Belagavi News :
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಧರ್ಮ ಪತ್ನಿ ಚೆನ್ನಮ್ಮ ದೆವೆ ಗೌಡ ಅವರು ನಿನ್ನೆ ಸಂಜೆ ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಇದೀಗ ಅವರ ನಿಧನದ ನಂತರ ಸಾವಿಗೂ ಮುನ್ನದ ಕೊನೆಯ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೊದಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಆಶೀರ್ವಾದ ಪಡೆದ ಕ್ಷಣಗಳು ಹಾಗೂ ಕುಟುಂಬ ಸದಸ್ಯರೊಂದಿಗೆ ಕಳೆದ ಭಾವುಕದ ದೃಶ್ಯಗಳು ಜನರ ಕಣ್ಣೀರಾಗಿಸುತ್ತಿವೆ.
ಚೆನ್ನಮ್ಮ ದೇವೇಗೌಡ ಅವರು ದೇವೇಗೌಡ ಕುಟುಂಬದ ಬೆನ್ನೆಲುಬಾಗಿ ಹಲವು ದಶಕಗಳ ಕಾಲ ನಿಂತಿದ್ದರು. ರಾಜಕೀಯ ಏಳುಬೀಳುಗಳ ನಡುವೆಯೂ ಕುಟುಂಬವನ್ನು ಒಗ್ಗೂಡಿಸಿಕೊಂಡು ಬಂದ ಅವರ ಸರಳ ವ್ಯಕ್ತಿತ್ವವನ್ನು ಅನೇಕ ನಾಯಕರು ಸ್ಮರಿಸಿದ್ದಾರೆ.
ಚೆನ್ನಮ್ಮ ಅವರ ನಿಜನದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯತ್ತ ರಾಜಕೀಯ ನಾಯಕರು, ಕುಟುಂಬದ ಆಪ್ತರು ಹಾಗೂ ಬೆಂಬಲಿಗರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಪುತ್ರರಾದ ಎಚ್ ಡಿ ಕುಮಾರಸ್ವಾಮಿ, ಎಚ್ ಡಿ ರೇವಣ್ಣ ಸೇರಿದಂತೆ ಕುಟುಂಬಸ್ಥರು ಭಾವುಕರಾಗಿದ್ದಾರೆ.
ವೈರಲ್ ಆಗಿರುವ ಕೊನೆಯ ಕ್ಷಣಗಳ ವಿಡಿಯೋ :
ಚೆನ್ನಮ್ಮ ದೇವೇಗೌಡ ಅವರ ಕೊನೆಯ ದಿನಗಳ ಕೆಲವು ವಿಡಿಯೋಗಳು ಮತ್ತು ಆಸ್ಪತ್ರೆ ಸೇರುವ ಮುನ್ನದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ದೃಶ್ಯಗಳನ್ನು ನೋಡಿ ಅನೇಕರು ಸಂತಾಪ ಸೂಚಿಸುತ್ತಿದ್ದು, " ಅಮ್ಮನಂತ ವ್ಯಕ್ತಿತ್ವಕ್ಕೆ ಭಾವಪೂರ್ಣ ನಮನ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎಲ್ಲ ವಿಡಿಯೋಗಳ ನಿಖರತೆ ಅಧಿಕೃತವಾಗಿ ದೃಢೀಕರಿಸಲ್ಪಟ್ಟಿಲ್ಲ ಎಂಬುದನ್ನು ಗಮನಿಸಬೇಕು.
ದೇವೇಗೌಡರೊಂದಿಗೆ ಚೆನ್ನಮ್ಮ ಕಳೆದ ಕೊನೆಯ ಕ್ಷಣಗಳ ವಿಡಿಯೋ ವೈರಲ್ ! ಭಾವುಕರಾದ ಕುಟುಂಬ :
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ಶನಿವಾರ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಉಸಿರಾಟದ ತೊಂದರೆ ಸೇರಿದಂತೆ ವಯಸ ಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ವೇಳೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದರು, ಬಳಿಕ ಅಟಾತ್ ಹೃದಯಗಾತದಿಂದ ಅವರು ಕೊನೆಯ ಸೆರೆಳದಿದ್ದಾರೆ.
ಇದೀಗ, ಚೆನ್ನಮ್ಮ ಅವರ ನಿಧನದ ಬಳಿಕ ಪತಿ ಎಚ್ಡಿ ದೇವೇಗೌಡ ಅವರೊಂದಿಗೆ ಕಳೆದ ಕೆಲವು ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ದಿನಗಳಲ್ಲಿ ದೇವೇಗೌಡ ಅವರು ಪತ್ನಿ ಆರೋಗ್ಯ ವಿಚಾರಿಸುತ್ತಿದ್ದ ಬಾವುಕ ಕ್ಷಣಗಳು ಅನೇಕರ ಮನಸ್ಸನ್ನು ಮಿಡಿಯಿಸುತ್ತಿವೆ.
ಕುಟುಂಬದ ಸದಸ್ಯರು, ಆಪ್ತರು ಹಾಗೂ ಜೆಡಿಎಸ್ ಕಾರ್ಯಕರ್ತರು ಚೆನ್ನಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಿದ್ದು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಕುಟುಂಬಕ್ಕೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ. ಪುತ್ರರಾದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಕುಟುಂಬ ಸದಸ್ಯರು ಭಾವುಕರಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸುತ್ತಿದ್ದು, "ಸರಳತೆ ಮತ್ತು ಕುಟುಂಬ ಮೌಲ್ಯಗಳ ಪ್ರತಿಕವಾಗಿದ್ದ ಚೆನ್ನಮ್ಮ ಅವರಿಗೆ ಭಾವಪೂರ್ಣ ನಮನ" ಎಂದು ನೆಟ್ಟಿಗರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ವೈರಲ್ ಆಗುತ್ತಿರುವ ಎಲ್ಲ ವಿಡಿಯೋಗಳ ಸಂದರ್ಭ ಅಥವಾ ಪ್ರಾಮಾಣಿಕತೆಯನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ.
ಚೆನ್ನಮ್ಮ ಅವರ ಕೊನೆಯ ಕ್ಷಣಗಳು - ದೇವೇಗೌಡರೊಂದಿಗೆ ಕೊನೆ ಕ್ಷಣ ಕಳೆದ ಚೆನ್ನಮ್ಮ :
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ನಿಧನರಾಗಿದ್ದಾರೆ. ಜೀವನದ ಕೊನೆಯ ಕ್ಷಣಗಳಲ್ಲಿ ಪತಿ ದೇವೇಗೌಡರೊಂದಿಗೆ ಸಮಯ ಕಳೆದ ಅವರು, ಸಾವಿಗೂ ಮುನ್ನ ಅವರ ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ.
72 ವರ್ಷಗಳ ಕಾಲ ದೇವೇಗೌಡರ ಬದುಕಿಗೆ ಬೆನ್ನೆಲುಬಾಗಿ ನಿಂತಿದ್ದ ಚೆನ್ನಮ್ಮ ಅವರ ಅಗಲಿಕೆಯಿಂದ ಹೆಚ್ ಡಿ ದೇವೇಗೌಡ ಹಾಗೂ ಕುಟುಂಬ ದುಃಖದಲ್ಲಿದೆ. ಚೆನ್ನಮ್ಮ ಅವರ ಕೊನೆಯ ಕ್ಷಣಗಳ ಬಾವುಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿವೆ.