belagavi news :
ಮುಲ್ಲನ್ ಪುರ ಟೆಸ್ಟ್ ನಲ್ಲಿ ಕುತೂಹಲಕಾರಿ ಕ್ಷಣ: ಕೆಎಲ್ ರಾಹುಲ್ ಸುತ್ತ ವಿವಾದಾತ್ಮಕ ಘಟನೆ
ಮುಲ್ಲನ್ ಪುರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಫ್ಘಾನಿಸ್ತಾನ್ ನಡುವಿನ ಟೆಸ್ಟ್ ಪಂದ್ಯದ ಮೊದಲ ದಿನವೇ ಸ್ವಾರಸ್ಯಕರ ಘಟನೆ ನಡೆದಿದೆ. ಪಂದ್ಯದ ವೇಳೆ ಕೆಎಲ್ ರಾಹುಲ್ ಅವರ ಆಟದ ಸುತ್ತ ಗಮನ ಸೆಳೆದ ಕ್ಷಣವೊಂದು ಕ್ರಿಕೆಟ್ ಅಭಿಮಾನಿಗಳ ಚರ್ಚೆಗೆ ಕಾರಣವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಿದರು. ಆರಂಭದಲ್ಲೇ ಉಭಯ ಆರಂಭಿಕರು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ನಡೆದ ಒಂದು ಘಟನೆ ಪಂದ್ಯದ ದಿಕ್ಕನ್ನು ಸ್ವಲ್ಪ ಹೊತ್ತು ನಿಲ್ಲಿಸುವಂತಾಗಿತ್ತು.
ಆ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಭಿಮಾನಿಗಳ ನಡುವೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಮೈದಾನದಲ್ಲಿ ವಿವಾದಾತ್ಮಕ ಕ್ಷಣ: ರಾಹುಲ್ ವಿರುದ್ಧ ಔಟ್ ಅಪಿಲ್, DRS ಗೊಂದಲದಲ್ಲಿ ನಾಟಕೀಯ ಸನ್ನಿವೇಶ
ಈ ಪಂದ್ಯದ 11ನೇ ಓವರ್ ನಲ್ಲಿ ಅಪಘಾನಿಸ್ತಾನದ ವೇಗಿ Ziaur Rahman ಎಸೆದ ಚಂದನ್ನು ಕೆಎಲ್ ರಾಹುಲ್ ಕಟ್ ಮಾಡಲು ಯತ್ನಿಸಿದರು. ಈ ವೇಳೆ ಚೆಂಡು ಬ್ಯಾಟ್ ಗೆ ತಗುಲಿ ವಿಕೆಟ್ ಕೀಪರ್ ಕೈ ಸೇರಿದಂತೆ ಕಂಡುಬಂದಿದ್ದು, ಬ್ಯಾಟ್ ಗೆ ಸವರಿದ ಸ್ಪಷ್ಟ ಶಬ್ದವೂ ಕೇಳಿ ಬಂದಿದೆ. ಹೀಗಾಗಿ ಅಫ್ಘಾನ್ ಆಟಗಾರರು ತಕ್ಷಣವೇ ಔಟ್ ಗೆ ತೀವ್ರ ಅಪೀಲ್ ಮಾಡಿದ್ದಾರೆ. ಆದರೆ ಫೀಲ್ಡ್ ಅಂಪೈರ್ ಆ ಕ್ಷಣದಲ್ಲಿ ಔಟ್ ನೀಡಲಿಲ್ಲ.
ಇದಾದ ಬಳಿಕ DRS ತೆಗೆದುಕೊಳ್ಳುವ ಬಗ್ಗೆ ಅಫ್ಘಾನ್ ನಾಯಕ Hashmatullah Shahidi ಹಾಗೂ ವಿಕೆಟ್ ಕೀಪರ್ ಆಫ್ಸರ್ ಜಜಾಯ್ ಪರಸ್ಪರ ಚರ್ಚೆ ನಡೆಸುತ್ತಿದ್ದ ವೇಳೆ, ಅವರು ಕೆ ಎಲ್ ರಾಹುಲ್ ಅವರ ಮುಖದತ್ತ ಗಮನಹರಿಸಿದ್ದಾರೆ.
ಆ ಕ್ಷಣದಲ್ಲಿ ರಾಹುಲ್ ಅತ್ಯಂತ್ಯ ಶಾಂತವಾಗಿ ಪ್ರತಿಕ್ರಿಯಿಸಿ, ತಮ್ಮ ಬ್ಯಾಟ್ ಗೆ ಚಂಡು ತಗುಲಿಲ್ಲ ಎಂಬಂತೆ ತಲೆ ಅಲ್ಲಾಡಿಸಿದ ದೃಶ್ಯ ಕಂಡು ಬಂದಿದೆ. ಈ ಸನ್ನಿವೇಶ ಮೈದಾನದಲ್ಲಿ ಕ್ಷಣಾರ್ಧದಲ್ಲೇ ಗೊಂದಲ ಮತ್ತು ಕುತೂಹಲ ಸೃಷ್ಟಿಸಿದ್ದು, ಪ್ರೇಕ್ಷಕರ ನಡುವೆ ಕೂಡ ಚರ್ಚೆಗೆ ಕಾರಣವಾಗಿದೆ.
ಈ ಘಟನೆಯ ವೇಳೆ ಬ್ಯಾಟ್ ಹ್ಯಾಂಡಲ್ ಲೂಸ್ ಆಗಿರುವ ಕಾರಣ ಶಬ್ದ ಬಂದಿರಬಹುದು ಎಂಬಂತೆ ದೃಶ್ಯ ಗಮನ ಸೆಳೆದಿದೆ. ಅವರ ಶಾಂತ ಪ್ರತಿಕ್ರಿಯೆಯಿಂದ ಅಫ್ಘಾನಿಸ್ತಾನ ನಾಯಕ Hashmatullah Shahidi ಮತ್ತು ತಂಡ ಡಿಆರ್ ಎಸ್ ರಿವ್ಯೂ ತೆಗೆದುಕೊಳ್ಳದೆ ಉಳಿದಿದ್ದಾರೆ.
ಆದರೆ ಕೆಲವೇ ನಿಮಿಷಗಳಲ್ಲಿ ಬಿಗ್ ಸ್ಕ್ರೀನ್ ನಲ್ಲಿ ಅಲ್ಟ್ರಾ ಎಡ್ಜ್ ರಿಪ್ಲೇ ತೋರಿಸಲಾಯಿತು. ಅದರಲ್ಲಿ ಚೆಂಡು ಬ್ಯಾಟ್ ಗೆ ತಗುಲಿರುವುದು ಸ್ಪಷ್ಟವಾಗಿದ್ದು, ಈ ಘಟನೆ ಪಂದ್ಯದ ಪ್ರಮುಖ ಚರ್ಚಾ ವಿಷಯವಾಗಿದೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅಭಿಮಾನಿಗಳ ನಡುವೆ ಪರ-ವಿರೋಧ ಚರ್ಚೆಗಳು ಜೋರಾಗಿದೆ. ಕೆಲವರು ಇದನ್ನು ಆಟದ ಚಾಣಾಕ್ಷತನವೆಂದು ಹೇಳುತ್ತಿದ್ದರೆ, ಮತ್ತಷ್ಟು ಮಂದಿ ನೈತಿಕತೆ ಕುರಿತ ಪ್ರಶ್ನೆಗಳನ್ನು ಎತ್ತಿದ್ದಾರೆ.
Also Read: