belagavi news :
ಉಕ್ರೇನ್ ಚೊರ್ನೊಮೊರ್ಸ್ಕ್ ಬಂದರಿನಲ್ಲಿ ಸಿಲುಕಿದ 13 ಭಾರತೀಯ ನಾವಿಕರು
ರಷ್ಯಾ- ಉಕ್ರೇನ್ ಯುದ್ಧದ ನಡುವೆಯೇ ಉಕ್ರೇನ್ ಚೊರ್ನೊಮೊರ್ಸ್ಕ್ ಬಂದರಿನ ಬಳಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ತೀವ್ರ ಗೊಂಡಿದ್ದು, ಅಲ್ಲಿನ ಸರಕು ಸಾಗಣಿ ಅಡಗಿನಲ್ಲಿ ಸಿಲುಕಿರುವ 15 ಸಿಬ್ಬಂದಿಯಲ್ಲಿ 13 ಭಾರತೀಯ ನಾವಿಕರು ಇದ್ದಾರೆ ಎಂದು ಫಾರ್ವರ್ಡ್ ಸಿಮನ್ಸ್ ಯೂನಿಯನ್ ಆಫ್ ಇಂಡಿಯಾ ತಿಳಿಸಿದೆ.
ಕಪ್ಪು ಸಮುದ್ರ ಪ್ರದೇಶದಲ್ಲಿ ರಷ್ಯಾ ಮತ್ತು ಕ್ರೇನ್ ನಡುವಿನ ಸಂಘರ್ಷ ಮತ್ತಷ್ಟು ಉಲ್ಬನ ಗೊಂಡಿರುವ ಹಿನ್ನೆಲೆಯಲ್ಲಿ, ಬಂದರಿನಲ್ಲಿ ನಿಂತಿರುವ ಎಂ.ವಿ. ಅಮೀರ್ 1 ಸರಕು ಸಾಗಾಣಿ ಹಡಗಿನ ಸಿಬ್ಬಂದಿ ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಯಾವ ಕ್ಷಣದಲ್ಲಾದರೂ ಮತ್ತಷ್ಟು ಡ್ರೋನ್ ಅಥವಾ ಕ್ಷಿಪಣಿ ದಾಳಿ ಸಂಭವಿಸಬಹುದು ಎಂದು ಆತಂಕದ ನಡುವೆ ಅವರು ಹಡಗಿನಲ್ಲಿ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಡ್ರೋನ್ ಮತ್ತು ಕ್ಷಿಪಣಿ ದಾಳಿಯಿಂದ ಹೆಚ್ಚಿದ ಆತಂಕ
ಚೊರ್ನೊಮಾರ್ಸ್ಕ್ ಬಂದರು ಕಪ್ಪು ಸಮುದ್ರದ ಪ್ರಮುಖ ವಾಣಿಜ್ಯ ಬಂದರುಗಳಲ್ಲಿ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾರಿಗಳು ನಿರಂತರವಾಗಿ ನಡೆಯುತ್ತಿವೆ. ಇದರ ಪರಿಣಾಮ ಸಮುದ್ರ ಮಾರ್ಗದ ಸುರಕ್ಷತೆ ಗಂಭೀರವಾಗಿ ಹದಗೆಟ್ಟಿದ್ದು, ವಾಣಿಜ್ಯ ಹಡಗುಗಳ ಸಂಚಾರಕ್ಕೂ ಬಾರಿ ಅಡ್ಡಿಯಾಗಿದೆ.
