<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ದೆಹಲಿ -ಬಂಗಾಳ ಬುಲೆಟ್ ರೈಲು ಯೋಜನೆ ಘೋಷಣೆ

ದೆಹಲಿ -ಬಂಗಾಳ ಬುಲೆಟ್ ರೈಲು ಯೋಜನೆ ಘೋಷಣೆ
Summary: In another major step in the country's rail transport sector, the Central Government has announced the bullet train project from Delhi to West Bengal. This high-speed rail route is expected to further strengthen connectivity between the north and the east.

belagavi news :

ಭಾರತದ ರೈಲ್ವೆ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಗಲಿದ್ದು,ಕೇಂದ್ರ ಸರ್ಕಾರ ದೆಹಲಿ-ಸಿಲಿಗುರಿ ಬುಲೆಟ್ ರೈಲು ಯೋಜನೆಯನ್ನು ಘೋಷಿಸಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಕಟಿಸಿದ್ದು, ದೆಹಲಿ ಮತ್ತು ಪಶ್ಚಿಮ ಬಂಗಾಳದ ಸಿಲಿಗುರಿ ನಡುವಿನ ಪ್ರಯಾಣ ಸಮಯವನ್ನು 18-20 ಗಂಟೆಗಳಿಂದ ಕೇವಲ ಆರು ಗಂಟೆಯಗಳಿಗೆ ಇಳಿಸುವ ಗುರಿ ಹೊಂದಲಾಗಿದೆ.

ಸುಮಾರು ₹1 ಲಕ್ಷ ಕೋಟಿ ವೆಚ್ಚದ ಈ ಹೈ ಸ್ಪೀಡ್ ರೈಲು ಕಾರಿಡಾರ್ ದೆಹಲಿ, ಲಕ್ನೌ, ವಾರಣಾಸಿ,ಹಾಗೂ ಪಾಟ್ನಾ ಸಿಲಿಗುರಿಯನ್ನು ಸಂಪರ್ಕಿಸಲಿದೆ. ಈ ಯೋಜನೆಯಿಂದ ಉತ್ತರ ಭಾರತ ಮತ್ತು ಪೂರ್ವ ಭಾರತ ದ ನಡುವಿನ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದ್ದು, ವ್ಯಾಪಾರ, ಪ್ರವಾಸೋದ್ಯಮ, ಲಾಜಿಸ್ಟಿಕ್ಸ್ ಹಾಗೂ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಹೊಸ ಉತ್ತೇಜನ ಸಿಗಲಿದೆ.

ಮುಂಬೈ - ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ನಂತರ ದೇಶದ ಎರಡನೇ ಪ್ರಮುಖ ಬುಲೆಟ್ ರೈಲು ಯೋಜನೆಯಾಗಿ ಇಂದು ಗುರುತಿಸಿಕೊಳ್ಳಲಿದೆ.ಈ ಕಾರಿಡಾರ್ ಪೂರ್ವ ಮತ್ತು ಈಶಾನ್ಯ ಭಾರತದ ಪ್ರವೇಶ ದ್ವಾರವಾಗಿರುವ ಸಿಲಿಗುರಿಗೆ ವೇಗದ ಸಂಪರ್ಕ ಒದಗಿಸುವ ಮೂಲಕ ರಾಷ್ಟ್ರೀಯ ಭದ್ರತೆ ಹಾಗೂ ತಂತ್ರಜ್ಞಾನದ ದೃಷ್ಟಿಯಿಂದಲೂ ಮಹತ್ವ ಪಡೆದುಕೊಳ್ಳಲಿದೆ.

Sponsored

ಯೋಜನೆಗೆ ಸಂಬಂಧಿಸಿದ ಪ್ರಾಥಮಿಕ ಪ್ರಕ್ರಿಯೆಗಳು ಆರಂಭವಾಗಿದ್ದು,2028 ರಲ್ಲಿ ಭೂಮಿ ಪೂಜೆ ನಡೆಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.ಯೋಜನೆ ಪೂರ್ಣಗೊಂಡ ಬಳಿಕ ದೇಶದ ಹೈ ಸ್ಪೀಡ್ ರೈಲು ಚಾಲಕ್ಕೆ ಹೊಸ ಆಯಾಮ ದೊರೆಯಲಿದ್ದು, ಭಾರತದಲ್ಲಿ ವೇಗದ ಮತ್ತು ಆಧುನಿಕ ರೈಲು ಸಾರಿಗೆ ವ್ಯವಸ್ಥೆಯ ಕನಸು ಮತ್ತಷ್ಟು ಸಾಕಾರವಾಗಲಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆಯ ಉತ್ತರ ಭಾರತವನ್ನು ಈಶಾನ್ಯ ಭಾರತದೊಂದಿಗೆ ಅತ್ಯಂತ ವೇಗವಾಗಿ ಜೋಡಿಸಲಿದ್ದು,ಬಂಗಾಳದ ರೈಲ್ವೆ ಯೋಜನೆಗಳಿಗಾಗಿ ಬರೋಬ್ಬರಿ 1ಲಕ್ಷ ಕೋಟಿ ರೂಪಾಯಿಳಿಗಿಂತಲೂ ಅಧಿಕ ಹೂಡಿಕೆ ಮಾಡಲಾಗುತ್ತಿದೆ. ಈ ರೈಲು ಲಕ್ನೌ, ವಾರಾಣಸಿ ಮತ್ತು ಪಾಟ್ನಾ ಮೂಲಕ ಪಶ್ಚಿಮ ಬಂಗಾಳವನ್ನು ಸಂಪರ್ಕಿಸುತ್ತದೆ.

