Belagavi News:
ಇಂದಿನಿಂದ ಆರಂಭವಾಗಿರುವ ಸಂಸತ್ ನ ಮುಂಗಾರು ಅಧಿವೇಶನದ ಮೊದಲ ದಿನವೇ ಕೇಂದ್ರ ಸರ್ಕಾರ ಮಹತ್ವದ ರಾಷ್ಟ್ರೀಯ ಗೌರವಕ್ಕೆ ಅಮಾನತುಗಳ ತಡೆಗಟ್ಟುವಿಕೆ ಮಸೂದೆ 2026 ಯನ್ನು ರಾಜ್ಯಸಭೆಯಲ್ಲಿ ಮಂಡಿಸಲು ಸಜ್ಜಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಈ ಮಸೂದೆಯನ್ನು ಸದನದಲ್ಲಿ ಮಂಡಿಸಲಿದ್ದಾರೆ.
ಪ್ರಸ್ತಾವಿತ ಮಸೂದೆಯ ಪ್ರಕಾರ, ರಾಷ್ಟ್ರಗೀತೆಯಾಗಿ ಪರಿಗಣಿಸಲಾದ "ವಂದೇ ಮಾತರಂ " ಗೆ ಅಡ್ಡಿ ಪಡಿಸುವುದು, ಉದ್ದೇಶಪೂರ್ವಕವಾಗಿ ಅವಮಾನಿಸುವುದು ಅಥವಾ ಗೌರವ ತೋರುವುದು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ. ಅಪರಾಧ ಸಭೀತಾದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಇತರೆ ಕಾನೂನು ಕ್ರಮ ಗಳಿಗೆ ಅವಕಾಶ ಇರಲಿದೆ.
ಈ ಮಸೂದೆ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯ್ದೆ - 1971 ಕ್ಕೆ ತಿದ್ದುಪಡಿ ತರಲಿದ್ದು, ರಾಷ್ಟ್ರಧ್ವಜ , ಸಂವಿಧಾನ, ರಾಷ್ಟ್ರಗೀತೆ ಸೇರಿದಂತೆ ದೇಶದ ರಾಷ್ಟ್ರೀಯ ಚಿಹ್ನೆಗಳಿಗೆ ಈಗಿರುವ ಕಾನೂನು ರಕ್ಷಣೆಯ ವ್ಯಾಪ್ತಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.
ಕೇಂದ್ರ ಸರ್ಕಾರದ ಪ್ರಕರ, ಈ ತಿದ್ದುಪಡಿಯ ಮೂಲಕ 'ವಂದೇ ಮಾತರಂ' ಗೆ ರಾಷ್ಟ್ರಗೀತೆ 'ಜನ ಗಣ ಮನ' ಗೆ ಇರುವಂತೆ ಶಾಸನಬದ್ಧ ರಕ್ಷಣೆಯನ್ನು ನೀಡುವ ಗುರಿ ಹೊಂದಲಾಗಿದೆ. ಮಸೂದೆ ರಾಜ್ಯಸಭೆಯ ಕಾರ್ಯಸೂಚಿಯಲ್ಲಿ ಈಗಾಗಲೇ ಪಟ್ಟಿ ಮಾಡಲಾಗಿದ್ದು, ಸಂಸತ್ ಅಧಿವೇಶನದ ಮೊದಲ ದಿನವೇ ಇದನ್ನು ಮಂಡಿಸುವ ಸಾಧ್ಯತೆ ಇದೆ.
ಈ ಮಸೂದೆ ಮಂಡನೆ ಆಗುತ್ತಿದ್ದಂತೆಯೇ ಸಂಸತ್ ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುವ ನೀರಿಕ್ಷೆ ಇದ್ದು, ದೇಶಾದ್ಯಂತ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲೂ ಚರ್ಚೆ ಹುಟ್ಟು ಹಾಕುವ ಸಾಧ್ಯತೆ ಇದೆ.
'ವಂದೇ ಮಾತರಂ' ಗೆ ಅಮಾನತು ಮಾಡಿದರೆ ಮೂರು ವರ್ಷ ಜೈಲು ? ಕೇಂದ್ರದ ಹೊಸ ಮಸೂದೆಯಲ್ಲಿ ಏನಿದೆ ? :
ರಾಷ್ಟ್ರೀಯ ಗೀತೆಯಾಗಿ ಅಂಗೀಕರಿಸಿರುವ ಒಂದೇ ಮಾತರಂ ಗೆ ಅವಮಾನ ಮಾಡಿದರೆ ಅಥವಾ ಗೀತೆ ಹಾಡುವ ವೇಳೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದರೆ ಅದನ್ನು ಶಿಕ್ಶಾರ್ಹ ಅಪರಾಧವೆಂದು ಪರಿಗಣಿಸುವ ಮಹತ್ವದ ಮಸೂದೆಯನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಂಡಿಸಿದೆ.
