<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ವರುಣಾರ್ಭಟಕ್ಕೆ ಬೈಲಹೊಂಗಲ ತತ್ತರ : ವ್ಯಾಪಾರ ಕೇಂದ್ರಗಳಲ್ಲಿ ಭಾರಿ ನಷ್ಟ

ವರುಣಾರ್ಭಟಕ್ಕೆ ಬೈಲಹೊಂಗಲ ತತ್ತರ : ವ್ಯಾಪಾರ ಕೇಂದ್ರಗಳಲ್ಲಿ ಭಾರಿ ನಷ್ಟ
Summary: Bailhongal taluk in Belagavi district has reeled under heavy rains. Due to continuous rains, rain water entered several shops, causing huge financial losses to traders. Locals have demanded immediate relief and provision of proper drainage system.

Belagavi News:

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಭಾರಿ ಮಳೆಯ ಅಬ್ಬರ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಸುರಿದ ವರ್ಣಾರ್ಪಟದಿಂದ ವ್ಯಾಪಾರ ವಲಯಗಳಿಗೆ ಭಾರಿ ಹಾನಿ ಸಂಭವಿಸಿದೆ.

ಮಳೆಯಿಂದಾಗಿ ಹಲವು ಅಂಗಡಿಗಳಿಗೆ ಮಳೆ ನೀರು ನುಗ್ಗಿ ವಸ್ತುಗಳು ಹಾನಿಗೊಳಗಾಗಿದ್ದು, ವ್ಯಾಪಾರಿಗಳಿಗೆ ಅಪಾರ ಆರ್ಥಿಕ ನಷ್ಟವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಸ್ತೆಗಳಲ್ಲೂ ನೀರು ನಿಂತಿದ್ದು, ಸಂಚಾರಕ್ಕೂ ತೊಂದರೆ ಉಂಟಾಗಿದೆ.

ಒಳಚರಂಡಿ ವ್ಯವಸ್ಥೆಯ ಕೊರತೆ ಮತ್ತು ನಿರಂತರ ಮಳೆಯ ಪರಿಣಾಮ ಈ ಪರಿಸ್ಥಿತಿ ಉಂಟಾಗಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ತಕ್ಷಣ ಪರಿಹಾರ ಕಾರ್ಯ ಹಾಗೂ ಶಾಶ್ವತ ನೀರು ಹರಿವು ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲೂ ಮಳೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.

ಬೈಲಹೊಂಗಲದಲ್ಲಿ ಭಾರಿ ಮಳೆಯ ಅವಾಂತರ : ಅಂಗಡಿಗಳಿಗೆ ನೀರು ನುಗ್ಗಿ ಅಪಾರ ನಷ್ಟ:

ಬೈಲಹೊಂಗಲ ಪಟ್ಟಣದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿನ್ನೆ ಸಂಜೆ ಸುರಿದ ನಿರಂತರ ಮಳೆಯ ಪರಿಣಾಮವಾಗಿ ಪಟ್ಟಣದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆ ನಿಂತು ಒಂದು ದಿನ ಕಳೆದರೂ ನೀರಿನ ಮಟ್ಟ ಕಡಿಮೆಯಾಗದಿರುವುದು ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸಿದೆ. ಸರಿಯಾದ ಬೆಳ ಚರಂಡಿ ವ್ಯವಸ್ಥೆಯ ಕೊರತೆ ಹಾಗೂ ನೀರು ಹರಿವಿನ ಅಡಚಣೆ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತಕ್ಷಣದ ಪರಿಹಾರ ಕಾರ್ಯ ಹಾಗೂ ಶಾಶ್ವತ ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ವ್ಯಾಪಾರಿಗಳು ಹಾಗೂ ಸ್ಥಳೀಯರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಬೈಲಹೊಂಗಲ ಮಳೆ ಅವಾಂತರದಿಂದ ಅಧಿಕಾರಿಗಳ ನಿರ್ಲಕ್ಷ ಆರೋಪ, ಸ್ಥಳೀಯರಿಂದ ಆಕ್ರೋಶ:

