<?= $pageTitle ?>
Logo
ಮುಖಪುಟ ಓದುವುದು ಕೇಳು
Sports

FIFA ವಿಶ್ವ ಕಪ್ 2026 : ಫ್ರಾನ್ಸ್ ಗೆ ಶಾಕ್, 2-0 ಗೆದ್ದು ಫೈನಲ್ ಗೆ ಲಗ್ಗೆ ಇಟ್ಟ ಸ್ಪೇನ್

FIFA ವಿಶ್ವ ಕಪ್ 2026 : ಫ್ರಾನ್ಸ್ ಗೆ ಶಾಕ್, 2-0 ಗೆದ್ದು ಫೈನಲ್ ಗೆ ಲಗ್ಗೆ ಇಟ್ಟ ಸ್ಪೇನ್
Summary: Spain have secured a place in the 2026 FIFA World Cup final. Spain, who defeated France 2-0, will face either defending champions Argentina or England in the final in East Rutherford, New Jersey. Fans are eyeing the battle for the World Cup crown.

belagavi news :

ಫಿಫಾ ವಿಶ್ವಕಪ್ 2026 :ಫ್ರಾನ್ಸ್ ಗೆ ಶಾಕ್, 2-0 ಗೆದ್ದು ಫೈನಲ್ ಗೆ ಲಗ್ಗೆ ಇಟ್ಟ ಸ್ಪೇನ್

ಅರ್ಲಿಂಗ್ಟನ್, ಟೆಕ್ಸಾಸ್ : ಫಿಫಾ ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 2-0 ಅಂತರದ ಭರ್ಜರಿ ಗೆಲುವು ಸಾಧಿಸಿದ ಸ್ಪೇನ್ ಫೈನಲ್ ಪ್ರವೇಶಿಸಿದೆ. ಯುವ ಆಟಗಾರ ಲಮಿನ್ ಯಮಲ್ ಅವರ ಚತುರ ಆಟ ಮತ್ತು ತಂಡದ ಸಂಘಟಿತ ಪ್ರದರ್ಶನ ಸ್ಪೇನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

19 ವರ್ಷದ ಯಮಲ್ ಅವರ ಅದ್ಭುತ ಆಟದಿಂದ ದೊರೆತ ಫೆನಾಲ್ಟಿಯನ್ನು ಮಿಕೆಲ್ ಒಯರ್ಜು ಬಾಲ್ 22 ನೇ ನಿಮಿಷದಲ್ಲಿ ಗೋಲಾಗಿ ಪರಿವರ್ತಿಸಿ ಸ್ಪೇನ್ ಗೆ ಮುನ್ನಡೆ ತಂದು ಕೊಟ್ಟರು. ಬಳಿಕ 58ನೇ ನಿಮಿಷದಲ್ಲಿ ಪೆಡ್ರೋ ಪೋರ್ರೂ ಎರಡನೇ ಗೋಲು ದಾಖಲಿಸಿ ಸ್ಪೇನ್ ಜಯವನ್ನು ಖಚಿತಪಡಿಸಿದರು.

ಯಮಲ್ ಸ್ವತಃ ಗೋಲು ಗಳಿಸುವ ಅವಕಾಶವನ್ನು ಆಫ್ ಸೈಡ್ ನಿರ್ಧಾರದಿಂದ ಕಳೆದುಕೊಂಡರು, ಅವರ ಸ್ಮಾರ್ಟ್ ಆಟವೇ ತಂಡಕ್ಕೆ ದೊಡ್ಡ ನೆರವಾಯಿತು. ಫ್ರಾನ್ಸ್ ನ ಅನುಭವಿ ಡಿಫೆಂಡರ್ ಲುಕಾಸ್ ಡಿಗ್ನೆ ಅವರಿಂದ ಯಮಲ್ ಫೌಲ್ ಗೆ ಒಳಗಾದ ಪರಿಣಾಮ ಸ್ಪೇನ್ ಗೆ ಪೆನಾಲ್ಟಿ ಲಭಿಸಿತು.

ಈ ಗೆಲುವಿನೊಂದಿಗೆ ಸ್ಪೇನ್ ತಂಡವು ಸೆಮಿ ಫೈನಲ್ ನಲ್ಲಿ ಫ್ರಾನ್ಸ್ ವಿರುದ್ಧ ಮೂರನೇ ಬಾರಿ ಜಯ ಸಾಧಿಸಿದಂತಾಗಿದೆ. ಇದಕ್ಕೂ ಮೊದಲು 2024ರ ಯುರೋಪಿಯನ್ ಚಾಂಪಿಯನ್ಶಿಪ್ ಮತ್ತು ನೇಷನ್ಸ್ ಲೀಗ್ ಪಂದ್ಯದಲ್ಲೂ ಸ್ಪೇನ್ ಫ್ರಾನ್ಸ್ ತಂಡವನ್ನು ಮಣಿಸಿತ್ತು.

ಇದೀಗ ಫೈನಲ್ ನಲ್ಲಿ ಸ್ಪೇನ್, ನ್ಯೂಜೆರ್ಸಿಯ ಪೂರ್ವ ರುದರ್ ಫೋರ್ಡ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

ಫಿಫಾ ವಿಶ್ವಕಪ್ 2026ರ ಫೈನಲ್ ನಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಎರಡು ತಂಡಗಳ ನಡುವಿನ ಸೆಮಿ ಫೈನಲ್ ಪಂದ್ಯ ಬುಧುವಾರ ಅಟ್ಲಾಂಟಾದಲ್ಲಿ ನಡೆಯಲಿದ್ದು, ವಿಜೇತ ತಂಡವು ಸ್ಪೇನ್ ವಿರುದ್ಧ ವಿಶ್ವಕಪ್ ಕಿರೀಟಕ್ಕಾಗಿ ಹೋರಾಡಲಿದೆ.

