<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಬೆಳಗಾವಿ ಹೂಡಿಕೆದಾರರಲ್ಲಿ ಆತಂಕ: ಆದಿತ್ಯರಾಜ್ ಕ್ಯಾಪಿಟಲ್ ಕಚೇರಿ ಮೇಲೆ ಪೊಲೀಸ್ ದಾಳಿ

ಬೆಳಗಾವಿ ಹೂಡಿಕೆದಾರರಲ್ಲಿ ಆತಂಕ: ಆದಿತ್ಯರಾಜ್ ಕ್ಯಾಪಿಟಲ್ ಕಚೇರಿ ಮೇಲೆ ಪೊಲೀಸ್ ದಾಳಿ
Summary: Another financial fraud allegation has come to light in Belgaum, with the police raiding the office of Adityaraj Capital Private Limited. Based on the complaints received from investors, documents are being reviewed and an investigation is being conducted. This development has raised concerns among local investors, and more information about the case is awaited.

BELAGAVI NEWS :

ಇಂದಿನ ಕಾಲದಲ್ಲಿ ಅತ್ತೆ ಸೊಸೆಯರ ನಡುವಿನ ಭಿನ್ನಾಭಿಪ್ರಾಯಗಳ ಸುದ್ದಿಗಳೇ ಹೆಚ್ಚಾಗಿ ಕೇಳಿ ಬರುತ್ತಿರುವ ಸಂದರ್ಭದಲ್ಲಿ,ಹರಿಯಾಣದ ಜನಪ್ರಿಯ ಜಾನಪದ ಗಾಯಕಿ ಕಾಜಲ್ ಚೌಧರಿ ಮಾನವಿಯತೆ,ಪ್ರೀತಿ ಮತ್ತು ಸೇವಾ ಭಾವಕ್ಕೆ ಹೊಸ ಅರ್ಥ ನೀಡಿದ್ದಾರೆ.

ತಮ್ಮ 90 ವರ್ಷದ ಅತ್ತೆಯ ಬಹು ದಿನಗಳ ಕನಸುಗಳನ್ನು ನನಸು ಮಾಡಲು ಅವರು ಮಾಡಿದ ಕಾರ್ಯ ಈಗ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

ನಡೆಯಲು ಸಾಧ್ಯವಾಗದ ತಮ್ಮ ವಯೋವೃದ್ದ ಅತ್ತೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಕೂರಿಸಿಕೊಂಡು,ಆ ಬುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡೆ ಕಾಜಲ್ ಚೌಧರಿ ಪವಿತ್ರ 84- ಕೋಸ್ ಬ್ರಜ್ ಪರಿಕ್ರಮ ಯಾತ್ರೆಯನ್ನು ಆರಂಭಿಸಿದ್ದಾರೆ.

Sponsored

ಸುಮಾರು 260 ಕಿಲೋಮೀಟರ್ ದೂರದ ಈ ಪಾದಯಾತ್ರೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದ್ದು,ಲಕ್ಷಾಂತರ ಜನರ ಮನಸ್ಸನ್ನು ಮುಟ್ಟಿದೆ.ವಿಡಿಯೋದಲ್ಲಿ ಕಾಜಲ್ ತಮ್ಮ ಅತ್ತೆಯನ್ನು ತಲೆಯ ಮೇಲೆ ಹೊತ್ತುಕೊಂಡು ಭಕ್ತಿಯಿಂದ ಯಾತ್ರೆ ಮಾಡುತ್ತಿರುವ ದೃಶ್ಯಗಳು ಕಾಣಿಸುತ್ತವೆ.ಅತ್ತೆಯ ತೀರ್ಥಯಾತ್ರೆಯ ಆಸೆಯನ್ನು ಈಡೇರಿಸಲು ಅವರು ತೋರಿದ ತ್ಯಾಗ,ಪ್ರೀತಿ ಮತ್ತು ಗೌರವ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಈ ಅಪರೂಪದ ಘಟನೆಗಳನ್ನು ಕಂಡ ನೆಟ್ಟಿಗರು ಕಾಜಲ್ ಚೌಧರಿಯನ್ನು "ಕಲಿಯುಗದ ಶ್ರವಣ ಕುಮಾರ" ದೀರ್ಘ ಎಂದು ಕೊಂಡಾಡುತ್ತಿದ್ದಾರೆ.ಕುಟುಂಬದ ಹಿರಿಯರ ಮೇಲಿನ ಗೌರವ ಮತ್ತು ಸೇವಾ ಭಾವ ಹೇಗಿರಬೇಕು ಎಂಬುದಕ್ಕೆ ಕಾಜಲ್ ಅವರ ಈ ಕಾರ್ಯ ಜೀವಂತ ಉದಾಹರಣೆಯಾಗಿದೆ.ಸಮಾಜದಲ್ಲಿ ಸಂಬಂಧಗಳ ಮೌಲ್ಯವನ್ನು ನೆನಪಿಸುವ ಈ ಸ್ಪೂರ್ತಿದಾಯಕ ಕಥೆ ಇದೀಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.

