belagavi news :
ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದು ಏರಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರವಾದ ಕನಕಪುರಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್ ಅವರು ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ನನ್ನನ್ನು ಇಲ್ಲಿಯವರೆಗೆ ಕರೆ ತಂದದ್ದು ಕನಕಪುರದ ಜನರ ಆಶೀರ್ವಾದ ಮತ್ತು ಬೆಂಬಲ.ಆದ್ದರಿಂದ ಸಿಎಂ ಆದ ಬಳಿಕ ನನ್ನ ಮೊದಲ ಭೇಟಿ ನನ್ನ ಕ್ಷೇತ್ರದ ಜನರಿಗೆ" ಎಂದು ಹೇಳಿದ್ದಾರೆ.
ಜನರ ಮಧ್ಯೆ ನಿಂತು ಮಾತನಾಡಿದ ಡಿಕೆ ಶಿವಕುಮಾರ್, "ನಾನು ನಿಮ್ಮ ಮನೆ ಮಗ. ಅಧಿಕಾರ ಬಂದರೂ ನಿಮ್ಮೊಂದಿಗೆ ಇರುವ ಬಾಂಧವ್ಯ ಬದಲಾಗುವುದಿಲ್ಲ.ನಿಮ್ಮ ಸುಖ ದುಃಖಗಳಲ್ಲಿ ಸದಾ ನಿಮ್ಮೊಂದಿಗೆ ಇರುತ್ತೇನೆ" ಎಂಬ ಭರವಸೆಯ ಸಂದೇಶ ರವಾನಿಸಿದರು.ಅವರ ಆಗಮನಕ್ಕೆ ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದ್ದು, ಕನಕಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಸ್ವ ಪಕ್ಷದ ಜನರಿಗೆ ಧನ್ಯವಾದ ಸಲ್ಲಿಸಿದ ಡಿಕೆ ಶಿವಕುಮಾರ್ ಅವರ ಈ ಭೇಟಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದ್ದು,ಅವರ ಭಾವನಾತ್ಮಕ ಮಾತುಗಳು ಬೆಂಬಲಿಗರಲ್ಲಿ ಹೊಸ ಉತ್ಸಾಹ ಮೂಡಿಸಿವೆ. "ನನ್ನ ಶಕ್ತಿ ಕನಕಪುರ, ನನ್ನ ಬಲ ಇಲ್ಲಿನ ಜನರು"ಎಂಬ ಸಂದೇಶದ ಮೂಲಕ ಕ್ಷೇತ್ರದೊಳಗಿನ ತಮ್ಮ ನಂಟನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡುವ ಮುನ್ನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾದರಿ ಹೆಜ್ಜೆ ಒಂದನ್ನು ಇಟ್ಟರು.ಜೀರೋ ಟ್ರಾಫಿಕ್ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮಾಡಲು, ವಿಧಾನಸೌಧದಿಂದ ರೇಷ್ಮೆ ಸಂಸ್ಥೆವರೆಗೆ ಮೆಟ್ರೋದಲ್ಲೇ ಪ್ರಯಾಣಿಸಿದರು.ಮೆಟ್ರೋ ಪಯಣದ ವೇಳೆ ಸಹ ಪ್ರಯಾಣಿಕರೊಂದಿಗೆ ಆತ್ಮೀಯವಾಗಿ ಬೆರೆತು ಮಾತುಕತೆ ನಡೆಸಿದ ಸಿಎಂ,ಸರಳತೆ ಮತ್ತು ಜನಸಾಮಾನ್ಯರೊಂದಿಗೆ ಹೊಂದಿರುವ ನಂಟನ್ನು ಪ್ರದರ್ಶಿಸಿದರು.