ದೆಹಲಿ - ಸಿಲಿಗುರಿ ಬುಲೆಟ್ ರೈಲು ಯೋಜನೆ ಜಾರಿಯಾದರೆ ದೇಶದ ರೈಲು ಪ್ರಯಾಣದ ಚಿತ್ರನವೆ ಬದಲಾಗಲಿದೆ.ಪ್ರಸ್ತುತ ರಾಜಧಾನಿ ಅಥವಾ ಡುರೊಂಟೊ ಎಕ್ಸ್ಪ್ರೆಸ್ ಮೂಲಕ ದೆಹಲಿಯಿಂದ ಸಿಲಿಗುರಿಗೆ ತಲುಪಲು ಸುಮಾರು 18 ರಿಂದ 20 ಗಂಟೆಗಳ ಕಾಲ ಬೇಕಾಗುತ್ತದೆ. ಆದರೆ,ಗಂಟೆಗೆ 250 ರಿಂದ 300 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ಹೈ ಸ್ಪೀಡ್ ಬುಲೆಟ್ ರೈಲು ಆರಂಭವಾದ ಬಳಿಕ ಇದೆ 1500 ಕಿಲೋಮಿಟರ್ ಗೂ ಹೆಚ್ಚು ದೂರದ ಪ್ರಯಾಣವನ್ನು ಕೇವಲ ಆರು ಗಂಟೆಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ.

ಈ ಮಹತ್ವಕಾಂಕ್ಷಿ ಕಾರಿಡಾರ್ ದೇಶದ ಹಲವು ಪ್ರಮುಖ ನಗರಗಳನ್ನು ಒಂದೇ ವೇಗದ ಜಾಲದಲ್ಲಿ ಸಂಪರ್ಕಿಸಲಿದೆ.ನವ ದೆಹಲಿಯಿಂದ ಆರಂಭವಾಗುವ ರೈಲು, ನೋಯ್ಡಾದ ಜೇವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ,ಮಧುರ,ಆಗ್ರಾ,ಇಟಾಗ,ಲಕ್ನೌ,ಪ್ರಯಾಗ್ ರಾಜ್,ವಾರಣಾಸಿ, ಘಾಜಿ ಪುರ,ಪಾಟ್ನಾ ಮೂಲಕ ಸಾಗುತ್ತಾ, ಪಶ್ಚಿಮ ಬಂಗಾಳದ ನ್ಯೂ ಜಲ್ಪೈ ಗುರಿ ತಲುಪಲಿದೆ.

Sponsored

ಈ ಯೋಜನೆಯಿಂದ ಉತ್ತರ ಮತ್ತು ಪೂರ್ವ ಭಾಗದ ನಡುವಿನ ಸಂಪರ್ಕ ಮತ್ತಷ್ಟು ಬಲವಾಗಲಿದ್ದು,ವ್ಯಾಪಾರ,ಪ್ರವಾಸೋದ್ಯಮ,ಉದ್ಯೋಗವಕಾಶಗಳು ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರಗಳಿಗೆ ದೊಡ್ಡ ಉತ್ತೇಜನ ಸಿಗಲಿದೆ. ಜೊತೆಗೆ ಪ್ರಮುಖ ನಗರಗಳ ನಡುವೆ ವೇಗದ ಸಂಪರ್ಕ ದೊರೆಯುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವ ನಿರೀಕ್ಷೆ ಇದೆ.

ಭಾರತದ ಎರಡನೆಯ ಬುಲೆಟ್ ರೈಲು ಕಾರಿಡಾರ್ ಎಂದು ಪರಿಗಣಿಸಲಾಗುತ್ತಿರುವ ಈ ಯೋಜನೆ,ದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದ್ದು,ವೇಗದ, ಸುರಕ್ಷಿತ ಮತ್ತು ಆಧುನಿಕ ರೈಲು ಸಾರಿಗೆ ವ್ಯವಸ್ಥೆಯತ್ತ ಭಾರತದ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಗುರುತಿಸಿಕೊಳ್ಳಲಿದೆ.

