Belagavi News:
ನವದೆಹಲಿ: ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡ ಐತಿಹಾಸಿಕ ಗೆಲುವು ಸಾಧಿಸಿ ಎರಡನೆ ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ ತಡರಾತ್ರಿ ನಡೆದ ರೋಚಕ ಹಣಾಹಣಿಯಲ್ಲಿ ಸ್ಪೇನ್, ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು 1-0 ಅಂತರದಿಂದ ಮಣಿಸಿ ಟ್ರೋಫಿ ಎತ್ತಿಹಿಡಿಯಿತು. ಆದರೆ ಪಂದ್ಯಕ್ಕಿಂತಲೂ ಪಂದ್ಯದ ಬಳಿಕ ಮೈದಾನದಲ್ಲಿ ನಡೆದ ಆಟಗಾರರ ಗಲಾಟೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಫೇರಾನ್ ಟೊರಿಸ್ ಗೋಲಿಗೆ ಸ್ಪೇನ್ ಚಾಂಪಿಯನ್
ನಿಗದಿತ 90 ನಿಮಿಷಗಳಲ್ಲಿ ಉಭಯ ತಂಡಗಳು ಗೋಲು ಗಳಿಸಲ ವಿಫಲವಾದವು. ಹೆಚ್ಚುವರಿ ಸಮಯದಲ್ಲೂ ಸ್ಪೇನ್ ತನ್ನ ಆಕ್ರಮಕಾರಿ ಆಟವನ್ನು ಮುಂದುವರಿಸಿತು. ಕೊನೆಗೆ 106ನೇ ನಿಮಿಷದಲ್ಲಿ ಫೆರಾನ್ ಟೊರೆನ್ ನಿರ್ಣಾಯಕ ಗೋಲು ದಾಖಲಿಸಿ ತಂಡಕ್ಕೆ ವಿಶ್ವಕಪ್ ಗೆಲುವು ತಂದುಕೊಟ್ಟರು. ಈ ಸೋಲಿನೊಂದಿಗೆ ಸತತ ಎರಡನೇ ಬಾರಿ ವಿಶ್ವಕಪ್ ಗೆಲ್ಲುವ ಅರ್ಜೆಂಟೇನಾದ ಕನಸು ಭಗ್ನವಾಯಿತು.
ಮೆಸ್ಸಿ ಭಾವುಕ, ಸ್ಪೇನ್ ಆಟಗಾರರ ಸಂಭ್ರಮ
ವಿಜಯದ ಸಿಟ್ಟಿನೊಂದಿಗೆ ಸ್ಪೇನ್ ಆಟಗಾರರು ಮೈದಾನಕ್ಕೆ ಧಾವಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದರೆ, ಮತ್ತೊಂದೆಡೆ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಮೈದಾನದಲ್ಲೇ ಭಾವುಕರಾಗಿ ಕುಳಿತಿದ್ದ ದೃಶ್ಯ ಅಭಿಮಾನಿಗಳ ಮನಸ್ಸು ಮುಟ್ಟಿತು. ವಿಶ್ವಕಪ್ ಉಳಿಸಿಕೊಳ್ಳುವ ಕನಸು ಕೈತಪ್ಪಿದ ಹಿನ್ನೆಲೆ ಮೆಸ್ಸಿಯ ನಿರಾಸೆ ಕ್ಯಾಮೆರಾದಲ್ಲಿ ಸೆರೆಯಾಯಿತು.
ಪಂದ್ಯ ಮುಗಿದ ತಕ್ಷಣ ಮೈದಾನದಲ್ಲೇ ಗಲಾಟೆ
ಸಂಭ್ರಮದ ನಡುವೆ ಅರ್ಜೆಂಟಿನಾ ಆಟಗಾರ ಲಿಯಾಂಡ್ರೊ ಪರೆಡಸ್ ತಮ್ಮ ಕೋಪವನ್ನು ಸ್ಪೇನ್ ಆಟಗಾರರ ಮೇಲೆ ಹೊರಹಾಕಿದರು. ಎರಿಕ್ ಗಾರ್ಸಿಯಾ ಹಾಗೂ ಗವಿ ಅವರೊಂದಿಗೆ ವಾಗ್ವಾದ ಪರೆಡೆಸ್, ಅವರನ್ನು ಕಳ್ಳಾಡಿಸಿ ಹಲ್ಲೆಗೆ ಯತ್ನಿಸಿದರೆಂದು ವರದಿಯಾಗಿದೆ. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ರೆಫರಿಗಳು ತಕ್ಷಣ ಮಧ್ಯಪ್ರದೇಶಿಸಿ ಎರಡೂ ತಂಡಗಳ ಆಟಗಾರರನ್ನು ಬೇರ್ಪಡಿಸಿದರು.
