Balagavi News:
ಬೋಸ್ಟನ್, ಅಮೇರಿಕ: H-1B ವೀಸಾ ಅರ್ಜಿಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವಿಧಿಸಿದ್ದ 1ಲ್ಲಕ್ಷ ಡಾಲರ್ (ಸುಮಾರು ₹85 ಲಕ್ಷ) ಹೆಚ್ಚುವರಿ ಶುಲ್ಕವನ್ನು ಫೆಡರಲ್ ನ್ಯಾಯಾಧೀಶರು ರದ್ದುಗೂಳಿಸಿದ್ದಾರೆ. ಈ ತೀರ್ಪು ಭಾರತೀಯ ಐಟಿ ವೃತ್ತಿಪರರು, ವಿದೇಶಿ ಉದ್ಯೋಗಿಗಳು ಹಾಗೂ ಅಮೇರಿಕಾದ ಕಂಪನಿಗಳಿಗೆ ಮಹತ್ವವಾದ ನಿರಾಳತೆ ತಂದಿದೆ.
ಬೋಸ್ಟನ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಲಿಯೋ ಸೊರೊಕಿನ್ ಸೋಮವಾರ ನೀಡಿದ ತೀರ್ಪಿನಲ್ಲಿ, ಕಾಂಗ್ರೆಸ್ ನ ಅನುಮೋದನೆ ಇಲ್ಲದೆ ಇಂತಹ ಭಾರಿ ಶುಲ್ಕ ವಿಧಿಸುವುದು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಿದರು. •ಕಾರ್ಯನಿರ್ವಾಹಕ ಚಾಪೆಯು ತನ್ನ ಅಧಿಕಾರವನ್ನು ಮೀರಿದ್ದು. ಫೆಡರಲ್ ಏಜೆನ್ಸಿಗಳು ನಿಯಮಗಳನ್ನು ರೂಪಿಸುವ ಮತ್ತು ಜಾರಿಗೊಳಿಸುವ ನಿಧಾನವನ್ನು ನಿಯಂತ್ರಿಸುವ ಆಡಳಿತಾತ್ಮಕ ಕಾರ್ಯವಿಧಾನ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯವು, ಕಾಂಗ್ರೆಸ್ ನ ಸ್ಪಷ್ಟ ಒಪ್ಪಿಗೆ ಇಲ್ಲದೆ H-1B ಅರ್ಜಿಗಳ ಮೇಲೆ ಹೆಚ್ಚುವರಿ ತೆರಿಗೆ ಅಥವಾ ಶುಲ್ಕ ಹೇಗೆ ವಿಧಿಸಲಾಗುತ್ತದೆ ಎಂದು ಪ್ರಶ್ನಿಸಿದೆ. ಈ ತಿರುಪುರ್ ಟ್ರಂಪ್ ಆಡಳಿತದ ವೀಸಾ ನೀತಿಗೆ ದೊಡ್ಡ ಹಿನ್ನಡೆಯಾಗಿ ಪರಿಗಣಿಸಲಾಗಿದೆ.
H-1B ವಿಜಯ ಎಂದರೇನು?
H-1B ವಿಜಯ ಎನ್ನುವುದು ಅಮೆರಿಕದ ಕಂಪನಿಗಳಿಗೆ ವಿದೇಶಿ ನುರಿತ ವೃತ್ತಿಪರರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಅವಕಾಶ ನೀಡುವ ವಿಶೇಷ ವೀಸಾ ಕಾರ್ಯಕ್ರಮವಾಗಿದೆ. ವಿಜ್ಞಾನ, ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ (IT), ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣ ಮತ್ತು ವಿಶೇಷ ಕೌಶಲ್ಯ ಅಗತ್ಯವಿರುವ ಉದ್ಯೋಗಗಳಿಗೆ ಈ ವೀಸಾ ಅನ್ವಯಿಸಿತ್ತದೆ.
ಭಾರತೀಯರಿಗೆ ಹೆಚ್ಚು ಲಾಭ:
H-1B ವೀಸಾಗಳಲ್ಲಿ ಅನುಮೂದನೆಯಾಗುವ ಅರ್ಜಿಗಳಲ್ಲಿ ಸುಮಾರು 75 ಶೇಖಡಾಕ್ಕಿಂತ ಹೆಚ್ಚು ಭಾರತಿಯ ವೃತ್ತಿಪರರಿಗೆ ಸಿಗುತ್ತವೆ. ಹೀಗಾಗಿ, ಶುಲ್ಕ ರದ್ದಾದ ನಿರ್ಧಾರವು ಭಾರತೀಯ ಐಟಿ ಉದ್ಯೋಗಿಗಳು ಮತ್ತು ಅಮೆರಿಕದಲ್ಲಿ ಉದ್ಯೋಗ ಅವಕಾಶಗಳನ್ನು ಹುಡುಕುತ್ತಿರುವ ಸಾವಿರಾರು ವೃತ್ತಿಪರರಿಗೆ ಅನುಕೂಲಕರವಾಗಲಿದೆ.
