<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Education

ವಿದ್ಯಾರ್ಥಿಗಳ ನೀಟ್ ಪ್ರಯಾಣಕ್ಕೆ ಅಡ್ಡಿಯಾದ ಕೆಪಿಸಿಸಿ ಕಾರ್ಯಕ್ರಮವೇ?ಬಿಜೆಪಿ - ಕಾಂಗ್ರೆಸ್ ವಾಕ್ಸಮರ್

ವಿದ್ಯಾರ್ಥಿಗಳ ನೀಟ್ ಪ್ರಯಾಣಕ್ಕೆ ಅಡ್ಡಿಯಾದ ಕೆಪಿಸಿಸಿ ಕಾರ್ಯಕ್ರಮವೇ?ಬಿಜೆಪಿ - ಕಾಂಗ್ರೆಸ್ ವಾಕ್ಸಮರ್
Summary: Vijendra criticized the Congress and Rahul Gandhi, saying, "For weeks, the Congress and Rahul Gandhi have been trying to use the issue of students and exams as a political weapon. But when students need real sensitivity and basic responsibility, the Congress has given more priority to showing its political power than their future," he alleged.

be;agavi news :

ಇದೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಉದಾಹರಣೆಗಳನ್ನು ಉಲ್ಲೇಖಿಸಿದವರು," ದೆಹಲಿಯಲ್ಲಿ ಪ್ರಧಾನಿ ಮೋದಿ ಮಧ್ಯಾಹ್ನ 1:15 ಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ, ನೀಟ್ ಪರೀಕ್ಷಾರ್ಥಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ತಮ್ಮ ವಾಹನ ದಳದ ಸಂಚಾರವನ್ನು 45 ನಿಮಿಷಗಳ ಕಾಲ ಮುಂದೂಡಿದರು.ಒಬ್ಬನೇ ಒಬ್ಬ ವಿದ್ಯಾರ್ಥಿಗೂ ತಡವಾಗಬಾರದು ಎಂಬ ಕಾಳಜಿಯನ್ನು ಅವರು ತೋರಿಸಿದರು,"ಎಂದು ಹೇಳಿದ್ದಾರೆ.

"ಆದರೆ ಕಾಂಗ್ರೆಸ್ ನ ನಡೆ ಇದಕ್ಕೆ ವಿರುದ್ಧವಾಗಿದೆ.ವರದಿಗಳ ಪ್ರಕಾರ,ಟ್ರಾಫಿಕ್ ದಟ್ಟಣೆ ಮತ್ತು ಗೊಂದಲದ ಪರಿಣಾಮವಾಗಿ ಮೂವರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತಪ್ಪಿಸಿಕೊಂಡಿದ್ದಾರೆ.ಕಾಂಗ್ರೆಸ್ ಗೆ ವಿದ್ಯಾರ್ಥಿಗಳು ಕೇವಲ ರಾಜಕೀಯ ದಾಳಗಳಷ್ಟೇ;ಅನುಕೂಲವಿದ್ದಾಗ ಬಳಸಿಕೊಳ್ಳುವುದು, ಅನಾನುಕೂಲವಾದಾಗ ನಿರ್ಲಕ್ಷಿಸುವುದು ಅವರ ನೈಜ ಗುಣವಾಗಿದೆ,"ಎಂದು ವಿಜಯೇಂದ್ರ ತೀವ್ರವಾಗಿ ದೂರಿದ್ದಾರೆ.

ಬಿಜೆಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ ಖರ್ಗೆ,ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಲು ಕೆಪಿಸಿಸಿ ಕಾರ್ಯಕ್ರಮ ಕಾರಣ ಎಂಬುದು ಆದರೆ ಆರೋಪ ಹಾಗೂ ತಪ್ಪು ಮಾಹಿತಿ ಎಂದು ಸ್ಪಷ್ಟಪಡಿಸಿದ್ದಾರೆ.