"ಇದು ಸಂಪೂರ್ಣವಾಗಿ ತನ್ನದೇ ನಿರ್ಧಾರ. ನನ್ನ ಅತ್ತೆ ನನ್ನ ಬಳಿ ಈ ರೀತಿ ಮಾಡುವಂತೆ ಎಂದಿಗೂ ಹೇಳಿರಲಿಲ್ಲ. ಅವರು ನನ್ನನ್ನು ಮಗಳಿಗಿಂತಲೂ ಹೆಚ್ಚು ಪ್ರೀತಿಯಿಂದ ಸಾಕಿದ್ದಾರೆ.ಅವರ ಮುಖದಲ್ಲಿ ಸಂತೋಷವನ್ನು ನೋಡುವುದೇ ನನ್ನ ದೊಡ್ಡ ಆಸೆ. ನನ್ನ ಆತ್ಮತೃಪ್ತಿಗಾಗಿ ಮತ್ತು ಅವರ ಕನಸನ್ನು ನನಸು ಮಾಡಲು ನಾನು ಈ ಕಠಿಣ ಯಾತ್ರೆಯನ್ನು ಮಾಡುತ್ತಿದ್ದೇನೆ"ಎಂದು ಹರಿಯಾಣದ ಜನಪ್ರಿಯ ಗಾಯಕಿ ಕಾಜಲ್ ಚೌಧರಿ ಭಾವುಕರಾಗಿ ಹೇಳಿದ್ದಾರೆ.

90 ವರ್ಷದ ಅತ್ತೆಯ ಮೇಲಿನ ಕಾಳಜಿ,ಕುಟುಂಬದ ಮೌಲ್ಯಗಳು ಹಾಗೂ ನಿಸ್ವಾರ್ಥ ಪ್ರೀತಿಯ ಮಹತ್ವವನ್ನು ಸಾರುತ್ತಿವೆ.ಇಂದಿನ ಕಾಲದಲ್ಲಿ ಅಪರೂಪವಾಗಿ ಕಾಣುವ ಇಂತಹ ಸೇವಾ ಭಾವಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು,ಅವರನ್ನು"ಕಲಿಯುಗದ ಶ್ರವಣ ಕುಮಾರ" ಎಂದು ಹೊಗಳುತ್ತಿದ್ದಾರೆ.

Sponsored

ಅತ್ತೆ ಸೊಸೆಯ ಸಂಬಂಧಕ್ಕೆ ಹೊಸ ಅರ್ಥ ನೀಡಿರುವ ಕಾಜಲ್ ಚೌಧರಿ ಅವರ ಈ ಸ್ಪೂರ್ತಿದಾಯಕ ಕಥೆ ಈಗ ದೇಶಾದ್ಯಂತ ಚರ್ಚೆಯ ವಿಷಯವಾಗಿದ್ದು, ಸಾವಿರಾರು ಜನರಿಗೆ ಪ್ರೇರಣೆಯಾಗುತ್ತಿದೆ.

