Belagavi news:
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಇಂದು ಮೆಟ್ರೋದಲ್ಲಿ ಪ್ರಯಾಣಿಕರ ಜೊತೆ ಸಂಚರಿಸಿದ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಾಮಾನ್ಯ ಪ್ರಯಾಣಿಕರಂತೆ ಮೆಟ್ರೋ ಪ್ರಯಾಣ ಮಾಡಿದ ಸಿಎಂ, ಜನರೊಂದಿಗೆ ಆತ್ಮೀಯವಾಗಿ ಮಾತನಾಡಿ ಫೋಟೋಗೆ ಪೋಸ್ ನೀಡಿರುವುದು ಗಮನ ಸೆಳೆದಿದೆ.
ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಆರಂಭವಾದ ಈ ಪ್ರಯಾಣದಲ್ಲಿ ಸಿಎಂಡಿಕೆ ಶಿವಕುಮಾರ್ ಜನಸಾಮಾನ್ಯರ ಜೊತೆ ಒಂದೇ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದು, ಅನೇಕ ಪ್ರಯಾಣಿಕರು ಆಶ್ಚರ್ಯ ಹಾಗೂ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕೆಲವರು ಸೆಲ್ಫಿ ತೆಗೆದುಕೊಂಡು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಸಾರ್ವಜನಿಕರಿಗೆ ಸಾರಿಗೆ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಿಎಂ ಮೆಟ್ರೋ ಪ್ರಯಾಣ ಮಾಡಿರುವುದು ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಜನಸಾಮಾನ್ಯರೊೊಂದಿಗೆ ನೇರ ಸಂಪರ್ಕ ಸಾಧಿಸುವ ಈ ನಡಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ಪ್ರಯಾಣದ ವೇಳೆ ಸಿಎಂ ಜೊತೆಗೆ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದ್ದು,"CM DKS in Metro" ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡುವ ಈ ರೀತಿಯ ನಡೆಗಳು ನಗರ ಸಂಚಾರದಲ್ಲಿ ಮೆಟ್ರೋ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಸಿಎಂ ಆದ ಬಳಿಕ ಮೊದಲ ಬಾರಿಗೆ ಕನಕಪುರಕ್ಕೆ ಭೇಟಿ :
ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬಳಿಕ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿರುವುದು ಡಿಕೆ ಶಿವಕುಮಾರ್ ಇಂದು ವಿಧಾನಸೌಧದಿಂದ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣ ಆರಂಭಿಸಿದರು. ಈ ಪ್ರಯಾಣದ ವೇಳೆ ಅವರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸಂಚರಿಸಿ ಗಮನ ಸೆಳೆದಿದ್ದಾರೆ.
ಮೆಟ್ರೋ ಪ್ರಯಾಣದ ವೇಳೆ ಬಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರು ಮೆಟ್ರೋ ರೈಲು ನಿಗಮ ಉನ್ನತಾಧಿಕಾರಿಗಳಿಂದ ನಗರದ ಮೆಟ್ರೋ ಜಾಲದ ವಿಸ್ತರಣೆ ಹಾಗೂ ಮುಂಬರುವ ಸಂಪರ್ಕ ಯೋಜನೆಗಳ ಕುರಿತು ವಿವರವಾದ ಮಾಹಿತಿಯನ್ನು ಪಡೆದುಕೊಂಡರು. ನಗರ ಸಾರಿಗೆ ಅಭಿವೃದ್ಧಿ ಹಾಗೂ ಹೊಸ ಮಾರ್ಗಗಳ ಯೋಜನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ಭೇಟಿ ರಾಜಕೀಯವಾಗಿ ಮಹತ್ವ ಪಡೆದಿದ್ದು, ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡುವ ಉದ್ದೇಶವು ಇದರ ಹಿಂದೆ ಇದೆ ಎಂದು ತಿಳಿದುಬಂದಿದೆ. ಮೆಟ್ರೋ ವ್ಯವಸ್ಥೆಯ ವಿಸ್ತರಣೆ ಮತ್ತು ಪ್ರಯಾಣಿಕರ ಅನುಕೂಲತೆಗಳ ಕುರಿತು ಸಿಎಂ ವಿಶೇಷ ಆಸಕ್ತಿ ತೋರಿಸಿದೆ.
ಕನಕಪುರದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುತ್ತಿರುವ ಸಿಎಂ, ಪ್ರಯಾಣದ ನಡುವೆ ಮೆಟ್ರೋ ಯೋಜನೆಗಳ ಪ್ರಗತಿ ಬಗ್ಗೆ ಮಾಹಿತಿಯನ್ನು ಪರಿಶೀಲಿಸಿದ್ದಾರೆ. ಅವರ ಈ ನಡಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಮೆಟ್ರೋದಲ್ಲಿ ಸಿಎಂಡಿಕೆ ಶಿವಕುಮಾರ್ ಗೆ ಭರ್ಜರಿ ಸ್ವಾಗತ: ಪ್ರಯಾಣಿಕರೊಂದಿಗೆ ಸೆಲ್ಫಿ , ಮಕ್ಕಳೊಂದಿಗೆ ಆತ್ಮೀಯ ಸಂವಾದ:
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಹ ಪ್ರಯಾಣಿಕರು ಹಾಗೂ ಸಾರ್ವಜನಿಕರು ಅಚ್ಚರಿ ಮತ್ತು ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಪ್ರಯಾಣಿಕರಂತೆ ಮೆಟ್ರೋದಲ್ಲಿ ಸಂಚರಿಸಿದ ಸಿಎಂ ಅವರನ್ನು ಕಂಡು ಅನೇಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಮೆಟ್ರೋ ರೈಲಿನಲ್ಲಿ ಪ್ರಯಾಣದ ವೇಳೆ ಡಿಕೆ ಶಿವಕುಮಾರ್ ಅವರು ಮಕ್ಕಳ ಹಾಗೂ ಕಾಲೇಜು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿ, ಹಸ್ತಾಲಾಘವ ಮಾಡಿ ಕುಶಲೋಪರಿ ವಿಚಾರಿಸಿದರು. ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಿದ ಈ ಕ್ಷಣಗಳು ಪ್ರಯಾಣಿಕರಲ್ಲಿ ವಿಶೇಷ ಅನುಭವವನ್ನು ನೀಡಿದೆ.
ಸಿಎಂ ಅವರು ಸಿಲ್ಕ್ ಇನ್ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣದವರೆಗೆ ಪ್ರಯಾಣಿಸುತ್ತಿದ್ದು, ಬಳಿಕ ಅಲ್ಲಿಂದ ರಸ್ತೆ ಮಾರ್ಗದ ಮೂಲಕ ತಮ್ಮ ಮುಂದಿನ ಕನಕಪುರ ಪ್ರವಾಸವನ್ನು ಮುಂದುವರಿಸಿದ್ದಾರೆ. ಈ ಪ್ರಯಾಣವು ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡುವ ಸಂದೇಶ ನೀಡಿದೆ. ಮೆಟ್ರೋ ಪ್ರಯಾಣದ ವೇಳೆ ಸಿಎಂ ನ ಈ ಆತ್ಮೀಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, "CM DKS IN METRO" ಎಂಬ ವಿಷಯ ಮತ್ತೆ ಚರ್ಚೆಗೆ ಬಂದಿದೆ.
Also Read:
ಗಂಗಾವತಿಯಲ್ಲಿ ಭೀಕರ ಘಟನೆ: ಮನೆಯವರು ಮೇಲೆಯೇ ಚಾಕುದಾಡಿ ಮಾಡಿದ ಮಗ, ಇಬ್ಬರು ಮೃತ್ಯ