ಸಿಲ್ಕ್ ಇನ್ ಸ್ಟಿಟ್ಯೂಟ್ ನಿಂದ ಕನಕಪುರದತ್ತ ಕಾರಿನಲ್ಲಿ ಪ್ರಯಾಣ ಬೆಳೆಸಿದ ಡಿಕೆ ಶಿವಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿಯಲ್ಲಿ ಭರ್ಜರಿ ಸ್ವಾಗತ ದೊರೆಯಿತು.ಸ್ಥಳೀಯ ನಾಯಕರು,ಕಾರ್ಯಕರ್ತರು ಮತ್ತು ಬೆಂಬಲಿಗರು ಸಿಎಂ ರನ್ನು ಬರಮಾಡಿಕೊಂಡರು. ಆಂಜನೇಯ ಸ್ವಾಮಿ ದೇವಸ್ಥಾನದಿಂದ ಬಸ್ ನಿಲ್ದಾಣದ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿ ಸಂಭ್ರಮಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುವ ಕ್ಷೇತ್ರಕ್ಕೆ ಮೊದಲ ಭೇಟಿ ನೀಡಿದ ಡಿಕೆ ಶಿವಕುಮಾರ್,"ನಾನು ನಿಮ್ಮ ಮನೆ ಮಗ, ನಿಮ್ಮೊಂದಿಗೆ ಸದಾ ಇರುತ್ತೇನೆ"ಎಂದು ಸಂದೇಶದ ಮೂಲಕ ಜನರ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದರು. ಅವರ ಭೇಟಿ ಕನಕಪುರದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.
"ನೀವು ನೀಡಿದ ಆಶೀರ್ವಾದ ಮತ್ತು ವಿಶ್ವಾಸದಿಂದಲೇ ನಾನು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ಸೇರಿದ್ದೇನೆ. ಮುಖ್ಯಮಂತ್ರಿ ಆಗಿದ್ದರು ನಾನು ನಿಮ್ಮ ಸೇವಕನೇ ಹೊರತು, ಅಧಿಕಾರದ ವ್ಯಕ್ತಿಯಲ್ಲ" ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕನಕಪುರದ ಜನತೆಗೆ ಭಾವನಾತ್ಮಕ ಸಂದೇಶ ನೀಡಿದ್ದಾರೆ.
ಇದೇ ವೇಳೆ ಕ್ಷೇತ್ರದ ಅಭಿವೃದ್ಧಿ ಮತ್ತು ಜನಸೇವೆಯ ಬಗ್ಗೆ ಭರವಸೆ ನೀಡಿದ ಸಿಎಂ, "ನನ್ನ ಮೇಲೆ ನಂಬಿಕೆ ಇಟ್ಟು Iqbal Hussain ಅವರನ್ನು ಗೆಲ್ಲಿಸಿದ್ದೀರಿ.ಅವರು ಹೆಸರಿಗೆ ಶಾಸಕನಾಗಿರಬಹುದು,ಆದರೆ ರಾಮನಗರ ಜಿಲ್ಲೆಯ ಅಭಿವೃದ್ಧಿ ಮತ್ತು ಜನರ ಸೇವೆಯ ಜವಾಬ್ದಾರಿಯನ್ನು ನಾನು ಸ್ವತಃ ಹೊತ್ತುಕೊಳ್ಳುತ್ತೇನೆ"ಎಂದು ತಿಳಿಸಿದರು.
ಡಿಕೆ ಶಿವಕುಮಾರ್ ಅವರ ಈ ಮಾತುಗಳು ಸಭೆಯಲ್ಲಿ ಸೇರಿದ ಜನರಲ್ಲಿ ಉತ್ಸಾಹ ಮೂಡಿಸಿದ್ದು,ಮುಖ್ಯಮಂತ್ರಿಯಾದ ಬಳಿಕವೂ ಕ್ಷೇತ್ರದ ಜನರೊಂದಿಗೆ ತಮ್ಮ ಬಾಂಧವ್ಯ ಮತ್ತು ಬದ್ಧತೆಯ ಅಚಲವಾಗಿದೆ ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಿವೆ."ನಾನು ನಿಮ್ಮ ಮನೆ ಮಗ,ನಿಮ್ಮೊಂದಿಗೆ ಸದಾ ಇರುತ್ತೇನೆ"ಎಂಬ ಅವರ ಮಾತುಗಳು ಬೆಂಬಲಿಗರಿಂದ ಬಾರಿ ಮೆಚ್ಚುಗೆ ಪಡೆದಿದೆ.