ಹೆಚ್ಚಿನ ಶುಲ್ಕ ವಿಧಿಸುವ ಮೊದಲುಲೇ ವೈದ್ಯರು, ಶಿಕ್ಷಕರು ಹಾಗೂ ತಂತ್ರಜ್ಞಾನ ಕ್ಷೇತ್ರದಲ ನುರಿತಿ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದ್ದ ಅಮೆರಿಕದ ಹಲವು ರಾಜ್ಯಗಳು, ಈ ಹೆಚ್ಚುವರೇ ವೆಚ್ಚದಿಂದ ನೇಮಕಾತಿ ಇನ್ನಷ್ಟು ಕಷ್ಟಕರವಾಗುತ್ತದೆ ಎಂದು ವಾಗಿಸಿದ್ದವು. ಇದೀಗ ನ್ಯಾಯಾಲಯದ ತೀರ್ಪಿನಿಂದ ಆ ಆತಂಕಗಳಿಗೆ ತಾತ್ಕಾಲಿಕ ಪರಿಹಾರ ದೊರೆತಿದೆ.
ಅಮೆರಿಕ ಮತ್ತು ವಿದೇಶಗಳಲ್ಲಿ ಉದ್ಯೋಗದಾತರು, ವಿದ್ಯಾರ್ಥಿಗಳು ಹಾಗೂ ವಿದೇಶಿ ಕಾರ್ಮಿಕರಲ್ಲಿ ವಾತಾವರಣ ಸೃಷ್ಟಿಸಿದ್ದ ಈ ಶುಲ್ಕ ಹೆಚ್ಚಳದ ವಿರುದ್ಧ ಬೋಸ್ಟನ್ ಸೇರಿದಂತೆ ಹಲವಡೆ ಕಾನೂನು ಹೋರಾಟ ಆರಂಭವಾಗಿತ್ತು. 2026 ರ ಆರ್ಥಿಕ ವರ್ಷದಲ್ಲಿ ಅಮೆರಿಕದಲ್ಲಿ ಕೆಲಸ ಮಾಡಲು H-1B ವಿಧಾನ ಪಡೆಯಲು ಮುಂದಾದ 2ಲಕ್ಷಕ್ಕೂ ಹೆಚ್ಚು ಅರ್ಜಿದಾರರು ತಮ್ಮ ಅರ್ಜಿಗಳ ತ್ವರಿತ ಪ್ರಕ್ರಿಯೆಗಾಗಿ 1ಲಕ್ಷ ಡಾಲರ್ ಪಾವತಿಸಿದ್ದಾರೆ ಎಂದು ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ (DHS) ಕಾರ್ಯದರ್ಶಿ ಮಾರ್ಕ್ ವೆನ್ ಮುಲ್ಲಿನ್ ಸೆನೆಟ್ ಸಮಿತಿಗೆ ಮಾಹಿತಿ ನೀಡಿದ್ದರು. ಈ ಹೇಳಿಕೆ ಹೊರಬಿದ್ದ ಕೆಲವೇ ದಿನಗಳಲ್ಲಿ ನ್ಯಾಯಾಲಯದ ಮಹತ್ವದ ಆದೇಶ ಹೊರಬಿದ್ದಿದೆ.
ಶಿಕ್ಷಣ, ಆರೋಗ್ಯ ಕ್ವೇತ್ರಗಳಿಗೆ ಬಿಗ್ ರಿಲೀಫ್:
ತೀರ್ಪುನ್ನು ಸ್ವಾಗತಿಸಿರುವ ಮ್ಯಾಸಚೂಸೆಟ್ಸ್ ಅಟಾರ್ನಿ ಜನರಲ್ ಆಂಡ್ರಿಯಾ ಜಾಯ್ ಕ್ಯಾಂಪ್ ಬೆಲ್, "ಇಂದಿನ ಗೆಲುವು ಶಿಕ್ಷಣ, ಆರೋಗ್ಯ ರಕ್ಷಣೆ ಹಾಗೂ ವೈದ್ಯಕೀಯ ಸಂಶೋಧನೆ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಎದುರಾಗಿರುವ ತೀವ್ರ ಕಾರ್ಮಿಕ ಕೊರತೆಯನ್ನು ನಿವಾರಿಸಲು ನೆರವಾಗಲಿದೆ. ಜೊತೆಗೆ H-1B ವೀಸಾ ಕಾರ್ಯಕ್ರಮದ ಸಮಗ್ರತೆಯನ್ನು ಕಾಪಾಡುತ್ತದೆ" ಎಂದು ಹೇಳಿದ್ದಾರೆ.
