<?= $pageTitle ?>
Logo
ಮುಖಪುಟ ಓದುವುದು ಕೇಳು
Life_Style

ಮಳೆ ನೀರು ಕೂದಲಿಗೆ ಹಾನಿ ಮಾಡುತ್ತದೆಯೇ? ಕೂದಲು ಉದುರುವ ಬಗ್ಗೆ ಚರ್ಮರೋಗ ತಜ್ಞರ ಸಲಹೆ

ಮಳೆ ನೀರು ಕೂದಲಿಗೆ ಹಾನಿ ಮಾಡುತ್ತದೆಯೇ? ಕೂದಲು ಉದುರುವ ಬಗ್ಗೆ ಚರ್ಮರೋಗ ತಜ್ಞರ ಸಲಹೆ
Summary: Does the problem of hair loss increase during the rainy season? Here is a dermatologist's advice on the effects of soaking in the rain and hair care.

Belagavi News :

ಮಳೆಗಾಲದಲ್ಲಿ ಕೂದಲು ಉದುರುವಿಕೆ ಹೆಚ್ಚಾಗುತ್ತದೆಯೇ? ಮಳೆಯಲ್ಲಿ ನೆನೆದರೆ ಕೂದಲು ದುರ್ಬಲವಾಗುತ್ತದೆಯೇ? ಎಂಬ ಪ್ರಶ್ನೆ ಹಲವರಲ್ಲಿದೆ. ಆದರೆ ಚರ್ಮರೋಗ ತಜ್ಞರ ಪ್ರಕಾರ, ಮಳೆ ನೀರು ನೇರವಾಗಿ ಕೂದಲಿಗೆ ತಲುಪುವುದರಿಂದ ಕೂದಲು ಉದುರುವಿಕೆಗೆ ಕಾರಣವಾಗುವುದಿಲ್ಲ.

ಮಳೆಯಲ್ಲಿ ನೆನೆದ ಬಳಿಕ ಕೂದಲನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ಮಾತ್ರ ಸಮಸ್ಯೆಗಳು ಹೆಚ್ಚಾಗಬಹುದು. ನೆತ್ತಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹಾಗೂ ತೇವಾಂಶ ಹೆಚ್ಚಾಗದಂತೆ ನೋಡಿಕೊಳ್ಳುವುದು ಮಳೆಗಾಲದ ಕೂದಲಿನ ಆರೈಕೆಯಲ್ಲಿ ಪ್ರಮುಖವಾಗಿದೆ.

ಮಳೆಗಾಲದಲ್ಲಿ ಕೂದಲು ಉದುರುವಿಕೆ ತಡೆಯಲು ಸರಿಯಾದ ಹೈಜೀನ್ ಮತ್ತು ಆರೈಕೆ ಕ್ರಮಗಳನ್ನು ಪಾಲಿಸುವುದು ಅಗತ್ಯ. ಮಳೆ ನೀರಿನ ಬಗ್ಗೆ ಇರುವ ಹಲವು ತಪ್ಪು ಕಲ್ಪನೆಗಳಿಗಿಂತ, ನೆನೆದ ನಂತರದ ಕೂದಲಿನ ಆರೈಕೆಯೆ ಹೆಚ್ಚು ಮುಖ್ಯ ಎಂದು ತಜ್ಞರು ತಿಳಿಸಿದ್ದಾರೆ.

ಮಳೆಯಲ್ಲಿ ನೆನೆದರೆ ಕೂದಲು ಉದುರುತ್ತದೆಯೇ ? ತಜ್ಞರು ನೀಡಿದ ಪ್ರಮುಖ ಸಲಹೆಗಳು ಇಲ್ಲಿವೆ :

ಮಳೆಗಾಲದಲ್ಲಿ ಮಳೆಯಲ್ಲಿ ನೆನೆದರೆ ಕೂದಲು ಉದುರುತ್ತದೆ ಎಂಬ ನಂಬಿಕೆ ಅನೇಕರಲ್ಲಿದೆ. ಆದರೆ ಚರ್ಮರೋಗ ತಜ್ಞರ ಪ್ರಕಾರ, ಮಳೆ ನೀರು ನೇರವಾಗಿ ಕೂದಲು ಉದುರುವಿಕೆಗೆ ಕಾರಣವಾಗುವುದಿಲ್ಲ. ಮಳೆಯಲ್ಲಿ ನೆನೆದ ಬಳಿಕ ಕೂದಲನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ಮಾತ್ರ ತಲೆ ಹೊಟ್ಟು, ಫಂಗಲ್ ಹಾಗೂ ಕೂದಲು ಉದುರುವ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ.

