<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Education

ಅಮ್ಮನ ವಿರುದ್ಧ ಟೀಚರ್ ಗೆ ಕಂಪ್ಲೇಟ್ ಮಾಡಿದ ಕಂದಮ್ಮ

ಅಮ್ಮನ ವಿರುದ್ಧ ಟೀಚರ್ ಗೆ ಕಂಪ್ಲೇಟ್ ಮಾಡಿದ ಕಂದಮ್ಮ
Summary: A little girl's complaint to her teacher about her mother has now gone viral on social media. You will definitely laugh if you hear the cute complaint of the child and the reason behind it. Here is the video and complete details.

Belagavi News:

ಪುಟಾಣಿಗಳೇ ಹಾಗೆ... ಶಾಲೆಯಲ್ಲಿ ನಡೆದ ಪ್ರತಿಯೊಂದು ವಿಷಯವನ್ನು ಮನೆಗೆ ಬಂದು ಅಮ್ಮನ ಮುಂದೆ ಹೇಳಿಬಿಡುತ್ತಾರೆ. ಕೆಲವೊಮ್ಮೆ ಮನೆಯ ರಹಸ್ಯಗಳನ್ನೇ ಟೀಚರ್ ಮುಂದೆ ಬಿಚ್ಚಿಡುವ ಮುದ್ದಾದ ಘಟನೆಗಳು ನಡೆಯುತ್ತವೆ.

ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಪುಟಾಣಿ ಮಗು ತನ್ನ ಅಮ್ಮನ ವಿರುದ್ಧವೇ ಟೀಚರ್ ಬಳಿ ಕಂಪ್ಲೇಂಟ್ ಮಾಡಿರುವುದು ನೆಟ್ಟಿಗರ ಮುಖದಲ್ಲಿ ನಗುಮುಡಿತಿದೆ. ಮಗುವಿನ ಮುಗ್ಧ ಮಾತುಗಳು ಮತ್ತು ಅದರ ಸ್ಟೈಲ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾವಿರಾರು ಮಂದಿ ವಿಡಿಯೋ ನೋಡಿ ಫಿದಾ ಆಗಿದ್ದಾರೆ.

"ಇಷ್ಟು ಕ್ಯೂಟ್ ಆಗಿ ದೂರು ಕೊಟ್ಟಿದ್ದನ್ನು ನೋಡಿಲ್ಲ" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದು, ಪುಟಾಣಿಯ ಮುಗ್ಧತೆ ಎಲ್ಲರ ಮನಗೆದ್ದಿದೆ. ಈ ಮಜಾದಾಯಕ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.

Sponsored

ಪುಟಾಣಿ ಮಕ್ಕಳು ಆರಂಭದ ದಿನಗಳಲ್ಲಿ ಶಾಲೆಗೆ ಹೋಗಲ್ಲ ಎಂದು ಹಠ ಹಿಡಿಯುವುದು ಸಾಮಾನ್ಯ. ಕೆಲವೊಮ್ಮೆ "ಟೀಚರ್ ಹೋಂ ವರ್ಕ್ ಮಾಡಿಸ್ತಾರೆ", "ಬೈಯುತ್ತಾರೆ" ಎಂದು ನಾನಾ ಕಾರಣ ಹೇಳಿ ಶಾಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ ಒಮ್ಮೆ ಶಾಲೆಯ ವಾತಾವರಣಕ್ಕೆ ಹೊಂದಿಕೊಂಡರೆ ಸಾಕು, ಟೀಚರ್ ಗಳೇ ಇವರ ಫೇವರೆಟ್ ಆಗಿಬಿಡುತ್ತಾರೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಫ್ರೀ ಸ್ಕೂಲಗೆ ಹೋಗುವ ಪುಟಾಣಿ ಮಗು ತನ್ನ ಅಮ್ಮ ವಿರುದ್ಧವೇ ಟೀಚರ್ ಬಳಿ ದೂರು ಹೇಳುತ್ತಿರುವ ದೃಶ್ಯ ನೆಟ್ಟಿಗರ ಮನಗೆದ್ದಿದೆ. " ಅಮ್ಮ ನನಗೆ ಹೊಡೆದ್ರು" ಎಂದು ಬಿಚ್ಚಿ ಬಿಚ್ಚಿ ಅಳುತ್ತಾ ಹೇಳುತ್ತಿರುವ ಮಗುವಿನ ಮುಗ್ದತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Vijetha womanpreneur ಹೆಸರಿನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಸುಮಾರು ಮೂರುವರೆ ವರ್ಷದ ಪುಟಾಣಿ ತನ್ನ ಕೈ ಹಿಡಿದುಕೊಂಡೆ ಟೀಚರ್ ಬಳಿ ಅಳುತ್ತಾ ದೂರು ನೀಡುತ್ತದೆ. ಇದನ್ನು ಕೇಳಿದ ಶಿಕ್ಷಕಿ ಮಗುವಿನ ಕೈಹಿಡಿದು ಸಮಾಧಾನಪಡಿಸುತ್ತಾ, "ನಿಮ್ಮ ಅಮ್ಮನಿಗೆ ಒಂದೇಟು ಹೊಡೆಯೋಣ" ಎಂದು ಮುದ್ದಾಗಿ ಹೇಳುತ್ತಾರೆ. ಇದಕ್ಕೆ ಪುಟಾಣಿ ಕೂಡ ತಲೆ ಅಲ್ಲಾಡಿಸುತ್ತಾ ಒಪ್ಪಿಗೆ ಸೂಚಿಸುವ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ.

ಈ ಕ್ಯೂಟ್ ವಿಡಿಯೋ ನೋಡಿದ ಅನೇಕರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದು, "ಇದೇ ನಿಜವಾದ ಬಾಲ್ಯದ ಮುಗ್ಧತೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Sponsored

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದು ಕೊಂಡಿದ್ದು ಒಬ್ಬ ಬಳಿಕೆದಾರ, ಅಮ್ಮನ ಮೇಲೆ ಕೇಸ್ ಹಾಕುವ, ನಾನು ಮಗುವಿನ ಲಾಯರ್ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪಾಪ ಅನಿಸುತ್ತೆ, ನನ್ನ ಕಣ್ಣೇ ಒಂದು ಕ್ಷಣ ಒದ್ದೆ ಆಯ್ತು ಎಂದಿದ್ದಾರೆ. ಮತ್ತೊಬ್ಬರು ನಾವು ಶಾಲೆಗೆ ಹೋಗುವಾಗ ಯಾಕೆ ಇಂತಹ ಟೀಚರ್ ಇರಲಿಲ್ಲ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

Also Read:

ಮೂರ್ತಿದಾಯಕ ಕಥೆ : 61 ರಲ್ಲೂ 650ಕ್ಕೆ 500 ಅಂಕ ಪಡೆದ ಸಾಧಕಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online