<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

'ಟಾಕ್ಸಿಕ್' ನ 'ಮನಮೋಹಕ' ಹಾಡಿನಲ್ಲಿ 'ಕಿರಾತಕ' ಛಾಯೆ ಕಂಡ ಫ್ಯಾನ್ಸ್

'ಟಾಕ್ಸಿಕ್' ನ 'ಮನಮೋಹಕ' ಹಾಡಿನಲ್ಲಿ 'ಕಿರಾತಕ' ಛಾಯೆ ಕಂಡ ಫ್ಯಾನ್ಸ್
Summary: The 'Manamohaka' song from Yash's film 'Toxic' has gone viral on social media soon after its release. Fans are sharing old memories after seeing some scenes from Yash's film 'Kirataka' in the song, and there is a huge discussion about this connection.

Belagavi News:

ಯಶ್ (Yash) ಅಭಿನಯದ ಬಹುನಿರೀಕ್ಷಿತ ' ಟಾಕ್ಸಿಕ್ ' ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಜುಲೈ 21ರಂದು ಬಿಡುಗಡೆಯಾದ 'ಮನಮೋಹಕ' ಹಾಡು ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಅಭಿಮಾನಿಗಳ ಗಮನ ಸೆಳೆದಿದೆ.

ಈ ಹಿಂದೆ ' ಟಾಕ್ಸಿಕ್ ' ಚಿತ್ರದ ' ತಬಾಹಿ ' ಹಾಡು ಬಿಡುಗಡೆಯಾದ ಭಾರಿ ಸದ್ದು ಮಾಡಿತ್ತು. ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಕೆಮಿಸ್ಟ್ರಿಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೀಗ ಬಿಡುಗಡೆಯಾಗಿರುವ ' ಮನಮೋಹಕ' ಹಾಡಿನಲ್ಲಿ ಯಶ್ ಅವರು ತಾರಾ ಸುತಾರಿಯಾ ಅವರೊಂದಿಗೆ ರೋಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೆ, ಈ ಹಾಡಿನ ಕೆಲವು ದೃಶ್ಯಗಳನ್ನು ನೋಡಿದ ಬಳಿಕ ಹಲವರು ಯಶ್ ಅವರ ಹಿಂದಿನ ' ಕಿರಾತಕ' ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಹಾಡಿನ ಲುಕ್, ಯಶ್ ಅವರ ಸ್ಟೈಲ್ ಮತ್ತು ಕೆಲವೂ ದೃಶ್ಯಗಳ ಶೈಲಿ 'ಕಿರಾತಕ' ಚಿತ್ರದ ನೆನಪು ಮೂಡಿಸಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ.

' ಟಾಕ್ಸಿಕ್ ' ಚಿತ್ರದ 'ಮನಮೋಹಕ' ಹಾಡಿಗೂ 'ಕಿರಾತಕ' ಸಿನಿಮಾಕ್ಕೂ ಏನು ಸಂಬಂಧ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದ್ದು, ಹಳೆಯ ಚಿತ್ರದ ಕನೆಕ್ಷನ್ ಬಗ್ಗೆ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

' ಟಾಕ್ಸಿಕ್' ಚಿತ್ರವು ಯಶ್ ಅವರ ಮುಂದಿನ ದೊಡ್ಡ ಪ್ರಾಜೆಕ್ಟ್ ಆಗಿದ್ದು, ಚಿತ್ರದ ಹಾಡುಗಳು ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

' ಟಾಕ್ಸಿಕ್ ' ಸಿನಿಮಾದ ' ಮನಮೋಹಕ' ಹಾಡಿಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಾಡನ್ನು ವೀಕ್ಷಿಸಿದ ಬಹುತೇಕರು ಯಶ್ ಅವರ ಸ್ಟೈಲಿಶ್ ಲುಕ್, ಮೇಕಿಂಗ್ ಅದ್ದೂರಿ ಚಿತ್ರೀಕರಣವನ್ನು ಮೆಚ್ಚಿಕೊಂಡಿದ್ದಾರೆ. ಈ ಹಿಂದಿನ ' ತಬಾಹಿ ' ಹಾಡಿನಂತೆ ' ಮನಮೋಹಕ' ಹಾಡನ್ನು ಭರ್ಜರಿ ಮಟ್ಟದಲ್ಲಿ ನಿರ್ಮಿಸಲಾಗಿದೆ ಎಂದು ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