ಮ್ಯಾಸಚೂಸೆಟ್ಸ್ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ವೈದ್ಯಕೀಯ ಸಂಸ್ಥೆಗಳು ನುರಿತ ವಿದೇಶಿ ವೃತ್ತಿಪರರ ನೇಮಕಾತಿಗೆ ಈ ತೀರ್ಪು ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ. ವಿಶ್ವ ದರ್ಜೆಯ ಅಧ್ಯಾಪಕರು, ಸಂಶೋಧಕರು ಹಾಗೂ ಆರೋಗ್ಯ ಕ್ಷೇತ್ರದ ತಜ್ಞರನ್ನು ನೇಮಿಸಿಕೊಳ್ಳಲು ಈಗ ಅವಕಾಶ ಮತ್ತಷ್ಟು ಸುಲಭವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಭಾಬಿ ಮುಕ್ಕಮಲಾ ಈ ತೀರ್ಪನ್ನು "ರೋಗಿಗಳ ಗೆಲುವು" ಎಂದು ಬಣ್ಣಿಸಿದ್ದಾರೆ.
ಟ್ರಂಪ್ ಆಡಳಿತದ ಪ್ರತಿಕ್ರಿಯೆ:
ಆದರೆ, ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅಮೆರಿಕದ ಗೃಹ ಭದ್ರತಾ ಇಲಾಖೆ (DH S) ಸ್ಪಷ್ಟಪಡಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ DHS ಕಾರ್ಯದರ್ಶಿ ಮಾರ್ಕ್ ವೇನ್ ಅವರ ನೇತೃತ್ವದಲ್ಲಿ ಅಮೆರಿಕದ ವಲಸೆ ವ್ಯವಸ್ಥೆಯನ್ನು ಅಮೆರಿಕನ್ ನಾಗರಿಕರು ಮತ್ತು ಕಾರ್ಮಿಕರ ಹಿತಾಸಕ್ತಿಗೆ ಅನುಗುಣವಾಗಿ ಸುಧಾರಿಸಲಾಗುತ್ತಿದೆ ಎಂದು ಇಲಾಖೆ ಹೇಳಿದೆ.
" ಅಮೆರಿಕನ್ ಉದ್ಯೋಗಗಳನ್ನು ಕಸಿದುಕೊಳ್ಳುವ, ಅಪರಾಧ ಚಟುವಟಿಕೆಗಳಲ್ಲಿ ತೊಡಗುವ ಹಾಗೂ ಕಲ್ಯಾಣ ಯೋಜನೆಗಳಿಗೆ ಹೆಚ್ಚುವರಿ ಹೊರೆ ಉಂಟುಮಾಡುವ ವಿದೇಶಿಯರ ಸಂಖ್ಯೆಯನ್ನು ನಿಯಂತ್ರಿಸಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆ" ಎಂದು DHS ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಶ್ವೇತಭವನದ ವಕ್ತಾರ ಟೇಲರ್ ರೋಜರ್ಸ್ ಕೊಡ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಭಾರತೀಯ ಐಟಿ ವೃತ್ತಿ ಪರರಿಗೆ ಲಾಭ:
H-1B ವೀಸಾಗಳಲ್ಲಿ ಅನುಮೋದನೆ ಯಾಗುವ ಅರ್ಜಿಗಳಲ್ಲಿ ಸುಮಾರು 75% ಭಾರತೀಯ ವೃತ್ತಿಪರರ ದ್ದಾಗಿರುವುದರಿಂದ, ಈ ತೀರ್ಪು ಭಾರತದ ಐಟಿ ಉದ್ಯೋಗಿಗಳು ಮತ್ತು ಅಮೆರಿಕದಲ್ಲಿ ಉದ್ಯೋಗವಕಾಶಗಳನ್ನು ಎದುರು ನೋಡುತ್ತಿರುವ ಸಾವಿರಾರು ಯುವಕರಿಗೆ ಮಹತ್ವದ ನೀರಾಳತೆಯಾಗಿ ಪರಿಣಮಿಸಿದೆ.
Also Read:
ಮಹಿಳೆಯರ ಬಸ್ ಪ್ರಯಾಣ ಇನ್ನಷ್ಟು ಸುಲಭ : ಸ್ಮಾರ್ಟ್ ಕಾರ್ಡ್ ವಿತರಣೆ, 5000 ಬಸ್ ಗಳ ಖರೀದಿ