ಹರಿಯಾಣದ ಬಂಚಾರಿ ಗ್ರಾಮದಿಂದ ಆರಂಭವಾದ ಕಾಜಲ್ ಚೌಧರಿ ಅವರ ವಿಭಕ್ತಿ ಪಯಣವು ಈಗ ಉತ್ತರಪ್ರದೇಶ ಮತ್ತು ರಾಜಸ್ಥಾನದ ಗಡಿಯನ್ನು ದಾಟಿ ಸಾಗುತ್ತಿದೆ. ತಮ್ಮ 90 ವರ್ಷದ ಅತ್ತೆಯನ್ನು ತಲೆಯ ಮೇಲೆ ಹೊತ್ತು 256 ಕಿಲೋಮೀಟರ್ ದೂರದ ಪವಿತ್ರ ಬ್ರಜ್ ಪರಿಕ್ರಮ ಯಾತ್ರೆಯನ್ನು ಕೈಗೊಂಡಿರುವ ಕಾಜಲ್ ಅವರ ಈ ಅಪರೂಪದ ಭಕ್ತಿ ಮತ್ತು ತ್ಯಾಗವನ್ನು ಕಂಡು ಸ್ಥಳೀಯರು ಹಾಗೂ ಭಕ್ತರು ಆಶ್ಚರ್ಯ ಚಕಿತರಾಗಿದ್ದಾರೆ.

ದಾರಿ ಉದ್ದಕ್ಕೂ ಗ್ರಾಮೀಣ ಜನರು ಕಾಜಲ್ ಅವರಿಗೆ ಹೂಮಾಲೆ ಹಾಕಿ, ಆರತಿ ಬೆಳಗಿ, ಅವರ ಪಾದ ಮುಟ್ಟಿ, ಆಶೀರ್ವಾದ ಪಡೆಯುತ್ತಿರುವ ದೃಶ್ಯಗಳು ಮನ ಮುಟ್ಟುವಂತಿವೆ. ಅತ್ತೆಯ ಮೇಲಿನ ಪ್ರೀತಿ ಮತ್ತು ಸೇವಾ ಭಾವದ ಈ ಅಪರೂಪದ ನಡುವಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಪಾತ್ರವಾಗಿದೆ.

ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುವ ಬ್ರಜ್ ಪರಿಕ್ರಮ ಯಾತ್ರೆಯು ಶ್ರೀ ಕೃಷ್ಣನ ಲೀಲೆಗಳಿಗೆ ಸಂಬಂಧಿಸಿದ ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಪ್ರಮುಖ ದೇವಸ್ಥಾನಗಳು, ಕಾಡುಗಳು ಹಾಗೂ ಪವಿತ್ರ ಸರೋವರಗಳ ಮೂಲಕ ಸಾಗುತ್ತದೆ. ಸಾಮಾನ್ಯವಾಗಿ ಭಕ್ತರು ಈ 260 ಕಿಲೋ ಮೀಟರ್ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಲು ಸುಮಾರು 40 ದಿನಗಳ ಕಾಲ ತೆಗೆದುಕೊಳ್ಳುತ್ತಾರೆ.

Sponsored

ಈ ಸಮಯದಲ್ಲಿ ನಡೆಯುತ್ತಿರುವ ಹಿಂದೂ ಕ್ಯಾಲೆಂಡರ್ ನ ಪವಿತ್ರ 'ಅಧಿಕ ಮಾಸ' ದಲ್ಲಿ ಈ ಯಾತ್ರೆಯನ್ನು ಕೈಗೊಳ್ಳುವುದರಿಂದ ವಿಶೇಷ ಪುಣ್ಯ ಫಲ ಸಿಗುತ್ತದೆ ಎಂಬ ನಂಬಿಕೆಯು ಇದೆ. ಕಾಜಲ್ ಚೌಧರಿ ಅವರ ಈ ಸೇವಾ ಭಾವ, ಭಕ್ತಿ ಮತ್ತು ತ್ಯಾಗದ ಪಯಣ ಈಗ ದೇಶಾದ್ಯಂತ ಚರ್ಚೆಯ ವಿಷಯವಾಗಿದ್ದು, ಅನೇಕ ಜನರಿಗೆ ಪ್ರೇರಣೆಯಾಗುತ್ತಿದೆ.

Also Read:

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಖಡಕ್ ಮಾತು: ಅಧಿಕಾರ ಬೇಕಾದವರು ಡಿಕೆಶಿ ಜೊತೆ, ಪಕ್ಷ ಕಟ್ಟುವವರು ನನ್ನ ಜೊತೆ ಬನ್ನಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online