<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಶಿವರಾಜ್ ಕುಮಾರ್ ಬಗ್ಗೆ ಚಿರಂಜೀವಿ ಹೃದಯಸ್ಪರ್ಶಿ ಮಾತುಗಳು

ಶಿವರಾಜ್ ಕುಮಾರ್ ಬಗ್ಗೆ ಚಿರಂಜೀವಿ ಹೃದಯಸ್ಪರ್ಶಿ ಮಾತುಗಳು
Summary: Megastar Chiranjeevi has praised actor Shivarajkumar, praising his talent and contribution to the film industry. This statement has left fans excited.

Belagavi news:

ಕನ್ನಡ ಚಿತ್ರರಂಗದ ಸ್ಟಾರ್ ನಟ ಶಿವರಾಜ್ ಕುಮಾರ್ ಅವರ ಪ್ರತಿಭೆ ಹಾಗೂ ವ್ಯಕ್ತಿತ್ವಕ್ಕೆ ಪರಭಾಷಾ ಚಿತ್ರರಂಗದಲ್ಲೂ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ಶಿವಣ್ಣ ಅವರನ್ನು ಕೊಂಡಾಡಿದ್ದಾರೆ.

ಶಿವರಾಜ್ ಕುಮಾರ್ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಸೇರಿದಂತೆ ಪರಭಾಷಾ ಚಿತ್ರರಂಗದಲ್ಲಿಯೂ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಅವರ ಅಭಿನಯ ಮತ್ತು ಸರಳ ವ್ಯಕ್ತಿತ್ವದಿಂದ ನಿರಂತರವಾಗಿ ಹೊಸ ಆಫರ್ ಗಳು ಬರುತ್ತವೆ. ಅವರು ಸಹ ಗೌರವಪೂರ್ವಕವಾಗಿ ಆಯ್ದ ಪಾತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಇತ್ತೀಚೆಗೆ ಟಾಲಿವುಡ್ ಸ್ಟಾರ್ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯಿಸಿದ್ದು, ಆ ಪಾತ್ರವೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾ ಯಶಸ್ಸಿನ ಜೊತೆಗೆ ಅವರ ಪಾತ್ರವೂ ಹಿಟ್ ಆಗಿದೆ ಎಂದು ಚಿತ್ರರಂಗದಲ್ಲಿ ಹೇಳಲಾಗುತ್ತಿದೆ.

Sponsored

ಈ ಹಿನ್ನೆಲೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ಶಿವರಾಜ್ ಕುಮಾರ್ ಅವರ ಅಭಿನಯದ ಮತ್ತು ವೃತ್ತಿಪರತೆಯನ್ನು ಪ್ರಶಂಶಿಸಿದ್ದು, ಇಬ್ಬರು ಸ್ಟಾರ್ಗಳ ನಡುವಿನ ಗೌರವ ಮತ್ತು ಸ್ನೇಹಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

'ಪೆದ್ದಿ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅಭಿನಯಕ್ಕೆ ಚಿರಂಜೀವಿ ಕೊಂಡಾಟ - "ಅವರೇ ಮೊದಲ ಯಶಸ್ಸು" ಎಂದು ಪ್ರಶಂಸೆ :

ಟಾಲಿವುಡ್ ಸ್ಟಾರ್ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾದಲ್ಲಿ ನಟಿಸಿರುವ ಕನ್ನಡದ ನಟ ಶಿವರಾಜ್ ಕುಮಾರ್ ಅವರ ಅಭಿನಯವನ್ನು ಮೆಗಾಸ್ಟಾರ್ ಚಿರಂಜೀವಿ ಭಾರಿ ರೀತಿಯಲ್ಲಿ ಕೊಂಡಾಡಿದ್ದಾರೆ.

ಇತ್ತೀಚೆಗೆ ಚಿತ್ರದ ಬಗ್ಗೆ ಮಾತನಾಡಿದ ಚಿರಂಜೀವಿ, ನಿರ್ದೇಶಕ ಬುಚ್ಚಿಬಾಬು ಸನಾಗೆ ಉದ್ದೇಶಿಸಿ,"ಶಿವರಾಜ್ ಕುಮಾರ್ ಆ ಪಾತ್ರವನ್ನು ಒಪ್ಪಿಕೊಂಡು ನಟಿಸುತ್ತೇನೆ ಎಂದಿದ್ದೆ ನಮ್ಮ ಮೊದಲ ಯಶಸ್ಸು, ಅದು ನಿನ್ನ ಅದೃಷ್ಟ" ಎಂದು ಹೇಳಿದ್ದಾರೆ.

