<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಮಧ್ಯ ಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ: ಇರಾನ್ ನ ಹಲವೆಡೆ ಅಮೆರಿಕ ದಾಳಿ!

ಮಧ್ಯ ಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ: ಇರಾನ್ ನ ಹಲವೆಡೆ ಅಮೆರಿಕ ದಾಳಿ!
Summary: Fears of war again in the Middle East: Reports of US attacks in several places in Iran have caused concern on a global scale. This development has further increased tensions in the Middle East. The relationship between Iran and the US has again come under discussion.

Balagavi News :

ಟೆಹ್ರಾನ್ (ಇರಾನ್): ಶಾಂತಿ ಒಪ್ಪಂದ ಮಾತುಕತೆಗಳು ವಿಫಲವಾದ ಹಿನ್ನೆಲೆ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತೆ ತಾರಕಕ್ಕೇರಿದೆ. ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಳ್ಳದಿದ್ದರೆ ಭಾರಿ ಬೆಲೆ ತರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡದ ಬೆನ್ನಲ್ಲೇ ಅಮೆರಿಕದ ಪಡೆಗಳು ಇರಾನ್ ನ ಹಲವು ಪ್ರದೇಶಗಳ ಮೇಲೆ ಮತ್ತೊಂದು ಸುತ್ತಿನ ಕ್ಷಿಪಣಿ ದಾಳಿ ನಡೆಸಿವೆ.

ಅಮೆರಿಕದ ಸೇನೆ ನೀಡಿರುವ ಮಾಹಿತಿಯ ಪ್ರಕಾರ, ಜೂನ್ 10 ರಂದು ಯುಎಸ್ ಸೆಂಟ್ರಲ್ ಕಮಾಂಡ್ ಪಡೆಗಳು ಇರಾನ್ ನಲ್ಲಿನ ಹಲವು ಗುರಿಗಳನ್ನು ಹೊಡೆದುರುಳಿಸುವ ಕಾರ್ಯಾಚರಣೆ ಕೈಗೊಂಡಿವೆ. ಇರಾನ್ ಬಂದರುಗಳ ಮೇಲೆಯೂ ದಾಳಿ ನಡೆಸಲಾಗಿದ್ದು. ಅಲ್ಲಿಂದ ತೈಲ ಸಾಗಣೆ ಮಾಡುತ್ತಿದ್ದ ಕೆಲವು ಟ್ಯಾಂಕರ್ ಗಳ ಮೇಲೂ ಗುಂಡಿನ ದಾಳಿ ನಡೆಸಲಾಗಿದೆ ಎಂದು ತಿಳಿಸಲಾಗಿದೆ.

ಹಾರ್ಮುಜ್ ಜಲಸಂಧಿ ವಿವಾದ:

Sponsored

ಹಾರ್ಮುಜ್ ಜಲಸಂದಿಯ ಮೂಲಕ ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳ ಹಡಗುಗಳಿಗೆ ಅವಕಾಶ ನೀಡದಿರುವುದೇ ಈ ದಾಳಿಗೆ ಪ್ರಮುಖ ಕಾರಣ ಎಂದು ಅಮೇರಿಕ ಸೇನೆ ಹೇಳಿದೆ. ಜಾಗತೀಕರಣ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿರುವುದು ವಿಶ್ವದ ತೈಲ ಮಾರುಕಟ್ಟೆಯ ಮೇಲೋ ಪರಿಣಾಮ ಬೀರುವ ಸಾಧ್ಯತೆ ಇದೆ.

