<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ದುಬಾರಿ ಮಾವಿನ ಹಣ್ಣು ನೂರ್ ಜಹಾನ್: 3 ಕೆಜಿ ಹಣ್ಣಿನ ಬೆಲೆ ₹3000 ಏಕೆ?

ದುಬಾರಿ ಮಾವಿನ ಹಣ್ಣು ನೂರ್ ಜಹಾನ್: 3 ಕೆಜಿ ಹಣ್ಣಿನ ಬೆಲೆ ₹3000 ಏಕೆ?
Summary: Noor Jahan Mango 🥭 is attracting attention with its extraordinary size and unique taste. A mango weighing about 3 kg costs about ₹3,000, making it a special attraction in the market. This rare mango is attracting the attention of fruit lovers with its large size, sweet taste and unique properties.

Belagavi news:

ಇಂದೋರ್ (ಮಧ್ಯ ಪ್ರದೇಶ್) ಹಣ್ಣಿನ ಮಹಾರಾಜ ಎಂದೇ ಖ್ಯಾತಿಯಾಗಿರುವ ಮಾವಿನ ಹಲವಾರು ತಳಿಗಳನ್ನು ಭಾರತದಲ್ಲಿ ಬೆಳೆಯಲಾಗುತ್ತದೆ. ಇವುಗಳಲ್ಲಿ ಅನೇಕ ತಳಿಗಳು ಜನಪ್ರಿಯತೆ ಪಡೆದಿದ್ದರು, ಎಲ್ಲರ ಗಮನ ಸೆಳೆಯುತ್ತಿರುವ ವಿಶೇಷ ಮಾವು ಎಂದರೆ ನೂರ್ ಜಹಾನ್ ಮಾವು🥭.

ಈ ಮಾವಿನ ಹಣ್ಣು ತನ್ನ ಅಪರೂಪದ ಗಾತ್ರದಿಂದಲೇ ವಿಶೇಷವಾಗಿದ್ದು, ಒಂದೇ ಹೆಣ್ಣು ಸುಮಾರು 3 ಕೆಜಿ ತೂಕ ವರೆಗೆ ತೂಗುತ್ತದೆ. ಇದೇ ಕಾರಣದಿಂದ ಇದನ್ನು ಸಾಮಾನ್ಯವಾಗಿ ಕೆಜಿ ಲೆಕ್ಕದಲ್ಲಿ ಅಲ್ಲ, ಪೀಸ್ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಇದರ ಒಂದೇ ಹಣ್ಣಿನ ಬೆಲೆ ಸುಮಾರು ₹3,000 ವರೆಗೆ ಇರಲಿದೆ ಎಂದು ತಿಳಿದುಬಂದಿದೆ.

ದೊಡ್ಡ ಗಾತ್ರ, ವಿಶಿಷ್ಟ ರುಚಿ ಹಾಗೂ ಅಪರೂಪದ ಗುಣಲಕ್ಷಣಗಳ ಕಾರಣ ನೂರ್ ಜಹಾನ್ ಮಾವು ಹಾಗೂ ಕೃಷಿ ಆಸಕ್ತರ ಗಮನ ಸೆಳೆಯುತ್ತಿದೆ.

ಇಡೀ ಕುಟುಂಬಕ್ಕೆ ಒಂದು ಹಣ್ಣು ಸಾಕು: ಇಡೀ ಕುಟುಂಬಕ್ಕೆ ಒಂದೇ ಹಣ್ಣು ಸಾಕಾಗುವಷ್ಟು ದೊಡ್ಡ ಗಾತ್ರ ಹೊಂದಿರುವ ನೂರ್ ಜಹಾನ್ ಮಧ್ಯಪ್ರದೇಶದ ಅಲಿರಾಜ್ ಪುರ್ ಜಿಲ್ಲೆಯ ಕತ್ತಿವಾಡ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಬುಡಕಟ್ಟು ಪ್ರಾಬಲ್ಯದ ಈ ಪ್ರದೇಶದಲ್ಲಿ ಬೆಳೆಯುವ ಈ ವಿಶೇಷ ಮಾವು ತನ್ನ ವಿಶಿಷ್ಟ ರುಚಿ, ಸುವಾಸನೆ ಹಾಗೂ ಭಾರಿ ಗಾತ್ರದಿಂದ ದೇಶಾದ್ಯಂತ ಖ್ಯಾತಿಗಳಿಸಿದೆ.

ಜಗತ್ತಿನ ಅತಿ ದೊಡ್ಡ ಮಾವಿನ ತಳಿಗಳಲ್ಲೊಂದು ಎಂದು ಪರಿಗಣಿಸಲ್ಪಡುವ ನೂರ್ ಜಹಾನ್ ಮಾವಿನ ಒಂದು ಹಣ್ಣು ಸಾಮಾನ್ಯವಾಗಿ 2 ರಿಂದ 5 ಕೆಜಿ ತೂಕವರಿಗೆ ಇರುತ್ತದೆ. ಒಂದು ಹಣ್ಣು ಇದ್ದರೆ ಇಡೀ ಕುಟುಂಬವೇ ತಿನ್ನಬಹುದಾದಷ್ಟು ದೊಡ್ಡದಾಗಿರುದು ಇದರ ವಿಶೇಷತೆ. ಇದರ ಆಕರ್ಷಕ ಬಣ್ಣ ಸಿಹಿ ರುಚಿ ಮತ್ತು ವಿಶಿಷ್ಟ ವಾಸನೆ ಅನುಪ್ರಿಯರನ್ನು ಸೆಳೆಯುತ್ತದೆ.