ಬೈಲಹೊಂಗಲ ಪಟ್ಟಣದಲ್ಲಿ ಭಾರಿ ಮಳೆಯಿಂದ ಉಂಟಾದ ಅವಾಂತರದ ನಡುವೆಯೂ ಅಧಿಕಾರಿಗಳು ಇನ್ನೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನೀರು ನುಗ್ಗಿ ವ್ಯಾಪಾರ ಹಾಗೂ ಸಂಚಾರಕ್ಕೆ ತೊಂದರೆ ಉಂಟಾಗಿದ್ದರು ಯಾವುದೇ ತುರ್ತು ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ನಿರಂತರ ಮಳೆಯಿಂದಾಗಿ ಹಲವಾರು ಅಂಗಡಿಗಳು ಹಾಗೂ ರಸ್ತೆಗಳು ಜಲಾವೃತಗೊಂಡಿತು, ವ್ಯಾಪಾರಿಗಳಿಗೆ ಭಾರಿ ನಾಷ್ಟ ಸಂಭವಿಸಿದೆ. ಆದರೂ ನೀರು ಹೊರ ಹಾಕುವ ಕಾರ್ಯ ಆರಂಭವಾಗಿಲ್ಲ ಎಂದು ವ್ಯಾಪಾರಿಗಳು ಮತ್ತು ಸ್ಥಳೀಯರು ಕಿಡಿಕಾರಿದ್ದಾರೆ.

ಸ್ಥಳೀಯರ ಪ್ರಕಾರ, ಪರಿಸ್ಥಿತಿ ಗಂಭೀರವಾಗಿದ್ದರು ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ ವಹಿಸಿದ್ದಾರೆ. ತಕ್ಷಣ ಪರಿಹಾರ ಕಾರ್ಯ ಆರಂಭಿಸಿ ನೀರು ಕೆಲವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಳೆ ಅವಾಂತರದ ನಡುವೆ ಅಧಿಕಾರಿಗಳ ಮೌನದಿಂದ ಜನರಲ್ಲಿ ಆಕ್ರೋಶ ಹೆಚ್ಚಾಗಿದ್ದು, ಶೀಘ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಳೆಯ ಅವಾಂತರಕ್ಕೆ ಚರಂಡಿ ವೈಫಲ್ಯವೇ ಕಾರಣ - ಸ್ಥಳೀಯರ ಆಕ್ರೋಶ:

ನಿನ್ನೆ ಸುರಿದಂತಹ ಭಾರಿ ಮಳೆಯಿಂದ ಉಂಟಾದ ಜಲಾವೃತ ಪರಿಸ್ಥಿತಿಗೆ ಸರಿಯಾದ ಚರಂಡಿ ವ್ಯವಸ್ಥೆಯ ಕೊರತೆ ಪ್ರಮುಖ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರ ಮಳೆಯಿಂದ ಅಂಗಡಿಗಳು ಮತ್ತು ರಸ್ತೆಗಳಲ್ಲಿ ನೀರು ನಿಂತು ಜನ ಜೀವನ ತೀವ್ರ ತೊಂದರೆಗೆ ಸಿಲುಕಿದೆ.

ಮಳೆ ನೀರು ಸರಿಯಾಗಿ ಇಲ್ಲದ ಕಾರಣವೇ, ಈ ಅನಾಹುತ ಸಂಭವಿಸಿದೆ ಎಂದು ವ್ಯಾಪಾರಿಗಳು ಹಾಗೂ ನಿವಾಸಿಗಳು ಆರೋಪಿಸಿದ್ದಾರೆ. ಇದರಿಂದಾಗಿ ವ್ಯಾಪಾರಿಗಳಿಗೆ ಆರ್ಥಿಕ ನಷ್ಟವು ಹೆಚ್ಚಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಸ್ಥಳ ಪರಿಶೀಲನೆ ನಡೆಸಿ, ನೀರು ತೆರವುಗೊಳಿಸುವ ಕಾರ್ಯ ಹಾಗೂ ಶಾಶ್ವತ ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ವಿಳಂಬವಾದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

Also Read:

RRB ಯಲ್ಲಿ ಬಂಪರ್ ನೇಮಕಾತಿ : ಕೇಂದ್ರ ಸರ್ಕಾರಿ ಉದ್ಯೋಗದ ಕನಸು ನನಸಾಗಿಸಿಕೊಳ್ಳಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online