Belagavi News :
ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಉದ್ವಿಗ್ನತೆ ತಾತ್ಕಾಲಿಕವಾಗಿ ಕಡಿಮೆಯಾಗಿರುವ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರ ಕುಸಿತ ಕಂಡಿವೆ. ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಭೀತಿ ಕಡಿಮೆಯಾಗಿರುವುದರಿಂದ ಇಂಧನ ಪೂರೈಕೆಯ ಮೇಲಿನ ಆತಂಕ ದೂರವಾಗಿದ್ದು, ತೈಲ ಮಾರುಕಟ್ಟೆಯಲ್ಲಿ ಧನಾತ್ಮಕ ಬೆಳವಣಿಗೆ ಕಂಡು ಬಂದಿದೆ.
ಕಚ್ಚಾ ತೈಲದ ಬೆಲೆ ಶೇಕಡ 4.9 ರಷ್ಟು ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್ ಗೆ 92.02 ಡಾಲರ್ ಗೆ ತಲುಪಿದೆ. ಕಳೆದ ವಾರವಷ್ಟೇ ಬ್ರೆಂಟ್ ಕಚ್ಚಾತ ಇಲ್ಲ ಬೆಲೆ ಪ್ರತಿ ಬ್ಯಾರೆಲ್ ಗೆ 102 ಡಾಲರ್ ಗಳ ಗಡಿ ದಾಟಿ ಇತ್ತೀಚಿನ ತಿಂಗಳುಗಳ ಗರಿಷ್ಠ ಮಟ್ಟ ತಲುಪಿತ್ತು. ಆದರೆ ಅಮೇರಿಕಾ - ಇರಾನ್ ನಡುವೆ ಘೋಷಣೆಯಾದ ಮಿಲಿಟರಿ ವಿರಾಮದಿಂದ ಮಾರುಕಟ್ಟೆಯಲ್ಲಿ ವಿಶ್ವಾಸ ಹೆಚ್ಚಾಗಿ, ಹೂಡಿಕೆದಾರರು ಲಾಭ ಕಾಯ್ದಿರಿಸಲು ಮುಂದಾಗಿದ್ದಾರೆ.
ಕಚ್ಚಾ ತೈಲ ಬೆಲೆ ಇಳಿಕೆಗೆ ಪ್ರಮುಖ ಕಾರಣಗಳು :
1. ಮಧ್ಯ ಪ್ರಾಚ್ಯ ಸಂಘರ್ಷ ಶಮನ :
ಅಮೇರಿಕಾ ಮತ್ತು ಇರಾನ್ ಪರಸ್ಪರ ದಾಳಿಗಳಿಂದ ದೂರ ಉಳಿದಿರುವ ಜಾಗತಿಕ ಇಂಧನ ಪೂರೈಕೆ ವ್ಯವಸ್ಥೆಗೆ ನಿರಾಳತೆ ತಂದಿದೆ. ಪ್ರಮುಖ ತೈಲ ಸಾಗಾಣೆ ಮಾರ್ಗಗಳಲ್ಲಿ ಅಡಚಣೆ ಕಡಿಮೆಯಾಗುವ ನಿರೀಕ್ಷೆಯಿಂದ ತೈಲಬೆಲೆ ಇಳಿಕೆಯಾಗಿದೆ.
2. ಹಾರ್ಮೋಜ್ ಜಲಸಂಧಿಯ ಭದ್ರತೆ :
ವಿಶ್ವದ ಪ್ರಮುಖ ಟೈಲರ್ ಸಾಗಾಣಿ ಮಾರ್ಗಗಳಲ್ಲಿ ಒಂದಾದ ಹಾರ್ಮೋಜ್ ಜಲಸಂಧಿಯಲ್ಲಿ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆ ಮಾರುಕಟ್ಟೆಗೆ ಧೈರ್ಯ ನೀಡಿದೆ. ಜಾಗತಿಕ ತೈಲ ರಫ್ತಿನ ದೊಡ್ಡ ಪ್ರಮಾಣ ಈ ಮಾರ್ಗದ ಮೂಲಕ ಸಾಗುವುದರಿಂದ, ಇಲ್ಲಿ ಉಂಟಾಗುವ ಯಾವುದೇ ಉದ್ವಿಗ್ನತೆ ತೈಲ ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ.
3. ರೆಡ್ ಸೀ ಮಾರ್ಗದ ಆತಂಕ ಕಡಿಮೆ :
ರೆಡ್ ಸೀ ಮಾರ್ಗದಲ್ಲಿ ತೈಲ ಟ್ಯಾಂಕರ್ ಗಳ ಮೇಲಿನ ದಾಳಿಯ ಭೀತಿ ಕಡಿಮೆಯಾಗಿರುವುದು ಜಾಗತಿಕ ಇಂಧನ ಪೂರೈಕೆ ಸರಪಳಿಗೆ ಮತ್ತಷ್ಟು ಬೆಂಬಲ ನೀಡಿದೆ.