Sponsored

ಅವರು ಮುಂದುವರೆದು,"ಅವರು ಒಬ್ಬ ಅದ್ಭುತ ನಟ ಹಾಗೂ ಅದ್ಭುತ ವ್ಯಕ್ತಿ. ಪಾತ್ರವೇ ಅವರಾಗಿ ಅವರು ನಟಿಸಿದ್ದಾರೆ. ರಾಮ್ ಚರಣ್ ಪಾತ್ರವನ್ನು ಅವರು ಗದರಿಸುವ ಸೀನ್ ಗಳಲ್ಲಿ ಸಹಜತೆ ಮತ್ತು ಶಿಸ್ತು ತುಂಬಿದೆ" ಎಂದು ಪ್ರಶಾಂತಿಸಿದ್ದಾರೆ.

ಚಿರಂಜೀವಿ ಅವರ ಪ್ರಕಾರ, ಆ ದೃಶ್ಯಗಳಲ್ಲಿ ತಂದೆ ಮಗನಿಗೆ ಶಿಸ್ತು ಕಲಿಸುವಂತೆ ಭಾವನೆ ಮೂಡಿದ್ದು, ಇಬ್ಬರ ನಡುವಿನ ಸೀನ್ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಶಿವರಾಜ್ ಕುಮಾರ್ ಅವರ ನಟನೆ ಸಿನಿಮಾಗೆ ದೊಡ್ಡ ಶಕ್ತಿ ನೀಡಿದೆ ಎಂದು ಅವರು ಹೇಳಿದ್ದಾರೆ.

ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡ ಹಾಗೂ ತೆಲುಗು ಚಿತ್ರರಂಗದ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಚಿರಂಜೀವಿ - ರಾಜಕುಮಾರ್ ಕುಟುಂಬದ ಆಪ್ತ ಬಂಧ - ಕನ್ನಡ ಚಿತ್ರರಂಗದೊಂದಿಗೆ ದಶಕಗಳ ನಂಟು:

Sponsored

ಮೆಗಾಸ್ಟಾರ್ ಚಿರಂಜೀವಿ ಅವರು ದಶಕಗಳಿಂದ ಕನ್ನಡ ಚಿತ್ರರಂಗದ ದೊಡ್ಮನೆ ಒಟ್ಟಿಗೆ ಆಪ್ತ ಬಂಧನ ಹೊಂದಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಚಿರಂಜೀವಿಗೆ ಇದ್ದ ಸ್ನೇಹ ಮತ್ತು ಗೌರವ ಚಿತ್ರರಂಗದಲ್ಲಿ ಸದಾ ಚರ್ಚೆಯ ವಿಷಯವಾಗಿತ್ತು.

ಕನ್ನಡ ಮತ್ತು ತೆಲುಗು ಚಿತ್ರರಂಗಗಳ ನಡುವಿನ ಈ ಸಾಂಸ್ಕೃತಿಕ ಸೇತುವೆ ವರ್ಷಗಳ ಕಾಲ ಮುಂದುವರೆದಿದ್ದು, ಇಬ್ಬರ ನಡುವಿನ ಪರಸ್ಪರ ಗೌರವ ಈಗಲೂ ಮುಂದುವರೆದಿದೆ. ಇತ್ತೀಚಿನ ದಿನಗಳಲ್ಲಿ ಶಿವರಾಜ್ ಕುಮಾರ್ ಅವರು ತೆಲುಗು ಚಿತ್ರರಂಗದಲ್ಲಿ ನಟಿಸುತ್ತಿರುವಂತೆ, ಚಿರಂಜೀವಿ ಸ್ನೇಹ ಕನ್ನಡ ಚಿತ್ರರಂಗದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿರಂಜೀವಿ ಅವರು ರವಿಚಂದ್ರನ್ ನಟನೆಯ 'ಸಿಪಾಯಿ' ಹಾಗೂ ಅರ್ಜುನ್ ಸರ್ಜಾ ನಟನೆಯ 'ಶ್ರೀ ಮಂಜುನಾಥ' ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರ ಹೃದಯದಲ್ಲೂ ಅವರಿಗೆ ವಿಶೇಷ ಸ್ಥಾನ ದೊರೆತಿದೆ.

