BELAAGVI NEWS :
ಕಾಮನ್ ವೆಲ್ತ್ 2026 : ಭಾರತಕ್ಕೆ ಮತ್ತಷ್ಟು ಪದಕಗಳ ಬೇಟೆ; ಮುರಳಿ ಶ್ರೀ ಶಂಕರ್ ಗೆ ಬೆಳ್ಳಿ, ಪ್ಯಾರಾ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಸಾಧನೆ
ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2026ರಲ್ಲಿ ಭಾರತೀಯ ಅಥ್ಲೀಟ್ ಗಳು ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಭಾರತ ನಡೆದ ಏಳನೇ ದಿನದ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ ಸೇರಿ ಮತ್ತೆ ಮೂರು ಪದಕಗಳು ಲಭಿಸಿವೆ. ಇದರೊಂದಿಗೆ ಭಾರತದ ಪದಕ ಪಟ್ಟಿಯಲ್ಲಿ ಮತ್ತಷ್ಟು ಏರಿಕೆ ಕಂಡಿದ್ದು, ಕ್ರೀಡಾಭಿಮಾನಿಗಳಲ್ಲಿ ಸಂಭ್ರಮ ಮೂಡಿದೆ.
ಇದೇ ವೇಳೆ ಬಾಕ್ಸಿಂಗ್ ವಿಭಾಗದಲ್ಲೂ ಭಾರತೀಯ ಆಟಗಾರರು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಬುದುವಾರದ ಪಂದ್ಯದಲ್ಲಿ ಎದುರಾಳಿಗಳನ್ನು ಮನಿಸಿ ಸೆಮಿ ಫೈನಲ್ ಗೆ ಪ್ರವೇಶಿಸಿರುವ ಭಾರತೀಯ ಬಾಕ್ಸರ್ ಗಳಿಂದಾಗಿ ಭಾರತಕ್ಕೆ ಇನ್ನೂ ಆರು ಪದಕಗಳು ಖಚಿತವಾಗಿವೆ.
ಏಳನೇ ದಿನ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳು
ಮುರಳಿ ಶ್ರೀ ಶಂಕರ್ ಗೆ ಲಾಂಗ್ ಜಂಪ್ ನಲ್ಲಿ ಬೆಳ್ಳಿ
ಭಾರತದ ಸ್ಟಾರ್ ಲಾಂಗ್ ಜಂಪ್ ಅಥ್ಲೀಟ್ ಮುರಳಿ ಶ್ರೀಶಂಕರ್ ಮತ್ತೊಮ್ಮೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ 8.09 ಮೀಟರ್ ಜಿಗಿತದೊಂದಿಗೆ ಬೆಳ್ಳಿ ಪದಕ ಗೆದ್ದ ಅವರು, ಸತತ ಎರಡನೇ ಕಾಮನ್ ವೆಲ್ತ್ ಗೇಮ್ನಲ್ಲೂ ಪದಕ ಸಾಧನೆ ಮಾಡಿದ್ದಾರೆ.
ಪ್ಯಾರಾ ಅಥ್ಲೆಟಿಕ್ಸ್ ನಲ್ಲಿ ಐತಿಹಾಸಿಕ ಸಾಧನೆ
ಪ್ಯಾರಾ ಅಥ್ಲೆಟಿಕ್ಸ್ ವಿಭಾಗದ ಪುರುಷರ 100 ಮೀಟರ್ Y47 ಸ್ಪರ್ಧೆಯಲ್ಲಿ ಭಾರತ ಭರ್ಜರಿ ಯಶಸ್ಸು ಸಾಧಿಸಿದೆ. ಈ ಸ್ಪರ್ಧೆಯಲ್ಲಿ ಭಾರತೀಯ ಆಟಗಾರರು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಕಾಮನ್ ವೆಲ್ತ್ 2026ರಲ್ಲಿ ಭಾರತದ ಕ್ರೀಡಾಪಟುಗಳ ಪ್ರದರ್ಶನ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿದ್ದು, ಬಾಕ್ಸಿಂಗ್, ಅಥ್ಲೆಟಿಕ್ಸ್ ಸೇರಿದಂತೆ ಹಲವು ವಿಭಾಗಗಳಲ್ಲಿ ಇನ್ನಷ್ಟು ಪದಕಗಳ ನಿರೀಕ್ಷೆ ಹೆಚ್ಚಾಗಿದೆ.
