<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ದಕ್ಷಿಣ ಫಿಲಿಫೈನ್ಸ್ ನಲ್ಲಿ ಬಾರಿ ಭೂಕಂಪ: 7.8 ತೀವ್ರತೆ, ಕೆಲವೆಡೆ ಸುನಾಮಿ ಅಲೆಗಳ ಆತಂಕ

ದಕ್ಷಿಣ ಫಿಲಿಫೈನ್ಸ್ ನಲ್ಲಿ ಬಾರಿ ಭೂಕಂಪ: 7.8 ತೀವ್ರತೆ, ಕೆಲವೆಡೆ ಸುನಾಮಿ ಅಲೆಗಳ ಆತಂಕ
Summary: An earthquake struck the southern Philippines this morning. The epicenter of the earthquake was reported to be about 13 kilometers southwest of General Santos city.

belagavi news :

ಸೋಮವಾರ ಬೆಳಗ್ಗೆ ಸಮುದ್ರದಿಂದ ಕೇಂದ್ರಿತವಾದ 7.8 ತೀವ್ರತೆಯ ಭೂಕಂಪ ದಕ್ಷಿಣ ಫಿಲಿಫೈನ್ಸ್ ನ ಹಲವು ಭಾಗಗಳನ್ನು ನಡುಗಿಸಿದೆ. ಭೂಕಂಪದ ಪರಿಣಾಮವಾಗಿ ಪ್ರಮುಖ ಕರಾವಳಿ ನಗರಗಳಲ್ಲಿ ಬಾರಿ ಹಾನಿ ಸಂಭವಿಸಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಅಥವಾ ಭಾಗಶಃ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 7:37 ಕ್ಕೆ ಸಂಭವಿಸಿದೆ ಈ ಭೂಕಂಪದ ನಂತರ, ಸಮೀಪದ ಕರಾವಳಿಯಲ್ಲಿ ಸುಮಾರು ಒಂದು ಮೀಟರ್ ಎತ್ತರದ ಸುನಾಮಿ ಅಲೆಗಳು ದಾಖಲಾಗಿವೆ. ಇದರಿಂದ ಕಡಲತೀರ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸುನಾಮಿ ಬೀತಿಯ ಹಿನ್ನೆಲೆಯಲ್ಲಿ ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಕರಾವಳಿ ಪ್ರದೇಶಗಳ ಜನರು ತಕ್ಷಣ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಇಂಡೋನೇಷಿಯಾ ಮತ್ತು ಮಲೇಷಿಯಾ ದೇಶಗಳ ಕರಾವಳಿ ಭಾಗಗಳಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

Sponsored

ಭೂಕಂಪದ ತೀವ್ರ ಕಂಪನ ದಿಂದ ಹಲವು ಬೃಹತ್ ಕಟ್ಟಡಗಳು ನಡುಗಿದ್ದು, ಕೆಲವು ಸ್ಥಳಗಳಲ್ಲಿ ಕಟ್ಟಡಗಳ ವಿಶೇಷಗಳು ರಸ್ತೆಗಳ ಮೇಲೆ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. ಭಯಭೀತ ರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದು, ಹಲವೆಡೆ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯ ಆಡಳಿತ ಮತ್ತು ತುರ್ತು ತಂಡಗಳು ರಕ್ಷಣಾ ಕಾರ್ಯಗಳಲ್ಲಿ ತೊಡಗಿದ್ದು, ಹಾನಿಯ ಸಂಪೂರ್ಣ ಅಂದಾಜು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಭೂಕಂಪದಿಂದ ಇದುವರೆಗೆ ಯಾವುದೇ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ. ದಕ್ಷಿಣ ಫಿಲಿಫೈನ್ಸ್ ವಾಣಿಜ್ಯ ಕೇಂದ್ರವಾಗಿರುವ 7 ಲಕ್ಷಕ್ಕೂ ಹೆಚ್ಚು ಜನರಿರುವ ನಗರವಾದ ಜನರಲ್ ಸ್ಯಾಂಟೋಸ್ ನಲ್ಲಿ ಕಟ್ಟಡ ಒಂದು ಕುಸಿದು ಬಿದ್ದಿದೆ. ಘಟನೆಯಿಂದ ಜನರು ಅವಶೇಷಗಳ ಅಡಿ ಸಿಲುಕಿರುವ ಹಾಗೂ ಗಾಯಗೊಂಡಿರುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

ಈ ವರ್ಷ ಫಿಲಿಫೈನ್ಸ್ ಗೆ ಅಪ್ಪಳಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಒಂದಾಗಿ, 7.8 ತೀವ್ರತೆಯ ಭೂಕಂಪ ದಕ್ಷಿಣ ಫಿಲಿಫೈನ್ಸ್ ನ ಜನರಲ್ ಸ್ಯಾಂಟೋಸ್ ನಗರದಿಂದ ನೈರುತ್ಯಕ್ಕೆ ಸುಮಾರು ೧೩ ಕಿ.ಮೀ ದೂರದ ಸಮುದ್ರ ಪ್ರದೇಶಗಳಲ್ಲಿ ಕ್ರೇಂದ್ರಿತವಾಗಿದೆ. ಭೂಕಂಪವು 10 ಕಿ.ಮೀ ಆಳದಲ್ಲಿರುವ ಕೊಟಾಬಟೊ ಕಂದಕದ ಚಲನೆಯಿಂದ ಉಂಟಾಗಿದೆ ಎಂದು ಫಿಲಿಫೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪ ಶಾಸ್ತ್ರ ಸಂಸ್ಥೆ ತಿಳಿಸಿದೆ.

