<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಬರ್ತಿದ್ದೀನಿ ಚಿನ್ನ' ಎಂಟ್ರಿ ಘೋಷಣೆ!ದರ್ಶನ್ ನಿಂದ ಅಭಿಮಾನಿಗಳಿಗೆ ಸರ್ಪ್ರೈಸ್

ಬರ್ತಿದ್ದೀನಿ ಚಿನ್ನ' ಎಂಟ್ರಿ ಘೋಷಣೆ!ದರ್ಶನ್ ನಿಂದ ಅಭಿಮಾನಿಗಳಿಗೆ ಸರ್ಪ್ರೈಸ್
Summary: Popular Kannada film actor Darshan has given a special message to his fans after six months, and the statement "Bartiddeeni Chinna" has gone viral on social media. This one-line message has created curiosity and joy among fans.

BELAGAVI NEWS :

ದರ್ಶನ್ ತೂಗುದೀಪ್ : ಜೈಲಿನಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ; ಸಿನಿಮಾ OTT ಮತ್ತು ಟಿವಿಗೆ ರೆಡಿ

ರೇಣುಕಾ ಸ್ವಾಮಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ್ ಅವರು ಈಗಾಗಲೇ ವರ್ಷಕ್ಕೂ ಅಧಿಕಕಾಲ ಜೈಲು ವಾಸ ಅನುಭವಿಸಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಮುಂದಿನ ಅವಧಿಯಲ್ಲೂ ಜಾಮೀನು ಸಾಧ್ಯತೆಗಳು ಸೀಮಿತವಾಗಿವೆ ಎಂದು ತಿಳಿದುಬಂದಿದೆ.

ದರ್ಶನ್ ಅಭಿಮಾನಿಗಳಿಗೆ ಸಣ್ಣ ಸಂತಸದ ಸುದ್ದಿ ಎಂದು ದೊರೆತಿದೆ. ನಟ ದರ್ಶನ್ ಅಭಿನಯದ ಸಿನಿಮಾ ಇದೀಗ OTT ಹಾಗೂ ಟಿವಿ ಪ್ರಸಾರಕ್ಕೆ ಸಜ್ಜಾಗಿದ್ದು, ಶೀಘ್ರದಲ್ಲೇ ಡಿಜಿಟಲ್ ಫ್ಲಾಟ್ ಫಾರ್ಮ್ ಮತ್ತು ಸ್ಯಾಟಲೈಟ್ ಚಾನೆಲ್ ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

Sponsored

ಜೈಲಿನಲ್ಲಿದ್ದರೂ ದರ್ಶನ್ ಅವರ ಸಿನಿಮಾಗಳ ಮೇಲಿನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.ಅವರ ಹಳೆಯ ಸಿನಿಮಾಗಳಿಗೆ ನಿರಂತರ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈ ಹೊಸ ಪ್ರಸಾರ ಅಭಿಮಾನಿಗಳಿಗೆ ಮತ್ತೊಮ್ಮೆ ದರ್ಶನ್ ಸಿನಿಮಾ ವನ್ನು ನೋಡಲು ಅವಕಾಶ ನೀಡಲಿದೆ.

ಈ ಬೆಳವಣಿಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಸಿನಿಮಾ ಯಾವ ದಿನ OTT ಮತ್ತು ಟಿವಿಯಲ್ಲಿ ಬರುತ್ತದೆ ಎಂಬ ಅಧಿಕೃತ ಘೋಷಣೆಗೆ ಎಲ್ಲರೂ ಕಾಯುತ್ತಿದ್ದಾರೆ.

ದರ್ಶನ್ 'ಡೆವಿಲ್' ಸಿನಿಮಾ OTT ಮತ್ತು ಟಿವಿಗೆ ಸಜ್ಜು: ಜೀ5 ನಿಂದ ಅಧಿಕೃತ ಘೋಷಣೆ

ದರ್ಶನ್ ತೂಗುದೀಪ್ ಅಭಿನಯದ 'ಡೆವಿಲ್' ಸಿನಿಮಾ ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ವೇಳೆಯಲ್ಲಿ ದರ್ಶನ್ ಅವರ ಜಾಮೀನು ರದ್ದಾಗಿ ಅವರು ಮತ್ತೆ ಜೈಲು ಸೇರಿದ್ದರಿಂದ, ಸಿನಿಮಾ ಪ್ರಚಾರ ಹಾಗೂ ಬಿಡುಗಡೆಯ ವೇಳೆ ಅಭಿಮಾನಿಗಳ ಗಮನ ಸೆಳೆದಿತ್ತು.