ಕ್ಯಾಪಿಲರ್ ಆಸ್ಪತ್ರೆಯ ತಜ್ಞರ ಪ್ರಕಾರ, ಮಳೆ ನೀರು ಗಿಂತ ಮಳೆಯಲ್ಲಿ ನೆನೆದ ಬಳಿಕ ನೆತ್ತಿಯಲ್ಲಿ ದೀರ್ಘಕಾಲ ತೇವಾಂಶ ಉಳಿಯದೆ ಪ್ರಮುಖ ಸಮಸ್ಯೆಯಾಗಿದೆ. ಇದರಿಂದ ದೂಳು, ಮಾಲಿನ್ಯ ಮತ್ತು ಕಲ್ಮಶಗಳು ನೆತ್ತಿಗೆ ಸುಲಭವಾಗಿ ಅಂಟಿಕೊಂಡು ಕೂದಲಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಚರ್ಮರೋಗ ತಜ್ಞೆ ಡಾ. ಸುರೂಚಿ ಪುರಿ ಅವರ ಪ್ರಕಾರ ನಗರ ಪ್ರದೇಶಗಳಲ್ಲಿ ಬೀಳುವ ಮಳೆ ನೀರು ಕೈಗಾರಿಕೆಗಳ ಬಗ್ಗೆ ವಾಹನಗಳ ಮಾಲಿನ್ಯ ಮತ್ತು ವಾತಾವರಣದಲ್ಲಿರುವ ರಾಸಾಯನಿಕಗಳನ್ನು ಹೀರಿಕೊಳ್ಳುವುದರಿಂದ ಹೆಚ್ಚು ಆಮ್ಲೀಯ ವಾಗಿರಬಹುದು. ಇಂತಹ ನೀರು ನೆತ್ತಿಯ ಪಿಎಚ್ ಸಮತೋಲನವನ್ನು ಹಾಳು ಮಾಡಿ ತಲೆ ಹೊಟ್ಟು, ತುರಿಕೆ, ಕೂದಲು ಮುರಿಯುವುದು ಹಾಗೂ ನೆತ್ತಿಯ ಕಿರಿಕಿರಿ ಉಂಟು ಮಾಡಬಹುದು.

ಮಳೆಗಾಲದಲ್ಲಿ ಹೆಚ್ಚಿರುವ ತೇವಾಂಶವು ಫಂಗಸ್ ಮತ್ತು ಬ್ಯಾಕ್ಟೀರಿಯಾ ಬೆಳೆಯನ್ನು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಕೂದಲು ಹೆಚ್ಚು ಹೊತ್ತು ಒದ್ದೆಯಾಗಿ ಉಳಿದರೆ ಫಂಗಲ್ ಸೋಂಕಿನ ಹೆಚ್ಚಾಗುತ್ತದೆ. ಜೊತೆಗೆ, ಒದ್ದೆಯಾದ ಕೂದಲನ್ನು ಬಿಗಿಯಾಗಿ ಕಟ್ಟು.ವುದು ಅಥವಾ ಬಲವಾಗಿ ಬಾಚುವುದು ಕೂದಲು ಮುರಿಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ತಜ್ಞರ ಸಲಹೆಗಳು :

1. ಮಳೆಯಲ್ಲಿ ನೆನೆದ ಕೂಡಲೇ ಶುದ್ಧ ನೀರಿನಿಂದ ಕೂದಲನ್ನು ತೊಳೆಯಿರಿ.

2. ಸಂವಾದ ಸಲ್ಫೇಟ್ - ರಹಿತ ಶಾಂಪು ಬಳಸಿ ನಿತಿಯನ್ನು ಸ್ವಚ್ಛಗೊಳಿಸಿ.

3. ಕೂದಲನ್ನು ಹೆಚ್ಚು ಹೊತ್ತು ಒದ್ದೆಯಾಗಿ ಇಡಲು ಬಿಡದೆ ಮೃದುವಾದ ಟವೆಲ್ನಿಂದ ಒಣಗಿಸಿ.

4. ಹೊರಗೆ ಹೋಗುವಾಗ ಛತ್ರಿ ಅಥವಾ ಕ್ಯಾಪ್ ಬಳಸುವುದು ಉತ್ತಮ.

5. ಲೀವ್ - ಇನ್ ಕಂಡಿಷನರ್ ಅಥವಾ ಹೇರ್ ಸೀರಂ ಬಳಸುವುದರಿಂದ ಮಾಲಿನ್ಯದಿಂದ ಕೂದಲಿಗೆ ರಕ್ಷಣೆ ಸಿಗುತ್ತದೆ.

ಒಟ್ಟಾರೆಯಾಗಿ ಮಳೆ ನೀರು ಮಾತ್ರ ಕೂದಲು ಉದುರುವಿಕೆಗೆ ಕಾರಣವಾಗುವುದಿಲ್ಲ ಆದರೆ ಮಳೆಯಲ್ಲಿ ನೆನೆದ ನಂತರದ ಸರಿಯಾದ ಕೂದಲಿನ ಆರೈಕೆ ಮಾಡದಿದ್ದರೆ ಕೂದಲು ಉದುರುತ್ತದೆ ಎಂದು ತಜ್ಞರು ಹೇಳುತ್ತಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online