Belagavi news:
ಧರ್ಮೇಂದ್ರ ಪ್ರಧಾನ್ ರಾಜೀನಾಮೆ: NEET ವಿವಾದದ ಬಳಿಕ ಶಿಕ್ಷಣ ಸಚಿವರ ಮಹತ್ವದ ನಿರ್ಧಾರ
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. NEET-UG ಪರೀಕ್ಷೆ ವಿವಾದ, ಬಿಜೆಪಿ ವಿರೋಧ ನಡೆದ ಪ್ರತಿಭಟನೆಗಳು ಹಾಗೂ ಪ್ರತಿಪಕ್ಷಗಳ ಹಾಗೂ ತೀವ್ರ ಟೀಕೆಯ ನಡುವೆಯೇ ಅವರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ರಾಜೀನಾಮೆ ಕುರಿತು ಧರ್ಮೇಂದ್ರ ಪ್ರಧಾನ್ ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಸುದೀರ್ಘ ಪತ್ರವನ್ನು ಹಂಚಿಕೊಂಡಿದ್ದು, ಕಳೆದ ನಾಲ್ಕು ದಶಕಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸುಧಾರಣೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಅವರು ತಮ್ಮ ಹೇಳಿಕೆಯಲ್ಲಿ, 2026ರ 3ರಂದು ನಡೆದ NEET-UG ಪರೀಕ್ಷೆಯಲ್ಲಿ ಕಂಡು ಬಂದ ಅಕ್ರಮಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, CBI ತನಿಖೆಗೆ ಆದೇಶ ನೀಡಿ, ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ವರ್ಷಗಳಿಂದ NEET ಪರೀಕ್ಷೆಯನ್ನು ಸಂಪೂರ್ಣವಾಗಿ CBT ( Computer Based Test) ಮಾದರಿಯಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.
20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾ ಆಡಳಿತಗಳ ಸಹಕಾರದೊಂದಿಗೆ ಜೂನ್ 21, 2026ರಂದು ಮರು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಮೊದಲ ದಿನದಿಂದಲೇ ನಾನು ಜವಾಬ್ದಾರಿಯನ್ನು ಸ್ವೀಕರಿಸಿದ್ದೇನೆ. ಯಾವುದೇ ಮೇಧಾವಿ ವಿದ್ಯಾರ್ಥಿಯ ಭವಿಷ್ಯ ಪರೀಕ್ಷಾ ಮಾಫಿಯಾದ ಕಾರಣದಿಂದ ಹಾಳಾಗಬಾರದು ಎಂಬುದು ನನ್ನ ಸಂಕಲ್ಪವಾಗಿತ್ತು. ಜುಲೈ 16ರಂದು ಪ್ರಕಟವಾದ ಪ
ಫಲಿತಾಂಶದಲ್ಲಿ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂಬುದು ಸಂತಸದ ವಿಷಯ ಎಂದು ಅವರು ಹೇಳಿದ್ದಾರೆ.
ಕಳೆದ ಕೆಲ ದಿನಗಳ ಬೆಳವಣಿಗೆಗಳು ತಮ್ಮ ಮನಸ್ಸಿಗೆ ನೋವುಂಟು ಮಾಡಿವೆ ಎಂದು ಹೇಳಿರುವ ಧರ್ಮೇಂದ್ರ ಪ್ರಧಾನ್, ಇದು ನನ್ನ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಲ್ಲ. ದೇಶದ ಯುವಶಕ್ತಿಯ ವಿಶ್ವಾಸವೇ ಅತ್ಯಂತ ಮುಖ್ಯ. ಯುವಕರನ್ನು ಗೊಂದಲದ ವಾತಾವರಣದಲ್ಲಿ ಸಿಲುಕಲು ನಾನು ಅವಕಾಶ ನೀಡುವುದಿಲ್ಲ" ಎಂದು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಧರ್ಮೇಂದ್ರ ಪ್ರಧಾನ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, "ಜಂತರ್ ಮಂತರ್ ನಲ್ಲಿ ಹಾಗೂ ದೇಶದಲ್ಲಿ ನಿರ್ಮಾಣವಾದ ಪರಿಸ್ಥಿತಿಯನ್ನು ರಾಷ್ಟ್ರ ವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳಬಾರದು. ದೇಶದ ಏಕತೆ ಉಳಿಯಬೇಕು. ಭಾರತದ ಯಾವುದೇ ವಿದ್ಯಾರ್ಥಿಯ ಭವಿಷ್ಯ ಕಾನೂನು ಪ್ರಕ್ರಿಯೆಗಳಲ್ಲಿ ಸಿಲುಕಬಾರದು" ಎಂದು ಹೇಳಿದ್ದಾರೆ.
ಅವರು, " ನಮ್ಮ ಮಕ್ಕಳು ನಮ್ಮ ಅಮೂಲ್ಯ ಸಮಯವನ್ನು ಓದು ಮತ್ತು ವೃತ್ತಿ ನಿರ್ಮಾಣದತ್ತ ಕೇಂದ್ರೀಕರಿಸಬೇಕು. ಈ ಎಲ್ಲ ವಿಚಾರಗಳನ್ನು ಮನನ ಮಾಡಿಕೊಂಡು ನಾನು ನನ್ನ ರಾಜೀನಾಮೆ ಪತ್ರವನ್ನು ಮಾನ್ಯ ಪ್ರಧಾನಮಂತ್ರಿಯವರಿಗೆ ಸಲ್ಲಿಸಿದ್ದೇನೆ" ಎಂದು ತಿಳಿಸಿದ್ದಾರೆ.
ಪ್ರಧಾನಿ ಮಂತ್ರಿ ನೀಡಿದ ಮಾರ್ಗದರ್ಶನ, ವಿಶ್ವಾಸ ಮತ್ತು ನಿರಂತರ ಬೆಂಬಲಕ್ಕೆ ಧನ್ಯವಾದ ತಿಳಿಸಿರುವ ಅವರು, ಮಂತ್ರಿಸಭೆಯ ಸಹೋದ್ಯೋಗಿಗಳು, ಸಚಿವಾಲಯದ ಅಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಕೊನೆಯಲ್ಲಿ, " ರಾಷ್ಟ್ರ ಸೇವೆಯೇ ನನ್ನ ಜೀವನದ ಪರಮ ಗುರಿ. ಜಗನ್ನಾಥರ ಆಶೀರ್ವಾದದಿಂದ ಮುಂದೆಯೂ ಭಾರತ ಮಾತೆ, ಓಡಿಸಾ ಜನತೆ ಮತ್ತು ದೇಶದ ಯುವಕರ ಆಕಾಂಕ್ಷೆಗಳನ್ನು ಈಡೇರಿಸಲು ಸಂಪೂರ್ಣ ಸಮರ್ಪಣೆಯೊಂದಿಗೆ ಕಾರ್ಯನಿರ್ವಹಿಸುತ್ತೇನೆ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.