"ಹಾರ್ಮುಜ್ ಮೇಲೆ ನಮ್ಮ ನಿಯಂತ್ರಣ" - ಅಮೇರಿಕ:

ಮಾತನಾಡಿದ ಅಮೆರಿಕದ ಯುದ್ಧ ಕಾರ್ಯದರ್ಶಿ, ಪೀಟ್ ಹೆಗ್ಸೆತ್, ಇನ್ನು ಮುಂದೆ ಹಾರ್ಮುಜ್ ಜಲಸಂಧಿಯ ಭದ್ರತೆಯನ್ನು ಅಮೇರಿಕಾ ಖಚಿತ ಪಡಿಸಲಿದೆ ಎಂದು ಘೋಷಿಸಿದ್ದಾರೆ. ಇರಾನ್ ನ ವಿರೋಧದ ನಡುವೆಯೂ ವಾಣಿಜ್ಯ ಹಾಗು ತೈಲ ಸಾಗಣೆ ಹಡಗುಗಳ ಮುಕ್ತ ಸಂಚಾರವನ್ನು ಖಾತ್ರಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ಲೋರಿಡಾದ ಟ್ಯಾಂಪಾದಲ್ಲಿರುವ ಸೇನಾ ಕಚೇರಿಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಗ್ಸೆತ್, "ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನಂತೆ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಲಾಗುವುದು. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಹಡಗುಗಳಿಗೆ ಅಮೆರಿಕ ಸೇನೆ ರಕ್ಷಣೆ ಒದಗಿಸಲಿದೆ" ಎಂದು ಹೇಳಿದ್ದಾರೆ.

Sponsored

ಜಾಗತಿಕ ಆತಂಕ ಹೆಚ್ಚಳ:

ಅಮೇರಿಕ ಮತ್ತು ಇರಾನ್ ನಡುವಿನ ಹೊಸ ಸಂಘರ್ಷದಿಂದ ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತೆ ಹೆಚ್ಚಾಗಿದೆ. ಈ ಬೆಳವಣಿಗೆಯಿಂದ ಜಾಗತೀಕ ತೈಲ ಬೆಲೆ, ಅಂತರರಾಷ್ಟ್ರೀಯ ವ್ಯಾಪಾರ ಹಾಗೂ ಪ್ರಾದೇಶಿಕ ಭದ್ರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇರಾನ್ ನ ಪ್ರತಿಕ್ರಿಯೆ ಮತ್ತು ಅಮೆರಿಕದ ಮುಂದಿನ ಕ್ರಮಗಳತ್ತ ವಿಶ್ವದ ಗಮನ ಕೇಂದ್ರೀಕೃತವಾಗಿದೆ.

ಐ.ಆರ್.ಜಿ.ಸಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ತೈಲ ಟ್ಯಾಂಕರ್ ಗಳು ಹಾಗೂ ವಾಣಿಜ್ಯ ಹಡಗುಗಳು ಸೇರಿದಂತೆ ಯಾವುದೇ ನೌಕೆಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಯತ್ನಿಸಿದರೆ ಅವುಗಳನ್ನು. ಗುರಿಯಾಗಿಸಿ ದಾಳಿ ನಡೆಸಲಾಗುವುದು. ಜಾಗತೀಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಕುರಿತ ಈ ಘೋಷಣೆ ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿದೆ.

ಹಾರ್ಮುಜ್ ಜಲಸಂಧಿಯಲ್ಲಿ ತೀವ್ರ ಸಂಘರ್ಷ: ಇರಾನ್ ಮಾಧ್ಯಮಗಳ ವರದಿಗಳ ಪ್ರಕಾರ, ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಅಮೆರಿಕ ಸೇನೆ ಮತ್ತು ಐ.ಆರ್.ಜಿ.ಸಿ ನೌಕಾಪಡೆಯ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ. ಈ ಬೆಳವಣಿಗೆ ಮಧ್ಯ ಪ್ರಾಂತ್ಯದಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದ ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

Sponsored

ಇದೇ ವೇಳೆ ಕಾನೂನುಬಾಹಿರವಾಗಿ ಜಲಸಂಧಿ ದಾಟಲು ಯತ್ನಿಸಿದ ಎರಡು ಹಡಗುಗಳ ಮೇಲೆ ಈಗಾಗಲೇ ದಾಳಿ ನಡೆಸಲಾಗಿದೆ ಎಂದು ಇರಾನ್ ನೌಕಾಪಡೆ ಹೇಳಿದೆ. ಈ ಹೇಳಿಕೆ ಜಾಗತಿಕ ಸಾಗರ ವಾಣಿಜ್ಯ ಕ್ಷೇತ್ರದಲ್ಲಿ ಆತಂಕವನ್ನು ಹೆಚ್ಚಿಸಿದೆ.