ಈ ಕಾರ್ಡಾರ್ ಮೂಲಕ ದೆಹಲಿಯಿಂದ ಸಾಂಸ್ಕೃತಿಕ ನಗರಿ ವಾರಣಾಸಿಗೆ ಕೇವಲ 3.5 ಗಂಟೆಗಳಲ್ಲಿ ಮತ್ತು ವಾರಣಾಸಿಯಿಂದ ಸಿಲಿಗುರಿಗೆ ಮೂರು ಗಂಟೆಗಿಂತ ಕಡಿಮೆ ಅವಧಿಯಲ್ಲಿ ತಲುಪಬಹುದಾಗಿದೆ.ಭವಿಷ್ಯದಲ್ಲಿ ಈ ಮಾರ್ಗವನ್ನು ಅಸ್ಸಾಂನ ಗುವಾಹಟಿಗೂ ವಿಸ್ತರಿಸುವ ಅದ್ಭುತ ಯೋಜನೆ ಇದೆ.

ಈ ಹಿನ್ನೆಲೆಯಲ್ಲಿ ದೆಹಲಿ - ಸಿಲಿಗುರಿ ಬುಲೆಟ್ ಟ್ರೈನ್ ಯೋಜನೆ ಕೇವಲ ಸಾರಿಗೆ ಅಭಿವೃದ್ಧಿಗೆ ಮಾತ್ರ ಸೀಮಿತವಾಗದೆ, ದೇಶದ ತಂತ್ರಾತ್ಮಕ ಮೂಲ ಸೌಕರ್ಯಕ್ಕೆ ಹೊಸ ಬಲ ನೀಡುವ ಯೋಜನೆಯಾಗಿ ಪರಿಗಣಿಸಲಾಗುತ್ತಿದೆ.ಹೈ ಸ್ಪೀಡ್ ರೈಲು ಜಾಲದಿಂದ ಉತ್ತರ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಪ್ರವಾಸೋದ್ಯಮ,ಮುಕ್ತ ವ್ಯಾಪಾರ, ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಗೆ ದೊಡ್ಡ ಉತ್ತೇಜನ ಸಿಗಲಿದೆ.

Sponsored

ಜೊತೆಗೆ,ಈ ಯೋಜನೆಯು ಗಡಿ ಪ್ರದೇಶಗಳಲ್ಲಿ ಸೈನ್ಯದ ಚಲನವಲನಗಳನ್ನು ವೇಗಗೊಳಿಸುವಲ್ಲಿ ಸಹಾಯಕವಾಗಲಿದೆ.ತುರ್ತು ಸಂದರ್ಭಗಳಲ್ಲಿ ಸೇನೆ ಮತ್ತು ಸರಕುಗಳ ಸಾಗಾಣಿಗೆ ವೇಗದ ಸಂಪರ್ಕ ದೊರೆಯುವುದರಿಂದ ದೇಶದ ರಕ್ಷಣಾತ್ಮಕ ಸಾಮರ್ಥ್ಯ ಮತ್ತಷ್ಟು ಬಲವಾಗಲಿದೆ.

ಪಶ್ಚಿಮ ಬಂಗಾಳದ ಸಾರಿಗೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬಾರಿ ಉತ್ತೇಜನ ನೀಡಿದ್ದು,ರಾಜ್ಯವನ್ನು ಜಾಗತಿಕ ಮಟ್ಟದ ಸಾರಿಗೆ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.ಈ ಹಿಂದೆ ರಾಜ್ಯಕ್ಕೆ ರೈಲ್ವೆ ವಲಯದಿಂದ ಸುಮಾರು ₹4000 ಕೋಟಿ ಅನುದಾನ ದೊರೆಯುತ್ತಿದ್ದರೆ,ಪ್ರಸ್ತುತ ಎನ್ ಡಿ ಎ ಸರ್ಕಾರದ ಅಡಿಯಲ್ಲಿ 2026 27 ನೇ ಸಾಲಿಗೆ ದಾಖಲೆಯ ₹14,205 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ.

ಈ ಬೃಹತ್ ಹೂಡಿಕೆಯಿಂದ ಪಶ್ಚಿಮ ಬಂಗಾಳದ ರೈಲ್ವೆ ಜಾಲವನ್ನು ಆಧುನಿಕರಣ ಗೊಳಿಸುವ ಯೋಜನೆಗಳು ವೇಗ ಪಡೆದುಕೊಂಡಿವೆ. ಕೊಲ್ಕತ್ತಾ ಮೆಟ್ರೋ ವ್ಯವಸ್ಥೆಗೆ 60 ಅತ್ಯಾಧುನಿಕ 'ನೆಕ್ಸ್ಟ್ ಜನರೇಷನ್' ರೈಲ್ವೆ ಗಳನ್ನು ಪರಿಚಯಿಸಲಾಗುತ್ತಿದ್ದು,ಪ್ರಯಾಣಿಕರಿಗೆ ಹೆಚ್ಚು ವೇಗ,ಸುರಕ್ಷತೆ ಮತ್ತು ಸೌಕರ್ಯ ಒದಗಿಸುವ ಗುರಿ ಹೊಂದಲಾಗಿದೆ.

