<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಮೊಜ್ತಬಾ ಖಮೇನಿ ಇರಾನ್ ತೊರೆದರೇ? ಇಸ್ರೇಲ್ ಹೇಳಿದ್ದೇನು?

ಮೊಜ್ತಬಾ ಖಮೇನಿ ಇರಾನ್ ತೊರೆದರೇ? ಇಸ್ರೇಲ್ ಹೇಳಿದ್ದೇನು?
Summary: Israel has stated that Mojtaba Khamenei, the son of Iran's Supreme Leader Ayatollah Ali Khamenei, is not in the country. Israel's statement on Mojtaba Khamenei's whereabouts has sparked fresh debate and heightened curiosity in Iranian politics.

Belagavi News :

ಇರಾನ್ ನಲ್ಲೇ ಇಲ್ಲವೇ ಮೊಜ್ತಬಾ ಖಮೇನಿ? ಇಸ್ರೇಲ್ ಭದ್ರತಾ ಮೂಲದ ಹೇಳಿಕೆ; ಪುರಾವೆ ಮಾತ್ರ ಬಹಿರಂಗವಾಗಿಲ್ಲ

ಇರಾನ್ ನ ನೂತನ ಸುಪ್ರೀಂ ನಾಯಕ ಮೋಜ್ತಬಾ ಖಮೇನಿ ಸದ್ಯ ಇರಾನ್ ನಲ್ಲಿ ಇಲ್ಲ ಎಂದು ಇಸ್ರೇಲ್ ನ ಭದ್ರತಾ ಮೂಲವೊಂದನ್ನು ಉಲ್ಲೇಖಿಸಿ ಸೌದಿ ಅರೇಬಿಯಾದ ಅಲ್ - ಹದತ್ ಸುದ್ಧಿ ಸಂಸ್ಥೆ ವರದಿ ಮಾಡಿದೆ. ಆದರೆ, ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಅಥವಾ ದೃಢೀಕರಿಸಬಹುದಾದ ಪುರಾವೆಗಳನ್ನು ವರದಿಯಲ್ಲಿ ನೀಡಲಾಗಿಲ್ಲ.

ವರದಿಯ ಪ್ರಕಾರ, ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ತಂದೆ ಮೃತಪಟ್ಟ ಬಳಿಕ ಮೊಜ್ತಬಾ ಖಮೇನಿ ಇರಾನ್‌ ನ ಸುಪ್ರೀಂ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಅಧಿಕಾರ ಸ್ವೀಕರಿಸಿದ ನಂತರ ಅವರು ಇದುವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಲಿಖಿತ ಹೇಳಿಕೆಗಳ ಮೂಲಕವೇ ಅವರು ಸಂದೇಶಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.

ಅಲ್ - ಹದತ್ ವರದಿಯಲ್ಲಿ ಉಲ್ಲೇಖಿಸಿರುವ ಇಸ್ರೇಲ್ ನ ಭದ್ರತಾ ಮೂಲದ ಪ್ರಕಾರ, ಮೊಜ್ತಬಾ ಖಮೇನಿ ಪ್ರಸ್ತುತ ಇರಾನ್ ಹೊರಗಿದ್ದಾರೆ. ಆದರೆ ಅವರು ಯಾವ ದೇಶದಲ್ಲಿದ್ದಾರೆ ಅಥವಾ ಯಾವ ಕಾರಣಕ್ಕಾಗಿ ಇರಾನ್ ತೊರೆದಿದ್ದಾರೆ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಇದರ ಮಧ್ಯೆ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೊಜ್ತಬಾ ಖಮೇನಿ ಗಾಯಗೊಂಡಿದ್ದರು ಎಂಬ ವರದಿಗಳು ಹಿಂದೆ ಹರಿದಾಡಿದ್ದವು. ಆದರೆ ಈ ಮಾಹಿತಿಯನ್ನು ಇರಾನ್ ಸರ್ಕಾರ ಅಥವಾ ಇತರ ಸ್ವತಂತ್ರ ಮೂಲಗಳು ದೃಢೀಕರಿಸಿಲ್ಲ.

