ರೆಡ್ ಬಾಲ್ ಕ್ರಿಕೆಟ್, ವೈಟ್ ವಾಲ್ ಕ್ರಿಕೆಟ್ ಬಗ್ಗೆ ಎಲ್ಲರೂ ಕೇಳಿದ್ದೇವೆ. ಆದರೆ ಈಗ ಹೊಸ ರೀತಿಯ ಕ್ರೀಡೆ ಲೆಗ್ ಬಾಲ್ ಕ್ರಿಕೆಟ್ ಜನಪ್ರಿಯತೆ ಪಡೆಯುತ್ತಿದೆ. ವಿಶೇಷವಾಗಿ ದಕ್ಷಿಣ ಏಷ್ಯಾದ ದೇಶಗಳಾದ ಭಾರತ ನೇಪಾಳ್ ಹಾಗೂ ಭೂತಾನ್ ನಲ್ಲಿ ಈ ಕ್ರೀಡೆ ವೇಗವಾಗಿ ಬೆಳೆಯುತ್ತಿದೆ. ಇದರ ಮಧ್ಯೆ, ಚಿಕ್ಕಮಗಳೂರಿನ 18 ಪ್ರತಿಭಾನ್ವಿತ ಮಕ್ಕಳು ಲೆಗ್ ಬಾಲ್ ಕ್ರಿಕೆಟ್ನಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಜ್ಜಾಗಿರುವುದು ಗಮನ ಸೆಳೆಯುತ್ತಿದೆ.
ಲೀಗ್ ಬಾಲ್ ಕ್ರಿಕೆಟ್ ನಲ್ಲಿ ಪ್ರತೀ ತಂಡದಲ್ಲಿ 11 ಆಟಗಾರರು ಇರುತ್ತಾರೆ. ಇಲ್ಲಿ ವಿಕೆಟ್ ವ್ಯವಸ್ಥೆಯೂ ಇರುತ್ತದೆ. ಆದರೆ ವಿಶೇಷವೆಂದರೆ ಬೌಲರ್ ಫುಟ್ಬಾಲ್ ಅನ್ನುಅಂಡರ್ ಆರ್ಮ್ ಮೂಲಕ ಎಸೆಯುತ್ತಾರೆ . ಎದುರಾಳಿ ಆಟಗಾರ ಬ್ಯಾಟ್ ಬಳಸದೆ ತನ್ನ ಕಾಲಿನಿಂದಲೇ ಬಾಲ್ ಹೊಡೆಯಬೇಕು.
ಕಾಲಿನಿಂದ ಹೊಡೆದ ಬಾಲ್ ಬಾಂಡರಿ ಲೈನ್ ತಲುಪಿದರೆ ಫೋರ್, ಬೌಂಡರಿಯಾಚೆ ಹೋದರೆ ಸಿಕ್ಸ್ ಎಂದು ಲೆಕ್ಕಿಸಲಾಗಿದೆ. ಕಾಲಿನ ಶಕ್ತಿ, ವೇಗ, ಸಮತೋಲನ ಮತ್ತು ದೈಹಿಕ ಸಾಮರ್ಥ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ಈ ಲೆಗ್ ಬಾಲ್ ಕ್ರಿಕೆಟ್. ಯುವಜನರಲ್ಲಿ ಹೊಸ ಉತ್ಸಾಹ ಮೂಡಿಸಿದೆ ಮುಂದಿನ ದಿನಗಳಲ್ಲಿ ಈ ಕ್ರೀಡೆ ಭಾರತದಲ್ಲಿ ಅತ್ಯಧಿಕೃತ ಗುರುತಿನೊಂದಿಗೆ ದೊಡ್ಡ ಮಟ್ಟದಲ್ಲಿ ಬೆಳೆಯುವ ಸಾಧ್ಯತೆ ಇದೆ. ಎನ್ನುವುದು ಕ್ರೀಡಾಭಿಮಾನಿಗಳ ಅಭಿಪ್ರಾಯ.
