BELAGAVI NEWS :
ಕನ್ನಡ ಚಿತ್ರರಂಗದಲ್ಲಿ ಸಕ್ಸಸ್ ಸಿನಿಮಾಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದರು, ಹೊಸ ಚಿತ್ರಗಳ ಬಿಡುಗಡೆಯ ವೇಳೆ ಮಾತ್ರ ಕಡಿಮೆಯಾಗಿಲ್ಲ. ಪ್ರತಿ ವಾರಕ್ಕೂ ಹಲವು ಸಿನಿಮಾಗಳು ತೆರೆಗೆ ಬರುತ್ತಿದ್ದರು, ಬಹುತೇಕ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯಲು ವಿಫಲವಾಗುತ್ತಿವೆ.
ಇಂತಹ ಪರಿಸ್ಥಿತಿ ಕಳೆದ ವರ್ಷವೂ ಇತ್ತು. ಕನ್ನಡ ಸಿನಿ ರಂಗದ ಭವಿಷ್ಯದ ಬಗ್ಗೆ ಆತಂಕ ವ್ಯಕ್ತವಾಗುತ್ತಿದ್ದ ಸಮಯದಲ್ಲೇ ‘ಸು ಫ್ರಂ ಸೋ’ ಸಿನಿಮಾ ಭರವಸೆಯ ಕಿರಣವಾಗಿ ಮೂಡಿಬಂದಿತು. 2025ರ ಜುಲೈ 24ರಂದು ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಿ ಎಲ್ಲರ ಗಮನ ಸೆಳೆದಿತ್ತು.
ರಾಜ್ ಬಿ.ಶೆಟ್ಟಿ ಅಭಿನಯದ ಈ ಸಿನಿಮಾ, ಉತ್ತಮ ಕಥೆ ಮತ್ತು ಪ್ರೇಕ್ಷಕರ ಮೆಚ್ಚುಗೆ ಸಿಕ್ಕರೆ ಕನ್ನಡ ಸಿನಿಮಾಗಳಿಗೂ ಭರ್ಜರಿ ಗೆಲುವು ಸಾಧ್ಯ ಎಂಬುದನ್ನು ಸಾಬೀತುಪಡಿಸಿತು. ಮುಖ್ಯವಾಗಿ,ಕನ್ನಡ ಪ್ರೇಕ್ಷಕರು ಒಳ್ಳೆಯ ಸಿನಿಮಾಗಳಿಗೆ ಬೆಂಬಲ ನೀಡಲು ಸದಾ ಸಿದ್ಧರಾಗಿದ್ದಾರೆ ಎಂಬ ಸಂದೇಶವನ್ನು ‘ಸು ಫ್ರಂ ಸೋ’ ಸ್ಪಷ್ಟವಾಗಿ ನೀಡಿತ್ತು.
ಈಗ ಮತ್ತೊಮ್ಮೆ ಜುಲೈ ತಿಂಗಳು ಕನ್ನಡ ಚಿತ್ರರಂಗಕ್ಕೆ ಮಹತ್ವದ ಘಟ್ಟವಾಗಿ ಪರಿಣಮಿಸುವ ನಿರೀಕ್ಷೆ ಮೂಡಿದೆ. ಬಹುನಿರೀಕ್ಷಿತ 'ಕರಾವಳಿ' ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯಾಗಲಿದ್ದು, ಕಳೆದ ವರ್ಷದ ಯಶೋಗಾಥೆ ಈ ವರ್ಷವೂ ಮರುಕಳಿಸುತ್ತದೆಯೇ ಎಂಬ ಕುತೂಹಲ ಸಿಹಿ ಪ್ರಿಯರಲ್ಲಿ ಮನೆ ಮಾಡಿದೆ.
ಈ ವರ್ಷವೂ ಅಂತಹದೊಂದು ಮ್ಯಾಜಿಕ್ ಗೆ ಅದೇ ದಿನ ಸಜ್ಜಾಗಿರುವುದು ವಿಶೇಷ. ಏಕೆಂದರೆ ‘ಸು ಫ್ರಂ ಸೋ’ ರಿಲೀಸ್ ಆದ ದಿನವೇ ಜುಲೈ 24ಕ್ಕೆ ಮತ್ತೊಂದು ಭರವಸೆಯ ಸಿನಿಮಾ 'ಕರಾವಳಿ' ತೆರೆ ಕಾಣುತ್ತಿದೆ. ಚಿತ್ರವು ಗುರುದತ್ ಗಾಣಿಗ ನಿರ್ದೇಶನ, ರಾಜ್ ಬಿ.ಶೆಟ್ಟಿ ಹಾಗೂ ಪ್ರಜ್ವಲ್ ದೇವರಾಜ್ ಅವರ ನಟನೆಯಲ್ಲಿ ಮೂಡಿಬಂದಿದೆ.
