<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Education

ಬೆಳಗಾವಿ ವಿಟಿಯು ಅಚ್ಚರಿ ಸಾಧನೆ: ಪರೀಕ್ಷೆ ಮುಗಿದ ತಕ್ಷಣವೇ ಫಲಿತಾಂಶ ಪ್ರಕಟ

ಬೆಳಗಾವಿ ವಿಟಿಯು ಅಚ್ಚರಿ ಸಾಧನೆ: ಪರೀಕ್ಷೆ ಮುಗಿದ ತಕ್ಷಣವೇ ಫಲಿತಾಂಶ ಪ್ರಕಟ
Summary: Vishvesvaraya Technological University, Belgaum, has created a new record. VTU has set a new benchmark for speedy digital assessment in the field of education by declaring the results of more than 56 thousand students in just 10 minutes after the end of the engineering exam. It has received huge appreciation from students and parents.

Belagavi news:

ಬೆಳಗಾವಿ: Visvesvaraya technological University ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಮ್ಮೆ ಹೊಸ ಇತಿಹಾಸ ನಿರ್ಮಿಸಿದೆ. ಅಂತಿಮ ಸೆಮಿಸ್ಟರ್ ಇಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳೊಳಗೆ ಫಲಿತಾಂಶ ಪ್ರಕಟಿಸುವ ಮೂಲಕ ವಿಟಿಯು ದೇಶದ ಗಮನ ಸೆಳೆದಿದೆ.

ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಹಾಗೂ ಕುಲ ಸಚಿವ (ಮೌಲ್ಯಮಾಪನ) ಪ್ರೊ. ಯು. ಜೆ. ಉಜ್ವಲ್ ಜಂಟಿಯಾಗಿ ಫಲಿತಾಂಶ ಬಿಡುಗಡೆ ಮಾಡಿದರು.

ಬಿ.ಇ ಮತ್ತು ಬಿ.ಟೆಕ್ ಅಂತಿಮ ಸೆಮಿಸ್ಟರ್ ಪರೀಕ್ಷೆಗೆ ಒಟ್ಟು 56,192 ವಿದ್ಯಾರ್ಥಿಗಳು ಹಾಜರಾಗಿದ್ದರು. ಶುಕ್ರವಾರ ಸಂಜೆ 5.30ಕ್ಕೆ ಪರೀಕ್ಷೆ ಅಂತ್ಯಗೊಂಡಿದ್ದು, ಕೇವಲ 10 ನಿಮಿಷಗಳಲ್ಲಿ ಅಂದರೆ 5.40ಕ್ಕೆ ಫಲಿತಾಂಶ ಪ್ರಕಟಿಸಲಾಗಿದೆ. ಈ ಬಾರಿ ಶೇಖಡಾ 99.98 ಫಲಿತಾಂಶದ ದಾಖಲಾಗಿರುವುದು ವಿಶೇಷ.

Sponsored

ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಸಂಪೂರ್ಣ ಮೌಲ್ಯಮಾಪನ ಪ್ರಕ್ರಿಯೆಯನ್ನು

8 ದಿನಗಳ ಮುಂಚಿತವಾಗಿಯೇ ಪೂರ್ಣಗೊಳಿಸಲಾಗಿದೆ. ಇದರೊಂದಿಗೆ ವಿಟಿಯು ತನ್ನದೇ ಹಿಂದಿನ ದಾಖಲೆಗಳನ್ನು ಮುರಿದಿದೆ. ಈ ಹಿಂದೆ ಪರೀಕ್ಷೆ ಮುಗಿದ ಒಂದು ಗಂಟೆಯೊಳಗೆ ಫಲಿತಾಂಶ ಪ್ರಕಟಿಸಲಾಗಿತ್ತು.

ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಫಲಿತಾಂಶವನ್ನು ನೇರವಾಗಿ ಅವರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗಿದ್ದು, ಟಿವಿಯುವಿನ ಡಿಜಿಟಲ್ ವ್ಯವಸ್ಥೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Visvesvaraya technological University ವಿದ್ಯಾರ್ಥಿ ಸ್ನೇಹಿ ವಿಶ್ವವಿದ್ಯಾಲಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಅಂತಿಮ ಸೆಮಿಸ್ಟರ್ ಇಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳಲ್ಲೇ 56 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿ ವಿಟಿಯು ಹೊಸ ದಾಖಲೆ ನಿರ್ಮಿಸಿದೆ.

Sponsored

ಈ ಕುರಿತು ಮಾತನಾಡಿದ ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್, "ವಿಟಿಯು ತಂತ್ರಜ್ಞಾನ ಅಳವಡಿಕೆಯಲ್ಲಿ ಸದಾ ಮುಂದಿದೆ. ವಿದ್ಯಾರ್ಥಿಗಳ ಸ್ನೇಹಿಯಾಗಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ. ಪರೀಕ್ಷೆ ಮುಗಿದ ಕೇವಲ 10 ನಿಮಿಷದಲ್ಲಿ ಕಳೆದ ವರ್ಷ ನೀಡುವುದು ಸುಲಭದ ವಿಷಯವಲ್ಲ" ಎಂದು ಹೇಳಿದರು.