ಭದ್ರತಾ ಕಾರಣಗಳಿಂದ ತಮ್ಮ ತಂದೆ ಅಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿಯೂ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ ಎಂಬ ವರದಿಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ಈಗ ಅವರು ಇರಾನ್ ನಲ್ಲೇ ಇಲ್ಲ ಎಂಬ ಹೊಸ ವರದಿ ಮತ್ತಷ್ಟು ಕುತೂಹಲ ಮತ್ತು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಫೆಬ್ರುವರಿ 28ರಂದು ನಡೆದ ಅಮೆರಿಕ ಮತ್ತು ಇಸ್ರೇಲ್ ನ ಜಂಟಿ ವೈಮಾನಿಕ ದಾಳಿಯಲ್ಲಿ ತಂದೆ ಅಲಿ ಖಮೇನಿ ಇರಾನ್ ಸುಪ್ರೀಂ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಅಧಿಕಾರ ಸ್ವೀಕರಿಸಿದ ನಂತರ ಅವರು ಇದುವರೆಗೆ ಒಂದೇ ಸಲವೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಸರ್ಕಾರದ ಪರವಾಗಿ ಅವರು ಕೇವಲ ಲಿಖಿತ ಹೇಳಿಕೆಗಳನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದು, ಅವರ ಗೈರು ಹಾಜರಿ ಕುರಿತು ಹಲವು ಊಹಾ ಪೋಹಗಳು ವ್ಯಕ್ತವಾಗುತ್ತಿವೆ.

ಸೌದಿ ಅರೇಬಿಯಾದ ಅಲ್ - ಹದತ್ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಮೊಜ್ತಬಾ ಖಮೇನಿ ಹೆಸರಿನಲ್ಲಿ ಹೊರ ಬರುತ್ತಿರುವ ಅಧಿಕೃತ ಹೇಳಿಕೆಗಳನ್ನು ವಾಸ್ತವದಲ್ಲಿ ಇಸ್ಲಾಮಿಕ್ ರೆವೂಲ್ಯೂಷನರಿ ಗಾರ್ಡ್ ಕಾರ್ಪ್ಸ್ ನ ನೂತನ ಮುಖ್ಯಸ್ಥ ಅಹ್ಮದ್ ವಾಹಿದಿ ಹಾಗೂ ಇತರ ಹಿರಿಯ ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಮಾಹಿತಿಗೆ ಯಾವುದೇ ಸ್ವತಂತ್ರ ದೃಢೀಕರಣ ಅಥವಾ ಇರಾನ್ ಸರ್ಕಾರದ ಅಧಿಕೃತ ಪ್ರತಿಕ್ರಿಯೆ ಇನ್ನು ಲಭ್ಯವಾಗಿಲ್ಲ..

ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು, ಅವರ ಆರೋಗ್ಯ, ಭದ್ರತೆ ಮತ್ತು ಆಡಳಿತದಲ್ಲಿ ಅವರ ನೈಜ ಪಾತ್ರದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ ಈ ಎಲ್ಲ ವರದಿಗಳ ಬಗ್ಗೆ ಅಧಿಕೃತ ದೃಡೀಕರಣ ಸಿಗುವವರೆಗೆ ಅವುಗಳನ್ನು ಎಚ್ಚರಿಕೆಯಿಂದ ಪರಿಗಣಿಸುವ ಅಗತ್ಯ.

ಇರಾನ್ ನಲ್ಲಿ ಆಂತರಿಕ ಬಿಕ್ಕಟ್ಟು ಹೆಚ್ಚಳ? ಇಸ್ರೇಲ್ ಭದ್ರತಾ ಮೂಲಗಳ ಹೇಳಿಕೆ; ಅಮೆರಿಕಕ್ಕೆ ಖಮೇನಿ ಹೆಸರಿನಲ್ಲಿ ಎಚ್ಚರಿಕೆ