ಅಪರೂಪದ ಹಣ್ಣು ಈ ನೂರ್ ಜಹಾನ್: ಅಪರೂಪದ ತಳಿಯಾಗಿರುವ ನೂರ್ ಜಹಾನ್ ಮಾವಿಗೆ ದೇಶದ ವಿವಿಧ ನಗರಗಳಲ್ಲಷ್ಟೇ ಅಲ್ಲ, ವಿದೇಶಿಗಳಲ್ಲಿಯೂ ಬಾರಿ ಬೇಡಿಕೆ ಇದೆ. ಗಾತ್ರದ ಆಧಾರದ ಮೇಲೆ ಒಂದೇ ಹಣ್ಣಿನ ಬೆಲೆ ₹3,000 ವರೆಗೆ ತಲುಪುತ್ತದೆ. ಕಡಿಮೆ ಪ್ರಮಾಣದಲ್ಲಿ ಹಣ್ಣು ಕೊಡುವ ಈ ಮರಗಳಿಂದ ಉತ್ಪಾದನೆ ಕಡಿಮೆ ಇದ್ದರೂ ರೈತರಿಗೆ ಉತ್ತಮ ಲಾಭ ದೊರೆಯುತ್ತದೆ.

ಕತ್ತಿವಾಡ ಪ್ರದೇಶದ ಹವಾಮಾನ ಮತ್ತು ಮಣ್ಣಿನ ಗುಣಮಟ್ಟ ನೂರ್ ಜಹಾನ್ ತಳಿಯ ಬೆಳೆಗೆ ಅತ್ಯಂತ ಅನುಕೂಲಕರವಾಗಿದ್ದು, ಇಲ್ಲಿನ ರೈತರು ಅತ್ಯುತ್ತಮ ಅನುಗುಣ ಮಟ್ಟದ ಮಾವುಗಳನ್ನು ಬೆಳೆಯುತ್ತಿದ್ದಾರೆ.

ಅಫ್ಘಾನ್ ಮೂಲದ ಹಣ್ಣು: ಹಲವು ವರ್ಷಗಳ ಹಿಂದೆ ನೂರ್ ಜಹಾನ್ ಮಾವಿನ ಹಣ್ಣು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿತು. ನಂತರ ಇದು ಮಧ್ಯ ಪ್ರದೇಶದ ಮಾಲ್ವಾ ಪ್ರದೇಶದ ಜಾಬುವಾ ಬುಡಕಟ್ಟು ಪ್ರದೇಶದಲ್ಲಿ ಬೆಳೆಯಲು ಆರಂಭವಾಯಿತು. ಈ ಮಾವಿನ ಇತಿಹಾಸವು ಮಾಲ್ವಾ ಮತ್ತು ಪಶ್ಚಿಮ ಭಾರತದ ಸಾಂಸ್ಕೃತಿಕ ಪರಂಪರೆಯೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ ಎಂದು ನಂಬಲಾಗಿದೆ. ಮೊಘಲ್ ಕಾಲದಲ್ಲಿ ದೊಡ್ಡ ಗಾತ್ರ ಹಾಗೂ ವಿಶಿಷ್ಟ ಪರಿಮಳ ಹೊಂದಿದ ಈ ಮಾವಿಗೆ ರಾಜಮನೆತನದ ತೋಟಗಳಲ್ಲಿ ವಿಶೇಷ ಮಹತ್ವ ನೀಡಲಾಗುತ್ತಿತ್ತು. ಅದರ ಪರಿಣಾಮವಾಗಿ ಇದು ಗುಜರಾತ್ ಹಾಗೂ ಜಾಬುವಾ ಅಲಿರಾಜ್ ಪುರ ಪ್ರದೇಶಗಳಿಗೂ ವ್ಯಾಪಿಸಿತು.

60 ವರ್ಷಗಳ ಹಿಂದೆ ಅಲಿರಾಜ್ ಪುರ ತಲುಪಿದ್ದ ಮಾವು: ಮಾವಿನ ತೋಟದ ರೈತ ಭರತ್ ರಾಜ್ ಸಿಂಗ್ ಜಾಧವ್ ಹೇಳುವಂತೆ, ಅವರ ತಂದೆ ರಣವೀರ್ ಸಿಂಗ್ ಜಾಧವ್, ಸುಮಾರು 55 ರಿಂದ 60 ವರ್ಷಗಳ ಹಿಂದೆ ಗುಜರಾತ್ ನ ಬನ್ಮಾ ಪ್ರದೇಶದಿಂದ ನೂರ್ ಜಹಾನ್ ಮಾವಿನ ಸಸಿಯನ್ನು ತಂದು ಸಂರಕ್ಷಿಸಿದ್ದರು. ಈ ಸಸಿ ನಂತರ ಇಡೀ ಪ್ರದೇಶದ ಗುರುತಾಯಿತು. ಅವರ ತಂದೆ ಕಸಿ ತಂತ್ರವನ್ನು ಬಳಸಿ ವಿಶೇಷ ಸಸಿಯನ್ನು ಸಿದ್ದಪಡಿಸಿದ್ದು. ಪ್ರಸ್ತುತ ಈ ಮರದ ವಯಸ್ಸು ಸುಮಾರು 20ರಿಂದ 25 ವರ್ಷಗಳು ಎನ್ನುತ್ತಾರೆ ಅವರು.

Also Read:

SSLC- 2 ಪರೀಕ್ಷೆಯಲ್ಲಿ ನಿಯಮ ವಿವಾದ: ಹಿಜಾಬ್ ಧರಿಸಿ ಬಂದವರಿಗೆ ಅವಕಾಶ ಇಲ್ಲ!

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online