Balagavi News:
ಖತಿಮಾ (ಉತ್ತರಾಖಂಡ್) ಮದವೇ ಸಂಭ್ರಮದ ನಡುವೆ ನಡೆದ ವರದಕ್ಷಿಣೆ ವಿವಾದ ದುರಂತ ಅಂತ್ಯ ಕಂಡಿದ್ದು. ವಧುವಿನ ತಂದೆ ಹೃದಯಘಾತದಿಂದ ವೃತ್ತಪಟ್ಟ ಘಟನೆ ಉತ್ತರಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಖತಿಮಾದ ಇಸ್ಲಾಂನಗರದಲ್ಲಿ ನಡೆದಿದೆ. ಮೃತರನ್ನು ಸಾಧಿಕ್ ಕಾಂಟ್ರಾಕ್ಟರ್ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಸಾಧಿಕ್ ಕಾಂಟ್ರಾಕ್ಟರ್ ಅವರ ಪ್ರತ್ರಿಯ ವಿವಾಹ ಸಮಾರಂಭಕ್ಕೆ ಉತ್ತರ ಪ್ರದೇಶದ ಬರಲಿಯ ಬಾರಾ ಫರಿದ್ ಪುರದಿಂದ ವರದಿಬ್ಬಣ ಆಗಮಿಸಿತ್ತು. ಆರತಕ್ಷತೆವರೆಗೂ ಎಲ್ಲವೂ ಸುಸೂತ್ರವಾಗಿ ನಡೆದಿದ್ದರೂ, ಮದುವೆಯ ಪ್ರಮುಖ ವಿಧಿ ವಿಧಾನಗಳ ಸಮಯದಲ್ಲಿ ವರದಕ್ಷಿಣೆ ಹಾಗೂ ಮೆಹರ್ ಹಣದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ತೀವ್ರ ವಾಗ್ವಾದ ಆರಂಭವಾಗಿದೆ.
ಆರಂಭದಲ್ಲಿ ಸ್ಕೂಟರ್ ಬೇಡಿಕೆ ಇಟ್ಟಿದ್ದ ವರನ ಕಡೆಯವರು ಬಳಿಕ ದುಬಾರಿ ಸ್ಪೋರ್ಟ್ಸ್ ಬೈಕ್, ₹ 1ಲಕ್ಷ ನಗದು ಹಾಗೂ ₹5 ಲಕ್ಷ ವರದಕ್ಷಿಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಹಲವು ಸುತ್ತಿನ ಮಾತುಕತೆ ನಡೆಸಿದರು ಒಪ್ಪಂದ ಸಾಧ್ಯವಾಗದೆ ವಿವಾದ ಮತ್ತಷ್ಟು ತೀವ್ರಗೊಂಡಿದೆ.
ಈ ಬೆಳವಣಿಗೆಯಿಂದ ಮಾನಸಿಕ ಒತ್ತಡಕ್ಕೂಳಗಾದ ವಧುವಿನ ತಂದೆ ಸಾಧಿಕ ಕಾಂಟ್ರಾಕ್ಟರ್ ಹೃದಯಾಘಾತಕೊಳ್ಳಗಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಸುದ್ದಿ ತಿಳಿದ ಕುಟುಂಬ ಸದಸ್ಯರು ಮತ್ತು ಸ್ಥಳೀಯ ನಿವಾಸಿಗಳು ಕೋಪಗೊಂಡರು. ಕೋಪಗೊಂಡ ಗುಂಪೊಂದು ವರ, ಮೊಹಮ್ಮದ್ ಆರಿಫ್, ಅವರ ಸಹೋದರ ಮೊಹಮ್ಮದ್ ಖಾಲಿದ್ ಮತ್ತು ಭಾವ ಅತಾ ಹುಸೇನ್ ಮತ್ತು ಇತರ ಹಲವಾರು ಮದುವೆಯ ಅತಿಥಿಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿಯ ಗಂಭೀರವಾಗಿತ್ತೆಂದರೆ ಹಲವರು ಮದುವೆ ಮಂಟಪದ ಬಳಿಯ ಮನೆಯ ಛಾವಣಿಯಿಂದ ಹಾರಿ ತಪ್ಪಿಸಿಕೊಳ್ಳಬೇಕಾಯಿತು. ಗಲಾಟೆಯ ಸಮಯದಲ್ಲಿ ಛಾವಣಿಯ ಒಂದು ಭಾಗ ಹಾನಿಗೊಳಗಾಗಿದೆ. ಈ ಪರಿಣಾಮವಾಗಿ ಹಲವರಿಗೆ ಗಾಯಗಳಾಗಿವೆ. ಗಲಾಟೆಯ ಸಮಯದಲ್ಲಿ ಮದುವೆ ಮಂಟಪದಲ್ಲಿ ಕುರ್ಚಿಗಳು ಮುರಿದುಹೋಗಿದ್ದು, ಮದುವೆ ಮಂಟಪದಲ್ಲಿ ಅವ್ಯವಸ್ಥೆ ಉಂಟಾಯಿತು.
ಮಾಹಿತಿ ಪಡೆದ ನಂತರ ಇನ್ಸ್ಪೆಕ್ಟರ್ ವಿಜಯೇಂದ್ರ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪೊಲೀಸರು ಮಹಿಳೆಯರು, ಮಕ್ಕಳು ಮತ್ತು ಇತರ ಮದುವೆಯ ಅತಿಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದರು.
Also Read:
ಟೆಸ್ಟ್ ಇತಿಹಾಸದಲ್ಲಿ ಭಾರತದ ಅತಿ ದೊಡ್ಡ ಗೆಲುವು: ಆಫ್ಘಾನಿಸ್ತಾನ ವಿರುದ್ಧ 300 ರನ್ ಗಳ ದಾಖಲೆ ಜಯ