belagavi news :
ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್ ನಲ್ಲಿ ಗುಕೇಶ್ ಗೆ ಶಾಕ್ : ಅರ್ಜುನ್ ಎರಿಗೈಸಿ ವಿರುದ್ಧ ಸೋಲು
ಕ್ವಾಂಟ್‌ಬಾಕ್ಸ್ ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಪಂದ್ಯಾವಳಿಯ 5ನೇ ಸುತ್ತಿನಲ್ಲಿ ಹಾಲಿ ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಅವರನ್ನು ಮಣಿಸಿ ಮಹತ್ವದ ಗೆಲುವು ದಾಖಲಿಸಿದ್ದಾರೆ.
ಚೆನ್ನೈನ ವೆಲಾಚೇರಿಯಲ್ಲಿರುವ ಫೈವ್ ಸ್ಟಾರ್ ಹೋಟೆಲ್ ನಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಚೆಸ್ ಟೂರ್ನಿ ಜುಲೈ 16ರಂದು ಆರಂಭವಾಗಿದ್ದು, ಜುಲೈ 22ರಂದು ಅಂತ್ಯಗೊಳ್ಳಲಿದೆ. ವಿಶ್ವ ದರ್ಜೆಯ ಎಂಟು ಗ್ರ್ಯಾಂಡ್ ಮಾಸ್ಟರ್ಸ್ ಗಳು ಈ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣಸುತ್ತಿದ್ದಾರೆ.
ಭಾರತದ ಪರವಾಗಿ ವಿಶ್ವ ಚಾಂಪಿಯನ್ ಡಿ.ಗುಕೇಶ್, ಅರ್ಜುನ್ ಎರಿಗೈಸಿ, ನಿಹಾಲ್ ಸರಿನ್ ಮತ್ತು ಪ್ರಾಣೇಶ್ ಸ್ಪರ್ಧಿಸುತ್ತಿದ್ದಾರೆ. ವಿದೇಶಿ ಆಟಗಾರರಾಗಿ ಫ್ರಾನ್ಸ್ ನ ಅಲಿರೆಜಾ ಫಿರೌಜ್ಜಾ, ಉಜ್ಬೇಕಿಸ್ತಾನ್ ನೋಡಿರಬೇಕ್ ಅಬ್ದುಸತ್ತೊರೊವ್, ಅಮೆರಿಕದ ಹ್ಯಾನ್ಸ್ ನೀಮನ್ ಮತ್ತು ರಷ್ಯಾದ ಡಿಮಿಟ್ರಿ ಆಂಡ್ರೆಕಿನ್ ಕಣದಲ್ಲಿದ್ದಾರೆ.
ಕ್ವಾಂಟ್‌ಬಾಕ್ಸ್ ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಪಂದ್ಯಾವಳಿಯ ಐದನೇ ದಿನದ ಪಂದ್ಯದಲ್ಲಿ ಹಾಲಿ ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ ಅವರಿಗೆ ಆಘಾತ ಎದುರಾಗಿದೆ. ಭಾರತದ ಅಗ್ರ ಆಟಗಾರ ಅರ್ಜುನ್ ಅರ್ಜುನ್ ಎರಿಗೈಸ್ ಅವರು ಗುಕೇಶ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಕಪ್ಪು ಕಾಯಿಗಳೊಂದಿಗೆ ಆಡಿದ ಅರ್ಜುನ್ ಎರಿಗೈಸಿ, ತಂತ್ರಗಾರಿಕೆಯ ಅದ್ಬುತ ಪ್ರದರ್ಶನ ನೀಡಿ ಪಂದ್ಯವನ್ನು ತಮ್ಮದಾಗಿಸಿಕೊಂಡರು. 63ನೇ ನಡೆಯ ವೇಳೆ ಗುಕೇಶ್ ಸೋಲನ್ನು ಒಪ್ಪಿಕೊಂಡರು.
