<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಕ್ರಿಕೆಟ್ ಲೋಕದ ಲೆಜೆಂಡ್ ಕೇನ್ ವಿಲಿಯಮ್ಸ್ ನ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ

ಕ್ರಿಕೆಟ್ ಲೋಕದ ಲೆಜೆಂಡ್ ಕೇನ್ ವಿಲಿಯಮ್ಸ್ ನ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ
Summary: New Zealand cricket legend and former captain Kane Williamson has bid farewell to international cricket, witnessing an emotional moment in the cricketing world. Williamson, who has recorded many historic achievements including more than 19,000 international runs and winning the World Test Championship in a brilliant 16-year career, is recognized as one of the greatest players in Kiwi cricket.

BELAGAVI NEWS :

ನ್ಯೂಜಿಲೆಂಡ್ ನ ಮಾಜಿ ನಾಯಕ ಕೆನ್ ವಿಲಿಯಮ್ಸನ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವ ಮೂಲಕ ತಮ್ಮ 16ನೇ ವರ್ಷಗಳ ಅದ್ಭುತ ವೃತ್ತಿ ಜೀವನಕ್ಕೆ ತೆರೆ ಎಳೆಯಲಿದ್ದಾರೆ. 35ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಈ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣವಾಗಿದೆ.

ಕಿವೀಸ್ ತಂಡದ ಪರ ಅತ್ಯಂತ ಯಶಸ್ವಿ ಬ್ಯಾಟರ್ ಗಳಲ್ಲಿ ಒಬ್ಬರಾಗಿರುವ ವಿಲಿಯಮ್ಸನ್, 378 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 19,346 ರನ್ಗಳನ್ನು ಕಲೆ ಹಾಕಿದ್ದು, 48 ಶತಕಗಳನ್ನು ತಿಳಿಸಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯು ಅವರದ್ದಾಗಿದೆ.

ಬ್ಯಾಟರ್ ಆಗಿ ಮಾತ್ರವಲ್ಲದೆ ನಾಯಕನಾಗಿಯೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ವಿಲಿಯಮ್ಸನ್, ತಮ್ಮ ನಾಯಕತ್ವದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎರಡು ಫೈನಲ್ ಗೆ ಕೊಂಡೊಯ್ದಿದ್ದರು. ಅಲ್ಲದೆ, ಒಂದು ಐಸಿಸಿ ಪ್ರಶಸ್ತಿಯನ್ನು ಗೆಲ್ಲಿಸುವ ಮೂಲಕ ಕಿವೀಸ್ ಕ್ರಿಕೆಟ್ ಇತಿಹಾಸದಲ್ಲಿ ಚಿನ್ನದ ಅಕ್ಷರಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

Sponsored

ಕಳೆದ ಕೆಲವು ವರ್ಷಗಳಿಂದ ಫಾರ್ಮ್ ಸಮಸ್ಯೆ ಮತ್ತು ಗಾಯಗಳಿಂದ ಬಳಲುತ್ತಿದ್ದ ವಿಲಿಯಮ್ಸನ್, 2025ರಲ್ಲಿ T -೨೦ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಇದೀಗ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿಯುವ ಮೂಲಕ ತಮ್ಮ ಯಶಸ್ವಿ ಅಧ್ಯಯಕ್ಕೆ ಅಂತ್ಯ ಹಾಡಿದ್ದಾರೆ.

ಶಾಂತ ಸ್ವಭಾವ, ಅದ್ಭುತ ಬ್ಯಾಟಿಂಗ್ ಕೌಶಲ್ಯ ಮತ್ತು ಮಾದರಿ ನಾಯಕತ್ವದಿಂದ ವಿಶ್ವ ಕ್ರಿಕೆಟ್ ನಲ್ಲಿ ವಿಶೇಷ ಸ್ಥಾನ ಪಡೆದಿದ್ದು ವಿಲಿಯಮ್ಸನ್ ಅವರ ನಿವೃತ್ತಿಯೊಂದಿಗೆ ಒಂದು ಯುಗವೇ ಅಂತ್ಯಗೊಂಡಂತಾಗಿದೆ. ಅವರೇ ಈ ಸಾಧನೆಗಳು ಮತ್ತು ಕೊಡುಗೆಗಳು ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ಸದಾ ಸ್ಪೂರ್ತಿಯಾಗಲಿವೆ.

ಟೆಸ್ಟ್ ಸರಣಿ ನಡುವೆ ನಿವೃತ್ತಿ ಘೋಷಣೆ:

ವಾಸ್ತವವಾಗಿ ಕೇನ್ ವಿಲಿಯಮ್ಸನ್ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ ಉಭಯ ತಂಡಗಳು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿವೆ. ಸರಣಿಯ ಮೊದಲನೇ ಪಂದ್ಯ ಈಗಾಗಲೇ ಮುಗಿದಿದ್ದು, ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಹಿನಾಯ ಸೋಲು ಕಂಡಿತು. ಅನುಭವಿ ವಿಲಿಯಮ್ಸನ್ ಎರಡು ಇನಿಂಗ್ಸ್ ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಸೊನ್ನೆ ಸುತ್ತಿದ ಕೇನ್, ಎರಡನೇ ಇನ್ನಿಂಗ್ಸ್ ನಲ್ಲಿ 18 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದೀಗ ನಿವೃತ್ತಿ ಘೋಷಿಸಿರುವ ವಿಲಿಯಮ್ಸನ್ ಇನ್ನು ಮುಂದೆ ತಂಡದ ಭಾಗವಾಗಿರುವುದಿಲ್ಲ. ಹೀಗಾಗಿ ಅವರ ಬದಲಿಯಾಗಿ ತಂಡಕ್ಕೆ ಬದಲಿ ಆಟಗಾರನ ಆಯ್ಕೆಯಾಗಬೇಕಿದೆ.

