<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಭೀಕರ ರಸ್ತೆ ಅಪಘಾತ: ನಿಂತಿದ್ದ ಟ್ರಕ್ ಗೆ ಬಸ್ ಢಿಕ್ಕಿ, 6 ಸಾವು; 20ಕ್ಕೂ ಹೆಚ್ಚು ಜನರಿಗೆ ಗಾಯ

ಭೀಕರ ರಸ್ತೆ ಅಪಘಾತ: ನಿಂತಿದ್ದ ಟ್ರಕ್ ಗೆ ಬಸ್ ಢಿಕ್ಕಿ, 6 ಸಾವು; 20ಕ್ಕೂ ಹೆಚ್ಚು ಜನರಿಗೆ ಗಾಯ
Summary: A private bus rammed into a truck parked on the highway, killing six people on the spot. Over 20 passengers were injured. The injured have been admitted to a nearby hospital and are being treated. The police have started an investigation into the cause of the accident. The incident has raised concerns among the locals. Read the full report for important updates including road accident news, bus accident today, highway accident, breaking news, Karnataka accident news.

Belagavi News:

ವಡೋದರ (ಗುಜರಾತ್): ಗುಜರಾತ್ ನ ವಡೋದರ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೆದ್ದಾರಿ ಪಕ್ಕ ನಿಂತಿದ್ದ ಟ್ರಕ್ ಗೆ ಖಾಸೆಗಿ ಐಷಾರಾಮಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

ವಡೋದರ-ಹಲೊಲ್ ರಾಷ್ಟ್ರೀಯ ಹೆದ್ದಾರಿಯ ಸಮೀಪದ ಕೋಟಂಬಿ ಗ್ರಾಮದಲ್ಲಿ ಬೆಳಗಿನ ಜಾವ ಸುಮಾರು 4ಗಂಟೆಗೆ ಅಪಘಾತ ಸಂಭವಿಸಿದೆ. ರಾಜಸ್ಥಾನದಿಂದ ಸೂರತ್ ಕಡೆಗೆ ಪ್ರಯಾಣಿಸುತ್ತಿದ್ದ ಐಷಾರಾಮಿ ಬಸ್, ಹೆದ್ದಾರಿ ಪಕ್ಕ ನಿಲ್ಲಿಸಲಾಗಿದ್ದ ಟ್ರಕ್ ಗೆ ವೇಗವಾಗಿ ಡಿಕ್ಕಿ ಹೊಡೆದಿದೆ.

ಘಟನೆಯ ವೇಳೆ ಟ್ರಕ್ ಚಾಲಕ ವಾಹನದ ಟೈರ್ ಒತ್ತಡ ಪರಿಶೀಲಿಸುತ್ತಿದ್ದರು ಎಂದು ತಿಳಿದುಬಂದಿದೆ. ಡಿಕ್ಕಿಯ ತೀವ್ರತೆಗೆ ಬಸ್ ನ ಮುಂಭಾಗ ಸಂಪೂರ್ಣ ನಜ್ಜಗುಜ್ಜಾಗಿದ್ದು, ಸ್ಥಳದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು. ಅವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

Sponsored

ಈ ಕುರಿತು ಮಾಹಿತಿ ನೀಡಿದ ವಡೋದರ ಜಿಲ್ಲಾ ಪೊಲೀಸ್ ಅಧಿಕಾರಿ ಸುಶೀಲ್ ಅಗರ್ ವಾಲ್, "ಬಸ್ ನಲ್ಲಿದ್ದ ಬಹುತೇಕ ಪ್ರಯಾಣಿಕರು ರಾಜಸ್ಥಾನದವರಾಗಿದ್ದು, ಅಪಘಾತದ ನಿಖರ ಕಾರನ ಕುರಿತು ತನಿಖೆ ಮುಂದುವರಿದಿದೆ" ಎಂದು ತಿಳಿಸಿದ್ದಾರೆ.

ಅಪಘಾತದ ಮಾಹಿತಿ ದೂರಕುತ್ತಿದ್ದಂತೆಯೇ ಜರೋಡ್ ನಾಯಕ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ಕಾರ್ಯವನ್ನು ತುರ್ತುಯಾಗಿ ಕೈಗೊಳ್ಳಲಾಯಿತು.

ಈ ಭೀಕರ ರಸ್ತೆ ಅಪಘಾತ ಪ್ರದೇಶದಲ್ಲಿ ಆತಂಕ ಮೂಡಿಸಿದ್ದು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಉದ್ಭವಿಸಿವೆ.

Also Read:

Sponsored

ಪರಿಷತ್ ಫೈಟ್ ಫೈನಲ್: 5ನೇ ಅಭ್ಯರ್ಥಿಗೆ 'ಕೈ' ಪ್ಲಾನ್ ಜೆಡಿಎಸ್ ಗೆ ಏಕೈಕ ಗೆಲುವಿನ ತಂತ್ರ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online