ದಶಕಗಳ ಈ ಪರಸ್ಪರ ಗೌರವ ಮತ್ತು ಸ್ನೇಹದಿಂದಾಗಿ ಚಿರಂಜೀವಿಗೆ ಕರ್ನಾಟಕದಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕನ್ನಡ ಮತ್ತು ತೆಲುಗು ಚಿತ್ರರಂಗಗಳ ನಡುವಿನ ಈ ಭಾಂದವ್ಯ ಎಂದಿಗೂ ಬಲವಾಗಿ ಮುಂದುವರೆದಿದೆ.

Sponsored

'ಪೆದ್ದಿ' ಸಿನಿಮಾದಲ್ಲಿ ಕುಸ್ತಿಗುರು ಪಾತ್ರದಲ್ಲಿ ಶಿವರಾಜ್ ಕುಮಾರ್ - ಗೌರ ನಾಯ್ಡು ಪಾತ್ರಕ್ಕೆ ಭರ್ಜರಿ ಪ್ರತಿಕ್ರಿಯೆ:

ಟಾಲಿವುಡ್ ಸ್ಟಾರ್ ರಾಮ್ ಚರಣ್ ನಟನೆಯ ಪೆದ್ದಿ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈ ಸಿನಿಮಾದಲ್ಲಿ 'ಗೌರ ನಾಯ್ಡು' ಎಂಬ ಕುಸ್ತಿ ಗುರು ಪಾತ್ರವನ್ನು ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ರಾಮ್ ಚರಣ್ ಪತ್ರಿಕೆ ಕುಸ್ತಿ ತರಬೇತಿ ನೀಡುವ ಪ್ರಮುಖ ಜವಾಬ್ದಾರಿ ಶಿವರಾಜ್ ಕುಮಾರ್ ಅವರ ಪಾತ್ರವಾಗಿದ್ದು, ಆ ಮೂಲಕ ಪಾತ್ರದ ವ್ಯಕ್ತಿತ್ವ ಬದಲಾವಣೆಗೆ ಅವರು ಪ್ರಮುಖ ಕಾರಣರಾಗಿರುತ್ತಾರೆ. ಈ ಪಾತ್ರದಲ್ಲಿ ಮಾಸ್ ದೃಶ್ಯಗಳ ಜೊತೆಗೆ ಬಾವುಕ ಸನ್ನಿವೇಶಗಳು ಇದ್ದು, ಶಿವರಾಜ್ ಕುಮಾರ್ ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

'ಪೆದ್ದಿ' ಸಿನಿಮಾವು ತೆಲುಗು ಚಿತ್ರರಂಗದಲ್ಲಿ ಶಿವರಾಜ್ ಕುಮಾರ್ ನಟಿಸಿರುವ ಎರಡನೇ ಸಿನಿಮಾ ಆಗಿದೆ. ಇದಕ್ಕೂ ಮುನ್ನ ಅವರು ನಂದಿಮೂರಿ ಬಾಲಕೃಷ್ಣ ನಟನೆಯ 'ಗೌತಮಿ ಪುತ್ರ ಶಾತಕರ್ಣಿ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Sponsored

ಪರಭಾಷೆ ಚಿತ್ರರಂಗದಲ್ಲೂ ತಮ್ಮದೇ ಆದ ಗುರುತು ಮೂಡಿಸಿರುವ ಶಿವರಾಜ್ ಕುಮಾರ್ ಅವರ ಈ ಪಾತ್ರ ಅಭಿಮಾನಿಗಳಲ್ಲಿ ವಿಶೇಷ ಕುತೂಹಲ ಮತ್ತು ಸಂಭ್ರಮ ಮೂಡಿಸಿದೆ.

Also Read:

RSS ಕುರಿತು ಹೇಳಿಕೆ : ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕರು ಕಿಡಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online