Belagavi News :
NEET ವಿವಾದದ ನಡುವೆ ಕೇಂದ್ರ ಸರ್ಕಾರದ CJP 3ನೇ ಸುತ್ತಿನ ಸಭೆ: ದೆಹಲಿಯಲ್ಲಿ ಮಹತ್ವದ ಮಾತುಕತೆ
ನವದೆಹಲಿ: ದೆಹಲಿಯ ಕಾನ್ ಸ್ಟಿಟ್ಯೂಷನ್ ಕ್ಲಬ್ ನಲ್ಲಿ ಕೇಂದ್ರ ಸರ್ಕಾರ ಮತ್ತು "ಕಾಕ್ರೋಚ್ ಜನತಾ ಪಾರ್ಟಿ" (CJP) ನಿಯೋಗದ ನಡುವೆ 3ನೇ ಸುತ್ತಿನ ಮಾತುಕತೆ ನಡೆಯುತ್ತಿದೆ.
NEET ಪೇಪರ್ ಲೀಕ್ ವಿವಾದ, ಪರೀಕ್ಷಾ ಅಕ್ರಮಗಳು ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳ ಕುರಿತು ಸರ್ಕಾರದ ಪ್ರತಿನಿಧಿಗಳು ಮತ್ತು ಪ್ರತಿಭಟನಾನಿರತ CJP ನಾಯಕರ ನಡುವೆ ಈ ಮಹತ್ವದ ಸಭೆ ಆಯೋಜಿಸಲಾಗಿದೆ.
ಕೇಂದ್ರ ಸರ್ಕಾರದ ಪರವಾಗಿ ಸಚಿವರಾದ "ಜೆ.ಪಿ. ನಡ್ಡಾ " ಮತ್ತು " ಜಿತೇಂದ್ರ ಸಿಂಗ್ " ಸಭೆಯಲ್ಲಿ ಭಾಗವಹಿಸಿದ್ದು, CJP ಪರವಾಗಿಲ್ಲ ರಾಷ್ಟ್ರೀಯ ವಕ್ತಾರರಾದ " ಸೌರವ್ ದಾಸ್ " ಮತ್ತು " ಅಶುತೋಷ ರಾಂಕಾ" ನಿಯೋಗವನ್ನು ಮುನ್ನಡೆಸುತ್ತಿದ್ದಾರೆ.
ಈ ಹಿಂದೆ NEET ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಅವರ ರಾಜೀನಾಮೆಯ ಬಳಿಕ CJP ತನ್ನ ಪ್ರತಿಭಟನೆಯನ್ನು ಮುಂದುವರಿಸಲಿದೆಯೇ ಅಥವಾ ಹಿಂಪಡೆಯಲಿದೆಯೇ ಎಂಬುದು ಈ ಸಭೆಯ ಫಲಿತಾಂಶದ ಬಳಿಕ ಸ್ಪಷ್ಟವಾಗುವ ಸಾಧ್ಯತೆಯಿದೆ.
ವಿದ್ಯಾರ್ಥಿಗಳ ಹಿತಾಸಕ್ತಿ, ಪರೀಕ್ಷಾ ವ್ಯವಸ್ಥೆಯಲ್ಲಿನ ಸುಧಾರಣೆಗಳು ಮತ್ತು CJP ಮುಂದಿಟ್ಟಿರುವ ಬೇಡಿಕೆಗಳ ಕುರಿತು ನಡೆಯುತ್ತಿರುವ ಈ ಚರ್ಚೆಯತ್ತ ರಾಜಕೀಯ ವಲಯದ ಗಮನ ನೆಟ್ಟಿದೆ.