<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವ : ದೇವರ ದರ್ಶನಕ್ಕೆ ಭಕ್ತರ ಸಾಗರ

ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವ : ದೇವರ ದರ್ಶನಕ್ಕೆ ಭಕ್ತರ ಸಾಗರ
Summary: The countdown has begun for the grand chariot festival of Chamarajeshwara Swamy in the month of Ashadha. All preparations are complete at the temple, and thousands of devotees are expected to participate in the chariot festival. Know the special features of Chamarajeshwara Swamy Rathotsava and complete information about the programs here.

Belagavi News :

ಚಾಮರಾಜನಗರದ ಪ್ರಸಿದ್ಧ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯಲಿರುವ ಆಷಾಢ ಮಾಸದ ಭವ್ಯರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲೇ ಆಶಾಡ ಮಾಸದಲ್ಲಿ ನಡೆಯುವ ಏಕೈಕ ಹಾಗೂ ಅತ್ಯಂತ ವಿಶೇಷವಾದ ರಥೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಉತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ಪ್ರಮುಖ ವಿಶೇಷವೆಂದರೆ, ಆಷಾಢ ಮಾಸದ ಸಂಪ್ರದಾಯದಂತೆ ತಾತ್ಕಾಲಿಕವಾಗಿ ಬೇರೆ ಬೇರೆಯಾಗಿರುವ ನವದಂಪತಿಗಳನ್ನು ಮತ್ತೆ ಒಂದಾಗಿಸುವ ಅಪರೂಪದ ಜಾತ್ರೆಯಾಗಿ ಇದು ಪ್ರಸಿದ್ಧಿಯಾಗಿದೆ. ಈ ವಿಶಿಷ್ಟ ಆಚರಣೆಗಾಗಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಹಾಗೂ ನವದಂಪತಿಗಳು ಚಾಮರಾಜನಗರಕ್ಕೆ ಆಗಮಿಸಿ ಚಾಮರಾಜೇಶ್ವರ ಸ್ವಾಮಿಯ ಆಶೀರ್ವಾದ ಪಡೆಯುತ್ತಾರೆ.

ಧಾರ್ಮಿಕ ಸಂಪ್ರದಾಯ ಭಕ್ತಿ ಮತ್ತು ಸಾಂಸ್ಕೃತಿಕ ವೈಭವದ ಸಂಗಮವಾಗಿರುವ ಚಾಮರಾಜೇಶ್ವರ ಸ್ವಾಮಿ ರಥೋತ್ಸವವು ಚಾಮರಾಜನಗರದ ಪ್ರಮುಖ ಆಧ್ಯಾತ್ಮಿಕ ಉತ್ಸವಗಳಲ್ಲಿ ಒಂದಾಗಿದ್ದು, ಈ ವರ್ಷದ ಆಚರಣೆಯೂ ಭಕ್ತಿ ಭಾವ ಮತ್ತು ಸಂಭ್ರಮದಿಂದ ನಡೆಯಲು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.

Chamarajeshwara Rathotsava - ರಥಕ್ಕೆ ಹಣ್ಣು - ದವನ ಎಸೆಯುವ ವಿಶಿಷ್ಟ ಆಚರಣೆ; ಇಷ್ಟಾರ್ಥ ಸಿದ್ಧಿ ಆಗುವ ನಂಬಿಕೆಯಿಂದ ನೂರಾರು ನವದಂಪತಿಗಳ ಆಗಮನ :

ಚಾಮರಾಜೇಶ್ವರ ಹಣ್ಣು ಮತ್ತು ದವನ ಎಸೆಯುವ ವಿಶಿಷ್ಟ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಈ ಆಚರಣೆಯಲ್ಲಿ ಭಾಗವಹಿಸಿದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಹಾಗೂ ದಾಂಪತ್ಯ ಜೀವನ ಸುಖ, ಸಮೃದ್ಧಿಯಿಂದ ಕೂಡಿರುತ್ತದೆ ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ.

ಈ ನಂಬಿಕೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ನವದಂಪತಿಗಳು ಚಾಮರಾಜನಗರಕ್ಕೆ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಭಕ್ತಿ ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದ ಸಂಗಮವಾಗಿರುವ ಈ ಉತ್ಸವವು ಪ್ರತಿ ವರ್ಷ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದ್ದು, ಚಾಮರಾಜೇಶ್ವರ ಸ್ವಾಮಿ ರಥೋತ್ಸವವು ಕರ್ನಾಟಕದ ಪ್ರಮುಖ ಧಾರ್ಮಿಕ ಜಾತ್ರೆಗಳಲ್ಲಿ ಒಂದಾಗಿ ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡಿದೆ.

Chamarajeswara Rathotsava - ರಥೋತ್ಸವಕ್ಕೆ ಸಿಂಗಾರಗೊಂಡ ಚಾಮರಾಜನಗರ, ಭಕ್ತರ ಸ್ವಾಗತಕ್ಕೆ ಸಕಲ ಸಿದ್ಧತೆ ಪೂರ್ಣ :

ಚಾಮರಾಜನಗರದ ಐತಿಹಾಸಿಕ ಚಾಮರಾಜೇಶ್ವರಸ್ವಾಮಿ ದೇವಾಲಯ ಹಾಗೂ ನಗರದ ಪ್ರಮುಖ ರಾಜ ಬೀದಿಗಳು ಆಷಾಢವಾಸದ ಭವ್ಯ ರಥೋತ್ಸವದ ಅಂಗವಾಗಿ ಆಕರ್ಷಕವಾಗಿ ಅಲಂಕೃತಗೊಂಡಿದೆ. ಬಣ್ಣ ಬಣ್ಣದ ವಿದ್ಯುತ್ ದೀಪ ಅಲಂಕಾರ, ಹೂವಿನ ಅಲಂಕಾರ ಮತ್ತು ಧಾರ್ಮಿಕ ಸಿಂಗಾರದಿಂದ ಇಡೀ ನಗರ ಹಬ್ಬದ ವಾತಾವರಣವನ್ನು ಪಡೆದುಕೊಂಡಿದೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರನ್ನು ಸ್ವಾಗತಿಸಲು ಜಿಲ್ಲಾಡಳಿತ ಮತ್ತು ದೇವಾಲಯದ ಆಡಳಿತ ಮಂಡಳಿ ಅಗತ್ಯ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ ಭದ್ರತೆ, ಸಂಚಾರ ವ್ಯವಸ್ಥೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಈ ಬಾರಿಯೂ ಚಾಮುಂಡೇಶ್ವರಸ್ವಾಮಿ ಆಷಾಡ ಮಾಸದ ರಥೋತ್ಸವವು ಸಂಪ್ರದಾಯ, ಭಕ್ತಿ ಮತ್ತು ವೈಭವದೊಂದಿಗೆ ಅದ್ದೂರಿಯಾಗಿ ನಡೆಸಲು ಸಜ್ಜಾಗಿದ್ದು ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

Also Read :

ಬರಕ್ಕೆ ಬೆಚ್ಚಿಬಿದ್ದ ರಾಯಚೂರು : ಲಿಂಗಸೂರಿನಿಂದ ಸಾವಿರಾರು ಕುಟುಂಬಗಳ ಗುಳೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online