯರ ಸಭಾ ತ್ಯಾಗ ನಡುವೆ ನಿರ್ಣಯವನ್ನು ವಿಧಾನಸಭೆ ಅಂಗೀಕಾರ ಮಾಡಲು ತೀರ್ಮಾನಿಸಿತು .

ಆದಕಾರಣ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ತುಂಬಾ ಗದ್ದಲಗಳನ್ನು ಮಾಡಿದರು. ಕಾಂಗ್ರೆಸ್ ಏಜೆಂಟುಗಳಿಗೆ ಅಕ್ರಮ ನಡೆಸಲು ಸಮಸ್ಯೆಯಾಗುವುದರಿಂದ ವಿಬಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ ಅದನ್ನು ನಾನು ಖಂಡಿಸುತ್ತೇನೆ ಎಂದು ಆರ್ ಅಶೋಕ್ ಹೇಳಿದರು. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ನಿಯಮಬಾಹಿರ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ ಎಂದು ವಿರೋಧಿಸುತ್ತೇನೆ.

ವಿಬಿ ರಾಮ ಜಿ ಕಾಯ್ದೆ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಾಡುವುದೇ ಅಕ್ರಮ. ಏಳು ದಿನಗಳ ಮೊದಲ ಇದರ ಬಗ್ಗೆ ಸೂಚನೆ ನೀಡಿ ಚರ್ಚೆಯನ್ನು ನಡೆಸಬೇಕಿತ್ತು, ಆದರೆ ದಿಡೀರ್ ನಿರ್ಣಯ ತಂದು ಕೇಂದ್ರ ಸರ್ಕಾರದ ಬಗ್ಗೆ ಅಪಚಾರ ಮಾಡುವುದು ಎಷ್ಟುರಮಟ್ಟಿಗೆ ಸರಿ ಎಂದು ಆರ್ ಅಶೋಕ್ ಹೇಳಿದರು. ವಿಬಿ ರಾಮ್ ಜಿ ಕಾಯಿದೆಯನ್ನು ತಂದ ನಂತರ ಉದ್ಯೋಗ ಖಾತರಿಯಲ್ಲಿ 125 ದಿನಗಳಿಗೆ ಏರಿಕೆಯಾಗಿದೆ.

ಅದರಿಂದ 25 ದಿನಗಳ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ ಮೊದಲು ಉದ್ಯೋಗ ಖಾತರಿಯಲ್ಲಿ ನೂರು ದಿನಗಳ ಕೆಲಸ ಮಾತ್ರ ಇತ್ತು. ಈ ಯೋಜನೆಯನ್ನು ತರಲು ತಾಂತ್ರಿಕ ಕಾರ್ಯಗಾರ ಮತ್ತು ಬಹುಪಕ್ಷಿಯ ಸಭೆಗಳನ್ನು ನಡೆಸಲಾಗಿದೆ ಮತ್ತು ಎಲ್ಲಾ ರಾಜ್ಯಗಳ ಸರ್ಕಾರದೊಂದಿಗೆ ಸುದೀರ್ಘವಾದ ಚರ್ಚೆಯನ್ನು ನಡೆಸಿದ ಬಳಿಕವೇ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಆ ಚರ್ಚೆ ಸಮಯದಲ್ಲಿ ವಿರೋಧಿಸದ ಸರ್ಕಾರ ಈಗ ವಿರೋಧವನ್ನು ಮಾಡುವುದು ಎಷ್ಟು ಸರಿ ಎಂದು ಅವರು ಗುಡುಗಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಕೇಂದ್ರ ಸರ್ಕಾರದ ವಿಧೇಯವನ್ನು ವಿರೋಧಿಸಿದರು. ವಿಬಿ ರಾಮ ಜಿ ವಿಧೇಯ ಸಂವಿಧಾನ ವಿರೋಧಿಯಾಗಿದೆ ಎಂದು ಅವರು ಹೇಳಿದರು. ಈ ಯೋಜನೆಯಿಂದ ದೀನ, ದಲಿತರ, ಮಹಿಳೆಯರ ,ಕೂಲಿ ಕಾರ್ಮಿಕರ ವಿರೋಧಿ ವಿಧೇಯ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಇದ್ದ ಅಧಿಕಾರಿಗಳ ಅಧಿಕಾರವನ್ನು ಕಿತ್ತುಕೊಂಡಂತಾಗಿದೆ ಎಂದು ಅವರು. ಹೇಳಿದರು.