Sponsored

ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು,"ಎಂದಿನಂತೆ ಸರಣಿ ತಪ್ಪು ಮಾಹಿತಿಗಳನ್ನು ಹೊರಡುವ ಸಂಸದರು ಮತ್ತೊಮ್ಮೆ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದಾರೆ.ಆರ್ ಸಿ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಒಟ್ಟು 720 ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿತ್ತು.ಅದ ಅವರಲ್ಲಿ 142 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.ಪರೀಕ್ಷೆಗೆ ಹಾಜರಾಗದ ಮೂವರು ವಿದ್ಯಾರ್ಥಿಗಳ ಕಾರಣಗಳನ್ನು ಪರಿಶೀಲಿಸಿದಾಗ, ಅವುಗಳಿಗೆ ಟ್ರಾಫಿಕ್ ಅಥವಾ ಕೆಪ್ಸಿ ಕಾರ್ಯಕ್ರಮದೊಂದಿಗೆ ನೇರ ಸಂಬಂಧ ಕಂಡುಬಂದಿಲ್ಲ,"ಎಂದು ತಿಳಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ನೀಡಿರುವ ಮಾಹಿತಿಯ ಪ್ರಕಾರ,ಮಾಗಡಿ ಇಂದ ಪ್ರಯಾಣಿಸುತ್ತಿದ್ದ ಒಬ್ಬ ವಿದ್ಯಾರ್ಥಿ ನಿಗೆ ಸಮಯಕ್ಕೆ ಸರಿಯಾಗಿ ಬಸ್ ಸಾಗದ ಕಾರಣ ಪರೀಕ್ಷಾ ಕೇಂದ್ರಕ್ಕೆ ತಡವಾಗಿ ತಲುಪಿದ್ದು,ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ.ಮತ್ತೊಬ್ಬ ಅಭ್ಯರ್ಥಿ 2026 ರ ಮೇ 30ರಂದು ನಡೆದ ಪರೀಕ್ಷೆಯ ಹಳೆಯ ಹಾಲ್ ಟಿಕೆಟ್ ನೊಂದಿಗೆ ಕೇಂದ್ರಕ್ಕೆ ಬಂದಿದ್ದರಿಂದ,ನಿಯಮಾನುಸಾರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿಲ್ಲ.

ಇನ್ನೊಬ್ಬ ಅಭ್ಯರ್ಥಿ ಆರ್ ಟಿ ನಗರ ಭಾಗದಿಂದ ಪ್ರಯಾಣಿಸುತ್ತಿದ್ದ ವೇಳೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ.ಆದರೆ,ಅದಕ್ಕೆ ಕಾರಣವೇನು ಎಂಬುದನ್ನು ಅಧಿಕಾರಿಗಳು ಇನ್ನೂ ಪರಿಶೀಲಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೆ,ಬೆಂಗಳೂರು ಸಂಚಾರ ಪೊಲೀಸರು ಕಾರ್ಯಕ್ರಮಕ್ಕೂ ಮುನ್ನ ಸಾರ್ವಜನಿಕರಿಗೆ ಸಂಚಾರ ಮಾರ್ಗ ಬದಲಾವಣೆ ಹಾಗೂ ಟ್ರಾಫಿಕ್ ಸಲಹೆಗಳ ಕುರಿತು ವಂಚಿತರಾಗಿಯೇ ಅಧಿಸೂಚನೆಗಳನ್ನು ನೀಡಿದ್ದರು.ಹೀಗಾಗಿ ವಿದ್ಯಾರ್ಥಿಗಳ ಪರೀಕ್ಷಾ ಹಾಜರಾತಿಗೆ ಕೆಪಿಸಿಸಿ ಕಾರ್ಯಕ್ರಮವೇ ಕಾರಣ ಎಂಬ ಆರೋಪಗಳು ವಾಸ್ತವಂಶಗಳಿಗೆ ದೂರವಾಗಿವೆ ಎಂದು ಪ್ರಿಯಾಂಕರ್ ಗೆ ಸ್ಪಷ್ಟಪಡಿಸಿದ್ದಾರೆ.