ಸುಕ್ಷೇತ್ರ ಕನಕಪುರ ಬೇಟಿ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅಭಿವೃದ್ಧಿ ಯೋಜನೆಗಳು ಹಾಗೂ ರಾಜಕೀಯ ವಿಚಾರಗಳ ಬಗ್ಗೆ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. "ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಘೋಷಿಸಿರುವುದು ಐತಿಹಾಸಿಕ ನಿರ್ಧಾರ. ಹೆಸರು ಬದಲಾವಣೆಯಿಂದ ಈ ಭಾಗದ ಅಭಿವೃದ್ಧಿಗೆ ಹೊಸ ವೇಗ ಸಿಕ್ಕಿದ್ದು, ಭೂಮಿಯ ಮೌಲ್ಯವು ಹೆಚ್ಚಾಗಿದೆ. ಆರಂಭದಲ್ಲಿ ಕೆಲವರು ವಿರೋಧಿಸಿದ್ದರು, ಈಗ ಅದರ ಮಹತ್ವ ಎಲ್ಲರಿಗೂ ಅರ್ಥವಾಗುತ್ತಿದೆ"ಎಂದು ಹೇಳಿದರು.
ಹಾರೋಹಳ್ಳಿ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಸಭೆ ನಡೆಸುವುದಾಗಿ ಘೋಷಿಸಿದ ಸಿಎಂ,ಕನಕಪುರದಲ್ಲಿ ಶೀಘ್ರದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು. "ಈ ವೈದ್ಯಕೀಯ ಕಾಲೇಜಿನಿಂದ ಕನಕಪುರ ಮಾತ್ರವಲ್ಲದೆ ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಭಾಗದ ಜನರಿಗೂ ಅನುಕೂಲವಾಗಲಿದೆ.ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಸ್ಥಳೀಯವಾಗಿ ಒದಗಿಸುವ ಮೂಲಕ ಜನರು ಬೆಂಗಳೂರಿಗೆ ವಲಸೆ ಹೋಗುವ ಅಗತ್ಯವನ್ನು ಕಡಿಮೆ ಮಾಡುತ್ತೇವೆ" ಎಂದು ಭರವಸೆ ನೀಡಿದರು.
ರಾಜಕೀಯ ವಿಚಾರಗಳ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, "ದೇವರು ಯಾರಿಗೂ ವರ ಅಥವಾ ಶಾಪ ನೀಡುವುದಿಲ್ಲ, ಅವಕಾಶವನ್ನು ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ" ಎಂದು ಹೇಳಿದರು. ಜೊತೆಗೆ,ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಇನ್ನಷ್ಟು ಜನ ಬೆಂಬಲ ಸಿಗಬೇಕು ಎಂಬ ಆಸೆಯ ವ್ಯಕ್ತಪಡಿಸಿ,ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಅಭಿವೃದ್ಧಿ,ಶಿಕ್ಷಣ,ಆರೋಗ್ಯ ಹಾಗೂ ರಾಜಕೀಯ ಭವಿಷ್ಯದ ಬಗ್ಗೆ ನೀಡಿದ ಈ ಪೋಷಣೆಗಳು ಕನಕಪುರ ಹಾಗೂ ಸುತ್ತಮುತ್ತಲಿನ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದು,ಮುಖ್ಯಮಂತ್ರಿ ಅವರ ಭೇಟಿ ವಿಶೇಷ ಗಮನ ಸೆಳೆಯಿತು.
Also Read:
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ದಿಗ್ವಿಜಯ;22 ಸ್ವರ್ಣದೊಂದಿಗೆ ಅಗ್ರಸ್ಥಾನ ಭದ್ರ