Sponsored

ಜೈಲಿನಲ್ಲಿದ್ದಾಗಲೇ ಬಿಡುಗಡೆಯಾದ ಈ ಸಿನಿಮಾ ಸಾಧಾರಣ ಯಶಸ್ಸು ಕಂಡಿತು.ಆದರೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು 6 ತಿಂಗಳು ಕಳೆದರೂ ಸಿನಿಮಾ OTT ಅಥವಾ ಟಿವಿಯಲ್ಲಿ ಪ್ರಸಾರವಾಗಿರಲಿಲ್ಲ.

ಈಗ ಕೊನೆಗೂ 'ಡೆವಿಲ್' ಸಿನಿಮಾ ಡಿಜಿಟಲ್ ವೇದಿಕೆ ಮತ್ತು ಟಿವಿ ಪ್ರಸಾರಕ್ಕೆ ಸಜ್ಜಾಗಿದ್ದು, ಜೀ5 ಸಂಸ್ಥೆ ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಂಡಿದೆ. ಶೀಘ್ರದಲ್ಲೇ ಸಿನಿಮಾ ಓಟಿಪಿ ಮತ್ತು ಟಿವಿಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಈ ಕುರಿತು ಜೀ5 ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ದರ್ಶನ್ ಅವರ ಜನಪ್ರಿಯ ಡೈಲಾಗ್ "ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ,ಬರ್ತಾ ಇದೀನಿ ಚಿನ್ನ" ಅನ್ನು ಉಲ್ಲೇಖಿಸಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಈ ಘೋಷಣೆಯ ಬಳಿಕ ಅಭಿಮಾನಿಗಳು ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

Sponsored

ದರ್ಶನ್ 'ಡೆವಿಲ್' ಸಿನಿಮಾ ಹಿನ್ನಲೆ : ಚಿತ್ರಿಕರಣದಿಂದ ಜೈಲು, ಬಿಡುಗಡೆಯವರೆಗೆ ನಡೆದ ಘಟನೆಗಳು.

2024ರಲ್ಲಿ 'ಡೆವಿಲ್' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದು ನಟ ದರ್ಶನ್ ಬಂಧನಕೊಳಗಾಗಿದ್ದರು. ಈ ಕಾರಣದಿಂದ ಸಿನಿಮಾ ಕರ್ನಾಟಕ ಹೈಕೋರ್ಟ್ ನಿಂದ ಜಾಮೀನು ದೊರೆತ ಬಳಿಕ ದರ್ಶನ್ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಿ 'ಡೆವಿಲ್' ಸಿನಿಮಾದ ಡಬ್ಬಿಂಗ್ ಮತ್ತು ಉಳಿದ ಕೆಲಸಗಳನ್ನು ಪೂರ್ಣಗೊಳಿಸಿದರು. ಆದರೆ ಬಳಿಕ ಸುಪ್ರೀಂ ಕೋರ್ಟ್ ನಲ್ಲಿ ಜಾಮಿನು ರದ್ದಾದ ಹಿನ್ನೆಲೆಯಲ್ಲಿ ದರ್ಶನ್ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಗಾದರು.

ಈ ಎಲ್ಲಾ ಘಟನೆಗಳ ನಡುವೆ ದರ್ಶನ್ ಜೈಲಿನಲ್ಲಿದ್ದಾಗಲೇ 'ಡೆವಿಲ್' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತು. ಸಿನಿಮಾ ಬಿಡುಗಡೆಯ ವೇಳೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರ ಆಪ್ತರು ಮುಂದೆ ನಿಂತು ಚಿತ್ರದ ಪ್ರಚಾರ ಕಾರ್ಯವನ್ನು ನಿರ್ವಹಿಸಿದರು.

ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ರಚನಾ ರೈ ಅಭಿನಯಿಸಿದ್ದಾರೆ. ಚಿತ್ರವು ನಿರೀಕ್ಷಿತ ಮಟ್ಟದ ಯಶಸ್ಸು ಪಡೆಯದೆ, ಸಾಧಾರಣ ಪ್ರತಿಕ್ರಿಯೆ ಮಾತ್ರ ಪಡೆದಿತ್ತು.

Sponsored

ಜೈಲು,ಜಾಮೀನು ಹಾಗೂ ಬಿಡುಗಡೆ ನಡುವಿನ ಈ ಘಟನೆಗಳ ಸರಣಿ 'ಡೆವಿಲ್' ಸಿನಿಮಾವನ್ನು ಬಿಡುಗಡೆಗು ಮುನ್ನವೇ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

Also Read:

ಕಡಲೆಕಾಯಿ ತಿನ್ನುವುದು ಹೃದಯಕ್ಕೆ ಒಳ್ಳೆಯದೇ ? ವೈಜ್ಞಾನಿಕ ಮಾಹಿತಿ ಇಲ್ಲಿದೆ ನೋಡಿ..

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online