ಫ್ರಾನ್ಸ್ ತಂಡವು ಮೂರನೇ ಸ್ಥಾನಕ್ಕೆ ಶನಿವಾರ ಮಯಾಮಿ ಗಾರ್ಡನ್ಸ್ ನಲ್ಲಿ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ವಿಶ್ವಕಪ್ ಫೈನಲ್ ಪಂದ್ಯವು ಭಾರತ ನ್ಯೂಜೆರ್ಸಿಯ ಈಸ್ಟ್ ರುದರ್ ಫೋರ್ಡ್ ನ ಮೆಟ್ ಲೈಫ್ ಸ್ಟೇಡಿಯಂ ನಲ್ಲಿ ನಡೆಯಲಿದೆ.

ಫ್ರಾನ್ಸ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಗೋಲು ದಾಖಲಿಸಿದ ಮಿಕೆಲ್ ಒಯರ್ಜಬಾಲ್ ಈಟೂರ್ನಿಯಲ್ಲಿ 5ನೇ ಗೋಲು ಬಾರಿಸಿದ್ದಾರೆ. ಸ್ಪೇನ್ ಪರ 66 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಒಟ್ಟು 30 ಗೋಲುಗಳನ್ನು ಗಳಿಸಿರುವುದು ಅವರ ಅತ್ಯುತ್ತಮ ಸಾಧನೆಯನ್ನು ತೋರಿಸುತ್ತದ

ಇದೀಗ ಫುಟ್ಬಾಲ್ ಅಭಿಮಾನಿಗಳ ಗಮನ ಫೈನಲ್ ಎದುರಾಳಿಯತ್ತ ನೆಟ್ಟಿದ್ದು, ವಿಶ್ವ ಕಪ್ ಟ್ರೋಪಿಗಾಗಿ ನಡೆಯಲಿರುವ ಅಂತಿಮ ಹಣಾಹಣಿಗೆ ಕ್ಷಣಗಣನೆ ಆರಂಭವಾಗಿದೆ . ಸ್ಪೇನ್ ರಕ್ಷಣಾ ಕೋಟೆ ಬಲಿಷ್ಠ, 7 ಪಂದ್ಯಗಳಲ್ಲಿ ಕೇವಲ 1ಗೋಲು ದಾಖಲೆ

ಸ್ಪೇನ್ ತಂಡವು ಈ ಬಾರಿಯ ವಿಶ್ವಕಪ್ ನಲ್ಲಿ ತನ್ನ ಅದ್ಭುತ ರಕ್ಷಣಾ ಪ್ರದರ್ಶನದಿಂದ ಗಮನ ಸೆಳೆಯುತ್ತಿದೆ. ಏಳು ಪಂದ್ಯಗಳಲ್ಲಿ ಆರು ಬಾರಿ ಕ್ಲೀನ್ ಶೀಟ್ ದಾಖಲಿಸಿರುವ ಸ್ಪೇನ್, ಎದುರಾಳಿ ತಂಡಗಳಿಗೆ ಗೋಲು ಗಳಿಸುವ ಅವಕಾಶವನ್ನೇ ನೀಡಿಲ್ಲ.

ಪ್ರಸ್ತುತ ಟೂರ್ನಿಯಲ್ಲಿ ಸ್ಪೇನ್ ಇದುವರೆಗೆ ಕೇವಲ ಒಂದು ಗೋಲು ಮಾತ್ರ ಬಿಟ್ಟು ಕೊಟ್ಟಿದ್ದು, ತಂಡದ ರಕ್ಷಣಾ ಸಾಮರ್ಥ್ಯವನ್ನು ತೋರಿಸುತ್ತದೆ. ವಿಶ್ವ ಕಪ್ ಗೆದ್ದ ತಂಡಗಳಲ್ಲಿ ಅತಿ ಕಡಿಮೆ ಗೋಲು ಬಿಟ್ಟುಕೊಟ್ಟ ದಾಖಲೆ ಫ್ರಾನ್ಸ್(1998), ಇಟಲಿ(2006)ಮತ್ತು ಸ್ಪೇನ್ (2010) ತಂಡಗಳ ಹೆಸರಿನಲ್ಲಿದೆ.

ಈ ಮೂರು ಚಾಂಪಿಯನ್ ತಂಡಗಳು ತಲಾ ಏಳು ಪಂದ್ಯಗಳಲ್ಲಿ ಕೇವಲ ಎರಡು ಗೋಳುಗಳನ್ನು ಮಾತ್ರ ಎದುರಾಳಿಗಳಿಗೆ ಬಿಟ್ಟುಕೊಟ್ಟು ವಿಶ್ವ ಕಪ್ ಗೆದ್ದಿದ್ದವು. ಈ ದಾಖಲೆ ಇನ್ನೂ ಜಂಟಿ ದಾಖಲೆಯಾಗಿಯೇ ಉಳಿದಿದೆ.

ಇದೀಗ ಸ್ಪೇನ್ ಫೈನಲ್ ಗೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ,ತಂಡವು ತನ್ನ ರಕ್ಷಣಾ ಶಕ್ತಿಯೊಂದಿಗೆ ಹೊಸ ಇತಿಹಾಸ ಬರೆಯುವ ನಿರೀಕ್ಷೆಯಲ್ಲಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online