ಇದರ ಹಿಂದೆ ಕಾರ್ಯನಿರ್ವಹಿಸಿದ ವಿಟಿಯು ಆಡಳಿತ ಸಿಬ್ಬಂದಿ, ಪರೀಕ್ಷಾ ವಿಭಾಗದ ಸಿಬ್ಬಂದಿ ಹಾಗು ಸಂಯೋಜಿತ ಕಾಲೇಜುಗಳ ಸಿಬ್ಬಂದಿಯ ಶ್ರಮವನ್ನು ಅವರು ಪ್ರಶಂಸಿಸಿದರು. "ಈ ಸಾಧನೆಗೆ ಸಹಕಾರ ನೀಡಿದ ಎಲ್ಲಾ ಸಿಬ್ಬಂದಿಗೂ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.

ಅಂತಿಮ ವರ್ಷದ ವಿದ್ಯಾರ್ಥಿಗಳು ಉದ್ಯೋಗ ಹಾಗೂ ಉನ್ನತ ಶಿಕ್ಷಣ ಪ್ರವೇಶಕ್ಕಾಗಿ ಫಲಿತಾಂಶದ ನಿರೀಕ್ಷೆಯಲ್ಲಿ ಇರುತ್ತಾರೆ. ಇದೇ ಕಾರಣಕ್ಕೆ ತ್ವರಿತವಾಗಿ ಮೌಲ್ಯಮಾಪನ ಪೂರ್ಣಗೊಳಿಸಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಕುಲಪತಿಗಳು ವಿವರಿಸಿದರು.

ವಿಟಿಯುವಿನ ಈ ಡಿಜಿಟಲ್ ಮತ್ತು ವೇಗದ ವ್ಯವಸ್ಥೆಗೆ ವಿದ್ಯಾರ್ಥಿಗಳು ಪೋಷಕರು ಹಾಗೂ ಶಿಕ್ಷಣ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Sponsored

Visvesvaraya technological University ಫಲಿತಾಂಶ ಪ್ರಕಟಣೆಯಲ್ಲಿ ವರ್ಷದಿಂದ ವರ್ಷಕ್ಕೆ ಹೊಸ ದಾಖಲೆ ನಿರ್ಮಿಸುತ್ತಿದೆ. ಈ ಬಾರಿ ಅಂತಿಮ ಸೆಮಿಸ್ಟರ್ ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳಲ್ಲೇ 56,192 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸುವ ಮೂಲಕ ವಿಟಿಯು ದೇಶದ ಗಮನ ಸೆಳೆದಿದೆ.

ಈ ಹಿಂದೆ 2025ರ ಮೇ ತಿಂಗಳಲ್ಲಿ ನಡೆದ 2021ರ ಬ್ಯಾಚ್ ನ 50,321 ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಒಂದು ಗಂಟೆ

ಯೊಳಗೆ ಪ್ರಕಟಿಸಲಾಗಿತ್ತು. ಅದಕ್ಕೂ ಮೊದಲು 2024 ರ ಮೇ ತಿಂಗಳಲ್ಲಿ ನಡೆದ 2020 ರ ಬ್ಯಾಚ್ ನ 37,011 ವಿದ್ಯಾರ್ಥಿಗಳ ಫಲಿತಾಂಶವನ್ನು ಕೇವಲ 3 ಗಂಟೆಗಳಲ್ಲೇ ಬಿಡುಗಡೆ ಮಾಡಲಾಗಿತ್ತು.

ಇನ್ನು 2023ರಲ್ಲಿ ನಡೆದ 2019ರ ಬ್ಯಾಚ್ ನ ಪರೀಕ್ಷೆಯಲ್ಲಿ 43,662 ವಿದ್ಯಾರ್ಥಿಗಳು ಹಾಜರಾಗಿದ್ದು, ಆ ಸಮಯದಲ್ಲಿ ಪರೀಕ್ಷೆ ಮುಗಿದ ಎರಡನೇ ದಿನ ಫಲಿತಾಂಶ ಪ್ರಕಟಿಸಲಾಗಿತ್ತು. ಇದೀಗ ವರ್ಷದಿಂದ ವರ್ಷಕ್ಕೆ ವೇಗ ಹೆಚ್ಚಿಸಿಕೊಂಡಿರುವ ವಿಟಿಯು, ಡಿಜಿಟಲ್ ಮೌಲ್ಯಮಾಪನದ ಮೂಲಕ ಹೊಸ ಮಾನದಂಡ ಸ್ಥಾಪಿಸಿದೆ.

Sponsored

ಈ ಕುರಿತು ಮಾತನಾಡಿದ ವಿಟಿಯು ಕುಲಸಚಿವ (ಮೌಲ್ಯಮಾಪನ) ಪ್ರೊ. ಯು. ಜೆ. ಉಜ್ವಲ್, "ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದ್ದೇವೆ. ಫಲಿತಾಂಶವನ್ನು ಶೀಘ್ರವಾಗಿ ಪ್ರಕಟಿಸಲು ಮುಂಚಿತ ಸಿದ್ಧತೆ ನಡೆಸಲಾಗಿತ್ತು. ಎಲ್ಲರ ಸಹಕಾರದಿಂದ ಇಂದು ಸಾಧ್ಯವಾಗಿದೆ" ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ತನಕ ಫಲಿತಾಂಶವನ್ನು VTU Result Portal ಮೂಲಕ ಪರಿಶೀಲಿಸಬಹುದು.

Also Read:

ಸಿಎಂ ವಿಜಯ್ ಗೆ ವಿರಾಟ್ ಕೊಹ್ಲಿ ಸಹಿ ಮಾಡಿದ ಅಪರೂಪದ ಬ್ಯಾಟ್ ಉಡುಗೊರೆ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online