ಎಂ ವಿ ಅಮೀರ್ 1 ಹಡಗು ಇನ್ನು ಬಂದರಿನಲ್ಲಿ ನಿಂತಿದ್ದು, ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಸಾಧ್ಯತೆಗಳು ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ. ಸಂಘರ್ಷ ತೀವ್ರವಾಗುತ್ತಿರುವುದರಿಂದ ರಕ್ಷಣಾ ಕಾರ್ಯಚರಣೆ ನಡೆಸು ವುದೂ ಸವಾಲಾಗಿ ಪರಿಣಮಿಸಿದೆ
ಭಾರತೀಯ ನಾವಿಕರ ಸುರಕ್ಷತೆ ಬಗ್ಗೆ ಹೆಚ್ಚಿನ ಕಳವಳ
ಹಡಗಿನಲ್ಲಿ ಸಿಲುಕಿರುವ 13 ಭಾರತೀಯ ನಾವಿಕರ ಸುರಕ್ಷತೆ ಕುರಿತು ಕುಟುಂಬಸ್ಥರು ಮತ್ತು ನಾವಿಕರ ಸಂಘಟನೆಗಳು ತೀವ್ರ ಕಳಬಳ ವ್ಯಕ್ತಪಡಿಸಿವೆ. ಯುದ್ಧ ಪರಿಸ್ಥಿತಿಯಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಲು ತುರ್ತು ರಾಜ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಕಪ್ಪು ಸಮುದ್ರ ಪ್ರದೇಶದಲ್ಲಿ ಮುಂದುವರೆದಿರುವ ಯುದ್ಧದ ಪರಿಣಾಮ ಜಾಗತಿಕ ನೌಕಯಾನ, ಸರಕು ಸಾಗನಿ ಹಾಗೂ ಸಮುದ್ರ ಭದ್ರತೆ ಮತ್ತೊಮ್ಮೆ ಗಂಭೀರ ಸವಾಲಿನ ಎದುರಾಗಿದೆ. ಸಂಸ್ಥೆಯು ಭಾರತ ಸರ್ಕಾರ, ಹಡಗಿನ ಮಾಲಿಕ ಸಂಸ್ಥೆ, ಹಡಗು ನಂದಾಯಿತ ಧ್ವಜದ ದೇಶ ಹಾಗೂ ಸಂಬಂಧಿತ ಅಂತರಾಷ್ಟ್ರೀಯ ಅಧಿಕಾರಿಗಳಿಗೆ ತುರ್ತು ಮನವಿ ಸಲ್ಲಿಸಿದ್ದು, ಹಡಗಿನಹಳ್ಳಿ ಸಿಲುಕಿರುವ 13 ಭಾರತೀಯ ನಾವಿಕರು ಸೇರಿದಂತೆ ಎಲ್ಲಾ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿ, ಅವರನ್ನು ಶೀಘ್ರದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಹಡಗಿನಿಂದಲೇ ಚಿತ್ರೀಕರಿಸಿದ ವಿಡಿಯೋ ವೈರಲ್
ನಾವಿಕ ಸಂಘಟನೆಯು ಹಡಗಿನಲ್ಲಿ ಚಿತ್ರಿಕರಿಸಲಾಗಿದೆ ಎಂದು ಹೇಳಲಾದ ವಿಡಿಯೋ ಒಂದನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ಹಡಗಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿರುವ ದೃಶ್ಯಗಳು ಕಾಣಿಸಿಕೊಂಡಿದ್ದು, ಚೆರ್ನೊಮಾರ್ಸ್ಕ್ ಬಂದರಿನ ಸುತ್ತಲಿನ ಭದ್ರತಾ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದನ್ನು ಬಿಂಬಿಸುತ್ತದೆ.
ಸಂಘರ್ಷದ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಪ್ಪು ಸಮುದ್ರದ ಬಂದರು ಪ್ರದೇಶದಲ್ಲಿ ನೌಕಯಾನ ಸುರಕ್ಷತೆ ಮತ್ತೊಮ್ಮೆ ಪ್ರಶ್ನಾರ ವಾಗಿದ್ದು, ಹಡಗಿನಲ್ಲಿ ಸಿಲುಕಿರುವ ಭಾರತೀಯ ನಾವಿಕರ ಸುರಕ್ಷತೆ ಕುರಿತು ಆತಂಕವು ಹೆಚ್ಚಾಗಿದೆ. ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿರುವ ಸಂಬಂಧಿತ ಅಧಿಕಾರಿಗಳು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.