Sponsored

ಈ ಸಂಸ್ಥೆಯ ನಿರ್ದೇಶಕ ಟೆರೆಸಿಟೊ ಬಾಕೊಲ್ಕೊಲ್ ಪ್ರಕಾರ, ಭೂಕಂಪವು ಬೆಳಿಗ್ಗೆ 7.35ಕ್ಕೆ ಸಂಭವಿಸಿದೆ. ಈ ತೀವ್ರ ಕಂಪನದಿಂದ ದಕ್ಷಿಣ ಫಿಲಿಫೈನ್ಸ ನ ಹಲವು ಭಾಗಗಳು ನಡುಗಿದ್ದು, ಜನಜೀವನದಲ್ಲಿ ಆತಂಕ ದ ಪರಿಸ್ಥಿತಿ ನಿರ್ಮಾಣವಾಗಿದೆ.

ಮನಿಲಾದಲ್ಲಿರುವ DZRK ರೇಡಿಯೋ ಕೇಂದ್ರದ ಪ್ರಾಂತೀಯ ಶಾಖೆ ಇರುವ ಸಣ್ಣ p ವಾಣಿಜ್ಯ ಕಟ್ಟಡ ಭಾಗಶಃ ಕುಸಿದು ಬಿದ್ದಿದೆ. ಘಟನೆಯ ಮೇಲೆ ಸಿಬ್ಬಂದಿ ತಕ್ಷಣವೇ ನೆಲಮಹಡಿಗೆ ತೆರಳಿದ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಆದರೆ ಕಚೇರಿ ಆರಂಭಕ್ಕೂ ಮುನ್ನ ಭೂಕಂಪ ಸಂಭವಿಸಿದ್ದರಿಂದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕೆಲವರು ಸಿಲುಕಿಕೊಂಡಿರುವ ಸಾಧ್ಯತೆ ಕುರಿತು ಪರಿಶೀಲನೆ ನಡೆಯುತ್ತಿದೆ.

ಇದೆ ವೇಳೆ, ಇತರ ಕಟ್ಟಡಗಳಿಂದ ಕಸದ ಅವಶೇಷಗಳು ಬಿಳಿದ್ದು, ಕೆಳಗೆ ನಿಲ್ಲಿಸದ ಟ್ರೈಸಿಕಲ್ ಟ್ಯಾಕ್ಸಿಗಳಿಗೆ ಹಾನಿಯಾಗಿದೆ. ಹಲವು ಸ್ಥಳಗಳಲ್ಲಿ ಜನರು ಭೂಕಂಪದ ನಂತರ ಮನೆಗಳಿಂದ ಹೊರಗೆ ಓಡಿಬಂದು ಭೀತಿ ಗೊಳಗಾದ ದೃಶ್ಯಗಳು ಕಂಡುಬಂದಿವೆ.

ತುರ್ತು ರಕ್ಷಣಾ ತಂಡಗಳು ಮಾನ್ಯ ಅಂದಾಜು ಹಾಗೂ ಶೋಧ ಕಾರ್ಯಗಳಲ್ಲಿ ತೊಡಗಿದ್ದು, ಪರಿಸ್ಥಿತಿಯನ್ನು ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Sponsored

ಇದೇ ವೇಳೆ, ಇಂಡೋನೇಷ್ಯಾ ಮತ್ತು ಮಲೇಷ್ಯಾದ ಕೆಲವು ಕರಾವಳಿ ಪ್ರದೇಶಗಳಲ್ಲಿ ಸುಮಾರು ಒಂದು ಮೀಟರ್ ಎತ್ತರದ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಫಿಲಿಪೈನ್ಸ್ ಅಧಿಕಾರಿಗಳ ಪ್ರಕಾರ, ಸುಲ್ತಾನ್ ಕುದಾರತ್ ಮತ್ತು ಸಾರಂಗನಿ ಪ್ರಾಂತ್ಯಗಳಲ್ಲಿ ಭೂ ಆಧಾರಿತ ಸುನಾಮಿ ಕಾವಲು ಕೇಂದ್ರಗಳು ಈಗಾಗಲೇ ಸುಮಾರು ಒಂದು ಮೀಟರ್ ಎತ್ತರದ ಅಲೆಗಳನ್ನು ದಾಖಲಿಸಿದೆ ಎಂದು ಭೂಕಂಪ ಶಾಸ್ತ್ರ ಸಂಸ್ಥೆಯ ನಿರ್ದೇಶಕ ಟೆರೆಸಿಟೊ ಬಕೊಲ್ಕೊಲ್ ತಿಳಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ಸಣ್ಣ ಅಲೆಗಳು ಕಂಡುಬಂದಿವೆ.

ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಫಿಲಿಫೈನ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಕರಾವಳಿ ಪ್ರದೇಶದ ಜನರಿಗೆ ತಕ್ಷಣ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ. "ನಿಮ್ಮ ಜೀವವೇ ಮುಖ್ಯ" ಎಂದು ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಮಲೇಷ್ಯಾದ ಹವಾಮಾನ ಇಲಾಖೆ ಬೋರ್ನಿಯೋ ದ್ವಿಪದ ಸಭಾಹ್ ರಾಜ್ಯಕ್ಕೆ ಸುನಾಮಿ ಎಚ್ಚರಿಕೆ ನೀಡಿದ್ದು, ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಸುಮಾರು 83 ಸೆಂ.ಮೀ ಎತ್ತರದ ಸುನಾಮಿ ಅಲೆಗಳು ದಾಖಲಾಗಿವೆ ಎಂದು ವರದಿಯಾಗಿದೆ.

Sponsored

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದಕ್ಷಿಣ ಪೂರ್ವ ಏಷ್ಯಾದ ಹಲವು ದೇಶಗಳಲ್ಲಿ ಕರಾವಳಿ ಪ್ರದೇಶಗಳಲ್ಲಿ ತೀವ್ರ ಜಾಗೃತಿ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ತೈವಾನ್, ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಪಶ್ಚಿಮ ಪೆಸಿಫಿಕ್ ನ ಹಲವಾರು ದ್ವೀಪ ರಾಷ್ಟ್ರಗಳು ಮತ್ತು ಪ್ರದೇಶಗಳಲ್ಲಿ ಸಮುದ್ರದಲ್ಲಿ ಸಣ್ಣ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ. ಭೂಕಂಪದ ಸುಮಾರು 2 ಗಂಟೆಗಳ ನಂತರ ಗುವಾಮ್ ಗೆ ನೀಡಲಾಗಿದ್ದ ಮುನ್ನೆಚ್ಚರಿಕೆಗಳನ್ನು ಹಿಂತೆಗೆದುಕೊಳ್ಳಲಾಗಿದೆ. ಅಲ್ಲದೆ ಹವಾಯಿಗೆ ಯಾವುದೇ ಬೆದರಿಕೆ ಇಲ್ಲ ಎಂದು PTWC ತಿಳಿಸಿದೆ.

ಭೂಕಂಪ ಪೀಡಿತ ಪ್ರದೇಶಗಳಲ್ಲಿ ಜನರು ಇನ್ನೂ ಭೀತಿಯಲ್ಲಿದ್ದು, ಮುಂದಿನ ಆಫ್ಟರ್ ಶಾಕ್ ಗಳ ಸಾಧ್ಯತೆಯ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ರಕ್ಷಣಾ ತಂಡಗಳು ಹಾನಿಯ ಅಂದಾಜು ಹಾಗೂ ಸುರಕ್ಷತಾ ಕ್ರಮಗಳಲ್ಲಿ ತೊಡಗಿದೆ.

ಫಿಲಿಫೈನ್ಸ್ ವಿಶ್ವದ ಅತ್ಯಂತ ಭೂಕಂಪ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದ್ದು, ಪೆಸಿಫಿಕ್ ಮಹಾಸಾಗರದ ಸುತ್ತಲಿನ ಭೂಕಂಪನ ದೋಷಗಳ ವಲಯವಾದ 'ರಿಂಗ್ ಆಫ್ ಫೈರ್'ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಕಾರಣದಿಂದಾಗಿ ದೇಶದಲ್ಲಿ ನಿರಂತರವಾಗಿ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಪೋಟಗಳು ಸಂಭವಿಸುತ್ತವೆ.

Sponsored

ಇದೆ ವೇಳೆ, ಈ ದ್ವೀಪ ಸಮೂಹ ಪ್ರದೇಶವು ಪ್ರತಿ ವರ್ಷ ಸುಮಾರು 20 ಚಂಡಮಾರುತಗಳು ಮತ್ತು ಉಷ್ಣವಲಯದ ಬಿರುಗಾಳಿಗಳಿಗೂ ಒಳಗಾಗುತ್ತದೆ ಎಂಬುದು ತಜ್ಞರ ಮಾಹಿತಿ. ಇದರ ಪರಿಣಾಮವಾಗಿ ಫಿಲಿಫೈನ್ಸ್ ನಲ್ಲಿ ನೈಸರ್ಗಿಕ ವಿಪತ್ತುಗಳ ಸದಾ ಹೆಚ್ಚು ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read:

ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನಕ್ಕಾಗಿ ಭಾರೀ ಫೈಟ್: 20 ಸ್ಥಾನಗಳಿಗೆ 60 ಶಾಸಕರ ಪೈಪೋಟಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online