Sponsored

ಕೇನ್ ವಿಲಿಯಮ್ಸನ್ ಅವರ ಅಂತರಾಷ್ಟ್ರೀಯ ಕ್ರಿಕೆಟ್ ಪಯಣ 2010ರ ನವೆಂಬರ್ ನಲ್ಲಿ ಭಾರತ ವಿರುದ್ಧ ಅಹಮದಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಆರಂಭವಾಗಿತ್ತು.ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ವಿಲಿಯಮ್ಸನ್, ಮೂರು ತಿಂಗಳ ಬಳಿಕ ಇದೇ ಭಾರತ ವಿರುದ್ಧ ಏಕದಿನ ಕ್ರಿಕೆಟ್ ಗೂ ಪಾದಾರ್ಪಣೆ ಮಾಡಿದರು.

16 ವರ್ಷಗಳ ಸುದೀರ್ಘಾವೃತ್ತಿ ಜೀವನದಲ್ಲಿ 110 ಟೆಸ್ಟ್ ಪಂದ್ಯಗಳನ್ನ ಪಂದ್ಯಗಳನ್ನಾಡಿರುವ ಕೇನ್, 9,515 ರನ್ ಕಲೆ ಹಾಕಿದ್ದು, 33 ಶತಕ ಮತ್ತು 38 ಅರ್ಧ ಶತಕಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ 175 ಪಂದ್ಯಗಳಿಂದ 7256 ರನ್ ಗಳಿಸಿರುವ ಅವರು, 15 ಶತಕ ಹಾಗೂ 47 ಅರ್ಧ ಶತಕಗಳನ್ನು ಬಾರಿಸಿ ಕಿವೀಸ್ ತಂಡದ ಪ್ರಮುಖ ಬ್ಯಾಟರ ಆಗಿ ನಿಂತಿದ್ದರು.

ನಾಯಕನಾಗಿ ಕಿವೀಸ್ ತಂಡಕ್ಕೆ ಐತಿಹಾಸಿಕ ಯಶಸ್ಸು:

ಆಟಗಾರನಾಗಿ ಮಾತ್ರವಲ್ಲದೆ, ನಾಯಕನಾಗಿಯೂ ವಿಲಿಯಮ್ಸನ್ ತಮ್ಮ ಛಾಪು ಮೂಡಿಸಿದ್ದಾರೆ. 2016 ರಿಂದ 2024ರ ವರೆಗೆ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದವರು, ತಂಡವನ್ನು ಹಲವು ಐತಿಹಾಸಿಕ ಸಾಧನೆಗಳತ್ತ ಕೊಂಡೊಯ್ದರು .

Sponsored

ಅವರ ನಾಯಕತ್ವದಲ್ಲೇ ನ್ಯೂಜಿಲೆಂಡ್ 2021 ರಲ್ಲಿ ಭಾರತವನ್ನು ಸೋಲಿಸಿ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ 2021 ಗೆದ್ದು ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಅಲ್ಲದೆ, 2019ರ ಕ್ರಿಕೆಟ್ ವರ್ಲ್ಡ್ ಕಪ್ 2019 ಮತ್ತು 2021ರ ಐಸಿಸಿ ಮೆನ್ಸ್ ಟಿ ಟ್ವೆಂಟಿ ವರ್ಲ್ಡ್ ಕಪ್ 2021 ಫೈನಲ್ ಗು ತಂಡವನ್ನು ಮುನ್ನಡೆಸುವಲ್ಲಿ ಯಶಸ್ವಿಯಾದರು.

ವೈಯಕ್ತಿಕ ಪ್ರಶಸ್ತಿಗಳು ಮಿಂಚಿದ ಕೆನ್:

2019ರ ಏಕದಿನ ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿಲಿಯಮ್ಸನ್, ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದರು. ಅದೇ ವರ್ಷ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನೀಡುವ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು.

ಶಾಂತ ಸ್ವಭಾವ, ಸ್ಥಿರ ಪ್ರದರ್ಶನ ಮತ್ತು ಮಾದರಿ ನಾಯಕತ್ವದಿಂದ ವಿಶ್ವ ಕ್ರಿಕೆಟ್ ನಲ್ಲಿ ವಿಶಿಷ್ಟ ಗುರುತು ಮೂಡಿಸಿದ ಕೇನ್ ವಿಲಿಯಮ್ಸನ್ ಅವರ ನಿವೃತ್ತಿಯೊಂದಿಗೆ ನ್ಯೂಜಿಲೆಂಡ್ ಕ್ರಿಕೆಟ್ನ ಒಂದು ಸುವರ್ಣ ಅಧ್ಯಾಯ ಅಂತ್ಯಗೊಂಡಂತಾಗಿದೆ.

Sponsored

Also Read:

ಕಾವೇರಿ ನೀರಿನ ಮಟ್ಟ ಇಳಿಕೆ: KRS ನಲ್ಲಿ ಕಾಣಿಸಿಕೊಂಡ ಪುರಾತನದ ದೇವಾಲಯ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online