ಇದೆ ವೇಳೆ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ನೂರಕ್ಕೂ ಹೆಚ್ಚು ರೈಲ್ವೆ ಯೋಜನೆಗಳಿಗೆ ಹೊಸ ಚೈತನ್ಯ ನೀಡಲಾಗುತ್ತಿದೆ. ಈ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ನಗರ ಹಾಗೂ ಗ್ರಾಮೀಣ ಸಂಪರ್ಕ ವ್ಯವಸ್ಥೆ ಇನ್ನಷ್ಟು ಬಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Sponsored

ರಾಜ್ಯ ಸರ್ಕಾರದಿಂದಲೂ ಈ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದ್ದು,ಅಗತ್ಯ ಅನುಮೋದನೆಗಳು ಮತ್ತು ಭೂಮಿ ಸಂಬಂಧಿತ ಪ್ರಕ್ರಿಯೆಗಳಿಗೆ ವೇಗ ನೀಡಲಾಗುತ್ತಿದೆ. ಇದರೊಂದಿಗೆ ಪಶ್ಚಿಮ ಬಂಗಾಳದ ಸರಕಾರಿ ಮೂಲ ಸೌಕರ್ಯವೂ ಹೊಸ ಹಂತಕ್ಕೆ ಪ್ರವೇಶಿಸುವ ನಿರೀಕ್ಷೆ ಇದೆ.

ಉತ್ತರ ಭಾರತದ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ,ಹಾಗೂ ಸಿಲಿಗುರಿ 'ಚಿಕನ್ ನೆಕ್' ಪ್ರವಾಸದ ಕಠಿಣ ಭೂ ಪ್ರದೇಶ ಮತ್ತು ಭಾರಿ ಮಳೆಪಾತದಂತಹ ಪರಿಸ್ಥಿತಿಗಳು ದೆಹಲಿ ಸಿಲಿಗುರಿ ಬುಲೆಟ್ ರೈಲು ಯೋಜನೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದಾಗ್ಯೂ,ಭಾರತೀಯ ರೈಲ್ವೆಯ ತಾಂತ್ರಿಕ ತಜ್ಞರು ಮತ್ತು ಇಂಜಿನಿಯರ್ ಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿ ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಭದ್ರವಾದ ಮತ್ತು ಸುಧಾರಿತ ವಿನ್ಯಾಸಗಳನ್ನು ರೂಪಿಸುತ್ತಿದ್ದಾರೆ.

ಭೂಸ್ವಾಧೀನ ಕಾರ್ಯವು ದೆಹಲಿ ಮತ್ತು ವಾರಣಾಸಿ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಶೀಘ್ರದಲ್ಲಿ ಬೇಗ ಪಡೆದುಕೊಳ್ಳಲಿದ್ದು,ಯೋಜನೆಯ ಪ್ರಾಥಮಿಕ ಹಂತಗಳು ಮುಂದುವರೆಯಲಿವೆ ಎಂದು ನಿರೀಕ್ಷಿಸಲಾಗಿದೆ. ಹಲವು ಹಂತದ ಅಧ್ಯಯನಗಳು ಹಾಗೂ ಯೋಜನಾ ತಯಾರಿಗಳ 2028 ರಲ್ಲಿ ಈ ಮಹತ್ವಕಾಂಕ್ಷಿ ಬುಲೆಟ್ ರೈಲು ಯೋಜನೆಗೆ ಭೂಮಿ ಪೂಜೆ ನಡೆಸುವ ಸಾಧ್ಯತೆ ಇದೆ.

ಈ ಹೈ ಸ್ಪೀಡ್ ರೈಲು ಯೋಜನೆ, ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯನ್ನು ತರಲಿದ್ದು, ಆಧುನಿಕ ಮೂಲ ಸೌಕರ್ಯ ಅಭಿವೃದ್ಧಿಗೆ ದಿಕ್ಕು ನೀಡುವ ಐತಿಹಾಸಿಕ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ. ಭಾರತದ ಪ್ರಗತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇದು ಹೊಸ ಯುಗದ ಆರಂಭವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Sponsored

Also Read:

ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಸ್ನೇಹಿತೆಯ ಸೋಗಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಗೆ ₹1 ಲಕ್ಷ ವಂಚನೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online