ಪ್ರಸ್ತಾವಿತ ರಾಷ್ಟ್ರೀಯ ಗೌರವಕ್ಕೆ ಅವಮಾನಗಳು ತಡೆಗಟ್ಟುವಿಕೆ ಮಸೂದೆ - 2026ರ ಪ್ರಕಾರ, ರಾಷ್ಟ್ರೀಯ ಗೀತೆಯನ್ನು ಹಾಡುವಾಗ ಅಡ್ಡಿಪಡಿಸುವುದು ಅಥವಾ ಯಾವುದೇ ರೀತಿಯ ಅವಮಾನಿಸುವುದು ಕೃತ್ಯವನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲಾಗುತ್ತದೆ. ಅಪರಾಧ ಸಾಬೀತಾದರೆ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಮಸೂದೆಯ ಮತ್ತೊಂದು ಪ್ರಮುಖ ಅಂಶವೆಂದರೆ, "ವಂದೇ ಮಾತರಂ" ಗೀತೆಯ 120ನೇ ವರ್ಷಾಚರಣೆಯನ್ನು ವರ್ಷಪೂರ್ತಿ ಆಚರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಜೊತೆಗೆ, ವಂದೇ ಮಾತರಂ ಗೆ ವಿಶೇಷ ಕಾನೂನು ರಕ್ಷಣೆ ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಇದರೊಂದಿಗೆ, ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ 'ಜನ ಗಣ ಮನ' ಹಾಡಿದ ಬಳಿಕ 'ಒಂದೇ ಮಾತರಂ' ನ್ನು ನುಡಿಸುವುದು ಅಥವಾ ಹಾಡುವುದನ್ನು ಕಡ್ಡಾಯಗೊಳಿಸುವಂತೆ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಸೂಚಿಸಿದೆ.
ಈ ಮಸೂದೆ ಸಂಸತ್ ನಲ್ಲಿ ಚರ್ಚೆಗೆ ಬಂದಿದ್ದು, ದೇಶಾದ್ಯಂತ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
ಶಾಲೆಗಳಲ್ಲಿ ಪ್ರತಿದಿನ 'ವಂದೇ ಮಾತರಂ' ಕಡ್ಡಾಯ ? ಕೇಂದ್ರದ ಹೊಸ ಸೂಚನೆಗೆ ವಿರೋಧ, ಸುಪ್ರೀಂ ಕೋರ್ಟ್ ಹೇಳಿದ್ದೇನು? :
ದೆಹಲಿ ಎಲ್ಲಾ ಶಾಲೆಗಳಲ್ಲಿ ತರಗತಿಗಳು ಆರಂಭವಾಗುವ ಮೊದಲು 'ಒಂದೇ ಮಾತರಂ' ಹಾಡುವುದನ್ನು ಕಡ್ಡಾಯಗೊಳಿಸುವ ಸಂಬಂಧ ಕೇಂದ್ರ ಗೃಹ ಸಚಿವಾಲಯ ಮಹತ್ವದ ಸೂಚನೆ ಹೊರಡಿಸಿದೆ.
ಸೂಚನೆಯ ಪ್ರಕಾರ, ಪ್ರತಿದಿನ ಶಾಲೆಯ ಆರಂಭಕ್ಕೂ ಮುನ್ನ 'ವಂದೇ ಮಾತರಂ' ಗೀತೆಯ ಅಧಿಕೃತ ಆವೃತ್ತಿಯನ್ನು ಸಾಮೂಹಿಕವಾಗಿ ಹಾಡಬೇಕು ಎಂದು ತಿಳಿಸಲಾಗಿದೆ. ಈ ಕ್ರಮವು ರಾಷ್ಟ್ರೀಯ ಏಕತೆ ಮತ್ತು ದೇಶಭಕ್ತಿಯ ಭಾವನೆ ಬಲಪಡಿಸುವ ಉದ್ದೇಶ ಹೊಂದಿದೆ ಎಂದು ಸರ್ಕಾರ ಹೇಳಿದೆ.
ಆದರೆ, ಈ ಸೂಚನೆಗೆ ಒಂದು ಸಮುದಾಯದಿಂದ ವಿರೋಧ ವ್ಯಕ್ತವಾಗಿದ್ದು, ಆದೇಶವನ್ನು ಪ್ರಶ್ನಿಸಿ ವಿವಿಧ ನ್ಯಾಯಾಲಯಗಳು ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ವಿಚಾರವು ಸುಪ್ರೀಂ ಕೋರ್ಟ್ ವರೆಗೂ ತಲುಪಿದ್ದರು, ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಈ ವೇಳೆ, "ದೇಶಭಕ್ತಿಯನ್ನು ಒತ್ತಾಯಪೂರ್ವಕವಾಗಿ ಹೇರುವುದು ಸರ್ಕಾರದ ಉದ್ದೇಶವಲ್ಲ" ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ. ಈ ಬೆಳವಣಿಗೆಗಳ ನಡುವೆ ಶಾಲೆಗಳಲ್ಲಿ 'ವಂದೇ ಮಾತರಂ' ಕಡ್ಡಾಯಗೊಳಿಸುವ ವಿಶೇಷ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.