ಲೀಗ್ ಬಾಲ್ ಕ್ರಿಕೆಟ್ ನಲ್ಲಿ ಚಿಕ್ಕಮಗಳೂರಿನ ಯುವ ಆಟಗಾರರು ಗಮನಾರ ಸಾಧನೆ ಮಾಡುತ್ತಿದ್ದಾರೆ. ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ಆಯ್ಕೆಯಾಗಿರುವ ಬಾಲಕರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಜೂನಿಯರ್ ವಿಭಾಗ 12 ವರ್ಷದ ಬಾಲಕರ ತಂಡ:
ತೇಜಸ್ ದ್ರುವ (ನಾಯಕ),ಹೇಮಂತ ಮಾರುತಿ,ಬೆಂಜೊಯ್,ಜ್ಞಾನೇಶ್,ತೇಜಸ್ ಎಚ್.ಎಲ್,ಚಿರಂಜೀವಿ,ಷಣ್ಮುಖ ಆಟಗಾರರು.ತಂಡ ಈ ತಂಡವು ಶಿಸ್ತು ಬದ್ಧ ಆಟ, ವೇಗ ಮತ್ತು ದೈಹಿಕ ಸಾಮರ್ಥ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿವೆ.
ಸಬ್ ಜೂನಿಯರ್ ವಿಭಾಗ 14 ವರ್ಷದ ಬಾಲಕರ ತಂಡ:
ಭರತೇಶ್ (ನಾಯಕ),ಪ್ರೇಮಸಾಗರ್,ಅಬೆಲ್ ಮಥಿಯಾಸ್,ಶಶಾಂಕ್,ಶ್ರೀಸ್,ಹೃತಿಕ್ ತೇಜಾ,ಜೀವನ್,ಜಶ್ವಂತ್ ಗಗನ್,ತರುಣ್ ಆಟಗಾರರು.ಸಬ್ ಜೂನಿಯರ್ ತಂಡ ಲೆಗ್ ಬಾಲ್ ಕ್ರಿಕೆಟ್ನಲ್ಲಿ ಉತ್ತಮ ಸಮನ್ವಯ ಕಾಲಿನ ಶಕ್ತಿ ಮತ್ತು ತಾಂತ್ರಿಕೌಶಲ್ಯದಿಂದ ಗಮನ ಸೆಳೆಯುತ್ತಿದೆ.ಲೆಗ್ ಬಾಲ್ ಕ್ರಿಕೆಟ್ ಭಾರತದಲ್ಲಿ ಹೊಸದಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದ್ದು, ಚಿಕ್ಮಗಳೂರಿನ ಯುವ ಪ್ರತಿಭೆಗಳು ಭವಿಷ್ಯದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿದೆ ಎಂಬ ಆತ್ಮವಿಶ್ವಾಸ ಕ್ರೀಡಾಭಿಮಾನಿಗಳಲ್ಲಿ ಮೂಡಿದೆ.
ಭಾರತದಲ್ಲಿ ಲೆಗ್ ಬಾಲ್ ಕ್ರಿಕೆಟ್ ಫೆಡರೇಶನ್ 2011 ರಿಂದಲೇ ಅಸ್ತಿತ್ವದಲ್ಲಿದ್ದು, ಕ್ರಿಕೆಟ್ ಕ್ರೀಡೆಯಲ್ಲಿ ಮಹಿಳಾ ಹಾಗೂ ಪುರುಷ ತಂಡಗಳು ಸಕ್ರಿಯವಾಗಿವೆ. ಕಾಲಿನಿಂದ ಆಡುವ ವಿಶಿಷ್ಟ ಕ್ರಿಕೆಟ್ ರೂಪವಾದ ಲೇಟ್ ಬಾಲ್ ಕ್ರಿಕೆಟ್ ದಿನೇ ದಿನೇ ಜನಪ್ರಿಯತೆ ಪಡೆಯುತ್ತಿದ್ದು,
ಇದೀಗ ಕರ್ನಾಟಕವನ್ನು ಚಿಕ್ಕಮಗಳೂರಿನ ಬಾಲಕರು ಪ್ರತಿನಿಧಿಸುತ್ತಿರುವುದು ವಿಶೇಷ ಸಾಧನೆಯಾಗಿ ಹೊರಹೊಮ್ಮಿದೆ. ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಜ್ಜಾಗಿರುವುದು ಚಿಕ್ಕಮಗಳೂರು ಜಿಲ್ಲೆಯ ಹಾಗೂ ಕರ್ನಾಟಕ ರಾಜ್ಯಕ್ಕೆ ಹೆಮ್ಮೆ ತರುವ ವಿಷಯವಾಗಿದೆ. ಲೆಗ್ ಬಾಲ್ ಕ್ರಿಕೆಟ್ ಮೂಲಕ ಈ ಬಾಲಕರು ಭವಿಷ್ಯದಲ್ಲಿ ರಾಜ್ಯ ಮತ್ತು ರಾಷ್ಟ್ರಗಳಲ್ಲಿ ದೊಡ್ಡ ಸಾಧನೆ ಮಾಡುವ ವಿಶ್ವಾಸ ವ್ಯಕ್ತವಾಗಿದೆ.