ಕಾಮನ್ ವೆಲ್ತ್ 2026 : ದಿಲೀಪ್ ಗವಿತ್ ಗೆ ಚಿನ್ನ, ಬಾಸಿಲ್ ಗೆ ಬೆಳ್ಳಿ: ಮುರುಳಿ ಶ್ರೀ ಶಂಕರ್ ಪದಕ ಸಾಧನೆ
ಕಾಮನ್ ವೆಲ್ತ್ 2026ರಲ್ಲಿ ಭಾರತದ ಅಥ್ಲೀಟ್ಗಳು ಭರ್ಜರಿ ಪ್ರದರ್ಶನ ಮುಂದುವರಿಸಿದ್ದಾರೆ. ಪುರುಷರ 100 ಮೀಟರ್ T47 ಫೈನಲ್ ರೇಸ್ ನಲ್ಲಿ ದಿಲೀಪ್ ಗವಿತ್ ಅದ್ಬುತ ಓಟದ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದು, ಮೊಹಮ್ಮದ್ ಬಾಸಿಲ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ದಿಲೀಪ್ ಗವಿ ಓಟದ ಅಂತಿಮ ಹಂತದಲ್ಲಿ ವೇಗ ಹೆಚ್ಚಿಸಿಕೊಂಡು 10.71 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ಇನ್ನು ಮೊಹಮ್ಮದ್ ಬಾಸಿಲ್ 10.83 ಸೆಕೆಂಡ್ಗಳಲ್ಲಿ ಓಟ ಪೂರ್ಣಗೊಳಿಸಿ ಎರಡನೇ ಸ್ಥಾನ ಪಡೆದರು. ಈ ಮೂಲಕ ಭಾರತ ಈ ಸ್ಪರ್ಧೆಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದು ಐತಿಹಾಸಿಕ ಸಾಧನೆ ಮಾಡಿತು.
ಮುರುಳಿ ಶ್ರೀ ಶಂಕರ್ ಗೆ ಲಾಂಗ್ ಜಂಪ್ ನಲ್ಲಿ ಬೆಳ್ಳಿ
ಇದಕ್ಕೂ ಮುನ್ನ ಪುರುಷರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಮುರುಳಿ ಶ್ರೀಶಂಕರ್ ಭಾರತಕ್ಕೆ ಮತ್ತೊಂದು ಪದಕ ತಂದು ಕೊಟ್ಟರು. ಅವರು 8.09 ಮೀಟರ್ ಜಿಗಿತದೊಂದಿಗೆ ಬೆಳ್ಳಿ ಪದಕ ಗೆದ್ದರು. ಆರಂಭಿಕ ಸುತ್ತುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಮುರಳಿ, ನಂತರ ಜಮೈಕಾದ ತೇಜೆ ಗೇಲ್ 8.15 ಮೀಟರ್ ಜಿಗಿತದೊಂದಿಗೆ ಚಿನ್ನ ಗೆದ್ದ ಹಿನ್ನೆಲೆಯಲ್ಲಿ ಬೆಳ್ಳಿಗೆ ತೃಪ್ತಿಪಟ್ಟರು.