ಅಮೆರಿಕದ ದಾಳಿ ಯಾವೆಲ್ಲಾ ಪ್ರದೇಶಗಳ ಮೇಲೆ?

ವರದಿಗಳ ಪ್ರಕಾರ, ಅಮೇರಿಕಾ ಪಡೆಗಳು ಇರಾನ್ ನ ಕರಾವಳಿ ಪ್ರದೇಶಗಳಾದ ಬಂದರ್ ಅಬ್ಬಾಸ್, ಸಿರಿಕ್, ಕೇಶ್ಮ್ ದ್ವೀಪ, ಹೆಂಗಾಮ್ ದ್ವೀಪ ಸೇರಿದಂತೆ ಏಳು ಪ್ರಮುಖ ಪ್ರದೇಶಗಳ ಮೇಲೆ ದಾಳಿ ನಡೆಸಿವೆ. ದಾಡಿಯ ಬಳಿಕ ಹಲವು ಕಡೆಗಳಲ್ಲಿ ಸ್ಪೋಟಗಳು ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ.

ಹಲವು ನಗರಗಳಲ್ಲಿ ಸ್ಪೋಟ:

Sponsored

ಕಾಂಗ್ರೆಸ್ ನಲ್ಲಿ ಬಂದರು ನಗರವಾದ ಬಂದರು ಅಬ್ಬಾಸ್, ದಕ್ಷಿಣ ಭಾಗದ ಸಿರಿಕ್, ಕೇಶ್ಮ್ ದ್ವೀಪ, ಹಾಗೂ ಉತ್ತರದ ಗೋರ್ಗಾನ್ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸರಣಿ ಸ್ಪೋಟಗಳು ವರದಿಯಾಗಿವೆ. ಸ್ಥಳೀಯ ಆಡಳಿತ ಹಾಗೂ ಭದ್ರತಾ ಪಡೆಗಳು ಪರಿಸ್ಥಿತಿಯನ್ನು ನಿಗಾ ವಹಿಸುತ್ತಿದ್ದು, ಹಾನಿಯ ಪ್ರಮಾಣದ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

ತೈಲ ಮಾರುಕಟ್ಟೆಯ ಮೇಲೆ ಪರಿಣಾಮ?

ವಿಶ್ವದ ತೈಲ ಸಾಗಣೆಯ ಪ್ರಮುಖ ಭಾಗ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತದೆ. ಈ ಮಾರ್ಗದಲ್ಲಿ ಉದ್ವಿಗ್ನತೆ ಹೆಚ್ಚಿದರೆ ಅಂತರ ರಾಷ್ಟ್ರೀಯ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆ ಇದ್ದು. ಜಾಗತಿಕ ಆರ್ಥಿಕತೆ ಮತ್ತು ವಾಣಿಜ್ಯ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

ಮಧ್ಯಪ್ರಾಚ್ಯದಲ್ಲಿ ವೇಗವಾಗಿ ಬದಲಾಗುತ್ತಿರುವ ಈ ಬೆಳವಣಿಗೆಗಳು ವಿಶ್ವದ ಗಮನ ಸೆಳೆದಿದ್ದು. ಅಮೇರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

Sponsored

Also Read:

ಕಾವೇರಿ ಜಲಾಶಯದಲ್ಲಿ ನೀರಿನ ಕೊರತೆ : ಕೆ ಆರ್ ಎಸ್ ಜಲಮಟ್ಟ 81 ಅಡಿಗೆ ಇಳಿಕೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online