Sponsored

ಇದೆ ವೇಳೆ ಬಿಜೆಪಿ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿರುವ ಗೃಹ ಸಚಿವ ಪ್ರಿಯಾಂಕ ಖರ್ಗೆ,ನೀಟ್ ಪರೀಕ್ಷೆಗೆ ಹಾಜರಾದ ಕೆಲ ವಿದ್ಯಾರ್ಥಿಗಳ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ತನ್ನದೇ ಸರ್ಕಾರದ ವೈಫಲ್ಯಗಳ ಬಗ್ಗೆ ಮೌನ ವಹಿಸಿದೆ ಎಂದು ಆರೋಪಿಸಿದ್ದಾರೆ.

"ವಿವಿಧ ಕಾರಣಗಳಿಂದ ಕೆಲ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ಬಿಜೆಪಿ ಸಂಸದರು,ತಮ್ಮದೇ ಸರ್ಕಾರದ ಅವಧಿಯಲ್ಲಿ ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ,ಪರೀಕ್ಷಾ ಅವ್ಯವಸ್ಥೆ ಮತ್ತು ದುರುಪಯೋಗದಿಂದ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುಭವಿಸಿದ ಕಷ್ಟದ ಬಗ್ಗೆ ಅನುಕೂಲಕರವಾಗಿ ಮೌನವಾಗಿದ್ದರು.ಆ ಅವ್ಯವಸ್ಥೆಗಳಪರಿಣಾಮವಾಗಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಬಂದಿವೆ,"ಎಂದು ಅವರು ತಿಳಿಸುತ್ತಾರೆ.

ಮುಂದುವರೆದು,"ಬಿಜೆಪಿ ಸಂಸದರ ತರ್ಕವನ್ನೇ ಅನುಸರಿಸಿದರೆ,ಕೆಲ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾದ ಕಾರಣಕ್ಕೆ ಕಾಂಗ್ರೆಸ್ ಕಾರ್ಯವನ್ನು ಹೊಣೆಗಾರ ರನ್ನಾಗಿ ಮಾಡುವವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ,ವಿದ್ಯಾರ್ಥಿಗಳ ಸಂಕಷ್ಟ ಮತ್ತು ಸಾವುಗಳಿಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಬೇಕು.ಅಷ್ಟೇ ಅಲ್ಲ,ಅವರನ್ನು ಹುದ್ದೆಯಿಂದಲೂ ತೆರವುಗೊಳಿಸುವಂತೆ ಆಗ್ರಹಿಸಬೇಕು,"ಎಂದು ವ್ಯಂಗ್ಯವಾಡಿದ್ದಾರೆ.

"ಆಧಾರ ರಹಿತ ಆರೋಪಗಳನ್ನು ಮಾಡಿ ನಂತರ ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವುದು ಬಿಜೆಪಿಯ ನಾಯಕರ ಹಳೆಯ ಚಾಳಿ.ಆದರೆ ಇಲ್ಲಿ ಅಂತಹ ಆರೋಪಗಳಿಂದ ಪರಾಗಲು ಯಾವುದೇ 'ತುರ್ತು 'ನಿರ್ಗಮನ ದ್ವಾರ'ಗಳಿಲ್ಲ,"ಎಂದು ಪ್ರಿಯಾಂಕರ್ ಗೆ ತೀವ್ರ ಟೀಕೆ ಮಾಡಿದ್ದಾರೆ.

Sponsored

Also Read:

ಜಗನ್ನಾಥ ಮಂದಿರ ಪ್ರವೇಶ ವೇಳೆ ಅನುಮಾನಾಸ್ಪದ ವರ್ತನೆ;ನಕಲಿ ಸೇನಾ ಉಡುಪಿನಲ್ಲಿ ನುಗ್ಗಿದ ವ್ಯಕ್ತಿ ವಶಕ್ಕೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online