ಮನ್ ಪ್ರೀತ್ ಕೌರ್ ಗೆ ತಪ್ಪಿದ ಪದಕ
ಮಹಿಳೆಯರ ಶಾರ್ಟ್ ಪುಟ್ ಫೈನಲ್ ನಲ್ಲಿ ಭಾರತದ ಮನ್ ಪ್ರೀತ್ ಕೌರ್ ಪದಕದ ಅವಕಾಶವನ್ನು ಸ್ವಲ್ಪದರಲ್ಲಿ ಕಳೆದುಕೊಂಡರು. ಅವರು 17.49 ಮೀಟರ್ ದೂರಕ್ಕೆ ಶಾಟ್ ಎಸೆದು ನಾಲ್ಕನೇ ಸ್ಥಾನ ಪಡೆದರು. ಅಂತಿಮ ಸುತ್ತಿನಲ್ಲಿ ಲೌಡ್ರಿಸಿಯಾ ಕ್ಯಾಮರೂನ್ 17.87 ಮೀಟರ್ ಎಸೆದು ಕಂಚಿನ ಪದಕ ಗೆದ್ದ ಕಾರಣ, ಮನ್‌ಪ್ರೀತ್ ಪದಕದಿಂದ ವಂಚಿತರಾದರು.
ಕಾಮನ್ವೆಲ್ 2026ರಲ್ಲಿ ಭಾರತದ ಅಥ್ಲೀಟಿಕ್ಸ್ ತಂಡದ ಪ್ರದರ್ಶನ ಗಮನ ಸೆಳೆಯುತ್ತಿದ್ದು, ಪದಕ ಪಟ್ಟಿಯಲ್ಲಿ ಭಾರತದ ಸ್ಥಾನ ಮತ್ತಷ್ಟು ಬಲಗೊಳ್ಳುತ್ತಿದೆ.
ಕಾಮನ್ ವೆಲ್ತ್ 2026: ಬಾಕ್ಸಿಂಗ್ ನಲ್ಲಿ ಭಾರತದ ಅಬ್ಬರ; 10 ಬಾಕ್ಸರ್ ಗಳು ಸೆಮಿ ಫೈನಲ್ ಗೆ
ಕಾಮನ್ವೆಲ್ತ್ 2026ರಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಬಾಕ್ಸಿಂಗ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ 10 ಭಾರತೀಯ ಬಾಕ್ಸರ್ ಗಳು ಸೆಮಿ ಫೈನಲ್ಸ್ ಗೆ ಪ್ರವೇಶಿಸಿದ್ದು, ಭಾರತಕ್ಕೆ 10 ಪದಕಗಳು ಖಚಿತವಾಗಿವೆ.
ಸಾಕ್ಷಿ ಚೌದರಿ, ಅರುಂಧತಿ ಚೌದರಿ, ಸಚಿನ್ ಸಿವಾಚ್, ಅಂಕುಶ್ ಫಂಗಲ್, ನರೇಂದ್ರ ಬರ್ವಾಲ್ ಹಾಗೂ ವಿಶ್ವ ಚಾಂಪಿಯನ್ ಜಾಸ್ಮಿನ್ ಲಂಬೋರಿಯಾ ಸೇರಿದಂತೆ ಹಲವು ಭಾರತೀಯ ಬಾಕ್ಸರ್ ಗಳು ಸೆಮಿ ಫೈನಲ್ ಹಂತ ತಲುಪಿದ್ದಾರೆ.ಇವರೊಂದಿಗೆ ಲವ್ಲಿನಾ ಬೊರ್ಗೊಹೈನ್,ಪ್ರಿಯಾ ಘಂಗಾಸ್, ಪ್ರೀತಿ ಪವಾರ್ ಮತ್ತು ಜಾದು ಮಣಿ ಸಿಂಗ್ ಕೂಡ ಪದಕದ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.
ಇದುವರೆಗೆ ಕಾಮನ್ ವೆಲ್ತ್ 2026ರಲ್ಲಿ ಭಾರತ ಮೂರು ಚಿನ್ನ,9 ಬೆಳ್ಳಿ ಹಾಗೂ ಮೂರು ಕಂಚು ಸೇರಿದಂತೆ ಒಟ್ಟು 15 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.