ನಾವು ಬೀದಿಗಿಳಿದು ಹೋರಾಟ ನಡೆಸಲಾಗುತ್ತದೆ ಎಂದು ಪ್ರಿಯಾಂಕ ಖರ್ಗೆಯವರು ಕೇಂದ್ರ ಸರ್ಕಾರದ ಈ ನಡಿಯಲು ವಿರೋಧಿಸಿ ಎಚ್ಚರಿಕೆ ಹೇಳಿದರು. ನವಲಗುಂದದ ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಏಕ ಪಕ್ಷಿಯ ಹೊಸ ಯೋಜನೆಯನ್ನು ರದ್ದುಗೊಳಿಸಬೇಕು ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಪಂಚಾಯತ್ ರಾಜ ಸಂವಿಧಾನಾತ್ಮಕ ಸ್ಥಾನವನ್ನು ನೀಡಿತು.ಗ್ರಾಮ ಪಂಚಾಯಿತಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿತ್ತು, ಆ ಅಧಿಕಾರವನ್ನು ಕ ಸಿದುಕೊಳ್ಳುವ ಕೇಂದ್ರ ಸರ್ಕಾರ ಮಾಡಿದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ಹಿಂಪಡೆಯುವವರಿಗೆ ಹೋರಾಟ ಮಾಡಲಾಗುವುದು ಎಂದು ಎನ್.ಎಚ್. ಕೋಣರೆಡ್ಡಿ ತಿಳಿಸಿದರು.

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಮುಖ್ಯಮಂತ್ರಿ ಅವರು ನಿರ್ಣಯಕ್ಕೆ ಎಲ್ಲಾ ಸದಸ್ಯರ ಪರವಾಗಿ ಬೆಂಬಲ ಸೂಚಿಸಿದರು. ವಿ ಬಿ ರಾಮ ಜಿ ಕಾಯ್ದೆಯ ಸಂವಿಧಾನದ ವಿರೋಧಿಯಾಗಿದೆ ಮತ್ತು ಸಾರ್ವಜನಿಕ ವಿರೋಧಿಯಾಗಿದೆ ಎಂದು ಸ್ಪಷ್ಟಪಡಿಸಿದರು. ವಿಬಿ ರಾಮ್ ಜಿ ಕಾಯ್ದೆ ವಿರೋಧ ಪರೋಕ್ಷವಾಗಿ ಗುತ್ತಿಗೆದಾರರು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡುವ ಯೋಜನೆಗೆ ಏರ್ಪಡಿಸಲಾಗಿದೆ.

ಬಡವರ ಅನ್ನ ಕಸಿದುಕೊಂಡು ಶ್ರೀಮಂತರಿಗೆ ಇನ್ನಷ್ಟು ಶ್ರೀಮಂತರಾಗಿ ಮಾಡುವ ಯೋಜನೆಯಾಗಿದೆ ಎಂದು ಸಿ.ಎಂ ಶಿವಲಿಂಗೇಗೌಡ ಅವರು ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬೆಂಬಲ ಸೂಚಿಸಿ ಹೇಳಿದರು. ರಾಜ್ಯಗಳ ಜೊತೆ ಸಮಾಲೋಚಿಸದೆ ಕೇಂದ್ರವು ಏಕಾಏಕಿ ಈ ರಾಜ್ಯ ಸರ್ಕಾರಗಳು 40% ರಷ್ಟು ಅನುದಾನವನ್ನು ಬರಿಸಬೇಕೆಂಬ ನಿಯಮವನ್ನು ಸೇರುವುದು ಎತ್ತರ ಮಟ್ಟಿಗೆ ಸರಿ ಎಂದು ಹೇಳಿದರು. ಗ್ರಾಮ ಪಂಚಾಯಿತಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಕಾಮಗಾರಿಗಳನ್ನು ಆಯ್ಕೆ ಮಾಡುವ ಸ್ವತಂತ್ರವನ್ನು ಕಳೆದುಕೊಂಡಿವೆ.

ಮನೇರೇಗಾ ಕಾಯ್ದೆಯಲ್ಲಿ ಉದ್ಯೋಗವು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಹಾಗೂ ಬೇಡಿಕೆ ಆಧಾರವಾಗಿದೆ. ಮಹಾತ್ಮ ಗಾಂಧೀಜಿ ಕನಸು ನನಸು ಮಾಡಲಿಕ್ಕೆ ಮನಮೋಹನ್ ಸಿಂಗ್ ಅವರು ಕಾಯ್ದೆಯನ್ನು ಜಾರಿಗೆ ತಂದರು.ಕೇಂದ್ರ ಸರ್ಕಾರ ಆಯ್ಕೆ ಮಾಡಿದ ಪಂಚಾಯ್ತಿಗಳಲ್ಲಿ ಮಾತ್ರ ಯೋಜನೆ ಜಾರಿಯಾಗುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಸರ್ಕಾರವು ಪ್ರಶ್ನೆಗಳನ್ನು ಮಾಡಿತು.


ಇನ್ನಷ್ಟು ಓದಿರಿ:
VSKU Recruitment 2026: ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ 139 ಪ್ರಾಧ್ಯಾಪಕರ ಹುದ್ದೆಗಳಿಗೆ ಅವಕಾಶ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online