' ಮನಮೋಹಕ' ಹಾಡಿನಲ್ಲಿ ಯಶ್ ಮತ್ತು ತಾರಾ ಸುತಾರಿಯಾ ಅವರ ರೋಮ್ಯಾಂಟಿಕ್ ಕೆಮಿಸ್ಟ್ರಿ ಗಮನ ಸೆಳೆದಿದೆ. ಕೆಲವರು ಈ ಹಾಡನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ' ತಬಾಹಿ ' ಹಾಡಿನಷ್ಟು ಪ್ರಭಾವ ಬೀರಿಲ್ಲ ಎಂದು ತಮಾಷೆಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಯಶ್ ಅವರ ಅಭಿಮಾನಿಗಳು ಸಿನಿಮಾ ಬಿಡುಗಡೆಯನ್ನು ಕಾತಾರದಿಂದ ಕಾಯುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕರ್ನಾಟಕದ ಹೊರತಾಗಿಯೂ ದೇಶದ ವಿವಿಧ ಭಾಗಗಳಲ್ಲಿರುವ ಅಭಿಮಾನಿಗಳು ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದರ ನಡುವೆ, ' ಮನಮೋಹಕ' ಹಾಡಿನ ಒಂದು ದೃಶ್ಯ ಹಲವು ಅಭಿಮಾನಿಗಳಿಗೆ ಯಶ್ ಅವರ ಹಳೆಯ 'ಕಿರಾತಕ' ಸಿನಿಮಾವನ್ನು ನೆನಪಿಸಿದೆ. ಹಾಡಿನ ಕೊನೆಯಲ್ಲಿ ಯಶ್ ಕಾರಿನ ಮೇಲೆ ಕುಳಿತಿರುವ ದೃಶ್ಯದಲ್ಲಿ, ಅವರ ತಂಡ ಸದಸ್ಯರು ಸುತ್ತಲೂ ನಿಂತಿರುತ್ತಾರೆ. ಆ ವೇಳೆ ತಾರಾ ಸುತಾರಿಯಾ ಆಗಮಿಸಿದಾಗ ಯಶ್ ಬಂದೂಕಿನಿಂದ ನೆಲಕ್ಕೆ ಗುಂಡು ಹಾರಿಸಿ ಸುತ್ತಲಿದ್ದವರನ್ನು ದೂರು ಕಳುಹಿಸಿ, ಬಳಿಕ ನಾಯಕಿಯನ್ನು ಅಪ್ಪಿಕೊಳ್ಳುವ ದೃಶ್ಯ ಕಾಣಿಸುತ್ತದೆ.

ಈ ದೃಶ್ಯವನ್ನು ನೋಡಿದ ಅಭಿಮಾನಿಗಳು 'ಕಿರಾತಕ ' ಚಿತ್ರದ ಒಂದು ಸನ್ನಿವೇಶದೊಂದಿಗೆ ಹೋಲಿಕೆ ಮಾಡಿದ್ದಾರೆ. ' ಕಿರಾತಕ' ಸಿನಿಮಾದಲ್ಲಿಯೂ ಯಶ್ ತಮ್ಮ ನಾಯಕಿಯೊಂದಿಗೆ ಮಾತನಾಡಲು ಗೆಳೆಯರನ್ನು ದೂರ ಕಳುಹಿಸುವ ದೃಶ್ಯವಿತ್ತು. ನಾಯಕಿಯ ಊರಿಗೆ ಡ್ಯಾನ್ಸ್ ಕಾರ್ಯಕ್ರಮಕ್ಕಾಗಿ ತೆರಳುವ ಸಂದರ್ಭದಲ್ಲಿ ಬರುವ ಈ ದೃಶ್ಯವನ್ನು ಈಗ ' ಮನಮೋಹಕ' ಹಾಡಿನ ಸನ್ನಿವೇಶದೊಂದಿಗೆ ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.

ಹೀಗಾಗಿ ' ಟಾಕ್ಸಿಕ್ ' ಚಿತ್ರದ ಹೊಸ ಹಾಡು ಕೇವಲ ಸಂಗೀತ ಮತ್ತು ಮೇಕಿಂಗ್ ನಿಂದಷ್ಟೇ ಅಲ್ಲ, ಯಶ್ ಅವರ ಹಳೆಯ ಸಿನಿಮಾಗಳು ನೆನಪುಗಳನ್ನು ಮತ್ತೆ ಜೀವಂತಗೊಳಿಸುವ ಮೂಲಕವೂ ಚರ್ಚೆಗೆ ಕಾರಣವಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online