ಘಟನೆಯ ಗಂಭೀರತೆಯನ್ನು ಪರಿಗಣಿಸಿದ ರೆಫರಿ ಲಿಯಾಂಡ್ರೊ ಪರೆಡೆಸ್ ಅವರಿಗೆ ಕೆಂಪು ಕಾರ್ಡ್ ತೋರಿಸಿದರು. ಪಂದ್ಯದ ಬಳಿಕ ನಡೆದ ಈ ಘರ್ಷಣೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಫುಟ್ ಬಾಲ್ ಅಭಿಮಾನಿಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.
ಪಂದ್ಯದ ವೇಳೆಗೂ ಪರೆಡೆಸ್ ನಡವಳಿಕೆ ವಿವಾದ
ದ್ವಿತಿಯಾರ್ಧದಲ್ಲಿಯೇ ಪರೆಡೆಸ್ ಅವರವರ್ತನೆ ಟೀಕೆಗೆ ಗುರಿಯಾಗಿತ್ತು. ನಿಕೊ ಗೊನ್ಜಾವೆಜ್ ಬದಲಿಗೆ ಕಣಕ್ಕಿಳಿದ ಅವರು ಎದುರಾಳಿ ಆಟಗಾರರೊಂದಿಗೆ ಹಲವು ಬಾರಿ ವಾಗ್ವಾದ ನಡೆಸಿದರು. ಸ್ಪೇನ್ ನ ವೇಗದ ಆಟದ ಮುಂದೆ ಅರ್ಜೆಂಟಿನಾ ಸಂಪೂರ್ಣ ಒತ್ತಡಕ್ಕೆ ಸಿಲುಕಿತ್ತು . ಗೋಲ್ ಪೋಸ್ಟ್ ಕಡೆಗೆ ಒಂದೇ ಒಂದು ಪರಿಣಾಮಕಾರಿ ಪ್ರಯತ್ನವನ್ನೂ ನಡೆಸಲು ಅರ್ಜೆಂಟೀನಾ ವಿಫಲವಾಯಿತು.
ಸ್ಪೇನ್ ಸಂಪೂರ್ಣ ಪ್ರಾಬಲ್ಯ
ಪಂದ್ಯದ ಆರಂಭದಿಂದಲೇ ಸ್ಪೇನ್ ಚೆಂಡಿನ ಮೇಲಿನ ಹಿಡಿತ ಕಾಯ್ದುಕೊಂಡು ನಿರಂತರ ದಾಳಿಗಳನ್ನು ನಡೆಸಿತು. ಅರ್ಜೆಂಟೀನಾದ ರಕ್ಷಣಾ ವಿಭಾಗವನ್ನು ನಿರಂತರವಾಗಿ ಒತ್ತಡಕ್ಕೆ ಸಿಲುಕಿಸಿದ ಸ್ಪೇಸ್, ಒಟ್ಟು 20 ಶಾಟ್ ಗಳನ್ನು ಪ್ರಯತ್ನಿಸಿತು. ಆದರೆ ಅರ್ಜೆಂಟೀನಾದ ಗೋಲಿನತ್ತ ಒಂದೇ ಒಂದು ಶಾಟ್ ದಾಖಲಿಸಲಿಲ್ಲ. ಅಂತಿಮವಾಗಿ ಹೆಚ್ಚುವರಿ ಸಮಯದಲ್ಲಿ ಬಂದ ಗೋಲಿನ ಮೂಲಕ ಸ್ಪೇನ್ ಐತಿಹಾಸಿಕ ಗೆಲುವು ದಾಖಲಿಸಿತು.