ಈ ಬಾರಿ ನಡೆಯಲಿರುವ ರಾಷ್ಟ್ರಮಟ್ಟದ ಲೆಗ್ ಬಾಲ್ ಕ್ರಿಕೆಟ್ ಟೂರ್ನಿ ಮಹಾರಾಷ್ಟ್ರದ ನಾಸಿಕ್ ನಲ್ಲಿ ಆಯೋಜಿಸಲಾಗಿದೆ. ಈ ಮಹತ್ವದ ಟೂರ್ನಿಯಲ್ಲಿ ಕರ್ನಾಟಕದ ಜೂನಿಯರ್ ಮತ್ತು ಸಬ್ ಜೂನಿಯರ್ ತಂಡಗಳು ಭಾಗವಹಿಸಲಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಿರೂರು ಪಟ್ಟಣದ ದೇವರ ಹಳ್ಳಿಯಲ್ಲಿರುವ ಶ್ರೀ ಗುರು ಕ್ರೈಸ್ತ ಶರಣ ಶಾಲೆಯ ವಿದ್ಯಾರ್ಥಿಗಳು ತಂಡದಲ್ಲಿ ಸ್ಥಾನ ಪಡೆಯದಿದ್ದಾರೆ.
ನಾಸಿಕ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದಲ್ಲಿ ಲೆಗ್ ಬಾಲ್ ಕ್ರಿಕೆಟ್ ಟೂರ್ನಿಗೆ ಚಿಕ್ಕಮಗಳೂರಿನ ವಿದ್ಯಾರ್ಥಿಗಳು ಆಯ್ಕೆ ಆಗಿರುವುದು ಕ್ರೀಡಾಭಿಮಾನಿಗಳಲ್ಲಿ ಸಂತಸ ತಂದಿದೆ. ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ಆಯ್ಕೆ ಆಗಿರುವುದಕ್ಕೆ ಶಾಲೆಯ ಕೋಚ್ ಗುರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆಸಿದ ಕೋಚ್ ಗುರು "ನಾಸಿಕ್ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಲೆಗ್ ಬಾಲ್ ಟೂರ್ನಿಗೆ ನಮ್ಮ ಮಕ್ಕಳು ಆಯ್ಕೆ ಆಗಿರುವುದು ಬಹಳ ಸಂತೋಷ ತಂದಿದೆ. ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ ನಮ್ಮ ಶಾಲೆಯ 18 ಮಕ್ಕಳು ಆಯ್ಕೆಯಾಗಿದ್ದಾರೆ. ಅವರು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸುತ್ತೇನೆ" ಎಂದರು.
ಅದೇ ಸಂದರ್ಭದಲ್ಲಿ ಮಾತನಾಡಿ, ನಮ್ಮ ಶಾಲೆಯ ಮಕ್ಕಳು ರಾಷ್ಟ್ರಮಟ್ಟದಲ್ಲಿ ಆಯ್ಕೆ ಆಗಿರುವುದು ಹೆಮ್ಮೆ ತಂದಿದೆ. ಇದು ಶಾಲೆಗೆ ಮಾತ್ರವಲ್ಲದೆ, ನಮ್ಮ ಊರಿಗೆ ಕೂಡ ಕೀರ್ತಿ ತರುವ ವಿಷಯ ಎಂದು ಸಂತೋಷ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೊಸತು ಕ್ರೀಡೆಯಾದ ಲೆಗ್ ಬಾಲ್ ಕ್ರಿಕೆಟ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಕರ್ನಾಟಕದಲ್ಲಿ ಈ ಕ್ರೀಡೆಗೆ ಮತ್ತಷ್ಟು ಉತ್ತೇಜನ ನೀಡುವ ನಿರೀಕ್ಷೆ ಮೂಡಿದೆ.
ಇನ್ನಷ್ಟು ಓದಿರಿ:
ಸೋಮವಾರದ ಜಾತಕ ಮತ್ತು ರಾಶಿ ಫಲ : ಈ ರಾಶಿಯವರಿಗೆ ವಿಶೇಷ ಲಕ್ಕಿ ಡೇ!