ಹಣದುಬ್ಬರದ ಮೇಲೆ ಪರಿಣಾಮ ಏನು ? :
ಕಚ್ಚಾ ತೈಲ ಬೆಲೆ ಇಳಿಕೆಯಿಂದ ಸಾರಿಗೆ ಮತ್ತು ಉತ್ಪಾದನಾ ವೆಚ್ಚ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ದಿನಸಿ ವಸ್ತುಗಳು ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣ ಸಿಗಬಹುದು. ಜಾಗತಿಕ ಮಟ್ಟದಲ್ಲಿ ಹಣ ದುಬ್ಬರ ಕಡಿಮೆಯಾಗಲು ಇದು ಸಹಕಾರಿಯಾಗಬಹುದು.
1. ಫೆಡರಲ್ ರಿಸರ್ವ್ ಬಡ್ಡಿದರ ನೀತಿಗೆ ಪರಿಣಾಮ :
ಇಂಧನ ಬೆಲೆ ಏರಿಕೆಯೂ ಇತ್ತೀಚೆಗೆ ಹಣ ದುಬ್ಬರ ಹೆಚ್ಚಳಕ್ಕೆ ಕಾರಣವಾಗಿತ್ತು. ಇದರಿಂದ ಅಮೆರಿಕಾದ ಪೆಟ್ರೋಲ್ ರಿಸರ್ವ್ ಬಡ್ಡಿ ದರ ಹೆಚ್ಚಿಸುವ ಸಾಧ್ಯತೆ ಬಗ್ಗೆ ಹೂಡಿಕೆದಾರರಲ್ಲಿ ಆತಂಕ ಇತ್ತು. ಇದೀಗ ಕಚ್ಚಾ ಟೈಲ ಬೆಲೆ ಇಳಿಕೆ ಆಗಿರುವುದರಿಂದ ಹಣದುಬ್ಬರ ಒತ್ತಡ ಕಡಿಮೆಯಾಗಬಹುದು ಮತ್ತು ಬಡ್ಡಿದರ ಏರಿಕೆಯ ಅಗತ್ಯವೂ ತಗ್ಗಬಹುದು ಎಂಬ ನಿರೀಕ್ಷೆ ಇದೆ.
2. ಐಟಿ ಮತ್ತು ವಸತಿ ಕ್ಷೇತ್ರಕ್ಕೆ ನೆರವು ಸಾಧ್ಯತೆ :
ಬಡ್ಡಿದರ ಏರಿಕೆಯ ಒತ್ತಡ ಕಡಿಮೆಯಾದರೆ, ಸಾಲದ ಬಡ್ಡಿ ದರಗಳು ಸ್ಥಿರವಾಗುವ ಸಾಧ್ಯತೆ ಇದೆ. ಇದರಿಂದ ವಸತಿ ಕ್ಷೇತ್ರಕ್ಕೆ ಉತ್ತೇಜನ ಸಿಗಬಹುದು. ಜೊತೆಗೆ ಕೃತಕ ಬುದ್ಧಿಮತ್ತೆ ಡೇಟಾ ಸೆಂಟರ್ ಗಳಂತಹ ತಂತ್ರಜ್ಞಾನ ಕ್ಷೇತ್ರಗಳ ಹೂಡಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು.
ಭಾರತದ ಆರ್ಥಿಕತೆಗೆ ಸಿಗುವ ಲಾಭಗಳು :
ಭಾರತವು ತನ್ನ ಅಗತ್ಯದ ಶೇಕಡಾ 85 ಕ್ಕೂ, ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಜಾಗತಿಕ ಕಚ್ಚಾ ತೈಲ ಬೆಲೆ ಇಳಿಕೆಯಾದರೆ ಭಾರತದ ಆಮದು ವೆಚ್ಚ ಕಡಿಮೆಯಾಗುವ ನಿರೀಕ್ಷೆ ಇದೆ.
ಒಪೆಕ್ ನಿರ್ಧಾರದಿಂದ ಮುಂದುವರೆಯುವ ಸವಾಲು :
ಸೌದಿ ಅರೇಬಿಯಾ ಮತ್ತು ರಷ್ಯಾ ನೇತೃತ್ವದ ಒಪೆಕ್ + ಒಕ್ಕೂಟ ತೈಲ ಉತ್ಪಾದನಾ ಕಡಿತ ನೀತಿಯನ್ನು ಮುಂದುವರಿಸುವುದರಿಂದ, ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆಯ ಒತ್ತಡ ಇನ್ನೂ ಇದೆ. ಹೀಗಾಗಿ ತೈಲ ಬೆಲೆಗಳ ಮೇಲೆ ಅನಿಶ್ಚಿತತೆ ಮುಂದುವರಿಸಬಹುದು.
ಮುಂದಿನ ದಿನಗಳಲ್ಲಿ ಏನಾಗಬಹುದು? :
ಮಧ್ಯಪ್ರಾಚ್ಯದ ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗಿದ್ದು, ಹಾರ್ಮೋಜ್ ಜಲಸಂದಿ ಅಥವಾ ಪ್ರಮುಖ ತೈಲಸಾಗಾಣಿ ಮಾರ್ಗಗಳಲ್ಲಿ ಮತ್ತೆ ಸಂಘರ್ಷ ಉಂಟಾದರೆ ಕಚ್ಚಾತೈಲ ಬೆಲೆಗಳು ಮರು ಏರಿಕೆಯಾಗುವ ಸಾಧ್ಯತೆಯನ್ನು ತಜ್ಞರು ತಳ್ಳಿ ಹಾಕಿದ್ದಾರೆ.