ಟೀಸರ್ ಹಾಗೂ ಪೋಸ್ಟರ್ ಗಳ ಮೂಲಕವೇ ಸಿವಿಪ್ರಿಯರ ಗಮನ ಸೆಳೆದಿದ್ದ 'ಕರಾವಳಿ' ಸಿನಿಮಾ ಕೊನೆಗೂ ತೆರೆಗೆ ಬರಲು ಸಜ್ಜಾಗಿದೆ.
ಬಿಡುಗಡೆಯಕ್ಕೂ ಮುನ್ನವೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರ, ಕಳೆದ ವರ್ಷ ‘ಸು ಫ್ರಂ ಸೋ’ ಸೃಷ್ಟಿಸಿದ ಪರಿಣಾಮದಂತೆಯೇ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಗೇಮ್ ಚೇಂಜರ್ ಆಗಬಹುದು ಎಂಬ ಚರ್ಚೆಗೆ ಕಾರಣವಾಗಿದೆ.
ಕಳೆದ ವರ್ಷ ಜುಲೈ ತಿಂಗಳು ಕನ್ನಡ ಸಿನಿಮಾ ರಂಗಕ್ಕೆ ಹೊಸ ಚೈತನ್ಯ ನೀಡಿತ್ತು.‘ಸು ಫ್ರಂ ಸೋ’ ಮತ್ತು 'ಎಕ್ಕ' ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ನಿರ್ಮಾಪಕರು ಹಾಗೂ ಪ್ರದರ್ಶಕರಲ್ಲಿ ಹೊಸ ಭರವಸೆ ಮೂಡಿಸಿದವು. ಇದೀಗ ಇದೆ ಜುಲೈ ತಿಂಗಳಲ್ಲಿ ಕರಾವಳಿ ಸೇರಿದಂತೆ ಹಲವು ನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು,ಕನ್ನಡ ಚಿತ್ರರಂಗದ ಕಡೆ ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಇದೆ.
ಹೆಸರೇ ಸೂಚಿಸುವಂತೆ 'ಕರಾವಳಿ' ಸಿನಿಮಾ ಕರಾವಳಿ ಭಾಗದ ಸಂಸ್ಕೃತಿ, ಬದುಕು ಮತ್ತು ಅಲ್ಲಿನ ಸೊಗಡನ್ನು ತೆರೆಗೆ ತರುತಿದೆ. ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರ, ಪಕ್ಕಾ ಹಳ್ಳಿಯ ನೆಲೆಯ ಕಥಾ ಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ.
ಗುರುದತ್ ಗಾಣಿಗ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅವರ ಜೋಡಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಟ ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವಿಭಿನ್ನ ಕಥೆ, ಗ್ರಾಮೀಣ ಹಿನ್ನೆಲೆ ಮತ್ತು ಬಲಿಷ್ಠ ತಾರಾಬಳಗದ ಕಾರಣದಿಂದ ಕರಾವಳಿ ಮೇಲೆ ಸಿನಿಪ್ರಿಯರ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಗುರುದತ್ ಗಾಣಿಗ ಅವರ ಹೊಸ ಸಿನಿ ಪ್ರಯತ್ನಕ್ಕೆ ವೇಗ!
ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿಕೊಂಡಿರುವ ಗುರುದತ್ ಗಾಣಿಗ, ವಿಕೆ ಫಿಲಂ ಅಸೋಸಿಯೇಷನ್ ಸಹಯೋಗದಲ್ಲಿ ತನ್ನದೇ ಸಂಸ್ಥೆ ಗಾಣಿಗ ಫಿಲ್ಮ್ಸ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಸಚಿನ್ ಬಸ್ರೂರು ಕೈಜೋಡಿಸಿದ್ದು, ಛಾಯಾಗ್ರಹಣದ ಹೊಣೆಗಾರಿಕೆಯನ್ನು ಅಭಿಮನ್ಯು ಸದಾನಂದನ್ ವಹಿಸಿಕೊಂಡಿದ್ದಾರೆ. ಪ್ರತಿಭಾವಂತ ತಾಂತ್ರಿಕ ತಂಡದೊಂದಿಗೆ ಮೂಡಿಬಂದಿರುವ ಈ ಸಿನಿಮಾ ಸಿನಿ ಪ್ರಿಯರಲ್ಲಿ ಈಗಾಗಲೇ ಕುತೂಹಲ ಹೆಚ್ಚಿಸಿದೆ.
Also Read:
ವಿಜಯಪುರದಲ್ಲಿ ಅಪರೂಪದ ದೃಶ್ಯ : ಸೂರ್ಯನ ಸುತ್ತ ಗೋಲ್ಡನ್ ರಿಂಗ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