ಈ ಗೆಲುವಿನೊಂದಿಗೆ ಎರಿಗೈಸಿ ಒಟ್ಟು 3.5 ಅಂಕಗಳನ್ನು ಕಲೆ ಹಾಕಿದ್ದಾರೆ. ಟೂರ್ನಿಯಲ್ಲಿ ಇನ್ನು ಎರಡು ಸುತ್ತುಗಳು ಬಾಕಿ ಉಳಿದಿದ್ದು, ಅರ್ಜುನ್ ಎರಿಗೈಸಿ ಮತ್ತು ಫ್ರಾನ್ಸ್ ನ ಗ್ರ್ಯಾಂಡ್ ಮಾಸ್ಟರ್ ಅಲಿರೆಜಾ ಫಿರೋಜ್ಜಾ ತಲಾ 3.5 ಅಂಕಗಳೊಂದಿಗೆ ಸಮಬಲದಲ್ಲಿದ್ದಾರೆ.
ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್ ನಲ್ಲಿ ಆರನೇ ಸುತ್ತಿನ ಪಂದ್ಯಗಳು ಆರಂಭವಾಗಿದ್ದು, ಯುಎಸ್ಎ ಆಟಗಾರ ಹಂಡ್ ನಿಮನ್ ಮತ್ತು ರಷ್ಯಾದ ಡಿಮಿಟ್ರಿ ಆಂಡ್ರೆಕಿನ್ ನಡುವಿನ ಪಂದ್ಯವೂ ಗಮನ ಸೆಳೆದಿದೆ.
ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್: ಗುಕೇಶ್ - ಪ್ರಾಣೇಶ್, ಎರಿಗೈಸಿ - ನಿಹಾಲ್ ಮುಖಾಮುಖಿ
ಕ್ವಾಂಟ್‌ಬಾಕ್ಸ್ ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್ ಪಂದ್ಯಾವಳಿಯ 6ನೇ ಸುತ್ತಿನಲ್ಲಿ ರೋಚಕ ಪಂದ್ಯಗಳು ನಡೆಯಲಿವೆ. ಉಜ್ಬೇಕಿಸ್ತಾನದ ಗ್ರ್ಯಾಂಡ್ ಮಾಸ್ಟರ್ಸ್ ನೋಡಿರ್ಬೇಕ್ ಅಬ್ದುಸತ್ತೊರವ್ ಅವರು ಫ್ರಾನ್ಸ್ ನ ಅಲಿರೆಜಾ ಫಿರೋಜ್ಜಾ ಅವರನ್ನು ಎದುರಿಸಲಿದ್ದಾರೆ.
ಇನ್ನು ಭಾರತೀಯ ಆಟಗಾರರ ನಡುವೆ ಕೂಡ ಮಹತ್ವದ ಹಣಾಹಣಿ ನಡೆಯಲಿದೆ. ಪ್ರಾಣೇಶ್ ಮತ್ತು ಹಾಲಿ ವಿಶ್ವಚೆಸ್ ಚಾಂಪಿಯನ್ ಡಿ. ಗುಕೇಶ್ ಮುಖಮುಖಿಯಾಗಲಿದ್ದು, ಮತ್ತೊಂದು ಪಂದ್ಯದಲ್ಲಿ ಅರ್ಜುನ್ ಎರಿಗೈಸಿ ಮತ್ತು ನಿಹಾಲ್ ಸರಿನ್ ಸೆಣಸಲಿದ್ದಾರೆ.
ಟೂರ್ನಿ ಅಂತಿಮ ಹಂತದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಪಂದ್ಯವು ಮಹತ್ವ ಪಡೆದುಕೊಂಡಿದೆ. ಅಗ್ರಸ್ಥಾನಕ್ಕಾಗಿ ನಡೆಯುತ್ತಿರುವ ಕಠಿಣ ಪೈಪೋಟಿಯಲ್ಲಿ ಯಾರು ಮೈಲುಗೈ ಸಾಧಿಸಲಿದ್ದಾರೆ ಎಂಬುದನ್ನು ಕಣ್ತುಂಬಿಕೊಳ್ಳಲು ಚೆಸ್ಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.