Belagavi News:
ತಿರುವನಂತಪುರಂ: ಜೂನ್ 9: ಕೇರಳದ ಪ್ರಸಿದ್ಧ ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಕನ್ನಡಿಗ ಭಕ್ತರ ಮೇಲೆ ದೌರ್ಜನ್ಯ ಹಾಗೂ ತಾರತಮ್ಯ ನಡೆದಿದೆ ಎಂದು ಕರ್ನಾಟಕದ ಭಕ್ತರು ಗಂಭೀರ ಆರೋಪ ಮಾಡಿದ್ದಾರೆ.
ಭಕ್ತರ ಪ್ರಕಾರ, ದೇವಸ್ಥಾನದಲ್ಲಿ ಅನ್ನದಾನಕ್ಕೆ ₹ 1,000 ಟಿಕೆಟ್ ಪಡೆದಿದ್ದರೂ ಸಹ, ಕನ್ನಡಿಗರನ್ನು ಸುಮಾರು 30 - 40 ನಿಮಿಷಗಳ ಕಾಲ ಕ್ಯೂನಲ್ಲಿ ನಿಲ್ಲಿಸಲಾಗಿದೆ ಆದರೆ ಸ್ಥಳೀಯ ಭಕ್ತರಿಗೆ ಮತ್ತು ತಮ್ಮ ಭಾಷೆಯವರಿಗೆ ಹಿಂಬಾಗಿಲಿನಿಂದ ಅಥವಾ ಮಧ್ಯ ಪ್ರವೇಶದ ಮೂಲಕ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಅವರು ದೂರಿದ್ದಾರೆ.
ಈ ಘಟನೆ ದೇವಾಲಯದ ವ್ಯವಸ್ಥೆ ಮತ್ತು ಭಕ್ತರ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಸಮಾನತೆಯ ಕೊರತೆ ಹಾಗೂ ತಾರತಮ್ಯದ ಆರೋಪಗಳು ಭಕ್ತರ ಅಸಮಾಧಾನ ಕ್ಕೆ ಕಾರಣವಾಗಿವೆ. ಈ ಕುರಿತು ಸಂಬಂಧಿತ ಆಡಳಿತದಿಂದ ಸ್ಪಷ್ಟನೆ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೇರಳದ ಪ್ರಸಿದ್ಧ ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಕನ್ನಡಿಗರ ಭಕ್ತರ ಮೇಲೆ ತಾರತಮ್ಯ ಹಾಗೂ ದೌರ್ಜನ್ಯ ನಡೆದಿದೆ ಎಂಬ ಆರಂಭಗಳು ಹೆಚ್ಚಾಗಿವೆ.
ಭಕ್ತರ ಪ್ರಕಾರ, ಈ ತಾರತಮ್ಯವನ್ನು ಪ್ರಶ್ನಿಸಲು ಮತ್ತು ವಿಡಿಯೋ ಚಿತ್ರೀಕರಣ ಮಾಡಲು ಮುಂದಾದಾಗ ದೇವಸ್ಥಾನದ ಸಿಬ್ಬಂದಿ ಮೊಬೈಲ್ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕ್ಯೂ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡು ಬಂದಿದ್ದು ಸಿಬ್ಬಂದಿ ಭಕ್ತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ದೂರು ಇದೆ.
ಕರ್ನಾಟಕದಿಂದ ತೆರಳಿದ್ದ ಭಕ್ತರಲ್ಲಿ ಶೇ. 50 - 60 ರಷ್ಟು ಜನರಿಗೆ ದರ್ಶನವೇ ಆಗಿಲ್ಲ ಎಂದು ಹೇಳಲಾಗಿದ್ದು, ಅನೇಕರು ನಿರಾಸೆಯಿಂದ ಹಿಂದಿರುಗಿದ್ದಾರೆ ಎಂದು ಭಕ್ತ ಪವನ್ ತಿಳಿಸಿದ್ದಾರೆ.
"ದೇವರು ನಮ್ಮ ದೇವಸ್ಥಾನದ ಬಗ್ಗೆ ಗಮನ ಯಾವುದೇ ನೆಗೆಟಿವ್ ಭಾವನೆ ಇಲ್ಲ ಆದರೆ ಕ್ಯೂ ನಿರ್ವಹಣೆಯ ಪೈಪಲ್ಯ ಮತ್ತು ನಡೆದ ವರ್ತನೆಯ ಬಗ್ಗೆ ಮಾತ್ರ ನಮ್ಮ ಆಕ್ಷೇಪ ಇದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.