ಇದೇ ವೇಳೆ, ಇರಾನ್ ಒಂದು ವೇಳೆ ಇಸ್ರೇಲ್ ಭೂಪ್ರದೇಶದ ಮೇಲೆ ದಾಳಿ ನಡೆಸಿದರು, ಅದಕ್ಕೆ ಪ್ರತಿಯಾಗಿ ಇರಾನ್ ವಿರುದ್ಧ ನಡೆಯುವ ಪ್ರತಿಕಾರದ ದಾಳಿಗಳಲ್ಲಿ ಇಸ್ರೇಲ್ ನೇರವಾಗಿ ಭಾಗಿಯಾಗಿರುವುದನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಯಸುವುದಿಲ್ಲ ಎಂದು ಇಸ್ರೇಲ್ ಮೂಲಗಳು ಹೇಳಿರುವುದಾಗಿ ವರದಿಗಳು ತಿಳಿಸಿವೆ. ಈ ಹೇಳಿಕೆಗಳಿಗೂ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ.

ಅಮೆರಿಕಕ್ಕೆ ಇರಾನ್ ನಿಂದ ಕಠಿಣ ಎಚ್ಚರಿಕೆ.

ಇದಕ್ಕೂ ಮುನ್ನ, ಮೊಜ್ತಬಾ ಖಮೇನಿ ಹೆಸರಿನಲ್ಲಿ ಇರಾನ್ ಸರ್ಕಾರಿ ದೂರದರ್ಶನದಲ್ಲಿ ಪ್ರಸಾರವಾದ ಸಂದೇಶದಲ್ಲಿ, ಅಮೇರಿಕ ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸಿದರೆ "ಮರೆಯಲಾಗದ ಪಾಠ" ಕಲಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಲಾಗಿದೆ.

ಕದನ ವಿರಾಮಕ್ಕೆ ಸಂಬಂಧಿಸಿದ ಮಧ್ಯಂತರ ಒಪ್ಪಂದದಿಂದ ಇರಾನ್ ಹಿಂದೆ ಕರೆಯುತ್ತಿರುವುದಾಗಿ ಇರಾನ್ ನ ಸಂವಾದಕರು ತಿಳಿಸಿದ ಕೆಲವೇ ಗಂಟೆಗಳ ಬಳಿಕ ಈ ಸಂದೇಶ ಪ್ರಸಾರವಾಗಿರುವುದು ಗಮನಾರ್ಹವಾಗಿದೆ. ಇದರಿಂದ ಮಧ್ಯ ಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಹೆಚ್ಚುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಸದ್ಯ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಬೆಳವಣಿಗೆಗಳು ಜಾಗತಿಕ ರಾಜಕೀಯದಲ್ಲಿ ಮಹತ್ವದ ಚರ್ಚೆಗೆ ಕಾರಣವಾಗಿದ್ದು, ಪರಿಸ್ಥಿತಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದರ ಬಗ್ಗೆ ವಿಶ್ವದ ಗಮನ ಕೇಂದ್ರೀಕೃತವಾಗಿದೆ.

ಅಮೆರಿಕಾದ ಯಾವುದೇ ಮಿಲಿಟರಿ ಕ್ರಮಕ್ಕೆ ಇರಾನ್ ಹಾಗೂ ಅದರ ಮಿತ್ರ ರಾಷ್ಟ್ರಗಳ ಒಕ್ಕೂಟವಾದ ಆಕ್ಸಿಸ್ ಆಫ್ ರೆಸಿಸ್ಟೆನ್ಸ್ ಟಕ ಪ್ರತ್ಯುತ್ತರ ನೀಡಲಿದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಇದೇ ವೇಳೆ, ವಿಶ್ವದ ಕಚ್ಚಾ ಟೈಲರ್ ಸಾಗಾಣಿಗೆ ಅತ್ಯಂತ ಪ್ರಮುಖವಾದ ಹಾರ್ಮುಜ್ ಜಲಸಂಧಿ ನಿಯಂತ್ರಣದ ವಿಚಾರದಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಜಾಗತಿಕ ಇಂಧನ ಪೂರೈಕೆ ಹಾಗೂ ತೈಲ ಬೆಲೆಗಳ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online