<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಬೆಳಗಾವಿ ಕ್ರೈಂ : ಜಾಮೀನಿನ ಮೇಲೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ರೌಡಿಶೀಟರ್ ಕೊಲೆ

ಬೆಳಗಾವಿ ಕ್ರೈಂ : ಜಾಮೀನಿನ ಮೇಲೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ರೌಡಿಶೀಟರ್ ಕೊಲೆ
Summary: A shocking incident has taken place in Belagavi district. The rowdysheeter was attacked and murdered by miscreants on the very day he was released on bail. The police have started an investigation into the incident and efforts are on to find the reason behind the attack and the accused.

belagavi news :

ಬೆಳಗಾವಿಯಲ್ಲಿ ರೌಡಿಶೀಟರ್ ಭೀಕರ ಹತ್ಯೆ:ಹಳೆ ವೈಷಮ್ಯ ಶಂಕೆ

ಗಡಿಪಾರ್ ಆಗಿದ್ದ ರೌಡಿಶೀಟರ್‌ವೊಬ್ಬರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಸಮೀಪ ನಡೆದಿದೆ.

ಮಂಗಳವಾರ ರಾತ್ರಿ ನಡೆದ ಈ ಘಟನೆಯಲ್ಲಿ ಗೋಕಾಕ್ ಫಾಲ್ಸ್ ಬಳಿಯ ಮಾಣಿಕವಾಡಿ ಗ್ರಾಮದ ಮುತ್ತುಸ್ವಾಮಿ ಹೃದಯ ರಾಜ್ ಪಾಸ್ಕಲ್ (30) ಮೃತಪಟ್ಟಿದ್ದಾರೆ. ಅವರು ರೌಡಿಶೀಟರ್ ಪಟ್ಟಿಯಲ್ಲಿದ್ದ ವ್ಯಕ್ತಿಯಾಗಿದ್ದು, ಈ ಹಿಂದೆ ಗಡಿಪಾರು ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಹಳೆಯ ವೈಷಮ್ಯವೇ ಈ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಬೆಳಗಾವಿಯಲ್ಲಿ ರೌಡಿಶೀಟರ್ ಹತ್ಯೆ : ಜಾಮೀನಿನ ಮೇಲೆ ಬಿಡುಗಡೆಯಾದ ದಿನವೇ ಮಾರಕಾಸ್ತ್ರಗಳಿಂದ ದಾಳಿ

ಜಾಮೀನಿನ ಮೇಲೆ ಬಿಡುಗಡೆಯಾದ ಕೆಲವೇ ಸಮಯದಲ್ಲಿ ರೌಡಿಶೀಟರ್ ಒಬ್ಬರನ್ನು ವಿರೋಧಿ ಗುಂಪು ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ಬಳಿ ಈ ಘಟನೆ ನಡೆದಿದ್ದು, ಗೋಕಾಕ್ ಫಾಲ್ಸ್ ಬಳಿಯ ಮಾಣಿಕವಾಡಿ ಗ್ರಾಮದ ಮುತ್ತುಸ್ವಾಮಿ ಹೃದಯ ರಾಜ್ ಪಾಸ್ಕಲ್ ಮೃತಪಟ್ಟಿದ್ದಾರೆ. ಕೆಲ ದಿನಗಳಿಂದ ಗಡಿಪಾರಾಗಿ ಧಾರವಾಡ ಜೈಲಿನಲ್ಲಿದ್ದ ಮುತ್ತುರಾಜ್, ಮಂಗಳವಾರವಷ್ಟೇ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದರು ಎಂದು ತಿಳಿದು ಬಂದಿದೆ

ಬಿಡುಗಡೆಯಾದ ಬಳಿಕ ಸ್ನೇಹಿತರೊಂದಿಗೆ ಹಿಡಕಲ್ ಡ್ಯಾಮ್ ಕಡೆ ತೆರಳುತ್ತಿದ್ದ ವೇಳೆ ವಿರೋಧಿ ಗುಂಪು ದಾಳಿ ನಡೆಸಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸ್ಥಳದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ದಾರಿಯ ವೇಳೆ ಮುತ್ತುಸ್ವಾಮಿಯ ಸ್ನೇಹಿತರು ಭಯದಿಂದ ಸ್ಥಳದಿಂದ ಓಡಿ ಹೋಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮುತ್ತುಸ್ವಾಮಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯವೇ ಮೃತಪಟ್ಟಿದ್ದಾರೆ.

ಮಾಹಿತಿ ತಿಳಿದ ಯಮಕನಮರಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online